ಮಲಗುವ ಮುನ್ನ ಎಲ್ಲಾ ಕೆಲಸಗಳನ್ನು ಮುಗಿಸಿ ಬಿಡಬೇಕು. ಮನಸು ಶಾಂತವಾಗಿರಬೇಕು. ಕೈ-ಕಾಲು ತೊಳೆದು ಮಲಗಬೇಕು. ಇಷ್ಟು ಮಾತ್ರವಲ್ಲ ಇನ್ನು ಹಲವು ವಿಷಯಗಳ ಬಗ್ಗೆ ನೀವು ಗಮನ ಹರಿಸಲೇಬೇಕು. ಅದರಲ್ಲಿಯೂ ಮಲಗುವ ಮುನ್ನ ಕೆಲವೊಂದು ವಸ್ತುಗಳನ್ನು ಹತ್ತಿರ ಇಡಬಾರದು. ಯಾವವು? 

ಪತ್ರಿಕೆ-ಮ್ಯಾಗಝಿನ್: ಮಲಗೋ ಮುನ್ನ ಓದುವ ಅಭ್ಯಾಸ ನಿಮಗಿದ್ದರೆ, ಮ್ಯಾಗಝಿನ್ -ಪತ್ರಿಕೆ ಓದಿ, ಅವನ್ನು ತಲೆ ಬಳಿಯೇ ಇಟ್ಟುಕೊಳ್ಳಬೇಡಿ. ಅವು ಜೀವನದ ಮೇಲೆ ಪ್ರಭಾವ ಬೀರುತ್ತದೆ. 

ಫೋನ್ ಅಥವಾ ಇತರ ಎಲೆಕ್ಟ್ರಾನಿಕ್ ವಸ್ತು: ಫೋನ್, ಲ್ಯಾಪ್ ಟಾಪ್ ಅಥವಾ ಯಾವುದೇ ಇಲೆಕ್ಟ್ರಾನಿಕ್ ವಸ್ತುಗಳನ್ನು ತಲೆ ಬಳಿ ಇಡಬೇಡಿ. ಇದು ಮಾನಸಿಕ ಶಾಂತಿಗೆ ಭಂಗ ತರುತ್ತದೆ. ಶಾರೀರಿಕ ಸಮಸ್ಯೆಯೂ ಕಾಣಿಸಿಕೊಳ್ಳಬಹುದು. 

ಪರ್ಸ್: ಒಂದು ವೇಳೆ ಮಲಗುವ ಸಮಯದಲ್ಲಿ ತಲೆ ಬಳಿ ಪರ್ಸ್ ಅಥವಾ ವ್ಯಾಲೆಟ್ ಇಟ್ಟರೆ, ನಿಮ್ಮ ಖರ್ಚು ಹೆಚ್ಚುತ್ತದೆ. ಆದುದರಿಂದ ಪರ್ಸನ್ನು ಸಾಧ್ಯವಾದಷ್ಟು ದೂರವಿಡಿ.

ತೂಕ ಕಳೆದುಕೊಳ್ಳಬೇಕಾ. ನಿದ್ರೆಗೆ ಜಾರುವ ಮುನ್ನ ಹೀಗೆ ಮಾಡಿ

ಹಗ್ಗ : ಮಲಗುವ ಮುನ್ನ ನಿಮ್ಮ ಬೆಡ್ ಕೆಳಗಡೆ ಅಥವಾ ತಲೆ ಬಳಿ ಹಗ್ಗ ಇಲ್ಲ ಎಂಬುದನ್ನು ಖಚಿತಪಡಿಸಿ. ಇದು ಜೀವನ ಮತ್ತು ಕಾರ್ಯಗಳಲ್ಲಿ ಬಾಧೆಗಳನ್ನು ತಂದೊಡ್ಡಬಲ್ಲದು.