Asianet Suvarna News Asianet Suvarna News

Vaastu Tips: ಮಲಗೋದಕ್ಕಷ್ಟೇ ಅಲ್ಲ, ಊಟ ಮಾಡೋದಕ್ಕೂ ಸೂಕ್ತ ದಿಕ್ಕು ಮುಖ್ಯ

ಮನೆಯಲ್ಲಿ ಸೌಹಾರ್ದದ ವಾತಾವರಣ ಮೂಡಿಸಲು, ಮನೆಯ ಸದಸ್ಯರ ನಡುವೆ ಹಾರ್ದಿಕ ಬಾಂಧವ್ಯ (Bonding) ಹೆಚ್ಚಿಸಲು ವಾಸ್ತು ಶಾಸ್ತ್ರ ಹಲವು ಮಾರ್ಗಗಳನ್ನು ತಿಳಿಸುತ್ತವೆ. ಇವುಗಳನ್ನು ಅನುಸರಿಸುವ ಮೂಲಕ ಜೀವನದಲ್ಲಿ ಶಾಂತಿ, ಸಹಕಾರ, ಸೌಹಾರ್ದತೆ ಹೆಚ್ಚಿಸಿಕೊಳ್ಳಬಹುದು.
 

Follow these tips for harmony in home while having food sum
Author
First Published Oct 20, 2023, 1:47 PM IST

ಉತ್ತಮ ಜೀವನ ನಮ್ಮೆಲ್ಲರ ಹಂಬಲ. ಮನೆಯಲ್ಲಿ, ಕುಟುಂಬದಲ್ಲಿ, ವೃತ್ತಿಯಲ್ಲಿ, ಸಮಾಜದಲ್ಲಿ ಶಾಂತಿ-ಸೌಹಾರ್ದದಿಂದ ಬಾಳುವಂತಾಗಬೇಕು ಎಂದು ಬಯಸುತ್ತೇವೆ. ಅದರಲ್ಲೂ ಮನೆಯಲ್ಲಿ ಸೌಹಾರ್ದದ ಬದುಕು ಅತ್ಯಗತ್ಯ. ಮನೆಯಲ್ಲಿ ಪತಿ-ಪತ್ನಿಯರಲ್ಲಿ ಸೌಹಾರ್ದವಿಲ್ಲವಾದರೆ, ಮನೆಯ ಸದಸ್ಯರ ನಡುವೆ ಸಾಮರಸ್ಯವಿಲ್ಲವಾದರೆ ಕುಟುಂಬವೆನ್ನುವುದು ನರಕದಂತೆ ಕಂಡುಬರುವುದರಲ್ಲಿ ಅಚ್ಚರಿ ಇಲ್ಲ. ಸೌಹಾರ್ದದ, ಸಾಮರಸ್ಯದ ಬದುಕಿಗಾಗಿ ವಾಸ್ತು ಶಾಸ್ತ್ರವು ಹಲವು ಮಾರ್ಗಗಳನ್ನು ತಿಳಿಸುತ್ತದೆ. ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಲು, ಸದಸ್ಯರ ನಡುವೆ ಹೊಂದಾಣಿಕೆ ಮೂಡಲು, ಒಟ್ಟಾರೆ ಮನೆಯಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಲು ಹಲವು ವಿಧಾನಗಳನ್ನು ಸೂಚಿಸುತ್ತದೆ. ಇವುಗಳನ್ನು ಅನುಸರಿಸಿದರೆ ಮನೆಯಲ್ಲಿ ಪ್ರೀತಿ, ಏಕತೆ, ಶಾಂತಿ ಹೆಚ್ಚುವ ಜತೆಗೆ ಉತ್ತಮ ಸೌಹಾರ್ದದ ಬದುಕು ನಿಮ್ಮದಾಗುತ್ತದೆ.

•    ಮುಖ್ಯದ್ವಾರ (Main Entrance)
ಮನೆಯ ಮುಖ್ಯದ್ವಾರ ಎನರ್ಜಿ (Energy) ಹರಿಯುವಿಕೆಯ ಪ್ರಮುಖ ಪಥವಾಗಿದೆ. ಮುಖ್ಯದ್ವಾರದಲ್ಲಿ ಯಾವಾಗಲೂ ಬೆಳಕಿರಬೇಕು (Light), ಕಸಮುಕ್ತವಾಗಿರಬೇಕು. ರಂಗೋಲಿಯ (Rangoli) ವಿನ್ಯಾಸಗಳಿಗೆ ಧನಾತ್ಮಕ ಶಕ್ತಿಯನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರವಿದೆ. ಮುಖ್ಯದ್ವಾರಕ್ಕೆ ಎದುರಾಗಿ ಚಪ್ಪಲಿ (Footwear) ಬಿಡುವ ಅಭ್ಯಾಸ ಬೇಡ. ಸ್ವಲ್ಪ ಪಕ್ಕದಲ್ಲಿ ಇರಿಸಿ.

ಕ್ಷುದ್ರ ಶಕ್ತಿಗಳಿಗೆ ಆಹ್ವಾನಿಸುವ ನಿಮ್ಮ ಮನೆಯ ಈ ವಸ್ತುಗಳನ್ನು ಮೊದಲು ಹೊರ ಹಾಕಿ!

•    ಹಜಾರ (Living Room)
ಕುಟುಂಬದ ಎಲ್ಲ ಸದಸ್ಯರು ಒಂದುಗೂಡುವ ಸ್ಥಳ ಲಿವಿಂಗ್ ರೂಮ್. ಈ ಸ್ಥಳದಲ್ಲಿ ಚೂಪಾದ (Sharp Edge) ಪೀಠೋಪಕರಣಗಳ ಬಳಕೆ ಬೇಡ. ಇವು ನೆಗೆಟಿವ್ (Negative) ಎನರ್ಜಿಯ ಹರಿವು ಹೆಚ್ಚಿಸುತ್ತವೆ. ಮುಖ ನೋಡಿ ಮಾತನಾಡಲು ಸಾಧ್ಯವಾಗುವಂತೆ ಕುಳಿತುಕೊಳ್ಳುವ ವಿನ್ಯಾಸವಿರಲಿ.

•    ಅಡುಗೆ ಕೋಣೆ (Kitchen)
ಅಡುಗೆ ಕೋಣೆ ಸುಸ್ಥಿರತೆ (Stability) ಮತ್ತು ಆರೈಕೆಯನ್ನು ಸೂಚಿಸುವಂಥದ್ದು. ಅಡುಗೆ ಕೋಣೆ ಸ್ವಚ್ಛವಾಗಿರಬೇಕು. ವಸ್ತುಗಳು ಚೆಲ್ಲಿಕೊಂಡಂತೆ ಇರಬಾರದು. ಧೂಳು, ಕಸ (Clutter) ಇರಬಾರದು. ವಾಸ್ತು ಪ್ರಕಾರ, ನೀರು ಹರಿಯುವ ಸಿಂಕ್ ಹಾಗೂ ಬೆಂಕಿ ಇರುವ ಗ್ಯಾಸ್ ಸ್ಟೋವ್ ಒಂದೇ ಸಮದಲ್ಲಿ ಇರಬಾರದು. ಇವು ಪ್ರತ್ಯೇಕವಾಗಿರಬೇಕು.

•    ಊಟದ ಸ್ಥಳ (Dining Area)
ಅಡುಗೆ ಹಾಗೂ ಜತೆಯಾಗಿ ಊಟ ಮಾಡುವುದರಿಂದ ಕುಟುಂಬದ ಸದಸ್ಯರ ನಡುವೆ ಸಂಬಂಧ (Relations) ಬಲವಾಗಲು ಸಾಧ್ಯ. ಕೋಣೆಯ ಕೇಂದ್ರದಲ್ಲಿ ಕುಳಿತು ಊಟ ಮಾಡುವುದು ಅಗತ್ಯ. ಡೈನಿಂಗ್ ಟೇಬಲ್ ಒಂದು ಮೂಲೆಯಲ್ಲಿ ಇರಬಾರದು. ಪ್ರತಿಯೊಬ್ಬರೂ ಪೂರ್ವ (East) ಅಥವಾ ಉತ್ತರಕ್ಕೆ (North) ಮುಖ ಮಾಡಿ ಕುಳಿತು ಉಣ್ಣುವಂತೆ ಇರಬೇಕು. ಇದರಿಂದ ಉತ್ತಮ ಆರೋಗ್ಯ (Health) ಹಾಗೂ ಹಾರ್ದಿಕ (Harmonious) ಮಾತುಕತೆ ಸಾಧ್ಯವಾಗುತ್ತದೆ. 

ನಿಮ್ಮ ಮನೆಯ ವಾಸ್ತು ಹೀಗಿದ್ರೆ ಒಳ್ಳೆದು..!

•    ಮಲಗುವ ಕೋಣೆ (Bedroom)
ವಿಶ್ರಾಂತಿ ತೆಗೆದುಕೊಳ್ಳುವ ಮೂಲಕ ಮತ್ತೆ ಉತ್ಸಾಹ ತುಂಬಿಸಿಕೊಳ್ಳುವ ಸ್ಥಳ ಮಲಗುವ ಕೋಣೆ. ವಾಸ್ತು ಪ್ರಕಾರ, ಮಲಗುವ ಕೋಣೆ ಮನೆಯ ನೈರುತ್ಯ ದಿಕ್ಕಿಗೆ ಇರುವುದು ಉತ್ತಮ. ಇದರಿಂದ ಶಾಂತಿ ಮತ್ತು ಸ್ಥಿರತೆ ಪ್ರಾಪ್ತಿಯಾಗುತ್ತದೆ. ಮಲಗುವ ಸ್ಥಳದಲ್ಲಿ ಕನ್ನಡಿಗಳು ಇರುವುದು ಒಳ್ಳೆಯದಲ್ಲ. ದಕ್ಷಿಣ (South) ದಿಕ್ಕಿಗೆ ತಲೆಮಾಡಿ ಮಲಗುವುದು ಶ್ರೇಯಸ್ಕರ. ಇದರಿಂದ ಕುಟುಂಬದಲ್ಲಿ ಸೌಹಾರ್ದತೆ ನೆಲೆಸುತ್ತದೆ.

•    ಪೂಜಾ ಕೋಣೆ
ಪೂಜಾ ಕೋಣೆ ಈಶಾನ್ಯ ದಿಕ್ಕಿಗೆ ಇರುವಂತೆ ನೋಡಿಕೊಳ್ಳುವುದು ಅಗತ್ಯ. ಇದನ್ನು ಯಾವತ್ತೂ ಶುದ್ಧವಾಗಿ ಇಟ್ಟುಕೊಳ್ಳಿ, ಬೆಳಕಿರಲಿ. ಪವಿತ್ರ ಸಂಕೇತಗಳನ್ನು ಇರಿಸಿ.

•    ಕಸಮುಕ್ತ ಮನೆ
ಮನೆಯಲ್ಲಿ ಧೂಳು, ಕಸ ಇರುವುದರಿಂದ ಎನರ್ಜಿ ಹರಿವಿಗೆ ತೊಂದರೆಯಾಗುತ್ತದೆ. ಧನಾತ್ಮಕ (Positive) ಶಕ್ತಿ ಹರಿಯುವುದಿಲ್ಲ. ದೀರ್ಘಕಾಲ ಬಳಸದ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. 

•    ನೈಸರ್ಗಿಕ ಬೆಳಕು, ಗಾಳಿ (Natural Air and Light)
ಮನೆಯೊಳಗೆ ನೈಸರ್ಗಿಕವಾಗಿ ಗಾಳಿ (Air) ಮತ್ತು ಬೆಳಕು (Light) ಬರಬೇಕು. ಹಗಲಿನಲ್ಲಿ ಕಿಟಕಿಗಳನ್ನು ತೆರೆಯಿರಿ. ಆರೋಗ್ಯಕರ ವಾತಾವರಣವನ್ನು ಉತ್ತೇಜಿಸುವಂತಹ ಗಾಳಿ ಬೆಳಕು ಇರಬೇಕು. 

•    ಬಣ್ಣ (Color) ಮತ್ತು ಡೆಕೋರೇಷನ್ (Decoration)
ಮನೆಯಲ್ಲಿ ಉತ್ತೇಜನದ ವಾತಾವರಣ ಮೂಡಿಸುವಂತಹ ಬಣ್ಣಗಳನ್ನು ಬಳಕೆ ಮಾಡಿ. ತಿಳಿಹಸಿರು ಸೇರಿದಂತೆ ಕೆಲವು ದಟ್ಟ ಬಣ್ಣಗಳನ್ನು ಬಳಸಬಹುದು. ಗೋಡೆ ಅಥವಾ ಶೋಕೇಸ್ ನಲ್ಲಿ ಕೌಟುಂಬಿಕ ಭಾವಚಿತ್ರಗಳನ್ನು ಇರಿಸಿ.

•    ದನಿ ಮತ್ತು ಪರಿಮಳ (Aroma)
ಬೆಳಗಿನ ಸಮಯದಲ್ಲಿ ಹಿತವಾದ ಸಂಗೀತ ಹಾಕಿ. ಮಧುರವಾದ ಪರಿಮಳ ಬೀರುವ ಗಂಧದ ಕಡ್ಡಿ ಅಥವಾ ಎಸೆನ್ಸಿಯಲ್ ತೈಲಗಳನ್ನು ಬಳಕೆ ಮಾಡಿ. 

Follow Us:
Download App:
  • android
  • ios