Asianet Suvarna News Asianet Suvarna News

Vastu Tips : ಕಚೇರಿಯಲ್ಲಿ ಹಣದ ಹೊಳೆಯಾಗ್ಬೇಕೆಂದ್ರೆ ಇವನ್ನಿಡಿ

ಕಚೇರಿ ಅಥವಾ ಅಂಗಡಿ ಕೆಲಸದಲ್ಲಿ ಸದಾ ಲಾಭವಾಗ್ಬೇಕು ಎಂದು ವ್ಯಾಪಾರಸ್ಥರು ಬಯಸ್ತಾರೆ. ಅದಕ್ಕೆ ನಾನಾ ತರಹದ ಪೂಜೆಗಳನ್ನು ಮಾಡುವವರಿದ್ದಾರೆ. ಎಲ್ಲ ಮಾಡಿದ್ರೂ ಏಳ್ಗೆಯಾಗ್ತಿಲ್ಲ ಎನ್ನುವವರು ವಾಸ್ತುವನ್ನೊಮ್ಮೆ ಗಮನಿಸಿ., ವಾಸ್ತುದೋಷ ಕೂಡ ನಿಮ್ಮ ಯಶಸ್ಸಿಗೆ ಅಡ್ಡಿಯಾಗಬಹುದು. 
 

Things To Keep In Office And Shop To Attract Money
Author
First Published Mar 24, 2023, 3:29 PM IST

ಪ್ರತಿಯೊಬ್ಬರೂ ವಾಸ್ತು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. ಮನೆಯ ಕೋಣೆಯಿಂದ ಹಿಡಿದು ಚಪ್ಪಲಿ ಇಡುವ ಜಾಗದವರೆಗೆ ಎಲ್ಲವೂ ವಾಸ್ತು ಪ್ರಕಾರ ಇದ್ರೆ ಏಳ್ಗೆಯಾಗುತ್ತದೆ ಎಂದು ನಂಬಲಾಗಿದೆ. ಹಾಗೆಯೇ ಕೆಲವೊಂದು ವಾಸ್ತು ನಿಯಮಗಳನ್ನು ತಪ್ಪಾಗಿ ಪಾಲನೆ ಮಾಡಿದ್ರೆ ಅಥವಾ ವಾಸ್ತು ದೋಷವಾಗುವಂತೆ ನಡೆದುಕೊಂಡ್ರೆ ಸಮಸ್ಯೆ ಹೆಚ್ಚಾಗುತ್ತದೆ. ಸಮೃದ್ಧಿಯ ಕೊರತೆ ಕಾಡುತ್ತದೆ.

ಮನೆ (Home) ಯಲ್ಲಿ ಮಾತ್ರವಲ್ಲದೆ ಕೆಲಸ (Work)ದ ಸ್ಥಳದಲ್ಲಿಯೂ ವಾಸ್ತು ನಿಯಮಗಳನ್ನು ಪಾಲಿಸಬೇಕು. ವಾಸ್ತು ನಿಯಮ ಪಾಲನೆಯಿಂದ ಪ್ರಗತಿಯ ಹಾದಿ ತೆರೆಯುತ್ತದೆ. ಕೆಲಸದ ಸ್ಥಳದಲ್ಲಿ ಧನಾತ್ಮಕ ವಾತಾವರಣ ಮನೆ ಮಾಡುತ್ತದೆ. ಕೆಲಸದ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ಸಹಾಯವಾಗುತ್ತದೆ. ಹಣ (Money) ದ ಹರಿವು ಹೆಚ್ಚಾಗುತ್ತದೆ. ನಾವಿಂದು ಕೆಲಸದ ಸ್ಥಳದಲ್ಲಿ ಯಾವೆಲ್ಲ ವಾಸ್ತು ನಿಯಮ ಪಾಲನೆ ಮಾಡ್ಬೇಕು ಎಂಬುದನ್ನು ನಿಮಗೆ ಹೇಳ್ತೇವೆ. 

RAM NAVAMI 2023: ಶ್ರೀರಾಮನಿಗೊಬ್ಬಳು ಅಕ್ಕ ಇದ್ದಳು.. ಅವಳಿಗಾಗಿ ದೇವಾಲಯವೂ ಇದೆ!

ಕಚೇರಿ (Office) ಯಲ್ಲಿ ಈ ವಾಸ್ತು (Vastu) ನಿಯಮ ಪಾಲನೆ ಮಾಡಿ : 

ಹೀಗಿರಲಿ ನೀವು ಕುಳಿತುಕೊಳ್ಳುವ ಸ್ಥಳ : ವಾಸ್ತು ನಿಯಮದ ಪ್ರಕಾರ ನೀವು ಕುಳಿತುಕೊಳ್ಳುವ ಜಾಗವನ್ನು ಹೊಂದಿಸಬೇಕು. ಕಿಟಕಿಗಳಿಂದ ಸಾಕಷ್ಟು ನೈಸರ್ಗಿಕ ಬೆಳಕು ಬರುವಂತೆ ನೋಡಿಕೊಳ್ಳಬೇಕು. ನೀವು ಬಾಗಿಲು, ಕಿಟಕಿಯ ಸ್ಪಷ್ಟ ನೋಟವನ್ನು ಹೊಂದಬಹುದಾದ ಜಾಗದಲ್ಲಿ ಕುಳಿತುಕೊಳ್ಳಬೇಕು. ಇದು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. 

ಪಂಚಮುಖಿ ಹನುಮಂತನ ಫೋಟೋ :  ನಿಮ್ಮ ಕಚೇರಿ ಅಥವಾ ಅಂಗಡಿಯಲ್ಲಿ ಸಮೃದ್ಧಿಯನ್ನು ಬಯಸಿದರೆ  ಮುಖ್ಯ ಬಾಗಿಲಿನ ಮೇಲೆ ಪಂಚಮುಖಿ ಹನುಮಂತನ ಫೋಟೋವನ್ನು ಹಾಕಲು ಮರೆಯಬೇಡಿ. ಈ ಹನುಮಂತನ ಫೋಟೋ ನಿಮಗೆ ಶುಭ ಫಲ ನೀಡುತ್ತದೆ. ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.  

ಹುಟ್ಟುವ ಮಗುವಿನ ಆರೋಗ್ಯ, ಸಂತೋಷಕ್ಕಾಗಿ ಗರ್ಭಿಣಿಯರು ಈ ಮಂತ್ರ ಹೇಳಿ..

ಓಡುತ್ತಿರುವ ಕುದುರೆ ಫೋಟೋ (Running Horse Photo) : ಕುದುರೆಯನ್ನು ಶೌರ್ಯ, ಕಠಿಣ ಪರಿಶ್ರಮ, ಶಕ್ತಿ ಮತ್ತು ಧೈರ್ಯದ ಸಂಕೇತವೆಂದು ನಂಬಲಾಗಿದೆ. ಪುರಾಣಗಳ ಕಾಲದಿಂದಲೂ ಕುದುರೆಗೆ ಪ್ರಾಮುಖ್ಯತೆ ನೀಡಲಾಗಿದೆ. ಕುದುರೆಯನ್ನು ಸಮೃದ್ಧಿ ಸಂಕೇತ ಎನ್ನಲಾಗುತ್ತದೆ. ನೀವು ನಿಮ್ಮ ಕಚೇರಿಯಲ್ಲಿ ಓಡುತ್ತಿರುವ ಕುದುರೆ ಫೋಟೋವನ್ನು ಹಾಕಿ. ಇದ್ರಿಂದ ಧನಾತ್ಮಕ ಪ್ರಭಾವವುಂಟಾಗುತ್ತದೆ. ಆರ್ಥಿಕ ಲಾಭವಾಗುತ್ತದೆ. ಯಶಸ್ಸು ಪ್ರಾಪ್ತಿಯಾಗುತ್ತದೆ.  ಅದೃಷ್ಟ ಒಲಿದುಬರುತ್ತದೆ. ಕಚೇರಿ ಮೇಜಿನ ಮೇಲೆ ನೀವು ಓಡುತ್ತಿರುವ ಕುದುರೆ ಮೂರ್ತಿಯನ್ನು ಕೂಡ ಇಡಬಹುದು.   

ಕಾರಂಜಿ (Fountain) : ಕಾರಂಜಿಯನ್ನು ನೀವು ಕೆಲಸದ ಸ್ಥಳದಲ್ಲಿ ಇಡಬಹುದು. ಇದನ್ನು ವಾಸ್ತು ಪ್ರಕಾರ ಮಂಗಳವೆಂದು ನಂಬಲಾಗಿದೆ.  ವಿಶೇಷವಾಗಿ ಅಂಗಡಿಯ ಮುಖ್ಯ ದ್ವಾರದಲ್ಲಿ ನೀವು  ವಾಟರ್ ಪೌಂಟೇನ್ ಇಡಿ. ಹಣವನ್ನು ಇದು ಆಹ್ವಾನಿಸುತ್ತದೆ. ನೀವು ಇದನ್ನು ಯಾವಾಗ್ಲೂ ಉತ್ತರ ದಿಕ್ಕಿನಲ್ಲಿ ಇಡಬೇಕು.    

ಡ್ರೀಮ್ ಕ್ಯಾಚರ್(Dream Catcher) : ನಿಮ್ಮ ಕಚೇಯ ಮೇಜಿನ ಮೇಲೆ ನೀವು ಡ್ರೀಮ್ ಕ್ಯಾಚರ್ ಹಾಕಬೇಕು. ನಿಮ್ಮ ಕನಸ್ಸನು ಈಡೇರಿಸಿ ನೀವು ಯಶಸ್ಸು ಗಳಿಸಲು ಇದು ನೆರವಾಗುತ್ತದೆ. ನಿಮ್ಮ ಜೀವನದಲ್ಲಿ ಸುಖ, ಸಂತೋಷ ಪ್ರಾಪ್ತಿಯಾಗುತ್ತದೆ. ಆರ್ಥಿಕವಾಗಿ ನೀವು ಸದೃಢವಾಗಲು ಇದು ಸಹಕಾರಿ. ನಿಮ್ಮ ಕಚೇರಿಯಲ್ಲಿ ಸಕಾರಾತ್ಮಕ ವಾತಾವರಣವನ್ನು ಡ್ರೀಮ್ ಕ್ಯಾಚರ್ ಸೃಷ್ಟಿ ಮಾಡುತ್ತದೆ. ಇದನ್ನು ನೀವು ಖರೀದಿ ಮಾಡುವ ಬದಲು ಬೇರೆಯವರು ಉಡುಗೊರೆಯಾಗಿ ನೀಡಿದ್ರೆ ಒಳ್ಳೆಯದು ಎನ್ನುವ ನಂಬಿಕೆಯಿದೆ. 

ತಾಮ್ರದ ಸೂರ್ಯ (Copper Sun) :  ಸೂರ್ಯ ಶಕ್ತಿಯ ಸಂಕೇತ. ನೀವು ಕೆಲಸದಲ್ಲಿ ಶಕ್ತಿ ಪಡೆಯಬೇಕೆಂದ್ರೆ ಕಚೇರಿಯಲ್ಲಿ ತಾಮ್ರದ ಸೂರ್ಯನನ್ನು ಇಡಬೇಕು. ಇದು ನಿಜವಾದ ಸೂರ್ಯನಿಗೆ ಸಮಾನವಾದ ಶಕ್ತಿಯ ಮೂಲವಾಗಿದೆ. ಇದನ್ನು ಮುಖ್ಯವಾಗಿ ಸೂರ್ಯನ ಬೆಳಕು ಬರದ, ಕತ್ತಲೆಯ ಸ್ಥಳದಲ್ಲಿ ಇಡಬೇಕು. ತಾಮ್ರದ ಸೂರ್ಯನನ್ನು ಉತ್ತರ ದಿಕ್ಕಿನಲ್ಲಿ ಇಟ್ಟರೆ ಉತ್ತಮ ಫಲಿತಾಂಶ ಲಭ್ಯವಾಗುತ್ತದೆ. ಕಚೇರಿಯ ಮುಖ್ಯ ಬಾಗಿಲಿಗೆ ಕೂಡ ಇದನ್ನು ಹಾಕಬಹುದು. 
 

Follow Us:
Download App:
  • android
  • ios