Asianet Suvarna News Asianet Suvarna News

ಹೊಸ ಸಂಸತ್ತು ಬೆಳವಣಿಗೆಯ ಸಂಕೇತ; ದೇಶದಲ್ಲಿ ಪ್ರಗತಿಯ ಹೊಸ ಯುಗ ಪ್ರಾರಂಭ ಎಂದ ಜ್ಯೋತಿಷಿ

ಚಂಡೀಗಢದ ವೇದ ಜ್ಯೋತಿಷಿ ರುದ್ರಕರಣ ಪ್ರತಾಪ್ ಕರ್ನಾಟಕ ಚುನಾವಣಾ ಫಲಿತಾಂಶದ ಬಗ್ಗೆ ನಿಖರವಾಗಿ ಹೇಳಿದ್ದರು. ಅಷ್ಟೇ ಅಲ್ಲ, ರಾಜಕೀಯ ಭವಿಷ್ಯಗಳಿಗೆ ಬಹಳ ಹೆಸರು ಮಾಡಿರುವ ಅವರು ಇದೀಗ ಹೊಸ ಸಂಸತ್ ಭವನದ ರಚನೆಯ ಬಗ್ಗೆ ಮಾತನಾಡಿದ್ದಾರೆ. 

The new Parliament building is the symbol of Nations progress says astrologer skr
Author
First Published May 30, 2023, 1:02 PM IST

ಮೊನ್ನೆ ತಾನೇ ಉದ್ಘಾಟನೆಗೊಂಡ ನೂತನ ಸಂಸತ್‌ ಭವನದ ವಾಸ್ತು ಅಭಿವೃದ್ಧಿಗೆ ಪೂರಕವಾಗಿದೆ ಎಂಬ ಬಗ್ಗೆ ಹಲವು ವಾಸ್ತುಶಾಸ್ತ್ರಜ್ಞರು ತಿಳಿಸುತ್ತಿದ್ದಾರೆ. ಸಂವಿಧಾನ ಭವನವು ಹಿಂದೂ ಸಂಪ್ರದಾಯದ ಪೂಜೆಗಳಲ್ಲಿ ಬಳಸಲಾಗುವ ಹಾಗೂ ಶಕ್ತಿಯ ಮೂಲವೆಂದು ಪರಿಗಣಿಸಲಾಗಿರುವ ‘ಶ್ರೀ ಯಂತ್ರ’ ದಿಂದ ಪ್ರೇರಿತವಾಗಿದೆ. ಭವನದಲ್ಲಿ ಕೊನಾರ್ಕ್‌ ಸೂರ್ಯ ದೇವಾಲಯದ ರಥದ ಚಕ್ರದ ಬೃಹತ್‌ ಹಿತ್ತಾಳೆ ಕಲಾಕೃತಿ ಇದೆ. ಭವನದಲ್ಲಿರುವ ಮೂರು ಸಾರ್ವಜನಿಕ ಗ್ಯಾಲರಿಗಳಲ್ಲಿ ಒಂದಾದ ಸಂಗೀತ ಗ್ಯಾಲರಿಯಲ್ಲಿ ಭಾರತದ ನೃತ್ಯ, ಹಾಡು ಮತ್ತು ಸಂಗೀತ ಸಂಪ್ರದಾಯಗಳನ್ನು ಪ್ರದರ್ಶಿಸಲಾಗಿದೆ. ಶಿಲ್ಪ ಗ್ಯಾಲರಿಯಲ್ಲಿ ದೇಶದ ವಿವಿಧ ರಾಜ್ಯಗಳ ಕರಕುಶಲ ಕಲೆಯ ಸಂಪ್ರದಾಯವನ್ನು ಪ್ರದರ್ಶಿಸಲಾಗಿದೆ.

ಹೊಸ ಸಂಸತ್ತಿನ ಕಟ್ಟಡವು ಚಿತ್ರಕಲೆಗಳು, ಅಲಂಕಾರಿಕ ಕಲೆಗಳು, ಗೋಡೆಯ ಫಲಕಗಳು, ಕಲ್ಲಿನ ಶಿಲ್ಪಗಳು ಮತ್ತು ಲೋಹದ ವಸ್ತುಗಳು ಸೇರಿದಂತೆ ಸುಮಾರು 5,000 ಕಲಾಕೃತಿಗಳನ್ನು ಪ್ರದರ್ಶಿಸುತ್ತದೆ. ಹೊಸ ಕಟ್ಟಡವು ಆರು ಪ್ರವೇಶದ್ವಾರಗಳನ್ನು ಹೊಂದಿದೆ, ಪ್ರತಿಯೊಂದೂ 'ಶುಭಕರ ಪ್ರಾಣಿಗಳ ರಕ್ಷಕ ಪ್ರತಿಮೆಗಳನ್ನು' ಒಳಗೊಂಡಿರುತ್ತದೆ. ಇವುಗಳನ್ನು ಭಾರತೀಯ ಸಂಸ್ಕೃತಿ, ವಾಸ್ತು ಶಾಸ್ತ್ರ ಮತ್ತು ಬುದ್ಧಿವಂತಿಕೆ, ವಿಜಯ, ಶಕ್ತಿ ಮತ್ತು ಯಶಸ್ಸಿನಂತಹ ಗುಣಲಕ್ಷಣಗಳ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. ಇವೆಲ್ಲವೂ ಸನಾತನ ಪರಂಪರೆ ಮತ್ತು ವಾಸ್ತು ಶಾಸ್ತ್ರದ ಮಾರ್ಗದರ್ಶಿ ತತ್ವಗಳನ್ನು ಅನುಸರಿಸುತ್ತವೆ.

ಟ್ವೀಟ್‌ನಲ್ಲೇನಿದೆ?
ಈ ಬಗ್ಗೆ ಟ್ವೀಟ್ ಮಾಡಿರುವ ರುದ್ರಕರಣ ಪ್ರತಾಪ್ ಎಂಬ ಯುವ ಜ್ಯೋತಿಷಿ ಟ್ವಿಟ್ಟರ್‌ನಲ್ಲಿ 'ಹೊಸ ಸಂಸತ್ತು ಬೆಳವಣಿಗೆಯ ವಿದ್ಯಮಾನದ ಸಾಂಕೇತಿಕ ರಚನೆಯಾಗಿದೆ. ವಾಸ್ತು ಪ್ರಕಾರ, ಇದು ಗೌಮುಖಿ ರಚನೆಯಾಗಿದೆ. ಇದು ಭಾರತದ ಇತಿಹಾಸದಲ್ಲಿ ಪರಿವರ್ತಕ ಕ್ಷಣವಾಗುವ ಸಾಮರ್ಥ್ಯವನ್ನು ಹೊಂದಿದೆ, ಇದು ದೇಶದ ಬೆಳವಣಿಗೆ ಮತ್ತು ಪ್ರಗತಿಯ ಹೊಸ ಯುಗವನ್ನು ಪ್ರಾರಂಭಿಸುತ್ತದೆ,' ಎಂದಿದ್ದಾರೆ.

ಜೂನ್ ತಿಂಗಳು ನಿಮಗೆ ಹೇಗಿರುತ್ತದೆ? ಅದೃಷ್ಟ ಯಾವಾಗ ತೆರೆದುಕೊಳ್ಳುತ್ತದೆ?

 ಚಂಡೀಗಢದ ವೇದ ಜ್ಯೋತಿಷಿಯಾಗಿರುವ ರುದ್ರಕರಣ ಪ್ರತಾಪ್ ಕರ್ನಾಟಕ ಚುನಾವಣಾ ಫಲಿತಾಂಶದ ಬಗ್ಗೆ ನಿಖರವಾಗಿ ಹೇಳಿದ್ದರು. ಅಷ್ಟೇ ಅಲ್ಲ, ರಾಜಕೀಯ ಭವಿಷ್ಯಗಳಿಗೆ ಬಹಳ ಹೆಸರು ಮಾಡಿರುವ ಅವರ ಈ ಟ್ವೀಟ್ ಎಲ್ಲರ ಗಮನ ಸೆಳೆಯುತ್ತಿದೆ.

ಟ್ವೀಟ್‌ನಲ್ಲಿ ಮುಂದುವರಿದು, 'ಭಾರತದ ವಶಪಡಿಸಿಕೊಂಡ ಭೂಮಿಗೆ ಸಂಬಂಧಿಸಿದ ಬೆಳವಣಿಗೆ ಯುಗದಲ್ಲಿ ನರೇಂದ್ರ ಮೋದಿಜಿ ಇದ್ದಾರೆ. ಪಿಒಕೆ ಕೂಡ ನಮ್ಮ ಭಾರತದ ವಶಪಡಿಸಿಕೊಂಡ ಭೂಮಿ. ನಾನು ಏನು ಹೇಳುತ್ತಿದ್ದೇನೆ ಎಂದು ನೀವು ಅರ್ಥ ಮಾಡಿಕೊಂಡಿರಾ?' ಎಂದು ಸೂಚ್ಯಾರ್ಥವಾಗಿ ಹೇಳಿದ್ದಾರೆ. 

 

ಗೋಮುಖಿ ರಚನೆಯ ವೈಶಿಷ್ಠ್ಯತೆ
ಗೋವು ಎಲ್ಲಾ ದೇವರು ಮತ್ತು ದೇವತೆಗಳ ವಾಸಸ್ಥಾನ ಎಂದು ನಂಬಲಾಗಿದೆ, ಅದೇ ರೀತಿಯಲ್ಲಿ, ಎಲ್ಲಾ ದೈವಿಕ ಆತ್ಮಗಳ ಸಕಾರಾತ್ಮಕ ಶಕ್ತಿಯು ಗೌಮುಖಿ ಭವನದಲ್ಲಿ ಉಳಿಯಲಿದೆ. ಗೋಮುಖಿ ಅಥವಾ ಹಸುವಿನ ಮುಖದ ಪ್ಲಾಟ್‌ಗಳು ವಾಸ್ತು ಪ್ರಕಾರ, ಮುಂಭಾಗದಿಂದ ಕಿರಿದಾಗಿರುತ್ತವೆ, ಆದರೆ ಹಿಂಭಾಗದಿಂದ ಅಗಲವಾಗಿರುತ್ತವೆ. ರಾಷ್ಟ್ರಪತಿ ಭವನ ಮತ್ತು ಇಂಡಿಯಾ ಗೇಟ್ ನಡುವೆ ನಿಂತಿರುವ ಸಂಸತ್ತು ಉದಯೋನ್ಮುಖ ಭಾರತದ ಸಂಕೇತವಾಗಿದೆ. ಭವನದ ಒಳಗಿನ ಪ್ರತಿ ವಿಷಯವೂ ಶಕ್ತಿ, ಸಕಾರಾತ್ಮಕತೆಯನ್ನು ಪೋಷಿಸುತ್ತವೆ. ಗೋಮುಖಿ ರಚನೆಯಿಂದಾಗಿ ಕಟ್ಟಡದೊಳಗೆ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚಾಗಿರುತ್ತದೆ. ಕಟ್ಟಡವು ವಾಸ್ತುವಿನ ಅಗ್ನಿ ತತ್ವದಿಂದ ಪ್ರೇರೇಪಿತವಾಗಿದೆ. ಇವೆಲ್ಲವೂ ದೇಶದ ಬೆಳವಣಿಗೆಗೆ ಪೂರಕವಾಗಿವೆ ಎನ್ನುತ್ತಾರೆ ವಾಸ್ತುಶಾಸ್ತ್ರಜ್ಞರು.

Vastu Tips For Office: ಔದ್ಯೋಗಿಕ ಪ್ರಗತಿ, ಯಶಸ್ಸಿಗಾಗಿ ಕಚೇರಿಯ ಡೆಸ್ಕ್ ಹೀಗಿರಲಿ

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios