ಫೆಂಗ್‌ ಶ್ಯೂ ಎಂದರೆ ವಾಯು ಮತ್ತು ಜಲ ಎಂದರ್ಥ. ಮನೆಯನ್ನು ಹೇಗೆ ನಿರ್ಮಿಸಬೇಕು, ಸುಂದರವಾಗಿ ಹೇಗಿಡಬೇಕು, ಯಾವ ವಸ್ತುಗಳನ್ನು ತರಬೇಕು.....ಹೀಗೆ ಎಲ್ಲ ವಿಷಯಗಳ ಬಗ್ಗೆಯೂ ಚೀನಾದ ಈ ವಾಸ್ತು ಶಾಸ್ತ್ರದಲ್ಲಿ ಮಾಹಿತಿ ಲಭ್ಯ. ಭಾರತೀಯ ವಾಸ್ತು ಶಾಸ್ತ್ರದಂತೆಯೇ ಕಾರ್ಯ ನಿರ್ವಹಿಸುವ ಈ ಬಗ್ಗೆ ನಿಮಗೊಂದಿಷ್ಟು ಇನ್ಫಾರ್ಮೇಷನ್....

ಮೂರು ಕಾಲಿನ ಕಪ್ಪೆ: ಫೆಂಗ್ ಶ್ಯೂನಲ್ಲಿ ಮೂರು ಕಾಲುಗಳುಳ್ಳ ಕಪ್ಪೆ ತುಂಬಾ ಭಾಗ್ಯಶಾಲಿ ಎಂದು ನಂಬುತ್ತಾರೆ. ಬಾಯಿಯಲ್ಲಿ ನಾಣ್ಯಗಳನ್ನು ಹಿಡಿದಿರುವ ಮೂರು ಕಾಲಿನ ಕಪ್ಪೆಯನ್ನು ಮನೆಯ ಮುಖ್ಯ ಬಾಗಿಲಿನ ಹತ್ತಿರ ಇಡಬೇಕು. ಇದನ್ನು ಕಿಚನ್ ಅಥವಾ ಶೌಚಾಲಯದ ಹತ್ತಿರ ಇಡಲೇಬಾರದು. ಹೀಗೆ ಮಾಡುವುದು ದೌರ್ಭಾಗ್ಯ ಎನ್ನುತ್ತಾರೆ. 

ಲಾಫಿಂಗ್ ಬುದ್ಧ: ಆರ್ಥಿಕ ಸಫಲತೆಗಾಗಿ ಮನೆಯಲ್ಲಿ ಲಾಫಿಂಗ್ ಬುದ್ಧನ ಮೂರ್ತಿಯನ್ನು ಇಡಬೇಕು. ಇದನ್ನು ಲಿವಿಂಗ್ ರೂಮ್‌ನ ಮುಖ್ಯ ಬಾಗಿಲಿನ ಬಳಿ ಇಡಿ. ಇದು ಜೀವನದಲ್ಲಿ ಸಮೃದ್ಧಿ ತರುತ್ತದೆ. ಲಾಫಿಂಗ್ ಬುದ್ಧನನ್ನು ಮನೆ ಮುಂಬಾಗಿಲಿನ ಬಳಿ ಇಟ್ಟರೆ ಮನೆಯಲ್ಲಿ ಆರ್ಥಿಕ ಸಮಸ್ಯೆ ಉಂಟಾಗುವುದಿಲ್ಲ. ಯಾಕೆಂದರೆ ಬುದ್ಧ ಸಮೃದ್ಧಿಯ ಸಂಕೇತ 

ಧನಾತ್ಮಕ ಎನರ್ಜಿಗೆ ಮನೆ ತುಂಬಿರಲಿ ಗಾಳಿ, ಬೆಳಕು...

ಎರಡು ಡ್ರ್ಯಾಗನ್: ಫೆಂಗ್‌ಶ್ಯೂ ಪ್ರಕಾರ ಮನೆಯಲ್ಲಿ ಎರಡು ಡ್ರ್ಯಾಗನ್ ಇಟ್ಟರೆ ಉತ್ತಮ. ಈ ಡ್ರ್ಯಾಗನ್ ಕಾಲಿನ ಉಗುರಿನಲ್ಲಿ ಹೆಚ್ಚು ಮುತ್ತು ಇದ್ದರೆ ಹೆಚ್ಚು ಸಕಾರಾತ್ಮಕ ಶಕ್ತಿ ಬಿಡುಗಡೆಯಾಗುತ್ತದೆ. ಇದನ್ನು ಪೂರ್ವ ದಿಕ್ಕಿನಲ್ಲಿಟ್ಟರೆ ತುಂಬಾ ಲಾಭ ಇದೆ. ಫೆಂಗ್‌ಶ್ಯೂನಲ್ಲಿ ಡ್ರ್ಯಾಗನ್ ತುಂಬಾ ಶುಭ ಎನ್ನುತ್ತಾರೆ. 

ನಾಣ್ಯ: ಮನೆ ಬಾಗಿಲಿನ ಹ್ಯಾಂಡಲ್ ಮೇಲೆ ನಾಣ್ಯ ನೇತು ಹಾಕುವುದರಿಂದ ಸಂಪತ್ತು, ಧನ ಮತ್ತು ಸೌಭಾಗ್ಯ ವೃದ್ಧಿಯಾಗುತ್ತದೆ. ಮೂರು ಹಳೆ ಚೀನಿ ನಾಣ್ಯಗಳನ್ನು ಕೆಂಪು ಬಣ್ಣದ ದಾರದಲ್ಲಿ ಕಟ್ಟಿ ಹ್ಯಾಂಡಲ್ ಮೇಲೆ ತೂಗಿಸಿ. ಇದರಿಂದ ಮನೆಯಲ್ಲಿ ಲಾಭ ಉಂಟಾಗುತ್ತದೆ. ಆದರೆ ಇದು ಮನೆ ಬಾಗಿಲಿನ ಹಿಂದಿರಬೇಕು.