Vaastu tips: ಗಡಿಯಾರ ಈ ದಿಕ್ಕಿನಲ್ಲಿದ್ದರೆ ಒಳ್ಳೆಯದು!

ಪ್ರತೀ ದಿನ ಎಷ್ಟೋ ವಿಷಯಗಳನ್ನು ಮನೆಯಲ್ಲಿ ಬದಲಾಯಿಸುತ್ತಿರುತ್ತೇವೆ. ಮನೆಯಲ್ಲಿ ವಾಸ್ತು ದೋಷವಿದ್ದರೆ, ನಮ್ಮ ಜೀವನದಲ್ಲೂ ಬದಲಾವಣೆಯನ್ನು ಕಾಣುತ್ತೇವೆ ಎಂದು ಹೇಳುತ್ತಾರೆ. ಮನೆ ಕಟ್ಟುವಾಗ ಹೇಗೆ ವಾಸ್ತು ಬೇಕೇ ಬೇಕೊ ಹಾಗೂ ಮನೆ ನಿರ್ವಹಣೆ ವಿಷಯದಲ್ಲೂ ವಾಸ್ತು ಅಗತ್ಯವಾಗುತ್ತದೆ. ಮನೆಯಲ್ಲಿ ಗಡಿಯಾರ ಬೇಕೆ ಬೇಕು. ಅದಿಲ್ಲದಿದ್ದರೆ ಸಮಯ ಹೇಗೆ ಕಳೆಯುತ್ತದೆ ಎಂಬುbವುದೇ ತಿಳಿಯುವುದಿಲ್ಲ. ಹೀಗಿರುವ ಮನೆಯಲ್ಲಿ ಗಡಿಯಾರ ಯಾವ ದಿಕ್ಕಿನಲ್ಲಿರಬೇಕು? ಗಡಿಯಾರದ ಬಗ್ಗೆ ಫೆಂಗ್ ಶುಯಿ ಹೇಳಿರುವ ಮಾಹಿತಿ ಇಲ್ಲಿವೆ.

Vaastu Placement of Wall Clock at Home Things to Know about Clock

ಪ್ರತೀ ದಿನ ಎಷ್ಟೋ ವಿಷಯಗಳನ್ನು ಮನೆಯಲ್ಲಿ ಬದಲಾಯಿಸುತ್ತಿರುತ್ತೇವೆ. ಮನೆಯಲ್ಲಿ ವಾಸ್ತು ದೋಷವಿದ್ದರೆ ನಮ್ಮ ಜೀವನದಲ್ಲೂ ಬದಲಾವಣೆಯನ್ನು ಕಾಣುತ್ತೇವೆ ಎಂದು ಹೇಳುತ್ತಾರೆ. ಒಂದು ಹೂವಿನಿಂದ ಹಿಡಿದು ಗೋಡೆಯ ಮೇಲಿನ ಗಡಿಯಾರದ ವರೆಗೂ ವಾಸ್ತು ಶಾಸ್ತ್ರದ ಪ್ರಭಾವ ಇರುತ್ತದೆ. ಮನೆ ಕಟ್ಟುವಾಗ ಹೇಗೆ ವಾಸ್ತು ಬೇಕೇ ಬೇಕೊ ಹಾಗೂ ಮನೆ ನಿರ್ವಹಣೆಯ ವಿಷಯದಲ್ಲೂ ವಾಸ್ತು ಅಗತ್ಯವಾಗುತ್ತದೆ. ಮನೆಯಲ್ಲಿ ಗಡಿಯಾರ ಬೇಕೆ ಬೇಕು. ಅದಿಲ್ಲದಿದ್ದರೆ ಸಮಯ ಹೇಗೆ ಕಳೆಯುತ್ತದೆ ಎಂಬುದೇ ತಿಳಿಯುವುದಿಲ್ಲ. ಹೀಗಿರುವ ಮನೆಯಲ್ಲಿ ಗಡಿಯಾರ ಯಾವ ದಿಕ್ಕಿನಲ್ಲಿರಬೇಕು? ಗಡಿಯಾರದ ಬಗ್ಗೆ ಫೆಂಗ್ ಶುಯಿ ಹೇಳಿರುವ ಮಾಹಿತಿ ಇಲ್ಲಿವೆ.
ಭಾರತೀಯರು ಬಹುತೇಕ ಜನ ವಾಸ್ತುವನ್ನು ನಂಬುತ್ತಾರೆ. ತಮ್ಮ ಬದುಕಿನ ಹಲವು ವಿಚಾರಗಳಿಗೆ ವಾಸ್ತು ಪರಿಣಾಮ ಬೀರುತ್ತದೆ. ದೇವರು ಒಂದು ಶಕ್ತಿಯಾದರೆ ವಾಸ್ತು ಎಂಬುದು ಸಕಾರಾತ್ಮಕ ವಾತಾವರಣದ ಒಂದು ಅನುಸರಣೆಯಾಗಿದೆ. ಕೆಲವೊಮ್ಮೆ ಏನಾದರೊಂದು ತಪ್ಪು ಅನುಭವಿಸಬಹುದು ಮತ್ತು ಧ್ಯಾನ ಮಾಡಲು ಸಾಧ್ಯವಾಗುವುದಿಲ್ಲ. ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಅಡ್ಡಿಪಡಿಸುವುದಾಘಿದೆ. ವಾಸ್ತು ಶಾಸ್ತçವು ಅನೇಕ ತತ್ವಗಳನ್ನು ಒಳಗೊಂಡಿದೆ. ಮನೆಯ ಗೋಡೆಯ ಗಡಿಯಾರದ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಗಡಿಯಾರದ ಮಹತ್ವ
ವಾಸ್ತವವಾಗಿ ಸಮಯವು ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಸಮಯವು ಯಾರನ್ನು ಹೇಗೆ ಬೇಕಾದರೂ ಬದಲಾಯಿಸಬಲ್ಲದು. ಭಿಕ್ಷÄಕನೂ ರಾಜನನ್ನಾಗಿ ಮತ್ತು ರಾಜನೂ ಭಿಕ್ಷÄಕನಾಗಿಯೂ ಬದಲಾಗಬಲ್ಲ. ಸಮಯ ಬದಲಾದಂತೆ ಎಲ್ಲವೂ ಬದಲಾಗುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ. ಜೀವನದ ಸ್ಥಿತಿಗತಿಗಳನ್ನು ತಿಳಿಸುವ ಸಮಯ ಮನೆಯ ಗೋಡೆಯ ಮೇಲೆ ನಿಯೋಜನೆಯ ಬಗ್ಗೆಯೂ ನಿರ್ಣಾಯಕ ಪಾತ್ರ ವಹಿಸುತ್ತದೆ. ವಾಸ್ತು ತತ್ವಗಳ ಪ್ರಕಾರ ಗಡಿಯಾರ ಮನೆಯಲ್ಲಿ ಸರಿಯಾಗಿ ಇಡಬೇಕು. ಗಡಿಯಾರ ಇಡುವ ದಿಕ್ಕು ಬದಲಾಯಿಸಿದರೆ ಅದನ್ನು ಸರಿಯಾದ ದಿಕ್ಕಿನಲ್ಲಿರಿಸಿದರೆ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಗಮನಿಸಬಹುದು. ಗೋಡೆಯ ಗಡಿಯಾರ ತಪ್ಪು ದಿಕ್ಕಿನಲ್ಲಿರಿಸಿದರೆ ನಕಾರಾತ್ಮಕ ಫಲಿತಾಂಶಗಳನ್ನು ಅನುಭವಿಸಬಹುದು. ಹಾಗಾದರೆ ಮನೆಯಲ್ಲಿ ಗಡಿಯಾರ ಹೇಗಿಡಬೇಕು? ಎಲ್ಲಿಡಬೇಕು? ಯಾವ ದಿಕ್ಕಿನಲ್ಲಿಡಬೇಕು ಎಂಬುದರ ಮಾಹಿಯಿ ಇಲ್ಲಿದೆ.

Vastu tips: ಮನೆಯ ನೆಗೆಟಿವಿಟಿ ದೂರ ಮಾಡಲು ಇದನ್ನ ತಪ್ಪದೇ ಮಾಡಿ

ಮನೆಯಲ್ಲಿ ಗಡಿಯಾರ ಹೀಗಿರಲಿ
1. ವಾಸ್ತು ಪ್ರಕಾರ (Vaastu) ಮನೆಯಲ್ಲಿ ಗೋಡೆ ಗಡಿಯಾರ ದಕ್ಷಿಣ ದಿಕ್ಕಿನ ಕಡೆ ಇಡಬಾರದು. ಇದು ಅಶುಭವೆಂದು ಪಎಇಗಣಿಸಲಾಗುತ್ತದೆ.
2. ಮನೆಯ ಬಾಗಿಲ ಮೇಲೆ ಗರಿಯಾರವನ್ನು ನೇತು ಹಾಕುವುದು ಅಥವಾ ಸಿಗಿಸುವುದನ್ನು ಮಾಡಬಾರದು.
3. ಉತ್ತರ ದಿಕ್ಕಿನಲ್ಲಿ (North Direction) ಗಡಿಯಾರವನ್ನು ನೇತು ಹಾಕುವುದು ಮಂಗಳಕರವಾಗಿದೆ. ಇದು ಸಂಪತ್ತು ಮತ್ತು ಸಮೃದ್ಧಿಯ ಮುನ್ನುಡಿ ಎಂದು ನಂಬಲಾಗಿದೆ.
4. ಗೋಡೆಯ ಗಡಿಯಾರವು ಉತ್ತರ, ಪೂರ್ವ ಹಾಗೂ ಪಶ್ಚಿಮ ದಿಕ್ಕಿನಲ್ಲಿ ನೇತುಹಾಕುವಂತೆ ಸೂಚಿಸಲಾಗುತ್ತದೆ. ಕೆಲಸ ಮಾಡುವಾಗ ಗೋಡೆಯ ಗಡಿಯಾರವನ್ನು ನೋಡುವುದನ್ನು ಇದು ಸುಲಭಗೊಳಿಸುತ್ತದೆ. ಜೊತೆಗೆ ಇದು ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ನಿರ್ವಹಿಸುತ್ತದೆ.
5. ಮಲಗುವ ಕೋಣೆಯ ಪೂರ್ವ ದಿಕ್ಕು ಗಡಿಯಾರ ನೇತು ಹಾಕುವುದಕ್ಕೆ ಉತ್ತಮ ಸ್ಥಳವಾಗಿದೆ. ಅದಾಗ್ಯೂ ಪೂರ್ವ ದಿಕ್ಕಿನಲ್ಲಿ ಗೋಡೆ ಇಲ್ಲದಿದ್ದಲ್ಲಿ ಉತ್ತರದ ಮೂಲೆಯಲ್ಲಿ ಇಡಬಹುದು.
6. ವ್ಯಕ್ತಿಯು ದಕ್ಷಿಣಾಭಿಮುಖವಾಗಿ (South Direction) ತಲೆಯಿಟ್ಟು ಮಲಗುವ ಅಭ್ಯಾಸ ಹೊಂದಿದ್ದರೆ, ಅದಕ್ಕೆ ತದ್ವಿರುದ್ಧವಾಗಿ ಗಡಿಯಾರವು ಉತ್ತರ ದಿಕ್ಕಿನಲ್ಲಿ ಇರಿಸಬೇಕು.
7. ಪೆಂಡುಲಮ್ ಇರುವ ಗಡಿಯಾರವು ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ ಇದರ ಶಬ್ಧವು ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳನ್ನು (Positive Energy) ತುಂಬಿರುವAತೆ ನೋಡಿಕೊಳ್ಳುತ್ತದೆ.
8. ಪೆಂಡುಲಮ್ ಇರುವ ಗಡಿಯಾರವನ್ನು ಮನೆಯಲ್ಲಿಡಬೇಕೆಂದರೆ ಅದಕ್ಕೆ ಪೂರ್ವ ದಿಕ್ಕು ಬಹಳ ಒಳ್ಳೆಯದು ಎನ್ನಲಾಗುತ್ತದೆ.
9. ಗಡಿಯಾರವನ್ನು ಪಶ್ಚಿಮ ದಿಕ್ಕಿನಲ್ಲಿ ಇರಿಸಬಹುದು. ಆದರೆ ಮೊದಲು ಪೂರ್ವ ಹಾಗೂ ಉತ್ತರ ದಿಕ್ಕಿಗೆ ಪ್ರಾಮುಖ್ಯತೆ ನೀಡಿ. ಕೊನೆಯ ಆಯ್ಕೆಯಾಗಿ ಪರಿಗಣಿಸಿ. 

Home Vastu: ಮನೆಯಲ್ಲಿ ಈ ಲಕ್ಕಿ ಕ್ಯಾಟ್ ಇಟ್ನೋಡಿ, ಲಕ್ ಖುಲಾಯಿಸೋದು ಗ್ಯಾರಂಟಿ

ಗಡಿಯಾರ ಗೋಡೆಯಲ್ಲಿ ಇರಿಸುವುದರ ಜೊತೆಗೆ ಈ ವಿಷಯಗಳ ಬಗ್ಗೆ ಇರಲಿ ಗಮನ
1. ಗೋಡೆಯ ಗಡಿಯಾರಗಳು ಅಥವಾ ಕ್ಯಾಲೆಂಡರ್‌ಗಳAತಹ ವಸ್ತುಗಳು ಮನೆಯ ಹೊರಗಡೆ ನೇತು ಹಾಕಬಾರದು ಅದು ಯಾವಾಗಲೂ ಮನೆಯ ಒಳಗೆ ಇಡಬೇಕು ಎಂಬುದನ್ನು ನೆನಪಿನಲ್ಲಿಡಬೇಕು.
2. ಮನೆಯಲ್ಲಿನ ಎಲ್ಲಾ ಗಡಿಯಾರಗಳು ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಿ. ಅದು ಸರಿಯಾದ ಸಮಯ ಅಥವಾ ಮುಂದೆ ಇದ್ದರೆ ಒಳ್ಳೆಯದು. ಸರಿಯಾದ ಸಮಯಕ್ಕಿಂತ ಹಿಂದೆ ಇರಬಾರದು ಎಂದು ವಾಸ್ತು ಶಾಸ್ತç ತಿಳಿಸುತ್ತದೆ.
3. ಮನೆಯಲ್ಲಿ ಗಾಜಿನ ಗಡಿಯಾರವಿದ್ದಲ್ಲಿ ಹುಷಾರಾಗಿ ನೋಡಿಕೊಳ್ಳಬೇಕು. ಆ ಗಾಜಿನ ಮೇಲೆ ಯಾವುದೇ ಬಿರುಕು ಇರಬಾರದು ಅಥವಾ ಒಡೆದಿರಬಾರದು.
4. ಗಡಿಯಾರವನ್ನು ಪ್ರತೀ ದಿನ ಸ್ವಚ್ಛಗೊಳಿಸಬೇಕು. ಅದರ ಮೇಲೆ ಯಾವುದೇ ಕೊಳೆ, ಧೂಳು ಇರದಂತೆ ನೋಡಿಕೊಳ್ಳಬೇಕು.
5. ಗಡಿಯಾರ ಕೊಂಡುಕೊಳ್ಳುವಾಗ ನಕಾರಾತ್ಮಕ ಶಕ್ತಿ ಅಥವಾ ಒಂಟಿತನವನ್ನು ಬಿಂಬಿಸುವವ ಗಡಿಯಾರ ಖರೀದಿಸಬೇಡಿ. ಹಾಗೆ ಮಾಡಿದಲ್ಲಿ ಮನೆ ಮನಸ್ಸುಗಳ ಮೇಲೆ ಅದೇ ರೀತಿಯ ಪರಿಣಾಮ ಬೀರುತ್ತದೆ. 

 

Vaastu Placement of Wall Clock at Home Things to Know about Clock

 

Latest Videos
Follow Us:
Download App:
  • android
  • ios