Cleaning Vastu : ಪ್ರತಿ ದಿನ ನಾವು ಮನೆ ಗುಡಿಸಿ, ಕ್ಲೀನ್ ಮಾಡ್ತೇವೆ. ಆದ್ರೆ ವಾಸ್ತು ಶಾಸ್ತ್ರದಲ್ಲಿ ಇದಕ್ಕೂ ನಿಯಮ ಇದೆ. ಎಲ್ಲ ದಿನ ಒಂದೇ ರೀತಿ ಮನೆ ಕ್ಲೀನಿಂಗ್ ಸೂಕ್ತವಲ್ಲ. ಇದ್ರಿಂದ ನಾನಾ ಸಮಸ್ಯೆ ಬೆನ್ನು ಹತ್ತುತ್ತದೆ. 

ಸುಂದರ, ಸ್ವಚ್ಛ ಮನೆ ಆರೋಗ್ಯ ವೃದ್ಧಿಸುತ್ತದೆ. ಮನೆಯಲ್ಲಿ ಸ್ವಚ್ಛತೆ ಇದ್ರೆ ಲಕ್ಷ್ಮಿ ಮನೆ ಪ್ರವೇಶ ಮಾಡ್ತಾಳೆ ಎನ್ನುವ ನಂಬಿಕೆ ಜನರಲ್ಲಿದ್ದೆ. ಮನೆ ಕ್ಲೀನಿಂಗ್ ಬರೀ ಹೈಜಿನ್ ಅಲ್ಲ. ಅದು ನಮ್ಮ ಮಾನಸಿಕ ಸ್ಥಿತಿ, ಹಣಕಾಸಿನ ಹರಿವು, ನಕಾರಾತ್ಮಕ ಶಕ್ತಿ ಜೊತೆ ಸಂಬಂಧ ಹೊಂದಿದೆ. ಪ್ರತಿ ದಿನ ಮನೆಯ ಮೂಲೆ ಮೂಲೆ ಕ್ಲೀನ್ ಮಾಡುವ ಜನರಿದ್ದಾರೆ. ಕೆಲವರು ಬೆಳಿಗ್ಗೆ ಸೂರ್ಯೋದಯಕ್ಕಿಂತ ಮೊದಲು ಮನೆ ಕ್ಲೀನ್ ಮಾಡಿದ್ರೆ ಮತ್ತೆ ಕೆಲವರು ಸಂಜೆ ಮನೆಯನ್ನು ಸ್ವಚ್ಛಗೊಳಿಸ್ತಾರೆ. ಸೂಕ್ತವಲ್ಲದ ಸಮಯ ಹಾಗೂ ದಿನ ಮನೆ ಕ್ಲೀನಿಂಗ್ ನಮ್ಮ ಜೀವನದ ಮೇಲೆ ಅಡ್ಡಪರಿಣಾಮ ಬೀರುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮನೆ ಕ್ಲೀನಿಂಗ್ ಹೀಗಿರಲಿ

ಶಾಸ್ತ್ರಗಳಲ್ಲಿ ಮನೆಯನ್ನು ಒರೆಸಲು ಸೂಕ್ತ ನಿಯಮ ಹೇಳಲಾಗಿದೆ. ಸೂರ್ಯೋದಯಕ್ಕಿಂತ ಮೊದಲು ಮನೆ ಸ್ವಚ್ಛತೆ ಉತ್ತಮವಲ್ಲ. ಸೂರ್ಯೋದಯದ ನಂತ್ರ ಮನೆಯನ್ನು ಕ್ಲೀನ್ ಮಾಡಿದ್ರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಬಿಸಿಲು ನೆತ್ತಿಗೆ ಬಂದ್ಮೇಲೂ ನೀವು ಮನೆಯನ್ನು ಸ್ವಚ್ಛಗೊಳಿಸಬಾರದು. ಮನೆಯನ್ನು ನೀವು ಮಧ್ಯಾಹ್ನ 12 ಗಂಟೆಯ ಒಳಗೆ ಒರೆಸಬೇಕು. ಆ ನಂತರ ಅಥವಾ ಸೂರ್ಯಾಸ್ತದ ಸಮಯದಲ್ಲಿ ಮನೆ ತೊಳೆಯುವುದನ್ನು ಶಾಸ್ತ್ರಗಳಲ್ಲಿ ನಿಷೇಧಿಸಲಾಗಿದೆ.

ನಾನು ದೇವಸ್ಥಾನಕ್ಕೆ ಹೋಗೋದು ದೇವರನ್ನು ನೋಡೋಕೂ ಅಲ್ಲ; ಪ್ರಾರ್ಥಿಸೋಕೂ ಅಲ್ಲ: ISRO ಮಾ

ಈ ದಿನ ಮನೆ ಕ್ಲೀನ್ ಮಾಡ್ಬೇಡಿ

ವಾರದ ಎಲ್ಲ ದಿನ ನೀವು ಮನೆಯನ್ನು ಕ್ಲೀನ್ ಮಾಡ್ಬೇಕು ಎಂದೇನಿಲ್ಲ. ಶಾಸ್ತ್ರಗಳ ಪ್ರಕಾರ ಮನೆ ತೊಳೆಯಲು ಗುರುವಾರ ಸೂಕ್ತವಲ್ಲ. ನೀವು ಗುರುವಾರ ರೆಸ್ಟ್ ತೆಗೆದುಕೊಳ್ಬಹುದು. ಆ ದಿನ ಪೊರಕೆ, ಮೋಪ್ ಹಿಡಿಯಬೇಡಿ. ಇದಲ್ದೆ ಏಕಾದಶಿ ದಿನ ನೀವು ಮನೆ ಕ್ಲೀನಿಂಗ್ ಕೆಲ್ಸಕ್ಕೆ ಹೋಗ್ಬೇಡಿ. ಏಕಾದಶಿ ದಿನ ನಿತ್ಯ ಕರ್ಮಗಳನ್ನು ಮುಗಿಸಿ ಸ್ನಾನ ಮಾಡಿ ಪ್ರಾರ್ಥನೆ ಮಾಡ್ಬೇಕು.

ಮನೆಯನ್ನು ಸ್ವಚ್ಛಗೊಳಿಸಲು ಬುಧವಾರ ಹಾಗೂ ಶುಕ್ರವಾರ ಅತ್ಯಂತ ಸೂಕ್ತ ದಿನವಾಗಿದೆ. ವಾರದಲ್ಲಿ ಎರಡು ದಿನ ಮನೆಯನ್ನು ತೊಳೆಯುತ್ತೇನೆ ಎನ್ನುವವರು ಬುಧವಾರ ಹಾಗೂ ಶುಕ್ರವಾರವನ್ನು ಆಯ್ಕೆ ಮಾಡಿಕೊಳ್ಳಿ. ಈ ದಿನ ಮನೆ ಮೋಪ್ ಮಾಡಿ.

ಜೂನ್‌ನಲ್ಲಿ 12 ವರ್ಷಗಳ ಬಳಿಕ ಮಹಾಸಂಯೋಗ: ನಾಲ್ಕು ದೈವಿಕ ಯೋಗ, ಯಾವ ರಾಶಿಗೆ ಲಾಭ?

ದಿನದ ಸ್ವಚ್ಛತೆ ಹೀಗಿರಲಿ

ನೀವು ಪ್ರತಿ ದಿನ ಮನೆಯನ್ನು ಒರೆಸುವವರಾಗಿದ್ದರೆ ಮನೆ ಸ್ವಚ್ಛತೆ, ವಾಸ್ತುದೋಷ ನಿವಾರಣೆ ಹಾಗೂ ಸಕಾರಾತ್ಮಕ ಶಕ್ತಿ ಹೆಚ್ಚಳಕ್ಕೆ ನೀರಿನ ಜೊತೆ ಕೆಲ ಪದಾರ್ಥವನ್ನು ಬಳಸಬೇಕು. ಅದೂ ವಾರಕ್ಕೆ ತಕ್ಕಂತೆ ನೀರಿಗೆ ಪದಾರ್ಥ ಬೆರೆಸಿ ಮನೆ ಒರೆಸಬೇಕು. ಶನಿವಾರ ನೀವು ನೀರಿಗೆ ಉಪ್ಪು, ಪಟಿಕ ಹಾಗೂ ನಿಂಬೆ ರಸವನ್ನು ಸೇರಿಸಿ ಮನೆಯನ್ನು ಶುದ್ಧಗೊಳಿಸಬೇಕು. ಇದ್ರಿಂದ ನಕಾರಾತ್ಮಕ ಶಕ್ತಿ ದೂರವಾಗುವುದಲ್ಲದೆ ಮನೆಯಲ್ಲಿರುವ ಬ್ಯಾಕ್ಟೀರಿಯಾ, ಕೀಟಗಳ ನಾಶವಾಗುತ್ತದೆ.

ಭಾನುವಾರ ಮತ್ತು ಮಂಗಳವಾರ ನೀರಿಗೆ ಉಪ್ಪನ್ನು ಸೇರಿಸಿ ಮನೆಯನ್ನು ಒರೆಸಬೇಕು. ಉಳಿದ ದಿನ ನೀವು ನೀರಿಗೆ ಚಿಟಕಿ ಕರ್ಪೂರವನ್ನು ಹಾಕಿ ಮನೆಯನ್ನು ಸ್ವಚ್ಛಗೊಳಿಸುವುದು ಉತ್ತಮ.