Asianet Suvarna News Asianet Suvarna News

ನಿದ್ರಿಸುವ ದಿಕ್ಕು ಸರಿ ಇದ್ದರೆ, ಹಣ ಹರಿವಿನ ದಿಕ್ಕನ್ನು ಬೇಕಾದರೂ ಬದಲಾಯಿಸಬಹುದು!

ನಿದ್ರೆ ಬಹಳ ಮುಖ್ಯವೆಂಬುದನ್ನು ನಾವು ಒಪ್ಪಲೇಬೇಕು. ಸರಿಯಾಗಿ ನಿದ್ದೆಯಾಗದಿದ್ದರೆ ಆರೋಗ್ಯಕ್ಕೆ ಹಾನಿಕರ. ನೆಮ್ಮದಿಯಿಂದ ನಿದ್ದೆ ಮಾಡಿದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ, ಇದನ್ನೇ ನಮ್ಮ ಶಾಸ್ತ್ರಗಳಲ್ಲೂ ಹೇಳಲಾಗಿದ್ದು, ನಿದ್ದೆಗೂ ಕೆಲವು ನಿಯಮಗಳನ್ನು ಹೇಳಲಾಗಿದೆ. ಜೊತೆಗೆ ಕೆಲವು ದಿಕ್ಕಿನಲ್ಲಿ ಮಲಗಿದರೆ ಆರ್ಥಿಕವಾಗಿ ಲಾಭವಾಗಲಿದೆ. ಯಾವ ದಿಕ್ಕು ಎಂಬುದನ್ನು ನೋಡೋಣ….

Sleeping direction is very important for economic status according to Vaastu
Author
Bangalore, First Published May 17, 2021, 4:34 PM IST

ಮನುಷ್ಯ ತನ್ನ ಜೀವಿತದ ಬಹುಪಾಲು ಸಮಯವನ್ನು ಮೀಸಲಿಡುವುದು ನಿದ್ರೆಗೆ ಮಾತ್ರ. ಅಲ್ಲದೆ, ನಿದ್ರೆ ಇಲ್ಲದಿದ್ದರೆ ಏನೂ ಬೇಡ ಎಂದೆನಿಸುವಷ್ಟು ಆಯಾಸ, ಅಸಹನೆ, ಸಿಟ್ಟು-ಸೆಡವು ಇತ್ಯಾದಿಗಳು ಒಮ್ಮೆಲೆ ಬಂದುಬಿಡುತ್ತವೆ ಕೂಡ. ಜೊತೆಗೆ ಆರೋಗ್ಯಕರ ಜೀವನಕ್ಕೆ ನಿದ್ರೆ ಅವಶ್ಯಕತೆ ಬಹಳವೇ ಇದೆ ಎಂದು ವೈದ್ಯರು, ತಜ್ಞರು ಸಹ ಹೇಳಿದ್ದಾರೆ. ಆದರೆ, ಆರೋಗ್ಯಕರ ಆರ್ಥಿಕತೆಗೂ ನಿದ್ರೆಯ ದಿಕ್ಕು ಅವಶ್ಯಕ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. 

ಹೌದು, ನೀವಿದನ್ನು ನಂಬಲೇ ಬೇಕು. ನಿದ್ರೆಯನ್ನು ಯಾವ ದಿಕ್ಕಿನಲ್ಲಿ ಮಾಡಬೇಕೆಂಬ ನಿಯಮವೇ ಇದೆ. ಆ ನಿಯಮದ ಪ್ರಕಾರ ಮಾಡಿದರೆ ನಿಮಗೆ ಆರ್ಥಿಕವಾಗಿ ಲಾಭವಾಗುತ್ತಲೇ ಹೋಗುತ್ತದೆ. ಮತ್ತು ಯಾವುದೇ ಸಂಕಷ್ಟಗಳು ಬರುವುದಿಲ್ಲ ಅನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. 'ವ್ಯಕ್ತಿ ಯಾವ ದಿಕ್ಕಿನಲ್ಲಿ ಮಲಗುತ್ತಾನೆ ಎಂಬುದರ ಮೇಲೆ ಆತನ ಆರೋಗ್ಯ-ಆರ್ಥಿಕ ಸ್ಥಿತಿ ನಿರ್ಧರಿತವಾಗುತ್ತದೆ, ಇವುಗಳ ಮೇಲೆ ಪ್ರಭಾವ ಬೀರುತ್ತದೆ,' ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. 

ಇದನ್ನು ಓದಿ: ವೃಷಭಕ್ಕೆ ಸೂರ್ಯನ ಪ್ರವೇಶ, ಈ 5 ರಾಶಿಯವರಿಗೆ ಸಂಕಷ್ಟದ ಪ್ರವೇಶ..! 

ಪೂರ್ವ ದಿಕ್ಕು ಶುಭ
ವಾಸ್ತು ಪ್ರಕಾರ ಪೂರ್ವ ಎಲ್ಲದಕ್ಕೂ ಶ್ರೇಷ್ಠ. ಅದಕ್ಕಾಗಿಯೇ ಮನೆಗಳನ್ನು ನಿರ್ಮಿಸುವಾಗ ಪೂರ್ವ ದಿಕ್ಕಿಗೆ ಬಾಗಿಲನ್ನು ಇಡಲಾಗುತ್ತದೆ. ಇನ್ನು ಬಾಡಿಗೆ ಮನೆ ಹುಡುಕುವವರೂ ಸಹ ಹೆಚ್ಚಾಗಿ ಪೂರ್ವ ದಿಕ್ಕಿನಲ್ಲಿ ಬಾಗಿಲು ಇರುವ ಮನೆಗಳನ್ನೇ ಆಯ್ದುಕೊಳ್ಳುತ್ತಾರೆ. ಹೀಗಾಗಿ ಪೂರ್ವ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಶುಭ ಎಂದು ಹೇಳಲಾಗುತ್ತದೆ. ಇದರಿಂದ ಸಕಾರಾತ್ಮಕ ಶಕ್ತಿ ಹೆಚ್ಚಲಿದ್ದು, ಓದಲಿನಲ್ಲಿ ಏಕಾಗ್ರತೆ ಸಹ ಹೆಚ್ಚಲಿದೆ. ಹೀಗಾಗಿ ಮಕ್ಕಳಿಗೂ ಇದರಿಂದ ಅನುಕೂಲವಾಗುತ್ತದೆ. 

ಪಶ್ಚಿಮ ದಿಕ್ಕಿನಲ್ಲಿ ಇದೆ ಲಾಭ
ವಾಸ್ತು ಪ್ರಕಾರ ಪಶ್ಚಿಮ ದಿಕ್ಕಿನಲ್ಲಿ ತಲೆ ಹಾಕಿ ಮಲಗಿಕೊಂಡರೆ ತುಂಬಾ ಒಳ್ಳೆಯದಂತೆ. ಅಂದರೆ, ಈ ದಿಕ್ಕಿನಲ್ಲಿ ನೀವು ತಲೆಯಿಟ್ಟು ಮಲಗಿದಿರೆಂದರೆ ಆರ್ಥಿಕವಾಗಿ ಒಳ್ಳೇ ಲಾಭವನ್ನು ಪಡೆಯುತ್ತೀರಿ ಎಂದು ಹೇಳಲಾಗಿದೆ. ಅಂದರೆ, ನೀವು ಕೈ ಹಾಕಿದ ಕ್ಷೇತ್ರದಲ್ಲಿ ಅಧಿಕ ಲಾಭವಾಗುತ್ತಾ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ, ಪಶ್ಚಿಮ ದಿಕ್ಕಿಗೆ ತಲೆ ಹಾಕಿ ಮಲಗಿದರೆ ನಿಮ್ಮ ಯಶಸ್ಸಿನ ಓಟ ಮುಂದುವರಿಯುತ್ತದೆ. ಈ ಮೂಲಕ ನಿಮ್ಮ ಕೀರ್ತಿ ಎಲ್ಲೆಡೆ ಹರಡಿ ಉತ್ತಮ ಹೆಸರನ್ನು ತಂದುಕೊಡುತ್ತದೆ. 

ಇದನ್ನು ಓದಿ: ಈ ನಕ್ಷತ್ರದಲ್ಲಿ ಜನಿಸಿದವರು ಭಾಗ್ಯಶಾಲಿಗಳು, ಇವರಿಗಿದೆ ಶನಿ ಕೃಪೆ! 

ಉತ್ತರ ದಿಕ್ಕಿನಲ್ಲಿ ತಲೆ ಇಟ್ಟು ಮಲಗಿದರೆ ಹೀಗಂತೆ
ಸಾಮಾನ್ಯವಾಗಿ ವಾಸ್ತು ಶಾಸ್ತ್ರದ ಪ್ರಕಾರ ಉತ್ತರ ದಿಕ್ಕನ್ನು ಸಹ ಬಹಳ ಶುಭವೆಂದು ಹೇಳಲಾಗುತ್ತದೆ. ಆದರೆ, ಈ ಉತ್ತರ ದಿಕ್ಕಿನಲ್ಲಿ ತಲೆ ಇಟ್ಟು ಮಲಗಿದರೆ ಆರೋಗ್ಯದ ದೃಷ್ಟಿಯಿಂದ ಅಷ್ಟು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಹೀಗಾಗಿ ಆರೋಗ್ಯ ಕೆಟ್ಟರೆ ಅದಕ್ಕಾಗಿ ನೀವು ಹಣವನ್ನು ವ್ಯಯಿಸಬೇಕಾಗುತ್ತದೆ. ಆ ಮೂಲಕ ಧನಹಾನಿಯೂ ಆಗುತ್ತದೆ. ಇದರ ಜೊತೆಗೆ ಶರೀರದಲ್ಲಿ ವ್ಯತ್ಯಾಸಗಳು ಉಂಟಾಗುತ್ತಾ ಯಾವಾಗಲೂ ಅನಾರೋಗ್ಯ ಕಾಡುತ್ತಲೇ ಇರುತ್ತದೆ. 

Sleeping direction is very important for economic status according to Vaastu



ದಕ್ಷಿಣ ದಿಕ್ಕಿಗೆ ತಲೆ ಹಾಕಿದರೂ ಅನುಕೂಲ
ದಕ್ಷಿಣ ದಿಕ್ಕೂ ಸಹ ಅನುಕೂಲಕರವೇ ಆಗಿದ್ದು, ಈ ದಿಕ್ಕಿನಲ್ಲಿ ನೀವು ಆರಾಮವಾಗಿ ತಲೆ ಇಟ್ಟು ಮಲಗಬಹುದು. ಹೀಗೆ ಮಾಡುವುದರಿಂದ ನಕಾರಾತ್ಮಕ ವಿಚಾರಗಳು ತಲೆದೋರುವುದಿಲ್ಲ. ಜೊತೆಗೆ ಅಶಾಂತಿಯ ವಾತಾವರಣವೂ ದೂರವಾಗಲಿದೆ. ಸುಖ-ಶಾಂತಿ ಲಭ್ಯವಾಗುವುದಲ್ಲದೆ, ಸಮೃದ್ಧಿಯಾಗಲಿದೆ. ಅಲ್ಲದೆ, ಹಣದ ಕೊರತೆಯೂ ಕಾಡುವುದಿಲ್ಲ.

ಇದನ್ನು ಓದಿ: ಅಡುಗೆ ಮಾಡುವಾಗ ದಿಕ್ಕಿನ ಬಗ್ಗೆ ಇರಲಿ ಗಮನ..ಈ ದಿಕ್ಕು ಶುಭವೆನ್ನುತ್ತೆ ವಾಸ್ತು ಶಾಸ್ತ್ರ...

ಶಾಸ್ತ್ರದ ಅನುಸಾರ ಮಲಗುವ ನಿಯಮ

- ಮುರಿದ ಮಂಚ ಬೇಡ, ಹರಿದ ಹಾಸಿಗೆ, ಕೊಳಕಾದ ಹೊದಿಕೆಯನ್ನು ಇಟ್ಟುಕೊಳ್ಳಬಾರದು. ಅಲ್ಲದೆ, ಎಂಜಲು ಬಾಯಲ್ಲಿ ಸಹ ಮಲಗಬಾರದು. 
- ಯಾವುದೇ ಕಾರಣಕ್ಕೂ ಮೈಮೇಲೆ ಬಟ್ಟೆ ಇಲ್ಲದೆ ಮಲಗಬಾರದು.
- ಬ್ರಹ್ಮವೈವರ್ಥ ಪುರಾಣದ ಪ್ರಕಾರ, ಸೂರ್ಯೋದಯದ ನಂತರ ಹಾಗೂ ಸೂರ್ಯಾಸ್ತದ ಸಮಯದಲ್ಲಿ ಮಲಗಬಾರದು. ಇದರಿಂದ ರೋಗ ಹೆಚ್ಚಾಗಲಿದೆ

Follow Us:
Download App:
  • android
  • ios