Asianet Suvarna News Asianet Suvarna News

Vaastu Plants: ಮನೆಯೊಳಗೆ ಧನ ಹರಿಸುವ ಅದೃಷ್ಟದ ವಾಸ್ತು ಗಿಡಗಳಿವು

ಮನೆಯಲ್ಲಿ ಸಂತಸ, ಹಣಕಾಸು ಸಮೃದ್ಧಿ ಉಂಟಾಗಬೇಕಾದರೆ ಅದೃಷ್ಟದ ಜತೆಗೆ ಧನಾತ್ಮಕ ವಾತಾವರಣವೂ ಬೇಕಾಗುತ್ತದೆ. ಕೆಲವು ವಾಸ್ತು ಗಿಡಗಳು ಮನೆಯೊಳಗೆ ಪಾಸಿಟಿವ್ ವಾತಾವರಣ ಸೃಷ್ಟಿಸುವ‌ ಜತೆಗೆ ಅದೃಷ್ಟವನ್ನೂ ಹೆಚ್ಚಿಸಬಲ್ಲವು. ಅವುಗಳನ್ನು ಮನೆಯೊಳಗೆ ಬೆಳೆಸಿ ಅದೃಷ್ಟವನ್ನು ಖಾತ್ರಿ ಮಾಡಿಕೊಳ್ಳಿ.
 

 These Vaastu plants brings home luck and prosperity
Author
First Published Sep 14, 2022, 6:16 PM IST

ಮನೆಯಲ್ಲಿ ಶಾಂತಿ, ಸೌಹಾರ್ದತೆ, ಯಶಸ್ಸು, ಸಂತಸ, ಹಣಕಾಸು ನೆಮ್ಮದಿ ಸದಾಕಾಲ ನೆಲೆಯಾಗಿರಬೇಕೆಂದು ಎಲ್ಲರೂ ಏನೆಲ್ಲ ಕಸರತ್ತು ಮಾಡುತ್ತಾರೆ. ಆರ್ಥಿಕ ಸುಭದ್ರತೆಗೆ ಅವಿರತ ದುಡಿಯುತ್ತಾರೆ. ಕೆಲವೊಮ್ಮೆ ಏನೇ ಮಾಡಿದರೂ ಮನೆಯಲ್ಲಿ ಪ್ರಗತಿ ಕಾಣುವುದಿಲ್ಲ. ಎಷ್ಟೇ ದುಡಿದರೂ ನೀರಲ್ಲಿ ಮಾಡಿದ ಹೋಮದಂತೆ ಆಗುತ್ತದೆ. ಕಷ್ಟಪಡುವುದೊಂದೇ ಅನುಭವಕ್ಕೆ ಬರುತ್ತಿರುತ್ತದೆ ಆದರೆ, ನೆಮ್ಮದಿ ಎನ್ನುವುದು ಮರೀಚಿಕೆ ಆಗುತ್ತದೆ. ಇದೊಂದು ರೀತಿಯಲ್ಲಿ ಅಸಹಾಯಕತೆ ಮೂಡಿಸುತ್ತದೆ. ಈ ಸ್ಥಿತಿಗೆ ಕಾರಣವೇನು ಎನ್ನುವುದರ ಹುಡುಕಾಟ ಶುರುವಾಗುವುದೇ ಅಲ್ಲಿಂದ. ಮನೆಯಲ್ಲಿ ಎಲ್ಲವೂ ಇದ್ದರೂ ಕೆಲವು ಧನಾತ್ಮಕ ಸಂಕೇತಗಳ ಕೊರತೆ ಇರಬಹುದು. ಅವುಗಳಿಂದಾಗಿಯೇ ಕೆಲವು ಸಮಸ್ಯೆಗಳು ಕರಗದೇ ಇರಬಹುದು. ಮನೆಯೊಳಗೆ ಧನಾತ್ಮಕ ಶಕ್ತಿ, ಅಲೆಯನ್ನು ತುಂಬುವ ಹಲವು ಮಾರ್ಗಗಳ ಬಗ್ಗೆ ಪುರಾತನ ಭಾರತೀಯರ ವಾಸ್ತುಶಾಸ್ತ್ರ ತಿಳಿಸಿಕೊಡುತ್ತದೆ. ವಾಸ್ತುಶಾಸ್ತ್ರದ ಪ್ರಕಾರ, ಕೆಲವು ಜಾತಿ ಗಿಡಗಳನ್ನು ಮನೆಯೊಳಗೆ ಇರಿಸಿಕೊಳ್ಳುವುದರಿಂದ ಶುಭವಾಗುತ್ತದೆ. ಶಾಂತಿ, ನೆಮ್ಮದಿ, ಪ್ರಗತಿ ಸಾಧನೆಯಾಗುತ್ತದೆ. ಇವುಗಳನ್ನು ವಾಸ್ತು ಗಿಡಗಳೆಂದು ಹೇಳಬಹುದು. ಇವುಗಳನ್ನು ಮನೆಯೊಳಗೆ ಇರಿಸಿಕೊಳ್ಳುವುದರಿಂದ ಧನಾತ್ಮಕ ಪರಿಣಾಮ ಉಂಟಾಗುತ್ತದೆ. ಅದೃಷ್ಟವೂ ಜತೆಯಾಗುತ್ತದೆ. 

•    ಸ್ನೇಕ್‌ ಪ್ಲಾಂಟ್‌ (Snake Plant)
ಎಲೆಗಳ (Leaf) ಮೇಲೆ ಹಾವಿನಂತಹ ಚಿತ್ತಾರ ಹೊಂದಿರುವ ಗಿಡ ಇದು. ಸ್ನೇಕ್‌ ಪ್ಲಾಂಟ್‌ ಮನೆಯೊಳಗಿರುವ ವಿಷಕಾರಿ (Toxic) ಅಂಶವನ್ನು ನಾಶಪಡಿಸುತ್ತದೆ. ಹಗುರವೆನಿಸುವ, ಧನಾತ್ಮಕ (Positive) ಪರಿಸರ ನಿರ್ಮಾಣಕ್ಕೆ ಕಾರಣವಾಗುತ್ತದೆ. ಸ್ನೇಕ್‌ ಪ್ಲಾಂಟ್ ಮಾನಸಿಕ ಮತ್ತು ದೈಹಿಕ ಆರೋಗ್ಯ ದೊರೆಯುವುದಕ್ಕೂ ಅತ್ಯುತ್ತಮ ಅದೃಷ್ಟದ ಗಿಡವೆಂದು ಭಾವಿಸಲಾಗಿದೆ. ಮನೆಯಲ್ಲಿ ಒತ್ತಡ (Stress) ಕಡಿಮೆ ಮಾಡುತ್ತದೆ. ಮನೆಯ ಯಾವುದೇ ಸದಸ್ಯರು ಅನಗತ್ಯ ಟೆನ್ಷನ್‌ ಗೆ ಒಳಗಾಗದಂತೆ ತಡೆಯುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ. ಈ ಗಿಡವನ್ನು ಮನೆಯ ದಕ್ಷಿಣ (South) ಅಥವಾ ಪೂರ್ವ (East) ದಿಕ್ಕಿನಲ್ಲಿ ಇಡುವುದು ಸೂಕ್ತ.

ಇದನ್ನೂ ಓದಿ: Vastu Tips for Wealth: ಮನೆಯ ಈ ಸ್ಥಳದಲ್ಲಿ ಹಣವನ್ನು ಇರಿಸಿದ್ರೆ, ಹಣ ದುಪ್ಪಾಟ್ಟಾಗುತ್ತೆ

•    ತುಳಸಿ ಗಿಡ (Basil Plant)
ತುಳಸಿ ಗಿಡಕ್ಕೆ ಸಾಂಪ್ರದಾಯಿಕ ಮಾನ್ಯತೆಯಿದೆ, ಸಾಮಾನ್ಯವಾಗಿ ಎಲ್ಲ ಹಿಂದು ಕುಟುಂಬಗಳಲ್ಲೂ ತುಳಸಿ ಗಿಡ ಇದ್ದೇ ಇರುತ್ತದೆ. ಆದರೆ, ಆಧುನಿಕತೆಯ ಭರದಲ್ಲಿ ಈ ಗಿಡ ಇಟ್ಟುಕೊಳ್ಳಲು ಮರೆತಿದ್ದರೆ ಇಂದೇ ತಂದುಬಿಡಿ. ತುಳಸಿ ವಾತಾವರಣವನ್ನು (Environment) ಶುದ್ಧವಾಗಿಡುತ್ತದೆ. ಇದರ ಎಲೆಗಳಿಂದ ಬರುವ ಸುವಾಸನೆ ಮನೆಯೊಳಗೆ ಹಿತವಾದ ವಾತಾವರಣ ಕಲ್ಪಿಸುತ್ತದೆ. ಸೊಳ್ಳೆಗಳು ಬಾರದಂತೆ ತಡೆಯುತ್ತದೆ. ಮನೆಯೊಳಗೆ ತುಳಸಿ ಬೆಳೆಸಲು ಕಷ್ಟವಾಗಬಹುದು, ಆದರೆ, ಹೊರಗೆಲ್ಲಾದರೂ ಬೆಳೆಸಬಹುದು. ಗಿಡವನ್ನೇ ಇಟ್ಟುಕೊಳ್ಳದಿರುವುದು ಸರಿಯಲ್ಲ. ಹಾಗೆಯೇ, ಇದಕ್ಕೆ ಹೀಲಿಂಗ್ ಗುಣವಿದೆ. ಹೀಗಾಗಿ ದೈಹಿಕ-ಮಾನಸಿಕ ಆರೋಗ್ಯ, ಸಂತಸಕ್ಕೆ ಅನುಕೂಲವೆಂದು ಹೇಳಲಾಗುತ್ತದೆ. ಇದನ್ನು ಮನೆಯ ಉತ್ತರ (North), ಪೂರ್ವ, ಈಶಾನ್ಯ ದಿಕ್ಕಿಗೆ ಇರಿಸಿಕೊಳ್ಳಬೇಕು.

•    ಮನಿ ಪ್ಲಾಂಟ್‌ (Money Plant)
ಮನಿ ಪ್ಲಾಂಟಿಗೆ ತನ್ನದೇ ಆದ ವೈಶಿಷ್ಟ್ಯವಿದೆ. ಆರ್ಥಿಕ ಉನ್ನತಿ (Financial Prosperity) ಮತ್ತು ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಭಾವಿಸಲಾಗಿದೆ. ಇದನ್ನು ನಿರ್ವಹಣೆ ಮಾಡುವುದು ಭಾರೀ ಸುಲಭ. ರೂಮು ಅಥವಾ ಬಾಲ್ಕನಿಯ ಆಗ್ನೇಯ (Southeast) ದಿಕ್ಕಿನಲ್ಲಿ ಇದನ್ನು ಬೆಳೆಸುವುದರಿಂದ ಹೆಚ್ಚಿನ ಲಾಭವಿದೆ. ಮನಿ ಪ್ಲಾಂಟಿನಿಂದ ಮನೆಗೆ ಅದೃಷ್ಟ (Luck) ಆಕರ್ಷಣೆಯಾಗುತ್ತದೆ. ಸಂಪತ್ತು ಹೆಚ್ಚಳವಾಗುತ್ತದೆ.

ಇದನ್ನೂ ಓದಿ: Vastu tips: ಮನೆಯ ನೆಗೆಟಿವಿಟಿ ದೂರ ಮಾಡಲು ಇದನ್ನ ತಪ್ಪದೇ ಮಾಡಿ

•    ಬಿದಿರು (Bamboo Plant)
ಮನೆಯ ಒಳಗೆ ಬಿದಿರು ಗಿಡವನ್ನು ಇಟ್ಟುಕೊಳ್ಳುವುದು ಉತ್ತಮ. ಏಕೆಂದರೆ ಇದನ್ನು ಅದೃಷ್ಟದ ಗಿಡವೆಂದು ಹೇಳಲಾಗುತ್ತದೆ. ಆರು ಕಾಂಡಗಳ (Stalk) ಬಿದಿರು ಗಿಡವನ್ನು ಬೆಳೆಯುವುದರಿಂದ ಸಮೃದ್ಧಿ ಉಂಟಾಗುತ್ತದೆ. ಏಳು ಕಾಂಡಗಳ ಬಿದಿರು ಗಿಡದಿಂದ ಉತ್ತಮ ಆರೋಗ್ಯ ಲಭ್ಯವಾಗುತ್ತದೆ. ವಾಸ್ತು ಪ್ರಕಾರ, ಬಿದಿರು ಗಿಡವನ್ನು ಮನೆಯ ಪೂರ್ವ ಅಥವಾ ಆಗ್ನೇಯ ದಿಕ್ಕಿನ ಕಾರ್ನರ್‌ (Corner) ಬಳಿ ಬೆಳೆಸುವುದು ಉತ್ತಮ. ಸರಿಯಾದ ದಿಕ್ಕಿನಲ್ಲಿ ಇರಿಸಿಕೊಂಡಾಗ ಪರಿಣಾಮಕಾರಿ ಪ್ರಭಾವ (Effect) ಬೀರುತ್ತದೆ. 

Follow Us:
Download App:
  • android
  • ios