Asianet Suvarna News Asianet Suvarna News

ಕೋಪ ಬರುತ್ತದೆಯೇ? ಕೋಪ ನಿಯಂತ್ರಿಸಿಕೊಳ್ಳೋಕೆ ಕೆಲ ವಾಸ್ತು ಟಿಪ್ಸ್ ಫಾಲೋ ಮಾಡಿ

ದಿನದಿಂದ ದಿನಕ್ಕೆ ಕೋಪದ ಭಾವನೆ ಹೆಚ್ಚುತ್ತಿದೆಯಾ? ಮನೆಯ ಸದಸ್ಯರಲ್ಲಿ ಕೋಪ ಹೆಚ್ಚಾಗುತ್ತಿದೆಯಾ? ಹಾಗಿದ್ದರೆ, ಕೆಲವು ವಾಸ್ತು ಟಿಪ್ಸ್ ಅನುಸರಿಸುವುದು ಅಗತ್ಯ. ಇವುಗಳನ್ನು ಅನುಸರಿಸುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ನಾಶವಾಗಿ ಸಕಾರಾತ್ಮಕ ಭಾವನೆ ಹೆಚ್ಚುತ್ತದೆ. ಕೋಪ ನಿಯಂತ್ರಿಸಿಕೊಳ್ಳಲು ಸಾಧ್ಯವಾಗುತ್ತದೆ. 
 

How to control anger follow these vastu tips maintain relationship tips
Author
First Published Aug 17, 2023, 5:25 PM IST

ಹೊಸ ಮನೆಗೆ ಹೋಗಿದ್ದೀರಾ? ಹೊಸ ಕಚೇರಿ ಅಥವಾ ಹೊಸ ಸ್ಥಳಕ್ಕೆ ಹೋದ ಕೆಲವೇ ದಿನಗಳಲ್ಲಿ ಮನಸ್ಸಿನ ಭಾವನೆಗಳಲ್ಲಿ ವ್ಯತ್ಯಾಸ ಕಂಡುಬರುತ್ತಿದೆಯಾ? ಕೋಪ ಹೆಚ್ಚುತ್ತಿದೆಯಾ? ಅಥವಾ ಮನೆಯ ಯಾವುದಾದರೂ ಸದಸ್ಯರಲ್ಲಿ ಕೋಪ ಹೆಚ್ಚುತ್ತಿರುವುದು ಅನುಭವಕ್ಕೆ ಬಂದಿದೆಯಾ? ಹಾಗಾದರೆ ಅದಕ್ಕೆ ಕೆಲವು ದೋಷಗಳು ಕಾರಣವಾಗಬಲ್ಲವು. ಕೆಲವು ವಾಸ್ತು ಸಲಹೆಗಳನ್ನು ಪಾಲನೆ ಮಾಡುವುದರಿಂದ ಕೋಪವನ್ನು ನಿಯಂತ್ರಿಸಬಹುದು. ಗೀತೋಪದೇಶದಲ್ಲಿ ಶ್ರೀಕೃಷ್ಣ ಹೇಳಿರುವಂತೆ ಮನುಷ್ಯನ ಪತನಕ್ಕೆ ಮೂರು ಕಾರಣಗಳು ಪ್ರಮುಖವಾಗಿದೆ. ಅವು, ಕಾಮ, ಕ್ರೋಧ ಮತ್ತು ಲೋಭ. ಈ ವಿಕಾರಗಳು ಮನುಷ್ಯನನ್ನು ವಿನಾಶದ ಕಡೆಗೆ ಕರೆದುಕೊಂಡು ಹೋಗುತ್ತವೆ. ಯಾವ ವ್ಯಕ್ತಿ ಜೀವನದಲ್ಲಿ ಅಸಂತುಷ್ಟನಾಗಿರುತ್ತಾನೋ, ಹೆಚ್ಚು ಕೋಪ ಮಾಡಿಕೊಳ್ಳುತ್ತಾನೋ, ಆ ವ್ಯಕ್ತಿಯ ಜೀವನ ತನ್ನಷ್ಟಕ್ಕೇ ತಾನೇ ಮುಳುಗುತ್ತದೆ. ಹೀಗಾಗಿ, ಕೋಪಿಸಿಕೊಳ್ಳುವುದು ಯಾವ ಕಾರಣಕ್ಕೂ ಸರಿಯಲ್ಲ. ಆದರೂ ಕೋಪದ ಭಾವನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ನಿಯಂತ್ರಿಸಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ ಎಂದಾದರೆ ಅದಕ್ಕೆ ಬೇರೆಯದೇ ಆದ ಕಾರಣಗಳಿರಬಹುದು. ವಾಸಿಸುವ ಮನೆಯ ಅಥವಾ ಕಚೇರಿಯ ವಾತಾವರಣ, ದಿಕ್ಕು ಮತ್ತು ಪರಿಸರದ ಪ್ರಭಾವಗಳಿಂದಲೂ ಕೋಪ ಹೆಚ್ಚಬಹುದು. ಹೀಗಾಗಿ, ವಾಸ್ತು ಶಾಸ್ತ್ರದ ಪ್ರಕಾರ ಕೆಲವು ಟಿಪ್ಸ್ ಅನುಸರಿಸುವುದು ಉತ್ತಮ. 

•    ಆಗ್ನೇಯ (East-South) ದಿಕ್ಕಿಗೆ ತಲೆ ಹಾಕಿ ಮಲಗಬೇಡಿ
ಆಗ್ನೇಯ ದಿಕ್ಕನ್ನು ಅಗ್ನಿಮೂಲೆ ಎಂದು ಹೇಳಲಾಗುತ್ತದೆ. ಈ ದಿಕ್ಕಿಗೆ ತಲೆ (Head) ಹಾಕಿ ಮಲಗುವುದು ಯಾವ ಕಾರಣಕ್ಕೂ ಸರಿಯಲ್ಲ. ಮಲಗುವ ದಿಕ್ಕು ಪೂರ್ವ (East) ಮತ್ತು ದಕ್ಷಿಣ (South) ಎರಡೇ ಆಗಿರಬೇಕು. ಆಗ್ನೇಯ ದಿಕ್ಕಿಗೆ ತಲೆ ಹಾಕಿ ಮಲಗುವುದರಿಂದ ಕೋಪದ (Angry) ಭಾವನೆ ಹೆಚ್ಚುತ್ತದೆ. ಅಗ್ನಿಯಂತೆ ಕೋಪವೂ ಉರಿಯುತ್ತದೆ. ಈ ದಿಕ್ಕಿನ ಮೂಲೆಯಲ್ಲಿ ಹೆಚ್ಚು ಸಮಯ ಕುಳಿತುಕೊಳ್ಳುವುದೂ ಸರಿಯಲ್ಲ. 

ಗುಟ್ಟಾಗಿ ವಿವಾಹೇತರ ಸಂಬಂಧ; ಜನ್ಮ ಕುಂಡಲಿ ಹೇಳುತ್ತೆ ನಿಮ್ಮ ಸಂಗಾತಿಯ ರಹಸ್ಯ..!

•    ಸೈಂಧವ ಲವಣ (Salt)
ಮನೆಯ ಜನರಲ್ಲಿ ಯಾರಿಗಾದರೂ ಹೆಚ್ಚು ಕೋಪವಿದ್ದರೆ ಮನೆಯ ಯಾವುದಾದರೂ ಮೂಲೆಯಲ್ಲಿ ಅಥವಾ ಮಲಗುವ ಕೋಣೆಯಲ್ಲಿ ಎಲ್ಲಾದರೂ ಸೈಂಧವ ಲವಣವನ್ನು ಇರಿಸಿಕೊಳ್ಳಬೇಕು. 

•    ಮುತ್ತು ಧಾರಣೆ (Pearl)
ಜನ್ಮಕುಂಡಲಿಯನ್ನು ಆಧರಿಸಿ ಕೋಪಿಷ್ಠರು ಮುತ್ತುಗಳನ್ನು ಧರಿಸಬಹುದು. ಇದಕ್ಕೆ ತಜ್ಞರ ಸಲಹೆ ಪಡೆದುಕೊಳ್ಳುವುದು ಅಗತ್ಯ.

•    ಗುರುಮಂತ್ರ (Guru)
ಯಾವಾಗ ಕೋಪ ಬರುತ್ತದೆಯೋ ಆಗ ಗುರುಮಂತ್ರವನ್ನು ಜಪಿಸಬೇಕು. ಅಥವಾ ತಮ್ಮ ಮಾತಾಪಿತರನ್ನು ಸ್ಮರಣೆ ಮಾಡಿಕೊಳ್ಳಬೇಕು.

•    ಕೆಂಪು ಬಣ್ಣ (Red Color)
ಮನೆಯಲ್ಲಿ ಯಾಆದರೂ ಕೋಪ ಮಾಡಿಕೊಳ್ಳುವವರು ಇದ್ದರೆ ಕೆಂಪು ಬಣ್ಣದ ಬಳಕೆ ಮಾಡಬಾರದು. ಗೋಡೆಗೆ ಕೆಂಪು ಬಣ್ಣವಿರದಂತೆ, ಕೆಂಪು ಬಣ್ಣದ ದೀಪಗಳು ಬಳಕೆಯಾಗದಂತೆ ನೋಡಿಕೊಳ್ಳಿ.

•    ಸ್ವಚ್ಛತೆ (Sanitation)
ಮನೆಯಲ್ಲಿ ಸ್ವಚ್ಛತೆ ಇಲ್ಲವಾದರೂ ಕೋಪದ ಭಾವನೆ ಹೆಚ್ಚುತ್ತದೆ. ಹೀಗಾಗಿ, ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.

ಸೆಕ್ಸ್ ಮಾಡಲು ನಿಮ್ಮ ರಾಶಿಗೆ ಯಾರು ಉತ್ತಮ ಪಾರ್ಟ್‌ನರ್..?

•    ಪೂರ್ವ ದಿಕ್ಕಿಗೆ ದೀಪ (Light)
ದಿನವೂ ಬೆಳಗ್ಗೆ ಮತ್ತು ಸಂಜೆ ಪೂರ್ವ ದಿಕ್ಕಿನಲ್ಲಿ ದೀಪ ಬೆಳಗುವುದರಿಂದ ಮನೆಯ ಜನರ ಕೋಪ ಕಡಿಮೆಯಾಗುತ್ತದೆ. ಜತೆಗೆ, ಪೂರ್ವ ದಿಕ್ಕಿನಲ್ಲಿ ಹೆಚ್ಚು ಭಾರದ (Heavy) ಭಾರೀ ವಸ್ತುಗಳನ್ನು ಇಡಬಾರದು.

•    ಸೋಮವಾರದ (Monday) ಉಪವಾಸ
ಕೋಪ ಬರುವವರು ಸೋಮವಾರ ಉಪವಾಸ ಮಾಡಬೇಕು. ಒಂದು ಹೊತ್ತು ಮಾತ್ರ ಆಹಾರ ಸೇವನೆ ಮಾಡಬೇಕು. ಮತ್ತು ರಾತ್ರಿ ಚಂದ್ರನಿಗೆ ನಮಸ್ಕಾರ ಮಾಡಿ ಅರ್ಘ್ಯ ನೀಡಬೇಕು. 

•    ಭೂತಾಯಿಗೆ (Earth) ನಮಸ್ಕಾರ
ದಿನವೂ ಬೆಳಗ್ಗೆ ಏಳುವ ಸಮಯದಲ್ಲಿ ಭೂಮಿ ತಾಯಿಗೆ 5 ಬಾರಿ ನಮಸ್ಕಾರ ಮಾಡಬೇಕು, ಹಾಗೆಯೇ, ಕೋಪವನ್ನು ನಿಯಂತ್ರಿಸಲು ಭೂಮಿ ತಾಯಿಯಲ್ಲಿ ಶಕ್ತಿಯನ್ನು ಕೇಳಿಕೊಳ್ಳಬೇಕು. ಪ್ರಾರ್ಥನೆ ಮಾಡಬೇಕು. 

ಸೂರ್ಯನಮಸ್ಕಾರ, ಪ್ರಾಣಾಯಾಮ
ಇನ್ನು ವೈಜ್ಞಾನಿಕವಾಗಿ, ಪ್ರತಿದಿನ ಸೂರ್ಯನಮಸ್ಕಾರ ಮತ್ತು ಪ್ರಾಣಾಯಾಮಗಳನ್ನು (Pranayama) ಮಾಡುವುದರಿಂದ ದೇಹದಲ್ಲಿ ಶಕ್ತಿ ಸಂಚಯವಾಗುತ್ತದೆ. ಇವುಗಳಿಂದ ಕೋಪದ ಮೇಲೆ ನಿಯಂತ್ರಣ (Control) ಸಾಧಿಸಲು ಸಾಧ್ಯವಾಗುತ್ತದೆ. ಮಾನಸಿಕ ಸಮಸ್ಯೆಗಳಿಗೆ ಸಂಬಂಧಿಸಿ ಪ್ರಾಣಾಯಾಮದಿಂದ ಭಾರೀ ಲಾಭ ದೊರೆಯುತ್ತದೆ.

Follow Us:
Download App:
  • android
  • ios