Vastu Tips For Kitchen: ಈ ಪದಾರ್ಥಗಳು ಅಡುಗೆಮನೆಯಲ್ಲಿ ಎಂದಿಗೂ ಮುಗಿಯದಂತೆ ನೋಡಿಕೊಳ್ಳಿ!

ಅಡುಗೆ ಮನೆಯ ಕೆಲ ಪದಾರ್ಥಗಳು ನಮ್ಮ ಹಣಕಾಸು ಪರಿಸ್ಥಿತಿಯ ಮೇಲೆ ಪರಿಣಾಮ ಬೀರುತ್ತಿರುತ್ತವೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ, ಅದೇ ಸತ್ಯ ಎನ್ನುತ್ತೆ ವಸ್ತು. ನಿಮ್ಮ ಅಡುಗೆ ಮನೆಯಲ್ಲಿ ಈ ಪದಾರ್ಥಗಳು ಎಂದಿಗೂ ಮುಗಿಯದಂತೆ ನೋಡಿಕೊಳ್ಳಿ. 

Never Let These Things Finish Off From Your Kitchen skr

ಅಡುಗೆ ಮನೆ(kitchen)ಯು ಮನೆಯ ಎಲ್ಲ ಸದಸ್ಯರ ಬೆಳವಣಿಗೆಗೆ ಮೂಲ. ಎಲ್ಲರ ಆರೋಗ್ಯ, ಸಂತೋಷಕ್ಕೆ ಕಾರಣವಾಗುವ ಸ್ಥಳ. ಮನೆಯ ಸರ್ವೋದಯಕ್ಕಾಗಿ ಅಲ್ಲಿನ ಅಗ್ನಿ ಮೂಲೆಯಿಂದ ಹಿಡಿದು ಪ್ರತಿಯೊಂದು ವಸ್ತು ಇಡುವ ದಿಕ್ಕು, ಅಡುಗೆ ಮಾಡುವವರು ನಿಲ್ಲಬೇಕಾದ ರೀತಿ, ಅಡುಗೆಕೋಣೆಯಲ್ಲಿರಬೇಕಾದ ವಸ್ತುಗಳವರೆಗೆ ಎಲ್ಲದರ ಬಗ್ಗೆಯೂ ವಾಸ್ತು ವಿವರಿಸುತ್ತದೆ. ಅಡುಗೆ ಮನೆಯ ಕೆಲ ಪದಾರ್ಥಗಳು ಮನೆಯ ಬೆಳವಣಿಗೆ, ಆರ್ಥಿಕ ಯಶಸ್ಸಿನ ಸಂಕೇತವಾಗಿರುತ್ತವೆ. ಅಂಥ ಪದಾರ್ಥಗಳು ಎಂದಿಗೂ ಮನೆಯಲ್ಲಿ ಸಂಪೂರ್ಣ ಮುಗಿಯದಂತೆ ಎಚ್ಚರ ವಹಿಸಬೇಕೆಂದು ವಾಸ್ತು(Vastu) ಹೇಳುತ್ತದೆ. ಅದರಿಂದ ಲಕ್ಷ್ಮೀದೇವಿ, ಅನ್ನಪೂರ್ಣೇಶ್ವರಿಯ ಕೋಪಕ್ಕೆ ಕಾರಣವಾಗಬೇಕಾಗುತ್ತದೆ. ಜೊತೆಗೆ ಗ್ರಹದೋಷಗಳೂ ಸೇರಿಕೊಳ್ಳುತ್ತವೆ. ಹಾಗಿದ್ದರೆ ಮನೆಯ ಸಮೃದ್ಧಿಗಾಗಿ ಯಾವೆಲ್ಲ ವಸ್ತುಗಳು ಎಂದಿಗೂ ಖಾಲಿಯಾಗಬಾರದು ನೋಡೋಣ. 

ಅಕ್ಕಿ(Rice)
ಅಕ್ಕಿಯು ನಮ್ಮ ಬಹುಪಾಲು ಶಕ್ತಿಯ ಮೂಲ. ಅಕ್ಕಿಯೊಂದಿದ್ದರೆ ಗಂಜಿ ಮಾಡಿಯಾದರೂ ಮನೆಯ ಎಲ್ಲರ ಹೊಟ್ಟೆ ತುಂಬಿಸಬಹುದು. ವಾಸ್ತುವಿನ ಪ್ರಕಾರ, ಅಕ್ಕಿಯು ಶುಕ್ರ ಗ್ರಹ(Venus)ಕ್ಕೆ ಸಂಬಂಧಿಸಿದ್ದಾಗಿದೆ. ಹಾಗಾಗಿ, ಅದು ಎಂದಿಗೂ ಮನೆಯಲ್ಲಿ ಖಾಲಿಯಾಗದಂತೆ ಎಚ್ಚರ ವಹಿಸಬೇಕು. ಒಂದು ವೇಳೆ ಖಾಲಿಯಾದರೆ, ವ್ಯಕ್ತಿಯ ಬದುಕಲ್ಲಿ ಶುಕ್ರ ದೋಷ ಉಂಟಾಗಬಹುದು. ಇದರಿಂದ ಆತನ ವೈವಾಹಿಕ ಬದುಕಿ(married life)ನ ಮೇಲೆ ಕೆಟ್ಟ ಪರಿಣಾಮಗಳಾಗುತ್ತವೆ. ಜೊತೆಗೆ, ಮನೆಯಲ್ಲಿ ಸಂತೋಷ, ಸಮೃದ್ಧಿ ಇಳಿಕೆಯಾಗುತ್ತದೆ. 

ಹಿಟ್ಟು(flour)
ಸಾಮಾನ್ಯವಾಗಿ ಬಹುತೇಕ ಮನೆಗಳಲ್ಲಿ ಹಿಟ್ಟು ಪೂರ್ತಿ ಖಾಲಿಯಾದ ಮೇಲೆಯೇ ಮತ್ತೆ ಅಂಗಡಿಯಿಂದ ಹಿಟ್ಟನ್ನು ತರಲಾಗುತ್ತದೆ. ಆದರೆ, ಹೀಗೆ ಮಾಡಕೂಡದು. ಏಕೆಂದರೆ ಇದರಿಂದ ವ್ಯಕ್ತಿಯ ಗೌರವ(respect)ವು ಸಮಾಜದಲ್ಲಿ ಇಳಿಕೆಯಾಗುತ್ತದೆ. ಆತ ಹಣ ಕಳೆದುಕೊಳ್ಳಬೇಕಾಗುತ್ತದೆ. ಅಗತ್ಯ ಹಿಟ್ಟುಗಳು ಸದಾ ಮನೆಯಲ್ಲಿ ತುಂಬಿರುವಂತೆ ನೋಡಿಕೊಳ್ಳಿ.

ಹುಟ್ಟು ಸಾವಿನ ಸರಪಳಿಗೆ ಮುಕ್ತಿ ನೀಡೋ Moksha Yoga ನಿಮ್ಮ ಜಾತಕದಲ್ಲಿದೆಯೇ?

ಸಾಸಿವೆ ಎಣ್ಣೆ(mustard oil)
ಶನಿ ದೋಷವಿದ್ದಾಗ ಸಾಸಿವೆ ಎಣ್ಣೆ ದಾನ ಮಾಡಲು ಹೇಳಲಾಗುತ್ತದೆ. ಸಾಸಿವೆ ಎಣ್ಣೆಯಲ್ಲಿ ಮುಖ ನೋಡಿಕೊಳ್ಳಲು ಹೇಳಲಾಗುತ್ತದೆ. ಸಾಸಿವೆ ಎಣ್ಣೆಯು ಶನಿ ದೇವ(Shani Dev)ನಿಗೆ ಸಂಬಂಧಿಸಿದ್ದು. ಅದು ಎಂದಿಗೂ ಮನೆಯಲ್ಲಿ ಮುಗಿಯಕೂಡದು. ಒಂದು ವೇಳೆ ಸಾಸಿವೆ ಎಣ್ಣೆ ಖಾಲಿಯಾದರೆ ಶನಿಯ ಅವಕೃಪೆಗೆ ಪಾತ್ರರಾಗಬೇಕಾಗುತ್ತದೆ.

ಅರಿಶಿನ(Turmeric)
ಅರಿಶಿನ ಧಾರ್ಮಿಕವಾಗಿ ಬಹಳ ಮಹತ್ವ ಪಡೆದಿದೆ. ಅದು ಆಹಾರಕ್ಕೆ ಬಣ್ಣ ನೀಡುವ ಜೊತೆಗೆ ತನ್ನ ಔಷಧೀಯ ಗುಣಗಳ ಕಾರಣದಿಂದ ಆರೋಗ್ಯಕ್ಕೂ ಒಳ್ಳೆಯದು. ಜೊತೆಗೆ, ಯಾವುದೇ ಶುಭ ಕಾರ್ಯಕ್ಕೆ ಅರಿಶಿನ ಕುಂಕುಮ ಬಳಸುತ್ತೇವೆ. ಅರಿಶಿನ ಖಾಲಿಯಾದರೆ ಅಶುಭವನ್ನು ಆಹ್ವಾನಿಸಿದಂತೆಯೇ. ವಾಸ್ತು ಪ್ರಕಾರ, ಅರಿಶಿನವು ಗುರು ಗ್ರಹ(Jupiter)ಕ್ಕೆ ಸಂಬಂಧಿಸಿದೆ. ಅರಿಶಿನ ಅಡುಗೆ ಮನೆಯಲ್ಲಿ ಖಾಲಿಯಾದರೆ ವ್ಯಕ್ತಿಯು ಗುರು ದೋಷಕ್ಕೆ ಒಳಗಾಗುತ್ತಾನೆ. ಇದರಿಂದಾಗಿ ಹಣಕಾಸಿನ ಅಡಚಣೆ, ಕೆಲಸದಲ್ಲಿ ತೊಡಕುಗಳು ಹೆಚ್ಚುತ್ತವೆ. ಅಷ್ಟೇ ಅಲ್ಲ, ಮನೆಯಲ್ಲಿ ನಡೆಯಬೇಕಾದ ಶುಭ ಕಾರ್ಯಗಳು ಸಮಸ್ಯೆಯಲ್ಲಿ ಸಿಲುಕುತ್ತವೆ. 

ಈ ಐದು ರಾಶಿಯ ಮಕ್ಕಳ Leadership Skills ಅದ್ಭುತ!

ಉಪ್ಪು(Salt)
ಉಪ್ಪು ತಿಂದ ಮನೆಗೆ ದ್ರೋಹ ಬಗೆಯಬಾರದು ಎಂಬ ಮಟ್ಟಿಗೆ ಉಪ್ಪಿಗೆ ನಾವು ಮಹತ್ವ ಕೊಡುತ್ತೇವೆ. ಉಪ್ಪಿಲ್ಲದೆ ಯಾವ ಅಡುಗೆಯೂ ರುಚಿಸದು. ಇಂಥ ಉಪ್ಪಿಗೆ ವಾಸ್ತುವಿನಲ್ಲೂ ಬಹಳ ಪ್ರಾಮುಖ್ಯತೆ ಇದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿಗಳಿದ್ದಾಗ ಉಪ್ಪನ್ನು ಮೂಲೆ ಮೂಲೆಗಳಿಗೆ ಹಾಕಲು ಹೇಳಲಾಗುತ್ತದೆ. ಇನ್ನು ಅಡುಗೆ ಮನೆಯ ವಿಷಯಕ್ಕೆ ಬಂದರೆ ಉಪ್ಪು ಖಾಲಿಯಾದ ಮೇಲೆ ಅದಕ್ಕೆ ಮತ್ತೆ ಉಪ್ಪನ್ನು ತುಂಬುವ ಅಭ್ಯಾಸ ಹಲವರಿಗೆ. ಹೀಗೆ ಎಂದಿಗೂ ಮಾಡಬಾರದು. ಇದರಿಂದಾಗಿ ರಾಹುವಿನ ಕೆಟ್ಟ ದೃಷ್ಟಿ ವ್ಯಕ್ತಿಯ ಮೇಲೆ ಬೀಳುತ್ತದೆ. ಇದರಿಂದ ವ್ಯಕ್ತಿ ಹಣ ಕಳೆದುಕೊಳ್ಳಬೇಕಾಗುತ್ತದೆ. ಉಪ್ಪಿಲ್ಲದ ಆಹಾರ ಹೇಗೆ ರುಚಿಸದೋ ಹಾಗೆ ಉಪ್ಪು ಖಾಲಿಯಾದರೆ ಬದುಕು ಕೂಡಾ ತನ್ನ ರುಚಿ ಕಳೆದುಕೊಳ್ಳುತ್ತದೆ. 

Latest Videos
Follow Us:
Download App:
  • android
  • ios