Asianet Suvarna News Asianet Suvarna News

Vastu Tips : ಸೂರ್ಯನ ಚಲನೆಗೆ ತಕ್ಕಂತೆ ಮನೆಯಿದ್ರೆ ಸುಖ ದುಪ್ಪಟ್ಟು

ಮನೆ ನಿರ್ಮಾಣದ ವೇಳೆ ಅನೇಕರು ವಾಸ್ತು ನೋಡ್ತಾರೆ. ಅಡುಗೆ ಮನೆ, ಮುಖ್ಯ ದ್ವಾರ, ದೇವರ ಮನೆ ಹೀಗೆ ಎಲ್ಲ ಕೋಣೆಗಳನ್ನು ವಾಸ್ತು ಪ್ರಕಾರ ನಿರ್ಮಿಸಲು ಮುಂದಾಗ್ತಾರೆ. ಈ ಸಂದರ್ಭದಲ್ಲಿ ಸೂರ್ಯನ ಪಥ ಗೊತ್ತಿದ್ರೆ ಕೆಲಸ ಮತ್ತಷ್ಟು ಸುಲಭ.
 

Vastu Rules For Home According To Sun Movement
Author
Bangalore, First Published Aug 12, 2022, 1:02 PM IST

ವಾಸ್ತು ಮತ್ತು ಸೂರ್ಯನ ನಡುವೆ ಒಂದು ವಿಶಿಷ್ಟ ಸಂಬಂಧವನ್ನು ಹೇಳಲಾಗಿದೆ. ದಿಕ್ಕುಗಳಿಗೆ ಸಂಬಂಧಿಸಿದ ವಾಸ್ತು ನಿಯಮಗಳನ್ನು ಸೂರ್ಯ ಮತ್ತು ಆತನ ಚಲನೆಯನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ. ಇದರಿಂದ ಸೂರ್ಯನ ಶಕ್ತಿಯು ನಿಮ್ಮ ಮನೆಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರವೇಶಿಸುತ್ತದೆ. ಇದರಿಂದ ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿಯ ಸಂವಹನ ಹೆಚ್ಚಾಗುತ್ತದೆ ಮತ್ತು ಸಂತೋಷ ಮತ್ತು ಶಾಂತಿ ಹೆಚ್ಚಾಗುತ್ತದೆ. ಆದ್ದರಿಂದ  ಸೂರ್ಯನ ಪ್ರಯಾಣದ ದಿಕ್ಕುಗಳ ಆಧಾರದ ಮೇಲೆ ನಿಮ್ಮ ಮನೆಯ ವಾಸ್ತುವನ್ನು ನೀವು ಸಿದ್ಧಪಡಿಸಿದರೆ, ನೀವು ಗರಿಷ್ಠ ಲಾಭವನ್ನು ಪಡೆಯುತ್ತೀರಿ. ವಾಸ್ತುವಿನ ಈ ನಿಯಮಗಳೇನು ಎಂಬುದು ಇಲ್ಲಿದೆ.

1. ಸೂರ್ಯೋದಯ (Sunrise) ಕ್ಕೆ ಮುಂಚಿನ ಸಮಯ ಬೆಳಗಿನ ಜಾವ 3 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗಿನ ಅವಧಿಯನ್ನು ಬ್ರಹ್ಮ ಮುಹೂರ್ತ (Brahma Muhurta) ಎನ್ನಲಾಗುತ್ತದೆ. ಈ ಸಮಯದಲ್ಲಿ ಸೂರ್ಯನು ಮನೆಯ ಈಶಾನ್ಯ (Northeast ) ಭಾಗದಲ್ಲಿರುತ್ತಾನೆ. ಈ ಸಮಯವನ್ನು ಧ್ಯಾನ ಮತ್ತು ಪೂಜೆಗೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಹಾಗಾಗಿಯೇ ಈ ಸಮಯದಲ್ಲಿ ನೀವು ಪೂಜೆ ಮಾಡುವುದಾದ್ರೆ  ಪೂಜೆಯನ್ನು ಈಶಾನ್ಯದಲ್ಲಿ ಮಾಡಬೇಕು.

2. ಬೆಳಿಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ ಸೂರ್ಯ (Sun) ನು ಮನೆ (Home) ಯ ಪೂರ್ವ (East) ಭಾಗದಲ್ಲಿ ಇರುತ್ತಾನೆ. ಆದ್ದರಿಂದ ಸಾಕಷ್ಟು ಸೂರ್ಯನ ಬೆಳಕು ಮನೆಗೆ ಪ್ರವೇಶಿಸುವಂತೆ ಮನೆ ನಿರ್ಮಾಣ ಮಾಡಿದ್ರೆ ಒಳ್ಳೆಯದು. ಬೆಳಗಿನ ಸೂರ್ಯನ ಕಿರಣಗಳು ಪ್ರವೇಶಿಸುವ ಮನೆಗಳಲ್ಲಿ ಜನರು ರೋಗ (Disease) ಗಳಿಂದ ದೂರವಿರುತ್ತಾರೆ ಎಂದು ನಂಬಲಾಗಿದೆ. ಈ ಕಾರಣಕ್ಕಾಗಿಯೇ ಬೆಳಿಗ್ಗೆ ಮನೆಯ ಎಲ್ಲಾ ಕಿಟಕಿ ಬಾಗಿಲುಗಳನ್ನು ತೆರೆಯಲು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.

ಇದನ್ನೂ ಓದಿ: Vastu Tips : ಮನೆಯಲ್ಲಿ ಸಮಸ್ಯೆ ತರುವ ಈ ವಸ್ತುವನ್ನು ತಕ್ಷಣ ತೆಗೆದು ಹಾಕಿ

3. ಸೂರ್ಯನು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಆಗ್ನೇಯದಲ್ಲಿ ಇರುತ್ತಾನೆ. ಈ ಸಮಯವು ಸ್ನಾನ ಮತ್ತು ಅಡುಗೆಗೆ ಸೂಕ್ತವಾಗಿದೆ. ಇದರಿಂದಾಗಿ ಅಡುಗೆ ಕೋಣೆ ಮತ್ತು ಬಾತ್ ರೂಂ ಒದ್ದೆಯಾಗುತ್ತದೆ. ಅಡುಗೆ ಮನೆ ಹಾಗೂ ಬಾತ್ ರೂಮ್ ಆಗ್ನೇಯ ದಿಕ್ಕಿನಲ್ಲಿದ್ರೆ ಸೂರ್ಯನ ಕಿರಣಗಳಿಂದ ಅದು ಒಣಗುತ್ತದೆ. 

4. ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ವಿಶ್ರಾಂತಿಯ ಸಮಯ. ಸೂರ್ಯನು ಈಗ ದಕ್ಷಿಣದಲ್ಲಿರುತ್ತಾರೆ. ಆದ್ದರಿಂದ ಮಲಗುವ ಕೋಣೆಯನ್ನು ಈ ದಿಕ್ಕಿನಲ್ಲಿ ಮಾಡಬೇಕು ಮತ್ತು ಮಲಗುವ ಕೋಣೆಯಲ್ಲಿ ಪರದೆಗಳು ಗಾಢ ಬಣ್ಣದ್ದಾಗಿರಬೇಕು. ಈ ಸಮಯದಲ್ಲಿ ಸೂರ್ಯನಿಂದ ಅಪಾಯಕಾರಿ ನೇರಳಾತೀತ ಕಿರಣಗಳು ಹೊರಬರುತ್ತವೆ ಎಂದು ಹೇಳಲಾಗುತ್ತದೆ, ಆದ್ದರಿಂದ ಗಾಢ ಬಣ್ಣದ ಪರದೆ ಹೊಂದಿದ್ದರೆ  ಅದು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುವುದಿಲ್ಲ.

5. ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ರವರೆಗೆ ಸೂರ್ಯ ನೈಋತ್ಯ ದಿಕ್ಕಿನಲ್ಲಿರುತ್ತಾನೆ. ಇದು ಅಧ್ಯಯನ ಮತ್ತು ಕೆಲಸದ ಸಮಯ. ಆದ್ದರಿಂದ ಮನೆಯ ನೈಋತ್ಯ ದಿಕ್ಕಿನಲ್ಲಿ ಅಧ್ಯಯನ ಕೊಠಡಿ ಅಥವ ಗ್ರಂಥಾಲ ಇರುವುದು ಒಳ್ಳೆಯದು.

6. ಸಂಜೆ 6 ಗಂಟೆಯಿಂದ ರಾತ್ರಿ 9 ರವರೆಗಿನ ಸಮಯವು ತಿನ್ನಲು, ಕುಳಿತುಕೊಳ್ಳಲು ಮತ್ತು ಅಧ್ಯಯನ ಮಾಡಲು ಯೋಗ್ಯವಾಗಿದೆ.  ಮನೆಯ ಪಶ್ಚಿಮ ಮೂಲೆಯು ಊಟದ ಕೋಣೆಯಾದ್ರೆ ಒಳ್ಳೆಯದು. ಈ ಸಮಯದಲ್ಲಿ ಸೂರ್ಯ ಪಶ್ಚಿಮದಲ್ಲಿ ಇರುತ್ತಾನೆ.

7. ರಾತ್ರಿ 9 ರಿಂದ ಮಧ್ಯರಾತ್ರಿಯವರೆಗೆ ಸೂರ್ಯನು ಮನೆಯ ವಾಯುವ್ಯದಲ್ಲಿ ಇರುತ್ತಾನೆ. ಮಲಗುವ ಕೋಣೆಗೆ ಈ ಸ್ಥಳದಲ್ಲಿದ್ದರೆ ಹೆಚ್ಚು ಉಪಯುಕ್ತ. 

ಇದನ್ನೂ ಓದಿ: ಕೈಗೆ ಕಟ್ಟುವ ರಕ್ಷಾ ದಾರ ತೆಗೆಯೋಕೂ ಇದೆ ನಿಯಮ!

8. ಮಧ್ಯರಾತ್ರಿಯಿಂದ ಬೆಳಗಿನ ಜಾವ 3ರವರೆಗೆ ಸೂರ್ಯನು ಮನೆಯ ಉತ್ತರ ಭಾಗದಲ್ಲಿರುತ್ತಾನೆ. ಈ ಸಮಯವು ಬಹಳ ರಹಸ್ಯವಾಗಿರುತ್ತದೆ. ಬೆಲೆಬಾಳುವ ವಸ್ತುಗಳು ಅಥವಾ ಆಭರಣಗಳನ್ನು ಇಡಲು ಈ ದಿಕ್ಕು ಮತ್ತು ಸಮಯವು ಉತ್ತಮ ಎನ್ನಲಾಗುತ್ತದೆ. 

Follow Us:
Download App:
  • android
  • ios