MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Vaastu
  • Main door vastu : ಮನೆಯ ಮುಖ್ಯ ಬಾಗಿಲಿನಿಂದ ಶಬ್ದ ಬರ್ತಿದ್ದರೆ ನಿರ್ಲಕ್ಷ್ಯ ಮಾಡಬೇಡಿ, ದುರ್ಘಟನೆಗೆ ಇದೇ ಕಾರಣ ಆಗ್ಬಹುದು

Main door vastu : ಮನೆಯ ಮುಖ್ಯ ಬಾಗಿಲಿನಿಂದ ಶಬ್ದ ಬರ್ತಿದ್ದರೆ ನಿರ್ಲಕ್ಷ್ಯ ಮಾಡಬೇಡಿ, ದುರ್ಘಟನೆಗೆ ಇದೇ ಕಾರಣ ಆಗ್ಬಹುದು

 ಮುಖ್ಯ ಬಾಗಿಲು ಕೇವಲ ಪ್ರವೇಶ ಮತ್ತು ನಿರ್ಗಮನದ ಜಾಗವಲ್ಲ. ಸಂತೋಷ, ಸಮೃದ್ಧಿ, ಸಕಾರಾತ್ಮಕ ಶಕ್ತಿ, ಲಕ್ಷ್ಮಿ ಮನೆ ಪ್ರವೇಶ ಮಾಡುವ ಬಾಗಿಲಾಗಿದೆ.  ಮನೆಯ ಮುಖ್ಯ ಬಾಗಿಲು ತೆರೆಯುವಾಗ ಶಬ್ಧ ಮಾಡುತ್ತಿದ್ದರೆ ಅದು ಕೇವಲ ತಾಂತ್ರಿಕ ಸಮಸ್ಯೆಯಲ್ಲ. ಇದು ಪ್ರಗತಿಗೆ ಅಡ್ಡಿಯಾಗುವ ಗಂಭೀರ ವಾಸ್ತು ದೋಷ. 

2 Min read
Author : Roopa Hegde
Published : May 23 2026, 01:16 PM IST
Share this Photo Gallery
  • FB
  • TW
  • Linkdin
  • Whatsapp
19
ರಾಹು ದೋಷ
Image Credit : Asianet News

ರಾಹು ದೋಷ

ಮುಖ್ಯ ಬಾಗಿಲಿನಿಂದ ಬರುವ ಶಬ್ಧ ಜಾತಕದಲ್ಲಿ ರಾಹು ಮತ್ತು ಕೇತುವಿನ ಅಶುಭ ಪರಿಣಾಮಗಳನ್ನು ಹೆಚ್ಚಿಸುತ್ತದೆ. ಇದು ಮನೆಯಲ್ಲಿ ಹಠಾತ್ ಅಪಘಾತ ಅಥವಾ ಕಾನೂನು ವೆಚ್ಚಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ.

Add Asianetnews Kannada as a Preferred SourcegooglePreferred
29
ಸಂಪತ್ತಿನ ನಷ್ಟ
Image Credit : Asianet News

ಸಂಪತ್ತಿನ ನಷ್ಟ

ಮುಖ್ಯ ಬಾಗಿಲಿನಿಂದ ಶಬ್ದ ಬರ್ತಿದ್ದರೆ ಮನೆಯಲ್ಲಿ ಹಣದ ಒಳ ಹರಿವು ಕಡಿಮೆ ಇರುತ್ತದೆ. ಯಾವುದೇ ಕೆಲ್ಸ ಯಶಸ್ವಿಯಾಗಿ ನಡೆಯೋದಿಲ್ಲ. ಇದ್ರಿಂದ ಸಮೃದ್ಧಿ ನಿಲ್ಲುತ್ತದೆ. ಈ ಬಾಗಿಲು ದೋಷ ಕ್ರಮೇಣ ಮನೆಯಲ್ಲಿ ಬಡತನಕ್ಕೆ ಕಾರಣವಾಗುತ್ತದೆ.

Related Articles

Related image1
ಶನಿಯ ದೃಷ್ಟಿಯಿಂದ ಜೀವನದಲ್ಲಿ ತಿರುವು; 6 ರಾಶಿಗಳಿಗೆ ಕೆಲಸ, ಹಣ, ಅಧಿಕಾರ ಸಿಗಲಿದೆ
Related image2
ಜೂನ್ ತಿಂಗಳಲ್ಲಿ ಹುಟ್ಟಿದವರ ಮೇಲೆ ವಿಷ್ಣು-ಶುಕ್ರನ ಡಬಲ್ ಕೃಪೆ: ಇವರ ಆ ಅದ್ಭುತ ಗುಣಗಳ ಬಗ್ಗೆ ನಿಮಗೊತ್ತಾ?
39
ಮಾನಸಿಕ ಒತ್ತಡ
Image Credit : Asianet News

ಮಾನಸಿಕ ಒತ್ತಡ

ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಬಾಗಿಲು ಮಾಡುವ ಈ ಶಬ್ಧ ಮನಸ್ಸಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದು ಮಾನಸಿಕ ಸಮಸ್ಯೆ ಸೃಷ್ಟಿಸುತ್ತದೆ. ಕುಟುಂಬ ಸದಸ್ಯರಲ್ಲಿ ಕಿರಿಕಿರಿ ಉಂಟುಮಾಡುತ್ತದೆ. ಮನೆಯಲ್ಲಿ ಅನಗತ್ಯ ಜಗಳ, ಗಲಾಟೆಗೆ ದಾರಿಮಾಡಿಕೊಡುತ್ತದೆ.

49
ಮನೆ ಬಾಗಿಲನ್ನು ಹೀಗೆ ಸರಿ ಮಾಡಿ
Image Credit : Asianet News

ಮನೆ ಬಾಗಿಲನ್ನು ಹೀಗೆ ಸರಿ ಮಾಡಿ

ಮನೆಯ ಮುಖ್ಯ ಬಾಗಿಲು ಶಬ್ಧ ಮಾಡ್ತಿದ್ದರೆ ಅದನ್ನು ತಕ್ಷಣ ಸರಿಪಡಿಸಿ. ವಾಸ್ತು ದೋಷದಿಂದ ಆಗುವ ನಷ್ಟವನ್ನು ತಪ್ಪಿಸಿ. ಬಾಗಿಲು ಶಬ್ಧ ಬರದಂತೆ ಎಣ್ಣೆ ಹಚ್ಚಬೇಕು. ಇದ್ರಿಂದ ಬಾಗಿಲು ಸಡಿಲಗೊಂಡು ಶಬ್ಧ ಬರುವುದು ನಿಲ್ಲುತ್ತದೆ.

59
ವಾಸ್ತು ಪರಿಹಾರ
Image Credit : Asianet News

ವಾಸ್ತು ಪರಿಹಾರ

ಮೊದಲು ಮನೆ ಬಾಗಿಲಿನಿಂದ ಬರುವ ಶಬ್ಧವನ್ನು ಬಂದ್ ಮಾಡಿ. ನಂತ್ರ ವಾಸ್ತು ಶಾಸ್ತ್ರದ ಪ್ರಕಾರ ಬಾಗಿಲನ್ನು ಶುದ್ಧಗೊಳಿಸಿ. ಬಾಗಿಲಿನ ಚೌಕಟ್ಟನ್ನು ಶುದ್ಧ ನೀರಿನಿಂದ ಒರೆಸಬೇಕು. ಗಂಗಾ ನೀರು ಅಥವಾ ಶುದ್ಧ ನೀರಿಗೆ ಸ್ವಲ್ಪ ಅರಿಶಿನವನ್ನು ಬೆರೆಸಿ ಬಾಗಿಲಿನ ಚೌಕಟ್ಟಿನ ಮೇಲೆ ಸಿಂಪಡಿಸಿ. ಅರಿಶಿನವು ವಿಷ್ಣು ಮತ್ತು ಸಮೃದ್ಧಿ ಸಂಕೇತವಾಗಿದೆ. ಮುಖ್ಯ ಬಾಗಿಲಿನ ಮೇಲೆ ಕುಂಕುಮ ಅಥವಾ ಅರಿಶಿನದಿಂದ ಸ್ವಸ್ತಿಕ ಚಿಹ್ನೆಯನ್ನು ಬರೆಯಿರಿ. ಇದು ನಕಾರಾತ್ಮಕ ಶಕ್ತಿ ಮನೆ ಪ್ರವೇಶಿಸುವುದನ್ನು ತಡೆಯುತ್ತದೆ.

69
 ಚತುರ್ಮುಖ ದೀಪ ಹಚ್ಚಿ
Image Credit : Asianet News

ಚತುರ್ಮುಖ ದೀಪ ಹಚ್ಚಿ

ಸಂಜೆ ಸೂರ್ಯಾಸ್ತದ ಸಮಯದಲ್ಲಿ ಮುಖ್ಯ ಬಾಗಿಲಿನ ಬಲಭಾಗದಲ್ಲಿ ತುಪ್ಪ ಅಥವಾ ಎಳ್ಳೆಣ್ಣೆಯ ದೀಪವನ್ನು ಹಚ್ಚಬೇಕು. ಚತುರ್ಮುಖ ದೀಪವನ್ನು ಬೆಳಗಿಸುವುದು ಉತ್ತಮ. ಇದನ್ನು ಶುಭವೆಂದು ಪರಿಗಣಿಸಲಾಗುತ್ತದೆ.

79
ನಾಮಫಲಕ
Image Credit : Asianet News

ನಾಮಫಲಕ

ಸರಿಯಾದ ನಾಮಫಲಕವನ್ನು ಆರಿಸುವುದು ಮುಖ್ಯ. ಬಾಗಿಲಿನ ಮೇಲೆ ಸ್ವಚ್ಛ, ಸುಂದರವಾದ ಅಕ್ಷರಗಳನ್ನು ಹೊಂದಿರುವ ನಾಮಫಲಕವನ್ನು ಇರಿಸಬೇಕು. ಮರದ ಅಥವಾ ತಾಮ್ರದ ನಾಮಫಲಕವನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ.

89
ತೋರಣ
Image Credit : Asianet News

ತೋರಣ

ತಾಜಾ ಮಾವಿನ ಅಥವಾ ಅಶೋಕ ಎಲೆಗಳ ತೋರಣವನ್ನು ನೀವು ಮುಖ್ಯ ಬಾಗಿಲಿಗೆ ಹಾಕಬೇಕು. ಇದನ್ನು ಅತ್ಯಂತ ಶುಭ ಎಂದು ನಂಬಲಾಗುತ್ತದೆ. ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡೋದನ್ನು ಇದು ತಪ್ಪಿಸುತ್ತದೆ.

99
ಇದನ್ನು ಇಡಬೇಡಿ
Image Credit : Asianet News

ಇದನ್ನು ಇಡಬೇಡಿ

ಮುಖ್ಯ ಬಾಗಿಲಿನ ಮುಂದೆ ಶೂಗಳ ರಾಶಿಯನ್ನು ಇಡಬೇಡಿ. ಮುಖ್ಯ ಬಾಗಿಲಿನ ಮುಂದೆ ಅಥವಾ ಹಿಂದೆ ಶೂ, ಚಪ್ಪಲಿ ಅಥವಾ ಹಾಳಾದ ವಸ್ತುಗಳನ್ನು ಇಡಬೇಡಿ. ಲಕ್ಷ್ಮಿ ಮನೆ ಪ್ರವೇಶವನ್ನು ಇದು ತಡೆಯುತ್ತದೆ. ರಾಹು ಮತ್ತು ಕೇತುವಿನ ನಕಾರಾತ್ಮಕ ಪ್ರಭಾವ ಹೆಚ್ಚಾಗುತ್ತದೆ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಜ್ಯೋತಿಷ್ಯ
ವಾಸ್ತು ಸಲಹೆಗಳು

Latest Videos
Recommended Stories
Recommended image1
Swapna Shastra: ಮನೆಯಲ್ಲಿ ಮಾತ್ರವಲ್ಲ, ನಿಮ್ಮ ಕನಸಿನಲ್ಲೂ ಜಿರಳೆ ಕಾಣಿಸಿಕೊಳ್ಳೋದು ಕೆಟ್ಟ ಸೂಚನೆ!
Recommended image2
ಹಣಕ್ಕಾಗಿ ಅಲ್ಲ; ಸುಖ, ಸಂತೋಷ, ನೆಮ್ಮದಿ, ನಿದ್ದೆಗಾಗಿ ಈ 6 ಗಿಡ ಮನೆಯೊಳಗೆ ಬೆಳೆಸಿ
Recommended image3
ಮನೆ ಕಟ್ಟಲು ಜಾಗ ಖರೀದಿ ಮಾಡುವ ಯೋಚನೆ ಇದೆಯೆ? ಈ ವಾಸ್ತು ಸಲಹೆ ನೆನಪಿರಲಿ
Related Stories
Recommended image1
ಶನಿಯ ದೃಷ್ಟಿಯಿಂದ ಜೀವನದಲ್ಲಿ ತಿರುವು; 6 ರಾಶಿಗಳಿಗೆ ಕೆಲಸ, ಹಣ, ಅಧಿಕಾರ ಸಿಗಲಿದೆ
Recommended image2
ಜೂನ್ ತಿಂಗಳಲ್ಲಿ ಹುಟ್ಟಿದವರ ಮೇಲೆ ವಿಷ್ಣು-ಶುಕ್ರನ ಡಬಲ್ ಕೃಪೆ: ಇವರ ಆ ಅದ್ಭುತ ಗುಣಗಳ ಬಗ್ಗೆ ನಿಮಗೊತ್ತಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved