vastu tips: ಮನೆಯಲ್ಲಿದ್ದರೆ ಕುಬೇರ, ಲಕ್ಷ್ಮಿಯ ಈ ಪೋಟೋ, ಹಣಕಾಸಿಗಿರದು ಕೊರತೆ
ಈ ಅದೃಷ್ಟದ ಚಿತ್ರವು ಹೊಸ ವರ್ಷ 2023 ಪ್ರಾರಂಭವಾಗುವ ಮೊದಲು ಮನೆಗೆ ಬರಲಿ. ಅದರೊಂದಿಗೆ ತಾಯಿ ಲಕ್ಷ್ಮಿಯ ಆಶೀರ್ವಾದವೂ ಮನೆಗೆ ಬರುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ದೇವರ ಫೋಟೋಗಳಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಉಳಿಯುತ್ತದೆ. ಆದರೆ ಕೆಲ ನಿಯಮಗಳನ್ನು ಅನುಸರಿಸಬೇಕು. ಮನೆಯಲ್ಲಿ ದೇವಾನುದೇವತೆಗಳ ಚಿತ್ರಗಳನ್ನು ಇಡುವಾಗ ಎಚ್ಚರಿಕೆ ವಹಿಸಬೇಕು. ಹಲವು ಬಾರಿ ಮಾಹಿತಿ ಕೊರತೆಯಿಂದ ಪೂರ್ಣ ಪ್ರಮಾಣದ ಪ್ರಯೋಜನಗಳು ದೊರೆಯುದಿಲ್ಲ. ನಷ್ಟವನ್ನೂ ಭರಿಸಬೇಕಾಗುತ್ತದೆ. ವಿಷಯಗಳನ್ನು ಅರ್ಥ ಮಾಡಿಕೊಳ್ಳುವ ಹೊತ್ತಿಗೆ, ಅದು ತುಂಬಾ ತಡವಾಗಿರುತ್ತದೆ. ಮನೆಯಲ್ಲಿ ಯಾವ ರೀತಿಯ ಚಿತ್ರಗಳನ್ನು(Photos) ಹಾಕಬೇಕೆಂದು ತಿಳಿಯೋಣ..
ಮನೆಗಳಲ್ಲಿ ದೇವರ ಅಥವಾ ಯಾವುದೇ ದೇವಿಯ ಚಿತ್ರವನ್ನು ಇಟ್ಟುಕೊಳ್ಳುವಾಗ, ಅವರ ಭಂಗಿಗಳು ಮತ್ತು ಅಭಿವ್ಯಕ್ತಿಗಳನ್ನು ಅರ್ಥ ಮಾಡಿಕೊಳ್ಳಿ. ಭಾವನೆ ಬಹಳ ಮುಖ್ಯ. ಧರ್ಮದಲ್ಲಿ ಭಾವಕ್ಕೆ ವಿಶೇಷ ಪ್ರಾಮುಖ್ಯತೆ ಮತ್ತು ಆದ್ಯತೆ(importance) ನೀಡಲಾಗಿದೆ, ಆದ್ದರಿಂದ ನೀವು ಈ ವಿಷಯಗಳನ್ನು ತಿಳಿದುಕೊಳ್ಳಬೇಕು.
ಯುದ್ಧದ ಚಿತ್ರ
ಅಸುರರನ್ನು ಕೊಲ್ಲುವ ದೇವ-ದೇವತೆಗಳ ಚಿತ್ರಗಳನ್ನು ಅಥವಾ ವಿಗ್ರಹಗಳನ್ನು ಮನೆಯಲ್ಲಿ ಇಡಬಾರದು. ಎಲ್ಲಕ್ಕಿಂತ ಉತ್ತಮವಾದದ್ದು, ಯಾವುದೇ ದೇವಾನುದೇವತೆಯ ಚಿತ್ರ ವರದ ಮುದ್ರೆಯಲ್ಲಿರುವುದು, ಅಂದರೆ ವರವನ್ನು ನೀಡುವಂತ ಭಂಗಿಯಲ್ಲಿರುವ ಫೋಟೋ ಉತ್ತಮ.
ತುಲಾ ರಾಶಿಯವರು ನಿಮ್ಮ ಹೆಂಡತಿಯಾದರೆ, ಗಂಡಿನ ಜೀವನ ಹೇಗಿರುತ್ತೆ?
ವೈದ್ಯರು ಹನುಮಾನ್ ಚಿತ್ರವನ್ನು ಹಾಕಬೇಕು
ತಮ್ಮ ಮನೆ ಮತ್ತು ಸಂಸ್ಥೆಗಳಲ್ಲಿ ಸಂಜೀವನಿ ಪರ್ವತವನ್ನು ಹೊತ್ತ ಹನುಮಾನ್ ಚಿತ್ರವನ್ನು ವೈದ್ಯರು ಹಾಕಬೇಕು. ಇಂತಹ ಚಿತ್ರ ಹಾಕುವುದರಿಂದ ಮನಸ್ಸಿನಲ್ಲಿ ಒಳ್ಳೆಯ ಭಾವನೆಗಳು ಮೂಡುತ್ತವೆ. ಸೇವಾ ಭಾವನೆ ಜಾಗೃತವಾಗುತ್ತದೆ. ಹನುಮಂತನ ಕೃಪೆ ಉಳಿಯಲಿದ್ದು, ಚಿಕಿತ್ಸೆ ಹೆಚ್ಚು ಫಲ ಕೊಡುತ್ತದೆ.
ಅಪ್ಪಿತಪ್ಪಿಯೂ ಇಂಥ ಆಂಜನೇಯನ ಚಿತ್ರ ಹಾಕಬೇಡಿ
ಕೋಪಗೊಂಡ ಹನುಮಂತನ ಮೂರ್ತಿಯನ್ನು ಮನೆಯಲ್ಲಿ ಇಡಬಾರದು. ಈ ಕಾರಣದಿಂದಾಗಿ, ನಕಾರಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುತ್ತದೆ. ಅಲ್ಲದೆ, ಹನುಮಂತನು ಶ್ರೀರಾಮನ ಭುಜದ ಮೇಲೆ ಕುಳಿತಿರುವಂಥ ಚಿತ್ರವನ್ನು ಮನೆಯಲ್ಲಿ ಇಡಬಾರದು. ಏಕೆಂದರೆ ಹನುಮಂತನು ಅಸ್ಥಿರ ಭಂಗಿಯಲ್ಲಿದ್ದಾನೆ.
ಶಿವನ ಈ ಚಿತ್ರವನ್ನು ಹಾಕಬೇಡಿ
ಮನೆಯಲ್ಲಿ ಎಂದಿಗೂ ನಟರಾಜ ರೂಪದಲ್ಲಿ ಶಿವನ ಚಿತ್ರ ಅಥವಾ ವಿಗ್ರಹವನ್ನು ಇಡಬೇಡಿ. ಏಕೆಂದರೆ ಈ ರೂಪದಲ್ಲಿ ಶಿವನನ್ನು ತುಂಬಾ ಕೋಪಗೊಂಡವನು ಎಂದು ಪರಿಗಣಿಸಲಾಗುತ್ತದೆ. ಮನೆಯ ದೇವರ ಕೋಣೆಯಲ್ಲಿ ಶಿವಲಿಂಗವನ್ನು ಎಂದಿಗೂ ಸ್ಥಾಪಿಸಬಾರದು.
Garuda Purana: ಜೀವನದಲ್ಲಿ ಯಶಸ್ಸು ಬೇಕಂದ್ರೆ ಈ ಕೆಲಸ ಪೂರ್ಣಗೊಳಿಸಿ
ಎಂಥ ಚಿತ್ರಗಳನ್ನು ಮನೆಯಲ್ಲಿ ಇಡಬೇಕು?
- ಹನುಮಂತನ ವಿಗ್ರಹವು ಭಗವಾನ್ ರಾಮ, ಜಾನಕಿ ಮತ್ತು ಲಕ್ಷ್ಮಣರೊಂದಿಗೆ ಇದ್ದರೆ, ಅದನ್ನು ಪೂಜಿಸುವುದರಿಂದ ಎಲ್ಲ ತೊಂದರೆಗಳು ದೂರವಾಗುತ್ತವೆ ಮತ್ತು ಅಂತಹ ಮನೆಯಲ್ಲಿ ಪ್ರೀತಿ ನೆಲೆಸುತ್ತದೆ.
- ನಿಮ್ಮ ಮನೆಯಲ್ಲಿ ಸಂತೋಷದ ಭಂಗಿಯಲ್ಲಿರುವ ಶಿವನ ಚಿತ್ರವನ್ನು ಇರಿಸಿ. ಮಾತೆ ಪಾರ್ವತಿ, ಕಾರ್ತಿಕೇಯ, ಗಣಪತಿ, ನಂದಿ ಸೇರಿದಂತೆ ಶಿವ ಪರಿವಾರದ ಫೋಟೋವಿದ್ದು, ಎಲ್ಲರೂ ವರದಮುದ್ರೆಯಲ್ಲಿ ಕುಳಿತಿದ್ದರೆ ಅಂತಹ ಚಿತ್ರವು ಶುಭ ಫಲ ನೀಡುತ್ತದೆ.
- ಮನೆಯಲ್ಲಿ ಶ್ರೀಕೃಷ್ಣನ ಬಾಲರೂಪವನ್ನು ಇಟ್ಟುಕೊಳ್ಳುವುದು ಮಂಗಳಕರವಾಗಿದ್ದು, ಆತನ ಸೇವೆ ಮಾಡುವುದರಿಂದ ಮುಕ್ತಿ ದೊರೆಯುತ್ತದೆ. ರಾಧಾ-ಕೃಷ್ಣರ ಚಿತ್ರವನ್ನು ಹಾಕಬೇಕಾದರೆ ಅದನ್ನು ನಿಂತಿರುವ ಭಂಗಿಯಲ್ಲಿ ಇಡಬೇಕು.
- ಸಂಪತ್ತಿನ ದೇವತೆಯಾದ ಕುಬೇರ ಮತ್ತು ಲಕ್ಷ್ಮಿಯ ಚಿತ್ರವು ವರದ ಮುದ್ರೆಯಲ್ಲಿ ಕುಳಿತುಕೊಂಡಿರಬೇಕು. ಅಂತಹ ಚಿತ್ರವನ್ನು ಪೂಜಿಸುವುದರಿಂದ ಮನೆಯಲ್ಲಿ ಸಂಪತ್ತಿನ ದೇವತೆ ನೆಲೆಸುತ್ತಾಳೆ. ನಾವು ಭಗವಾನ್ ವಿಷ್ಣುವಿನ ಚಿತ್ರದ ಬಗ್ಗೆ ಮಾತನಾಡುವುದಾದರೆ, ಮನೆಯಲ್ಲಿ ಲಕ್ಷ್ಮಿಯ ಜೊತೆಗೆ ಅದನ್ನು ಪೂಜಿಸುವುದು ಉತ್ತಮ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.