ಈ Vastu Tips ನಿಮ್ಮ ಜಮೀನಿನ ಉತ್ಪಾದಕತೆ ಹೆಚ್ಚಿಸುತ್ತವೆ!

ಕೃಷಿ ಭೂಮಿ ಕೊಳ್ಳುವಾಗ ಹಾಗೂ ಇರುವ ಕೃಷಿ ಭೂಮಿಯನ್ನು ಅಭಿವೃದ್ಧಿ ಪಡಿಸುವಾಗ ವಾಸ್ತುವಿನಲ್ಲಿ ಹೇಳಿದ ಈ ಟಿಪ್ಸ್ ಪಾಲನೆಯಿಂದ ಉತ್ಪಾದಕತೆ ಹೆಚ್ಚುತ್ತದೆ. 

Vastu Shastra Tips for Agriculture Land That Can Help Increase Farm Productivity skr

ಹಿಂದೂ ಪುರಾಣಗಳಲ್ಲಿ ವಾಸ್ತು ಶಾಸ್ತ್ರ(Vaastu Shastra)ವು ಪ್ರಮುಖ ಪಾತ್ರವನ್ನು ಹೊಂದಿದೆ. ಇದು ನಮ್ಮ ಸುತ್ತಲಿನ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಸಾಮರಸ್ಯ ಮತ್ತು ಸಮೃದ್ಧ ಜೀವನಕ್ಕೆ ಎಡೆ ಮಾಡಿ ಕೊಡುತ್ತದೆ. ವಾಸ್ತು ಶಾಸ್ತ್ರದ ತತ್ವಗಳನ್ನು ಕೃಷಿ ಭೂಮಿಯನ್ನು ಆಯ್ಕೆ ಮಾಡಲು, ತೋಟದ ಮನೆ ನಿರ್ಮಿಸಲು ಅಥವಾ ಬೀಜಗಳನ್ನು ಬಿತ್ತನೆ ಮಾಡಲು ಸೇರಿದಂತೆ ಕೃಷಿಕರು ವಿವಿಧ ಕ್ಷೇತ್ರಗಳಲ್ಲಿ ಬಳಸಬಹುದು.

ವಾಸ್ತುವು ಕೃಷಿ ಭೂಮಿಯ ದಿಕ್ಕು, ಅಳತೆ, ಆಕಾರ ಎಲ್ಲವನ್ನೂ ಪರಿಗಣಿಸಿ ಸಲಹೆ ನೀಡುತ್ತದೆ. ಕೃಷಿ ಭೂಮಿಯನ್ನು ಆಯ್ಕೆ ಮಾಡುವಾಗ, ಇರುವ ಜಮೀನಿನ ಇಳುವರಿ ಹೆಚ್ಚಿಸಲು ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಾಸ್ತು ಸಲಹೆಗಳು(Vastu tips) ಇಲ್ಲಿವೆ:

ಕೃಷಿ ಭೂಮಿಯ ಇಳಿಜಾರು(Slope)
ವಾಸ್ತು ಶಾಸ್ತ್ರದ ತತ್ವಗಳ ಪ್ರಕಾರ ಕೃಷಿ ಭೂಮಿ ಯಾವಾಗಲೂ ನಯವಾಗಿರಬೇಕು ಮತ್ತು ಬಹುಹಂತವಾಗಿರಬಾರದು. ಮತ್ತು ಹೊಲದಲ್ಲಿ ಸ್ವಲ್ಪ ಓರೆ ಅಥವಾ ಇಳಿಜಾರು ಇದ್ದರೆ ಅದು ಉತ್ತರ(North) ಅಥವಾ ಪೂರ್ವ(East) ದಿಕ್ಕಿನಲ್ಲಿರಬೇಕು. ಇಳಿಜಾರು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿರಬಾರದು. ಇದು ವಾಸ್ತು ಶಾಸ್ತ್ರದ ನಿಯಮವಾಗಿದ್ದು, ಸೂಕ್ತ ಕೃಷಿ ಉತ್ಪನ್ನಗಳನ್ನು ಪಡೆಯಲು ಯಾವುದೇ ಸಂದರ್ಭದಲ್ಲೂ ಇದನ್ನು ನಿರ್ಲಕ್ಷಿಸಬಾರದು. ಒಂದು ವೇಳೆ ಭೂಭಾಗವು ಪಶ್ಚಿಮ ಅಥವಾ ದಕ್ಷಿಣದ ಕಡೆಗೆ ಇಳಿಜಾರಾಗಿದ್ದರೆ, ಭೂ ಮಾಲೀಕರ ವೆಚ್ಚವು ಆದಾಯವನ್ನು ಮೀರಿ ಹೆಚ್ಚುತ್ತದೆ.

ದಕ್ಷಿಣದಲ್ಲಿ ರಸ್ತೆ ಬೇಡ
ವಾಸ್ತು ಶಾಸ್ತ್ರದ ಪ್ರಕಾರ, ದಕ್ಷಿಣದಲ್ಲಿ ರಸ್ತೆಯೊಂದಿಗೆ ಕೃಷಿ ಭೂಮಿ ಇರುವುದು ಒಳ್ಳೆಯದಲ್ಲ. ಅಂಥದ್ದನ್ನು ತಪ್ಪಿಸುವುದು ಉತ್ತಮ.

ವೃಷಭದಿಂದ ಸಿಂಹದವರೆಗೆ ಈ ನಾಲ್ಕು ರಾಶಿಗಳು ಬೆಸ್ಟ್ ಪೇರೆಂಟ್ಸ್

ಜಮೀನಿನ ಆಕಾರ(The Shape of the Agricultural Plot )
ಕೃಷಿ ಭೂಮಿ ಆಯತಾಕಾರ ಅಥವಾ ಚೌಕಾಕಾರವಾಗಿರಬೇಕು. ಬೇರೆ ಯಾವುದೇ ಆಕಾರ ಅಷ್ಟೊಂದು ಒಳ್ಳೆಯದಲ್ಲ. ಈ ತುಂಡು ಭೂಮಿಯನ್ನು ನೈಋತ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿ ಕತ್ತರಿಸಬಾರದು.

ಎತ್ತರದ ಮರಗಳು(Tall trees)
ಕೃಷಿ ಭೂಮಿಯ ದಕ್ಷಿಣ ಅಥವಾ ಪಶ್ಚಿಮ ಭಾಗದಲ್ಲಿ ಮಾವು, ಹಲಸು, ಆಲದಂಥ ಎತ್ತರದ ಮರಗಳನ್ನು ಬೆಳೆಸಬೇಕು. ಇದರಿಂದ ಕೃಷಿ ಇಳುವರಿಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ.

ನೀರಿನ ಶೇಖರಣೆ(Water Storage)
ನೀರಿನ ಸಂಗ್ರಹಕ್ಕಾಗಿ ಬೋರ್‌ವೆಲ್‌ಗಳು ಮತ್ತು ನೆಲದಡಿಯ ಟ್ಯಾಂಕ್‌ಗಳನ್ನು ನಿರ್ಮಿಸುವಾಗ ಅವನ್ನು ಪೂರ್ವ ಮತ್ತು ಉತ್ತರ ಭಾಗಗಳ ಈಶಾನ್ಯ ದಿಕ್ಕಿನಲ್ಲಿ ಇಡುವುದು ಉತ್ತಮ. ಬಾವಿಗಳನ್ನು ಎಂದಿಗೂ ಆಗ್ನೇಯ, ವಾಯುವ್ಯ ಅಥವಾ ನೈಋತ್ಯ ದಿಕ್ಕುಗಳಲ್ಲಿ ಇರಿಸಬಾರದು. ಇದು ಕೃಷಿ ಭೂಮಿಗೆ ಕೆಲವು ದೊಡ್ಡ ನಷ್ಟಗಳಿಗೆ ಕಾರಣವಾಗುತ್ತದೆ.

ಕೃಷಿ ಕಾರ್ಮಿಕರಿಗೆ ವಸತಿ
ಕೃಷಿ ಕಾರ್ಮಿಕರಿಗೆ ವಸತಿ ಅಥವಾ ಗುಡಿಸಲುಗಳನ್ನು ವಾಸ್ತು ಶಾಸ್ತ್ರದ ಪ್ರಕಾರ ಪಶ್ಚಿಮ ಅಥವಾ ನೈಋತ್ಯ ದಿಕ್ಕಿನಲ್ಲಿ ನಿರ್ಮಿಸಬೇಕು.

ಕನ್ಯಾ ರಾಶಿಯ ಜಾತಕ ಹೀಗಿದ್ದರೆ, ಧನದ ಸುರಿಮಳೆಯಾಗುವುದೆಂದರ್ಥ!

ಕಾಂಪೌಂಡ್ ಗೋಡೆ
ಕ್ಷೇತ್ರದ ನೈಋತ್ಯ ದಿಕ್ಕಿನಲ್ಲಿ ಪಶ್ಚಿಮ ಮತ್ತು ದಕ್ಷಿಣ ಭಾಗದಲ್ಲಿ 10-20 ಅಡಿ ಉದ್ದ ಮತ್ತು 6 ಅಡಿ ಎತ್ತರದ ದಪ್ಪ ಮತ್ತು ಎತ್ತರದ ಕಾಂಪೌಂಡ್ ಗೋಡೆಯನ್ನು ನಿರ್ಮಿಸಬೇಕು. ಈ ದಿಕ್ಕುಗಳಲ್ಲಿ ಎತ್ತರದ ಗೋಡೆಯು ಕೃಷಿ ಉತ್ಪನ್ನಗಳಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಈ ಗೋಡೆಗಳು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇರಬಾರದು.

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios