Vastu Tips: ಸಂಗಾತಿಗೆ ಇಂತಹ ಗಿಫ್ಟ್ ನೀಡೋದ್ರಿಂದ ಸಂಬಂಧ ಚೆನ್ನಾಗಿರುತ್ತೆ

ಸಂಗಾತಿಗೆ ಯಾವ ರೀತಿಯ ಗಿಫ್ಟ್ ನೀಡಬೇಕು ಎನ್ನುವ ಗೊಂದಲವಿದ್ಯಾ? ವಾಸ್ತು ಶಾಸ್ತ್ರದ ಪ್ರಕಾರ ಶುಭವನ್ನು ತರುವಂತಹ ಗಿಫ್ಟ್ ನೀಡುವುದರಿಂದ ದಾಂಪತ್ಯ ಸುಖಮಯವಾಗುತ್ತದೆ. ಕೆಲವು ವಸ್ತುಗಳನ್ನು ಆಯ್ಕೆ ಮಾಡುವ ಮೂಲಕ ಸಂಬಂಧವನ್ನು ಇನ್ನಷ್ಟು ಗಟ್ಟಿಮಾಡಿಕೊಳ್ಳಬಹುದು.
 

Give gift to partner like this relationship and intimacy will be better

ಪ್ರೀತಿಪಾತ್ರರಿಗೆ, ಅದರಲ್ಲೂ ಸಂಗಾತಿಗೆ ಗಿಫ್ಟ್ ನೀಡುವುದೊಂದು ಬಹು ಸಂಕಷ್ಟದ ಕೆಲಸ. ಪ್ರೀತಿಯ ಪಯಣದಲ್ಲಿ ಅತ್ಯುತ್ತಮವಾದ ಉಡುಗೊರೆ ನೀಡಬೇಕು, ಅದು ಎಂದೆಂದಿಗೂ ಧನಾತ್ಮಕ ಶಕ್ತಿ ಮತ್ತು ಸಾಮರಸ್ಯವನ್ನು ಮೂಡಿಸುವಂತಿರಬೇಕು ಎನ್ನುವ ಆಶಯ ಎಲ್ಲರಿಗೂ ಇರುತ್ತದೆ. ತಾವು ನೀಡುವ ಉಡುಗೊರೆ ಎಂದೆಂದೂ ಇರಬೇಕು ಅಥವಾ ಕನಿಷ್ಟ ಪಕ್ಷ ಹೆಚ್ಚು ಕಾಲ ಬಾಳಿಕೆ ಬರಬೇಕು, ಅದರಿಂದ ಇಬ್ಬರ ನಡುವಿನ ಒಲವಿಗೆ ಒಂದು ವಿಶೇಷ ಎನರ್ಜಿ ಬರಬೇಕು, ಅಂತಹ ಅರ್ಥಪೂರ್ಣವಾದ ಗಿಫ್ಟ್ ನೀಡಿ ಸಂಗಾತಿಯನ್ನು ಅಚ್ಚರಿ ಪಡಿಸಬೇಕು ಎನ್ನುವ ವಿಚಾರವಿರುವವರು ನೀವಾಗಿದ್ದರೆ ವಾಸ್ತು ಶಾಸ್ತ್ರದ ಬುದ್ಧಿವಂತಿಕೆಯನ್ನು ಬಳಕೆ ಮಾಡಿಕೊಳ್ಳುವುದು ಸೂಕ್ತ. ಮನುಷ್ಯ ವಾಸಿಸುವ ಸ್ಥಳದಲ್ಲಿ ಎನರ್ಜಿಗಳ ಸಮತೋಲನಗೊಳಿಸುವ ಮತ್ತು ಸೌಹಾರ್ದ ವಾತಾವರಣ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ವಾಸ್ತು ಶಾಸ್ತ್ರವು ಜೀವನವನ್ನು ಪ್ರಗತಿಯತ್ತ ಕೊಂಡೊಯ್ಯುತ್ತದೆ. ವಾಸ್ತುವಿಗೆ ಸಂಬಂಧಿಸಿದ ಕೆಲ ವಸ್ತುಗಳನ್ನು ಉಡುಗೊರೆ ನೀಡುವುದರಿಂದ ಪ್ರೀತಿ ಮತ್ತು ಸಂಬಂಧ ಹೆಚ್ಚು ದೃಢವಾಗುತ್ತದೆ. ದಾಂಪತ್ಯಕ್ಕೆ ವಿಶೇಷ ಅರ್ಥ ಬರುತ್ತದೆ.

•    ಗುಲಾಬಿ ಸ್ಫಟಿಕ ಶಿಲೆ (Rose Quartz Crystal)
ಧನಾತ್ಮಕ ಎನರ್ಜಿಯನ್ನು (Positive Energy) ಉತ್ತೇಜಿತಗೊಳಿಸುವಲ್ಲಿ ಶಿಲೆಗಳ ಪಾತ್ರ ಮಹತ್ವದ್ದಾಗಿದೆ. ಭಾರತೀಯ ವಾಸ್ತುಶಾಸ್ತ್ರದಲ್ಲಿ (Vastu Sahstra) ಶಿಲೆಗೆ ಪ್ರಮುಖ ಸ್ಥಾನವಿದೆ. ಸಂಗಾತಿಗೆ (Partner) ಗುಲಾಬಿ ಸ್ಫಟಿಕ ಶಿಲೆಯನ್ನು ನೀಡುವುದು ಅತ್ಯುತ್ತಮ ಆಯ್ಕೆ. ಇದನ್ನು ಲವ್ ಸ್ಟೋನ್ (Love Stone) ಎಂದೇ ಕರೆಯಲಾಗುತ್ತದೆ. ಅನಿರ್ಬಂಧಿತ ಪ್ರೀತಿ ಹಾಗೂ ಸಾಮರಸ್ಯವನ್ನು (Harmony) ಮೂಡಿಸುವಲ್ಲಿ ಗುಲಾಬಿ ಶಿಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಇದನ್ನು ಮಲಗುವ ಕೋಣೆಯಲ್ಲಿ ಇಟ್ಟುಕೊಳ್ಳಬೇಕು. ರೋಮ್ಯಾಂಟಿಕ್ ಜೀವನ ವಿಸ್ತಾರಗೊಳ್ಳುವ ಜತೆಗೆ ಭಾವನಾತ್ಮಕ ಸಾಂಗತ್ಯ ಉತ್ತಮವಾಗುತ್ತದೆ. ಹೃದಯ ಸೇರಿದಂತೆ ಹಲವು ಆಕಾರಗಳಲ್ಲಿ ಇದು ಲಭ್ಯ.

ಈ ವಸ್ತು ಗಿಫ್ಟ್ ಮಾಡಿದ್ರೆ ಮನೆ ಪ್ರಗತಿ ಖಂಡಿತ ಎನ್ನುತ್ತೆ ವಾಸ್ತುಶಾಸ್ತ್ರ

•    ಫೆಂಗ್ ಶುಯಿ ಲವ್ ಬರ್ಡ್ಸ್ (Fesg Shui Love Birds)
ದಂಪತಿಯಲ್ಲಿ ಪರಸ್ಪರ ಒಲವು, ಬಾಂಧವ್ಯ (Relation) ಹೆಚ್ಚಿಸುವ ಫೆಂಗ್ ಶುಯಿ ಲವ್ ಬರ್ಡ್ಸ್ ಕೇವಲ ವಸ್ತುವಲ್ಲ, ವಾಸ್ತು ಪ್ರಕಾರ, ಅದು ಸಾಂಗತ್ಯವನ್ನು ಹೆಚ್ಚಿಸುವ ಪರಸ್ಪರ ವಿಶ್ವಾಸ (Trust) ವೃದ್ಧಿಸುವ ಸಂಕೇತ. ಮನೆಯ ಅಂದವನ್ನೂ ಹೆಚ್ಚಿಸುವ ಫೆಂಗ್ ಶುಯಿ ಲವ್ ಬರ್ಡ್ಸ್ ಅನ್ನು ಮನೆಯ ನೈರುತ್ಯ (Southwest) ದಿಕ್ಕಿನಲ್ಲಿ ಇರಿಸಬೇಕು. ಪ್ರೀತಿ ಹಾಗೂ ಸಂತೋಷವನ್ನು (Happiness) ಆಹ್ವಾನಿಸುವ ಸಂಕೇತವನ್ನಾಗಿ ಇದನ್ನು ಗುರುತಿಸಲಾಗುತ್ತದೆ. ಸಂಗಾತಿಗೆ ಇದನ್ನು ಉಡುಗೊರೆ ನೀಡುವುದರಿಂದ ಸದಾಕಾಲ ನಿಮ್ಮ ಪ್ರೀತಿಯನ್ನು ಸ್ಮರಿಸುವಂತೆ ಮಾಡುತ್ತದೆ.

•    ಅರೋಮಾಥೆರಪಿ ಡಿಫ್ಯೂಸರ್ (Aromatherapy Diffuser)
ಪರಿಮಳಕ್ಕೆ ವಾಸ್ತುವಿನಲ್ಲಿ ಮಹತ್ವದ ಸ್ಥಾನವಿದೆ. ವಿವಿಧ ರೀತಿಯ ಆಹ್ಲಾದಕರ ಪರಿಮಳಗಳು ಮನಸ್ಸನ್ನು ಮುದಗೊಳಿಸುತ್ತವೆ, ಒತ್ತಡ ಕಡಿಮೆ ಮಾಡಿ ರಿಲ್ಯಾಕ್ಸೇಷನ್ ನೀಡುತ್ತವೆ. ಲ್ಯಾವೆಂಡರ್ (Lavender) ತೈಲದೊಂದಿಗೆ (Oil) ಇರುವ ಡಿಫ್ಯೂಸರ್ ಅನ್ನು ಸಂಗಾತಿಗೆ ಗಿಫ್ಟ್ ಮಾಡುವುದು ಉತ್ತಮ ಆಯ್ಕೆ. ಮನೆಯಲ್ಲಿ ಇದರಿಂದ ಶಾಂತ ವಾತಾವರಣ ನಿರ್ಮಾಣವಾಗುವುದಷ್ಟೇ ಅಲ್ಲ, ಭಾವನಾತ್ಮಕ ಆರೋಗ್ಯಕ್ಕೂ ಇದು ಕೊಡುಗೆ ನೀಡುತ್ತದೆ. ಮನೆಯ ವಾತಾವರಣ ನೆಮ್ಮದಿ, ಶಾಂತಿಯಿಂದ (Peace) ಕೂಡಿರುವುದು ಸಂಬಂಧ ಉತ್ತಮಗೊಳ್ಳಲು ನೆರವಾಗುತ್ತದೆ.

ಮನೆಯಲ್ಲಿ ಹಾಗಲಕಾಯಿ ಗಿಡ ನೆಡೋದು ಅಶುಭ ಫಲ ನೀಡುತ್ತಂತೆ !

•    ವಾಸ್ತು ಸಂಬಂಧಿ ವಸ್ತುಗಳು
ನಿಖರವಾಗಿ ನಿಮ್ಮ ಸಂಗಾತಿಗೆ ಹಾಗೂ ನಿಮ್ಮ ಬಾಂಧವ್ಯಕ್ಕೆ ಪೂರಕವಾಗುವ ವಾಸ್ತು ಸಂಬಂಧಿ ವಸ್ತುಗಳನ್ನು ಗಿಫ್ಟ್ (Gift) ಮಾಡುವ ಉದ್ದೇಶ ಹೊಂದಿದ್ದರೆ ಸೂಕ್ತ ವಾಸ್ತು ತಜ್ಞರನ್ನು ಸಂಪರ್ಕಿಸಬೇಕಾಗುತ್ತದೆ. ಇಲ್ಲೂ ಸಹ ಹಲವಾರು ಉತ್ತಮ ಆಯ್ಕೆಗಳು ದೊರೆಯುತ್ತವೆ. ದಾಂಪತ್ಯದಲ್ಲಿ ಸಮಸ್ಯೆ ಉಳ್ಳವರು ಇಂತಹ ಪರಿಹಾರೋಪಾಯಗಳ ಮೂಲಕ ತಮ್ಮ ಸಂಬಂಧವನ್ನು ಸುಧಾರಿಸಿಕೊಳ್ಳಲು ಸಾಧ್ಯವಾಗುತ್ತದೆ. ವಾಸಿಸುವ ಸ್ಥಳ, ಅಲ್ಲಿನ ಎನರ್ಜಿ ಹರಿವುಗಳನ್ನು ಆಧರಿಸಿ ಪರಿಹಾರ ಕಂಡುಕೊಳ್ಳಬಹುದು. 
 

Latest Videos
Follow Us:
Download App:
  • android
  • ios