ಪಶ್ಚಿಮ ದಿಕ್ಕಿನ ಅಧಿಪತಿ ಶನಿಯನ್ನು ಸಂತೋಷವಾಗಿಡಲು ವಾಸ್ತು ಟಿಪ್ಸ್
ಜ್ಯೋತಿಷ್ಯದಲ್ಲಿ, ಶನಿಯನ್ನು ಅತ್ಯಂತ ವಿಶೇಷ ಮತ್ತು ಪ್ರಭಾವಶಾಲಿ ಗ್ರಹವೆಂದು ಪರಿಗಣಿಸಲಾಗಿದೆ. ವಾಸ್ತುವಿನಲ್ಲಿ ಶನಿಯು ಪಶ್ಚಿಮ ದಿಕ್ಕಿನ ಅಧಿಪತಿ. ವಾಸ್ತುವಿನಲ್ಲಿ ಶನಿ ದೇವನಿಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ನಾವು ತಿಳಿದುಕೊಳ್ಳೋಣ.
ಶನಿಯನ್ನು ನ್ಯಾಯ ಮತ್ತು ಕರ್ಮದ ಗ್ರಹವೆಂದು ಪರಿಗಣಿಸಲಾಗಿದೆ. ಇದು ವ್ಯಕ್ತಿಗಳಿಗೆ ಅವರ ಕಾರ್ಯಗಳ ಆಧಾರದ ಮೇಲೆ ಶುಭ ಅಥವಾ ಅಶುಭ ಫಲಿತಾಂಶಗಳನ್ನು ನೀಡುತ್ತದೆ. ಶನಿದೇವನು ಯಾರ ಮೇಲೆ ತನ್ನ ಆಶೀರ್ವಾದವನ್ನು ನೀಡುತ್ತಾನೋ ಅವನ ನೌಕೆಯು ಸುಗಮವಾಗಿ ಜೀವನದ ಸಾಗರ ದಾಟುತ್ತದೆ. ಆದರೆ ಅವನು ಯಾರೊಂದಿಗಾದರೂ ಕೋಪಗೊಂಡರೆ, ಜೀವನದಲ್ಲಿ ತೊಂದರೆಗಳನ್ನು ಹೊರತುಪಡಿಸಿ ಏನೂ ಉಳಿದಿರುವುದಿಲ್ಲ. ಶನಿದೇವನ ದೃಷ್ಟಿಯನ್ನು ತುಂಬಾ ಅಶುಭವೆಂದು ಪರಿಗಣಿಸಲಾಗುತ್ತದೆ. ವಾಸ್ತುವಿನಲ್ಲಿ ಕೂಡ ಶನಿದೇವನನ್ನು ಬಹಳ ಪ್ರಮುಖವೆಂದು ಪರಿಗಣಿಸಲಾಗಿದೆ. ವಾಸ್ತು ಪ್ರಕಾರ, ಶನಿ ದೇವನು ಪಶ್ಚಿಮ ದಿಕ್ಕಿಗೆ ಅಧಿಪತಿ, ಆದ್ದರಿಂದ ಈ ದಿಕ್ಕಿನ ಬಗ್ಗೆ ವಾಸ್ತುದಲ್ಲಿ ಕೆಲವು ನಿಬಂಧನೆಗಳನ್ನು(Vastu rules for west direction) ನೀಡಲಾಗಿದೆ.
ಶನಿ ಮತ್ತು ವಾಸ್ತು ನಿಯಮಗಳು(Shani and Vastu rules)
ಶನಿ ಯಂತ್ರ ಸ್ಥಾಪಿಸಿ
ತಮ್ಮ ಮನೆಯಲ್ಲಿ ಅಥವಾ ವಿಶೇಷವಾಗಿ ಪಶ್ಚಿಮ ದಿಕ್ಕಿನಲ್ಲಿ ವಾಸ್ತು ದೋಷಗಳನ್ನು ಹೊಂದಿರುವವರು, ತಮ್ಮ ಮನೆಯಲ್ಲಿ ಶನಿ ಯಂತ್ರವನ್ನು ಸ್ಥಾಪಿಸಬೇಕು. ಇದರಿಂದ ಮನೆಯಲ್ಲಿರುವ ವಾಸ್ತು ದೋಷ ನಿವಾರಣೆಯಾಗುತ್ತದೆ. ಮತ್ತು ಶಾಂತಿಯ ವಾತಾವರಣವು ಮನೆಯಲ್ಲಿ ಉಳಿಯುತ್ತದೆ.
ಮುಖ್ಯ ಬಾಗಿಲು ಪಶ್ಚಿಮದಲ್ಲಿ ಬೇಡ
ಮನೆಯ ಮುಖ್ಯ ಬಾಗಿಲು ಪಶ್ಚಿಮ ದಿಕ್ಕಿನಲ್ಲಿ ತೆರೆದರೆ ಅದು ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ದಿಕ್ಕಿನಲ್ಲಿ ಬಾಗಿಲು ಹಾಕಬೇಡಿ. ಆದರೆ ಜಾಗದ ಸಮಸ್ಯೆಯಿಂದ ಮನೆಯ ಮುಖ್ಯ ಬಾಗಿಲನ್ನು ಪಶ್ಚಿಮ ದಿಕ್ಕಿನಲ್ಲಿ ಇಡಲೇಬೇಕಾದರೆ ಮನೆಯ ಮುಖ್ಯ ಬಾಗಿಲಿನ ಎರಡೂ ಬದಿಯಲ್ಲಿ ದಪ್ಪ ಮರಗಳನ್ನು ನೆಡಬೇಕು.
Shani Uday 2023: ಮಾರ್ಚ್‌ನಲ್ಲಿ ಈ 4 ರಾಶಿಗಳಿಗೆ ಶನಿಯ ದಯೆಯಿಂದ ಲಾಭ, ಸಂತೋಷ, ಅದೃಷ್ಟ..
ಇಲ್ಲಿ ಕಸವನ್ನು ಇಡಬೇಡಿ
ಮೊದಲೇ ಹೇಳಿದಂತೆ ವಾಸ್ತುವಿನಲ್ಲಿ, ಪಶ್ಚಿಮ ದಿಕ್ಕನ್ನು ಶನಿ ದೇವನ ದಿಕ್ಕು ಎಂದು ವಿವರಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಮನೆಯ ಪಶ್ಚಿಮ ಭಾಗದಲ್ಲಿ ಯಾವುದೇ ರೀತಿಯ ಕಸ ಅಥವಾ ಜಂಕ್ ಮತ್ತು ಕೊಳಕು ಇಡಬೇಡಿ. ಶನಿದೇವನು ಇದರಿಂದ ಕೋಪಗೊಳ್ಳುತ್ತಾನೆ ಮತ್ತು ಇದರಿಂದ ನಿಮ್ಮ ಕೆಟ್ಟ ದಿನಗಳು ಪ್ರಾರಂಭವಾಗುತ್ತವೆ. ತನ್ನ ಅಶುಭ ದೃಷ್ಟಿಯಿಂದ ಮನೆಯಲ್ಲಿ ಬಡತನವನ್ನು ತರುತ್ತಾನೆ. ಆದ್ದರಿಂದ, ಅವರನ್ನು ಸಂತೋಷವಾಗಿಡಲು, ಈ ದಿಕ್ಕಿನಲ್ಲಿ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ.
ಶನಿ ಮತ್ತು ಕಿಟಕಿಯ ನಡುವಿನ ಸಂಬಂಧ
ಮನೆಯ ಪಶ್ಚಿಮ ಭಾಗದಲ್ಲಿ ಕಿಟಕಿ ಇದ್ದರೆ, ಆ ಕಿಟಕಿಯು ಪೂರ್ವ ಗೋಡೆಯಲ್ಲಿರುವ ಕಿಟಕಿಗಿಂತ ಚಿಕ್ಕದಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಇಲ್ಲದಿದ್ದರೆ ಅದು ಮನೆಯಲ್ಲಿ ನೆಗೆಟಿವ್ ಎನರ್ಜಿಯನ್ನು ಹೆಚ್ಚಿಸುತ್ತದೆ.
ಶನಿಯನ್ನು ಸಂತೋಷವಾಗಿರಿಸಲು, ಪಶ್ಚಿಮ ದಿಕ್ಕನ್ನು ತೆರೆದಿಡಿ..
ಶನಿದೇವನನ್ನು ಸಂತೋಷವಾಗಿರಿಸಲು ಮನೆಯ ಪಶ್ಚಿಮ ದಿಕ್ಕನ್ನು ತೆರೆದಿಡಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಪಶ್ಚಿಮ ಭಾಗ ತೆರೆದುಕೊಳ್ಳದ ಮನೆಯಲ್ಲಿ ಆ ಮನೆಯವರು ಮಾನಸಿಕ ಒತ್ತಡದಿಂದ ಕಂಗೆಡುತ್ತಾರೆ. ಪಶ್ಚಿನದ ಕಿಟಕಿಗಳು ತೆರೆದಿರಲಿ.
Mythology: ಸ್ತ್ರೀಗೇ ರತಿ ಸುಖ ಹೆಚ್ಚೆಂದು ಹೆಣ್ಣಾಗೇ ಇರಲು ಇಷ್ಟ ಪಟ್ಟ ರಾಜ! ಏನಿವನ ಕತೆ?
ಅಡುಗೆ ಮನೆ ಪಶ್ಚಿಮದಲ್ಲಿದ್ದರೆ
ಶನಿದೇವನ ಆಶೀರ್ವಾದ ಸದಾ ನಿಮ್ಮ ಮೇಲೆ ಇರಬೇಕೆಂದು ನೀವು ಬಯಸಿದರೆ, ಇದಕ್ಕಾಗಿ ನೀವು ಮನೆಯ ಅಡಿಗೆ ಕೋಣೆಯನ್ನು ಎಂದಿಗೂ ಪಶ್ಚಿಮ ದಿಕ್ಕಿನಲ್ಲಿರಿಸಬಾರದು ಎಂಬುದನ್ನು ನೆನಪಿನಲ್ಲಿಡಿ. ಇಲ್ಲದಿದ್ದರೆ, ನೀವು ಆರ್ಥಿಕ ಬಿಕ್ಕಟ್ಟು ಮತ್ತು ಅಪಶ್ರುತಿಯನ್ನು ಎದುರಿಸಬೇಕಾಗಬಹುದು.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.