ಪ್ರೇಮ ಸಂಬಂಧ ಸದಾ ಸೌಖ್ಯವಾಗಿರಲು ಇಲ್ಲಿವೆ vastu Tips

ಯಾರಿಗೆ ತಾನೇ ವಿವಾಹ ಜೀವನ ಕೊನೆವರೆಗೂ ಸುಖವಾಗಿರುವುದು ಬೇಡ? ಆದರೆ ವೈವಾಹಿಕ ಜೀವನದಲ್ಲಿ ಕೆಲವೊಮ್ಮೆ ಅಡ್ಡಿ ಆತಂಕಗಳು ಎದುರಾಗುತ್ತವೆ. ಅದರಿಂದ ಮನಸ್ಸು ಹಾಳಾಗುತ್ತದೆ. ವಿವಾಹ ಜೀವನ ಕೊನೆವರೆಗೂ ಪ್ರೀತಿಯಿಂದ ಉಳಿಯಬೇಕೆಂದರೆ ಈ ವಾಸ್ತು ಸಲಹೆಗಳನ್ನು ಪಾಲಿಸಿ.

Vastu tips for long lasting relationship goal skr

ಜನ ಮದುವೆ ಆಗುವವರೆಗೆ ತೋರುವ ಪ್ರೀತಿ, ಉತ್ಸಾಹ ಅವರ ವಿವಾಹ(marriage)ದ ಬಳಿಕ ಉಳಿಯುವುದಿಲ್ಲ. ಇದರಿಂದ ದಿನೇ ದಿನೇ ವೈವಾಹಿಕ ಜೀವನ ಪೇಲವವಾಗುತ್ತಾ ಸಾಗುತ್ತದೆ. ಅದನ್ನು ತಾಜಾವಾಗಿಟ್ಟುಕೊಂಡು ಪ್ರೀತಿ ಉಳಿದಿರುವಂತೆ ನೋಡಿಕೊಳ್ಳಲು ಇಬ್ಬರ ಪ್ರಯತ್ನವೂ ಬೇಕಾಗುತ್ತದೆ. ಆ ಪ್ರಯತ್ನದೊಂದಿಗೆ ವಾಸ್ತುವಿನ ಈ ಸಲಹೆಗಳು ಕೂಡಾ ಜೀವನ ಚೆನ್ನಾಗಿರುವಂತೆ ನೋಡಿಕೊಳ್ಳುತ್ತವೆ. 

ಮಾಸ್ಟರ್ ಬೆಡ್‌ರೂಂ(master bedroom)
ಕುಟುಂಬದ ಯಜಮಾನ ಯಜಮಾನಿಯ ಸ್ಥಾನದಲ್ಲಿರುವ ಜೋಡಿಯ ಮಾಸ್ಟರ್ ಬೆಡ್‌ ರೂಂ ಯಾವಾಗಲೂ ನೈಋತ್ಯ ದಿಕ್ಕಿನಲ್ಲಿರಬೇಕು. ಇದು ಅವರಿಬ್ಬರ ನಡುವಿನ ಬಾಂಡಿಂಗ್ ಹೆಚ್ಚಿಸುತ್ತದೆ. ಜೊತೆಗೆ, ಕೋಣೆಯು ಸದಾ ಧೂಳುಮುಕ್ತವಾಗಿ ಸ್ವಚ್ಛ(clean)ವಾಗಿರಬೇಕು. ಯಾವಾಗಲೂ ಹರಡಿಕೊಂಡಿರುವ ಮನೆ ನೆಗೆಟಿವ್ ಎನರ್ಜಿಯನ್ನು ಆಕರ್ಷಿಸುತ್ತವೆ.

ರಾಧಾಕೃಷ್ಣ ಮೂರ್ತಿ(RadhaKrishna Idol)
ಮಾಸ್ಟರ್ ಬೆಡ್ ರೂಂನಲ್ಲಿ ಅಲಂಕಾರಿಕ ರಾಧಾಕೃಷ್ಣರ ಮೂರ್ತಿಯಿರಬೇಕು. ಇದನ್ನು ಪೂಜಿಸಬೇಡಿ. ಇವರದು ಅಮರ ಪ್ರೇಮ ಜೋಡಿ. ಅಂಥ ಪ್ರೇಮ ಜೋಡಿಯೊಂದು ನಿಮ್ಮ ಎದುರಿದ್ದರೆ ಅವರಂತೆಯೇ ಇರುವ ಮನಸ್ಸು ತಾನಾಗಿಯೇ ಬರುತ್ತದೆ. ಇನ್ನು ಬೆಡ್‌ರೂಂನಲ್ಲಿ ಯುದ್ಧ, ಕ್ರೂರತೆ ಸಾರುವ, ಅಳುತ್ತಿರುವ ಹೆಣ್ಣು, ಮಕ್ಕಳ ಫೋಟೋ, ಪೇಂಟಿಂಗ್ ಇರಕೂಡದು. ಇನ್ನು ಜೋಡಿಯ ಪ್ರೀತಿ ಸಾರುವಂಥ ಫೋಟೋವೊಂದು ಪೂರ್ವ ದಿಕ್ಕಿನಲ್ಲಿ ನೇತು ಹಾಕಿರಬೇಕು. 

ಕೋಣೆಯ ಬಣ್ಣ(wall colour)
ಮಾಸ್ಟರ್ ‌ಬೆಡ್‌ ರೂಂನ ಗೋಡೆಗಳ ಬಣ್ಣ ಗುಲಾಬಿ(pink) ಹಾಗೂ ಬೂದು ಬಣ್ಣದಲ್ಲಿರಬೇಕು. ಇವು ಪ್ರೀತಿಯಲ್ಲಿ ಶಾಂತಿ, ನೆಮ್ಮದಿ ತರುತ್ತವೆ. ಜೊತೆಗೆ, ಸಂಬಂಧದಲ್ಲಿ ಯಾವುದಾದರೂ ನೆಗೆಟಿವಿಟಿ ಇದ್ದರೆ ಅದನ್ನು ತೆಗೆಯುತ್ತದೆ. ಜೊತೆಗೆ ಕೋಣೆಯನ್ನು ಸಾಧ್ಯವಾದಷ್ಟು ಆಕರ್ಷಕ(attractive)ವಾಗಿರಿಸಿಕೊಳ್ಳಬೇಕು. ಪರಿಮಳಯುಕ್ತ ಕ್ಯಾಂಡಲ್‌ಗಳು, ಪಿಂಕ್ ಬಣ್ಣದ ರೋಸ್ ಕ್ರಿಸ್ಟಲ್‌ಗಳು, ಹೂವಿನ ಚಿತ್ರಗಳ ಅಲಂಕಾರಗಳು ಕೋಣೆಯಲ್ಲಿರುವುದರಿಂದ ಪ್ರೀತಿ ಹೆಚ್ಚಿಸುತ್ತದೆ.

ಕ್ರಶ್ ಎದುರು ಬಂದಾಗ feelings ಮುಚ್ಚಿಡಲಾಗದವರು ಇವರು!

ಕನ್ನಡಿಗೆ ಮುಸುಕು(hide mirror)
ಮಲಗಿದಾಗ ಮಂಚದಿಂದ ಕನ್ನಡಿಯಲ್ಲಿ ಮುಖ ಕಾಣುವಂತಿರಬಾರದು. ರೊಮ್ಯಾನ್ಸ್ ಮಾಡುವಾಗ ಅಥವಾ ಪ್ರೀತಿಯನ್ನು ವ್ಯಕ್ತಪಡಿಸುವಾಗ ಕನ್ನಡಿಯಲ್ಲಿ ಅದರ ಪ್ರತಿಬಿಂಬ ಕಾಣಕೂಡದು. ಕನ್ನಡಿ ದೊಡ್ಡದಾದಷ್ಟೂ ವೈವಾಹಿಕ ಜೀವನದಲ್ಲಿ ಬಿರುಕುಗಳು ಹೆಚ್ಚು. ಹಾಗಾಗಿ ಕೋಣೆಯಲ್ಲಿ ಪುಟ್ಟದೊಂದು ಕನ್ನಡಿ ಇದ್ದರೆ ಸಾಕು. ಅದು ವಾರ್ಡ್ರೋಬೊಳಗಿರುವಂತೆ ವಿನ್ಯಾಸ ಮಾಡಿಸಿ. ಒಂದು ವೇಳೆ ಕಾಣುತ್ತಿದೆ ಎಂದರೆ ರಾತ್ರಿ ಮಲಗುವಾಗ ಅದಕ್ಕೆ ಅಡ್ಡ ಬಟ್ಟೆ ಹಾಕಿ. 

Parenting Challenge: ರಾಶಿಯ ಅನುಸಾರ, ತಾಯಿಯಾಗಿ ನೀವು ಹೇಗಿರಲಿದ್ದೀರಿ?

ಮಲಗುವ ದಿಕ್ಕು(sleeping direction)
ಹಾಸಿಗೆಯಲ್ಲಿ ಮಲಗುವಾಗ ಪತ್ನಿ ಯಾವಾಗಲೂ ಪತಿಯ ಎಡಭಾಗದಲ್ಲಿ ಮಲಗಬೇಕು. ಕೋಣೆಯ ನೈಋತ್ಯ ಭಾಗದಲ್ಲಿ ಬೆಳಕಿರಬೇಕು. ಬೆಡ್ ಲ್ಯಾಂಪ್(bed lamp) ಇಟ್ಟುಕೊಂಡರೂ ಆದೀತು.

ಮಂಚ(cot)
ಕೋಣೆಯಲ್ಲಿ ಒಂದೇ ಮಂಚವಿರಬೇಕು. ಎರಡು ಹಾಸಿಗೆಗಳನ್ನು ಇಲ್ಲವೇ ಎರಡು ಮಂಚವನ್ನು ಕೂಡಿಸಿ ಮಲಗಕೂಡದು. ಇದರಿಂದ ಪತಿ ಪತ್ನಿಯ ನಡುವೆ ಜಗಳ ಹೆಚ್ಚಬಹುದು. ಮಂಚ ಯಾವಾಗಲೂ ಮರ(wooden)ದ್ದೇ ಆಗಿರಬೇಕು. ಮೆಟಲ್ ಮಂಚ ಬಳಸಬಾರದು. ಕೋಣೆಯ ಪೂರ್ವ ಹಾಗೂ ಉತ್ತರ ದಿಕ್ಕಿನಲ್ಲಿ ಮಂಚವಿರುವುದರಿಂದ ಹಣಕಾಸಿನ ಸಮಸ್ಯೆ ಉಂಟಾಗಬಹುದು. 

ಗ್ಯಾಜೆಟ್ಸ್(gadgets)
ಬೆಡ್‌ರೂಂನಲ್ಲಿ ಗ್ಯಾಜೆಟ್‌ಗಳ ಬಳಕೆ ಸಾಧ್ಯವಾದಷ್ಟು ಮಿತಿಯಲ್ಲಿರಬೇಕು. ಅತಿಯಾದ ಬಳಕೆಯು ಒತ್ತಡ ಹಾಗೂ ಟೆನ್ಷನ್‌ಗೆ ಕಾರಣವಾಗುತ್ತದೆ. ಮಲಗುವಾಗ ಫೋನ್, ಲ್ಯಾಪ್ಟಾಪ್ ಕೋಣೆಯ ಹೊರಗಿಡಿ.

Marriage Horoscope: ಈ ಐದು ರಾಶಿಯವರಿಗೆ ಹತ್ತಿರದಲ್ಲಿದೆ ವಿವಾಹ ಯೋಗ

ಟಾಯ್ಲೆಟ್(toilet)
ಮನೆಯಲ್ಲಿ ಈಶಾನ್ಯ ಸ್ಥಾನವು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿಕ್ಕಿನಲ್ಲಿ ಯಾರಾದರೂ ಶೌಚಾಲಯ ಅಥವಾ ಮೆಟ್ಟಿಲುಗಳನ್ನು ನಿರ್ಮಿಸಿದರೆ ಅದು ದೋಷವಾಗುತ್ತದೆ. ಇದು ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು.

Latest Videos
Follow Us:
Download App:
  • android
  • ios