ಉತ್ತಮ ಆರೋಗ್ಯಕ್ಕೆ ಈ 5 ಸರಳ ವಾಸ್ತು ಟಿಪ್ಸ್...
ಮನೆಯಲ್ಲಿ ಸದಾ ಅನಾರೋಗ್ಯದ ಸಮಸ್ಯೆ ಕಾಡುತ್ತಿದ್ದರೆ ಅದಕ್ಕೆ ಹಲವು ಕಾರಣಗಳು ಇರುತ್ತವೆ. ವೈಜ್ಞಾನಿಕವಾಗಿ ಇರುವ ಕಾರಣಗಳ ಜೊತೆಗೆ ವಾಸ್ತು ಶಾಸ್ತ್ರದ ಕೆಲವು ಅಂಶಗಳು ಅಡಗಿರುತ್ತವೆ. ಮನೆಯಲ್ಲಿ ವಾಸ್ತು ದೋಷವಿದ್ದರೆ ಆರೋಗ್ಯದ ಸಮಸ್ಯೆಗಳು ಎದುರಾಗುತ್ತವೆ. ಆರೋಗ್ಯ ಚೆನ್ನಾಗಿರಲು ಕೆಲವು ಸುಲಭವಾದ ವಾಸ್ತು ನಿಯಮಗಳನ್ನು ತಿಳಿಸಿದ್ದಾರೆ ಅವುಗಳ ಬಗ್ಗೆ ತಿಳಿಯೋಣ..
ಶರೀರ ಸ್ವಸ್ಥವಾಗಿದ್ದರೆ ಮನಸ್ಸಿಗೆ ನೆಮ್ಮದಿ ಇರುತ್ತದೆ. ಕೆಲಸ ಕಾರ್ಯಗಳನ್ನು ಉತ್ತಮವಾಗಿ ನಿರ್ವಹಿಸಲು ಆರೋಗ್ಯ ಚೆನ್ನಾಗಿರುವುದು ಅತ್ಯಂತ ಅವಶ್ಯಕ. ದೈಹಿಕ ಸ್ವಾಸ್ಥ್ಯ ಉತ್ತಮವಾಗಿದ್ದಾಗ ಕೆಲಸ ಮಾಡಲು ಮನಸ್ಸು ಮತ್ತು ಉತ್ಸಾಹವಿರುತ್ತದೆ. ಆಗಾಗ ಆರೋಗ್ಯ ಹದಗೆಡುತ್ತಿದ್ದರೆ ಯಾವುದೇ ಕೆಲಸದಲ್ಲೂ ಆಸಕ್ತಿ ಉಳಿಯುವುದಿಲ್ಲ. ಅದರ ಬಗ್ಗೆ ಚಿಂತಿಸುತ್ತಾ ಮಾನಸಿಕ ಸ್ವಾಸ್ಥ್ಯವು ಹದಗೆಡುವ ಸಂದರ್ಭ ಬರುತ್ತದೆ. ಹಾಗಾಗಿ ವಾಸ್ತು ಶಾಸ್ತ್ರದಲ್ಲಿ ತಿಳಿಸಿರುವ ಸುಲಭವಾದ ಐದು ವಾಸ್ತು ನಿಯಮಗಳನ್ನು ಪಾಲಿಸಿದರೆ ಆರೋಗ್ಯ ಉತ್ತಮವಾಗಿರುತ್ತದೆ. ಆರೋಗ್ಯವೇ ಭಾಗ್ಯ ಹಾಗಾಗಿ ವಾಸ್ತು ಶಾಸ್ತ್ರ ತಿಳಿಸಿರುವ ವಾಸ್ತು ಟಿಪ್ಸ್ ಯಾವುವು ತಿಳಿಯೋಣ...
ಮನೆಯಲ್ಲಿ ಕೆಲವೊಮ್ಮೆ ಮಾಡುವ ಚಿಕ್ಕ ಪುಟ್ಟ ತಪ್ಪಿನಿಂದ ವಾಸ್ತು ದೋಷ ಉಂಟಾಗುತ್ತದೆ. ಈ ದೋಷದ ನಕಾರಾತ್ಮಕ ಪ್ರಭಾವ ವ್ಯಕ್ತಿಯ ಆರೋಗ್ಯದ ಮೇಲಾಗುತ್ತದೆ. ಪದೇಪದೇ ಆರೋಗ್ಯ ಹದಗೆಡುತ್ತಿದ್ದರೆ ಅಂಥವರು ಒಮ್ಮೆ ಮನೆಯ ವಾಸ್ತುವಿನ ಬಗ್ಗೆ ಗಮನ ಹರಿಸುವುದು ಉತ್ತಮ. ಆರೋಗ್ಯ ಸರಿಯಿಲ್ಲದಿದ್ದರೆ ಶರೀರ ಬಳಲುವುದಲ್ಲದೆ, ಹಣ ಮತ್ತು ಸಮಯ ವ್ಯಯವಾಗುತ್ತದೆ. ಇದರಿಂದ ಆರ್ಥಿಕ ಮತ್ತು ಮಾನಸಿಕ ಸ್ಥಿತಿಯು ಹದಗೆಡುತ್ತದೆ. ಹಾಗಾಗಿ ಆರೋಗ್ಯದ ವಿಚಾರದಲ್ಲಿ ವಾಸ್ತುದೋಷದ ಬಗ್ಗೆ ಸಹ ಅರಿತು ಸರಿಪಡಿಸಿಕೊಳ್ಳುವುದು ಉತ್ತಮ.
ಇದನ್ನು ಓದಿ: ಈ ನಾಲ್ಕು ರಾಶಿಯವರಲ್ಲಿ ವಿವಾಹವಾದರೆ ಪತಿಗೆ ಜಾಕ್‌ಪಾಟ್..!
ಈ ವಸ್ತುಗಳ ಇಡಬೇಡಿ…
ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿ ಹಳೆಯ ಮತ್ತು ಕೆಲಸಕ್ಕೆ ಬಾರದ ವಸ್ತುಗಳನ್ನು ಇಟ್ಟಿರಬಾರದು. ಅನಾವಶ್ಯಕ ವಸ್ತುಗಳನ್ನು ಕೋಣೆಯಲ್ಲಿ ಒಂದೆಡೆ ಕೂಡಿಡುವುದರಿಂದ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚುತ್ತದೆ. ಇದರಿಂದ ವೈರಸ್ ಮತ್ತು ಬ್ಯಾಕ್ಟೀರಿಯಾದಿಂದ ಉಂಟಾಗುವ ಕಾಯಿಲೆಗಳು ಜನ್ಮ ತಳೆಯುವ ಸಾಧ್ಯತೆ ಹೆಚ್ಚಿರುತ್ತದೆ.
ಮಲಗುವ ಕೋಣೆಯ ಸ್ವಚ್ಛತೆ
ಮಲಗುವ ಕೋಣೆ ಸಂಪೂರ್ಣವಾಗಿ ಮುಚ್ಚಿರಬಾರದು. ಮಂಚದ ಎದುರಿಗೆ ಕನ್ನಡಿ ಇಡುವುದು ಸಹ ವಾಸ್ತು ಶಾಸ್ತ್ರದ ಪ್ರಕಾರ ನಿಷಿದ್ಧವಾಗಿದೆ. ಹೀಗೆ ಇರುವುದರಿಂದ ವ್ಯಕ್ತಿಗೆ ಆರೋಗ್ಯ ಸಮಸ್ಯೆ ಸದಾ ಕಾಡುತ್ತಿರುತ್ತಿದೆ. ಮಾನಸಿಕ ಸಮಸ್ಯೆಗಳು ಕಾಡದಂತೆ ಎಚ್ಚರವಾಗಿರಲು ಸೂರ್ಯನ ಕಿರಣಗಳ ಕೆಳಗೆ ಮಲಗಬಾರದು. ಅಷ್ಟೇ ಅಲ್ಲದೆ ಮಲಗುವ ಕೋಣೆಯಲ್ಲಿ ದೇವರ ಭಾವಚಿತ್ರಗಳನ್ನು ಇಡಬಾರದು.
ಇದನ್ನು ಓದಿ: ಜಾತಕದಲ್ಲಿ ಹೀಗಿದ್ದರೆ ಧನಯೋಗ, ನಿಮಗೂ ಇರಬಹುದು ಈ ಲಕ್ಷ್ಮಿಯನ್ನು ಒಲಿಸಿಕೊಳ್ಳುವ ಭಾಗ್ಯ!
ಮುಖ್ಯದ್ವಾರದ ಎದುರು ಹೀಗಿರಲಿ
ಮನೆಯ ಮುಖ್ಯ ದ್ವಾರದ ಎದುರಿಗೆ ಕೆಸರು ಅಥವಾ ಗುಂಡಿಗಳು ಇರುವುದು ಒಳ್ಳೆಯದಲ್ಲ. ಇದರಿಂದ ಮನೆಯ ಸದಸ್ಯರ ಮಾನಸಿಕ ಸ್ಥಿತಿ ಮೇಲೆ ಪರಿಣಾಮ ಬೀರುವುದಲ್ಲದೆ, ಖಿನ್ನತೆ ಉಂಟಾಗುತ್ತದೆ. ಒಮ್ಮೆ ಹೀಗಿದ್ದರೆ ಅದನ್ನು ಮಣ್ಣು ಹಾಕಿ ತುಂಬಿ ಸಮತಟ್ಟು ಮಾಡಿ ಇಡಬೇಕು. ಅಲ್ಲದೆ, ಮುಖ್ಯದ್ವಾರದ ಎದುರು ಯಾವುದೇ ಕೊಳಕುಗಳು ಇರದಂತೆ ನೋಡಿಕೊಳ್ಳಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಹೀಗಿದ್ದರೆ ದಾರಿದ್ರ್ಯವನ್ನು ನೀವೇ ಸ್ವಾಗತ ಮಾಡಿದಂತಾಗುತ್ತದೆ.
ಭೋಜನ ಈ ದಿಕ್ಕಿನಲ್ಲಿರಲಿ…
ಭೋಜನ ಮಾಡುವ ಸಮಯದಲ್ಲಿ ಮುಖವು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರಬೇಕಾಗುತ್ತದೆ. ಆ ದಿಕ್ಕಿನಲ್ಲಿ ಕುಳಿತು ಊಟ ಮಾಡಿದರೆ ಮಾತ್ರ ಶುಭವಾಗುತ್ತದೆ. ಜೊತೆಗೆ ಆರೋಗ್ಯವೂ ಉತ್ತಮವಾಗಿರುವುದಲ್ಲದೆ, ಜೀರ್ಣ ಕ್ರಿಯೆಯೂ ಅಷ್ಟೇ ಸರಾಗವಾಗಿರುತ್ತದೆ.
ಮರದ ನೆರಳು ಬೀಳುತ್ತಿದೆಯೇ..?
ಮನೆಯ ಮುಂದೆ ದೊಡ್ಡ ಮರ ಅಥವಾ ದೊಡ್ಡ ಕಂಬ ಇದ್ದು, ಅದರ ನೆರಳು ಮನೆಗೆ ಬೀಳುತ್ತಿದ್ದರೆ ವಾಸ್ತು ದೋಷ ಉಂಟಾಗುತ್ತದೆ. ಈ ವಾಸ್ತು ದೋಷವನ್ನು ನಿವಾರಿಸಿಕೊಳ್ಳಲು ಮನೆಯ ಮುಖ್ಯ ಗೇಟ್‌ನ ಎರಡೂ ಕಡೆಗೆ ಸ್ವಸ್ಥಿಕ್ ಚಿಹ್ನೆಯನ್ನು ಬರೆಯಬೇಕು.
ಇದನ್ನು ಓದಿ: ವೃತ್ತಿ ಕ್ಷೇತ್ರದ ಅನುಸಾರ ಅದೃಷ್ಟ ಬದಲಾಯಿಸುವ ರತ್ನಗಳಿವು...
ಆಗ್ನೇಯ ಮೂಲೆಯಲ್ಲಿ ಇರಲಿ ಕೆಂಪು ಬೆಳಕು
ಮನೆಯ ಆಗ್ನೇಯ ಮೂಲೆಯಲ್ಲಿ ಕೆಂಪು ಬಣ್ಣದ ಬಲ್ಬ್ ಇಲ್ಲವೇ ಮೊಂಬತ್ತಿಯನ್ನು ಹಚ್ಚಿಡಬೇಕು. ಈ ಕೆಲಸವನ್ನು ಪ್ರತಿ ದಿನವೂ ಮಾಡಬೇಕು. ಹೀಗೆ ಮಾಡುವುದರಿಂದ ಕುಟುಂಬ ಸದಸ್ಯರ ಆರೋಗ್ಯವು ಚೆನ್ನಾಗಿರುತ್ತದೆ.