Asianet Suvarna News Asianet Suvarna News

ಈ ಜನ್ಮರಾಶಿಯವರು ಈ ವಾಸ್ತು ಟಿಪ್ಸ್ ಅನುಸರಿಸಿದರೆ ಅದೃಷ್ಟ ಲಕ್ಷ್ಮಿ ನಿಮ್ಮವಳೇ!

ನಿಮ್ಮ ಜನ್ಮರಾಶಿಗೂ, ಅದೃಷ್ಟಲಕ್ಷ್ಮಿ ನಿಮ್ಮನ್ನು ವರಿಸಬೇಕಾದರೆ ನೀವು ಅನುಸರಿಸಬೇಕಾದ ತಂತ್ರಗಳಿಗೂ ಸಂಬಂಧವಿದೆ. ನಿಮ್ಮ ಜನ್ಮರಾಶಿಗೆ ತಕ್ಕಂತೆ ಈ ವಾಸ್ತು ಟಿಪ್ಸ್ ಅನುಸರಿಸಿ ಸಿರಿಯನ್ನು ನಿಮ್ಮದಾಗಿಸಿಕೊಳ್ಳಿ.

 

 

Born with these Zodiac Signs should perform vaastu tips to be lucky
Author
Bengaluru, First Published Jul 23, 2021, 2:18 PM IST

ಮೇಷ
ನೀವು ಮುಂಜಾನೆ ಎದ್ದ ಕೂಡಲೇ ನಿಮ್ಮ ಎದುರು ಕಾಣಿಸುವಂತೆ ಲಕ್ಷ್ಮೀದೇವಿಯ ಚಿತ್ರಪಟ ಒಂದಿರಲಿ. ಲಕ್ಷ್ಮೀನರಸಿಂಹನ ಚಿತ್ರವಿದ್ದರೂ ಸರಿ. ಮುಂಜಾನೆ ಅಥವಾ ಸಂಜೆ ದೇವರ ಪೂಜೆ ಮಾಡುವಾಗ ಇದಕ್ಕೂ ಒಮ್ಮೆ ಹೂವು ಏರಿಸುವುದನ್ನು ಮರೆಯಬೇಡಿ. ಹಾಗೇ ನಿಮ್ಮ ಕಾರಿನಲ್ಲೂ ಈ ಚಿತ್ರವಿರಲಿ.

ವೃಷಭ
ನಿಮ್ಮ ಲಿವಿಂಗ್ ರೂಮಿನಲ್ಲಿ ತಿಳಿ ಹಳದಿ ಬಣ್ಣದ ಬೆಳಕು ಸದಾ ಕಾಲ ಇರಲಿ. ಹೊಸ ಮನೆ ಡಿಸೈನ್ ಮಾಡುವಾಗ, ಮುಂಜಾನೆಯ ಸೂರ್ಯನ ಬೆಳಕು ಒಮ್ಮೆ ನಿಮ್ಮ ದೇವರ ಮನೆಯ ಹೊಸ್ತಿಲನ್ನೂ ಪ್ರವೇಶಿಸುವಂತೆ ಇದ್ದರೆ, ಅದೃಷ್ಟಲಕ್ಷ್ಮಿ ಎಂದೆಂದೂ ನಿಮ್ಮನ್ನು ಬಿಟ್ಟು ಹೋಗುವುದೇ ಇಲ್ಲ.

ಮಿಥುನ
ನಿಮ್ಮ ಮನೆಯ ಮಹಾದ್ವಾರವನ್ನು ತೇಗದ ಮರದಿಂದ ಮಾಡಿಸಿ. ಹಲಸು ಮುಂತಾದ ಮೇಣ ಬರುವ ಮರಗಳಿಂದ ಮಾಡುವುದು ಬೇಡ. ಒಂದು ವೇಳೆ ಸಾಧ್ಯವಿಲ್ಲ ಎಂದಾದರೆ, ತೇಗದ ಮರದಿಂದ ಮಾಡಿದ ಒಂದು ಫಲಕ, ಅಥವಾ ಒಂದು ತೋರಣವನ್ನಾದರೂ ಮಹಾದ್ವಾರದಲ್ಲಿ ಅಳವಡಿಸಿ.

ಕಟಕ
ನಿಮ್ಮ ಮನೆಯ ಓವರ್‌ಹೆಡ್ ಟ್ಯಾಂಕ್ ಯಾವಾಗಲೂ ನೈರುತ್ಯ ದಿಕ್ಕಿಗೇ ಇರಲಿ. ಈಶಾನ್ಯ ಅಥವಾ ಪೂರ್ವದಲ್ಲಿ ಇದನ್ನು ಸ್ಥಾಪಿಸಲೇಬೇಡಿ. ದೇವರ ಮನೆ ಈಶಾನ್ಯ ದಿಕ್ಕಿನಲ್ಲಿ ಇರಲಿ. ಅಡುಗೆ ಮನೆ ಆಗ್ನೇಯ ದಿಕ್ಕು ಅಥವಾ ಈಶಾನ್ಯದಲ್ಲಿರಬೇಕು. ಅಡುಗೆ ಮಾಡುವಾಗ ಪೂರ್ವಮುಖವಾಗಿರುವಂತೆ ಇರಲಿ.

ಸಿಂಹ
ನೀವು ಒಂದು ಕಂಚಿನ ಪಾತ್ರೆಯಲ್ಲಿ ನೀರು ತುಂಬಿ ನಾಲ್ಕಾರು ತಾವರೆ ಹೂವುಗಳನ್ನು ಲಿವಿಂಗ್ ರೂಮಿನಲ್ಲಿ ಇಡಬೇಕು. ಅಥವಾ ಗಾರ್ಡನ್‌ನಲ್ಲಿ ಕೊಳ ನಿರ್ಮಿಸಿ ತಾವರೆ ಬೆಳೆಸಿ. ತಾವರೆ ಲಕ್ಷ್ಮಿಯ ಆವಾಸ ಸ್ಥಾನ ಎಂಬುದು ನಿಮಗೆ ಗೊತ್ತಿದೆಯಲ್ಲವೆ? ದೇವರ ಮನೆಯಲ್ಲಿ ಒಂದು ಕೂರ್ಮ ಇರಲಿ.

Born with these Zodiac Signs should perform vaastu tips to be lucky

ಕನ್ಯಾ
ಮನೆಯ ದಕ್ಷಿಣ ದಿಕ್ಕಿನ ಟೆರೇಸ್ ಖಾಲಿ ಬಿಡಿ. ಅಲ್ಲಿ ಗಾರ್ಡನ್ ಮಾಡಿದ್ದರೆ ಮನಿ ಪ್ಲಾಂಟ್ ಇಡಬಹುದು. ಅಥವಾ ಆ ಕಡೆಗೆ ಬಾಲ್ಕನಿ ಇಟ್ಟಿದ್ದರೆ ಅದೂ ಓಕೆ. ಆದರೆ ಕಡೆಯಿಂದ ಮನೆಯೊಳಗೆ ಬಿಸಿಲು ಬೀಳದಿರಲಿ. ಉತ್ತರದ ಕಡೆಯಿಂದ, ಪೂರ್ವದಿಂಧ ಹೆಚ್ಚಾಗಿ ಬಿಸಿಲು ಬೀಳುವಂತೆ ಮನೆಯನ್ನು ರೂಪಿಸಿಕೊಳ್ಳಿ.

ಕೌರವನ ಪತ್ನಿ ಭಾನುಮತಿಗೂ ಕರ್ಣನಿಗೂ ಇದ್ದ ಸಂಬಂಧವೇನು?

ತುಲಾ
ಈಶಾನ್ಯ ದಿಕ್ಕಿನಲ್ಲಿ ಭಾರವಾದ ವಸ್ತುಗಳನ್ನು ಇಡಬೇಡಿ, ಫ್ರಿಡ್ಜ್, ವಾಷಿಂಗ್ ಮಶಿನ್, ಅಲ್ಮೇರಾ ಈ ಕಡೆಯಲ್ಲಿ ಇಡಬೇಡಿ. ಹೂವಿನ ಕುಂಡದಂಥ ವಸ್ತುಗಳು, ಟೀಪಾಯ್ ಓಕೆ. ಇಲ್ಲಿ ಒಂದು ಗಣೇಶನ ವಿಗ್ರಹವನ್ನಿಟ್ಟರೆ ಚೆನ್ನಾಗಿರುತ್ತದೆ. ಹಾಗೇ ಬುದ್ಧ ಮುಂತಾದ ಆಲಂಕಾರಿಕ ವಿಗ್ರಹಗಳೂ ಓಕೆ.

ವೃಶ್ಚಿಕ
ಮನೆಯೊಳಗೆ ಅಥವಾ ಗಾರ್ಡನ್‌ನಲ್ಲಿ ಮುಳ್ಳುಮುಳ್ಳಾಗಿರುವ ಪಾಪಸುಕಳ್ಳಿಯಂಥ ಗಿಡಗಳನ್ನು ನೆಡಬೇಡಿ. ಹೆಚ್ಚಾಗಿ ಹಸಿರು ಇರುವ, ಬಿಳಿ ಹೂಗಳನ್ನು ಬಿಡುವ ಗಿಡಗಳನ್ನು ಸಾಕಿಕೊಳ್ಳಿ. ಮನೆಯ ಕಿಟಕಿಗಳು ದಕ್ಷಿಣ ದಿಕ್ಕಿಗೆ ಇರದಿರಲಿ. ಪೂರ್ವ ಅಥವಾ ಉತ್ತರ ದಿಕ್ಕಗೆ ಇರಲಿ. ಮನೆಯ ಪೂರ್ವಕ್ಕೆ ರಸ್ತೆ ಇರಲಿ.

ಧನುಸ್ಸು
ಮೂರು ಮಹಡಿಯ ಮನೆ ಅಷ್ಟು ಪ್ರಶಸ್ತವಲ್ಲ. ಒಂದು ವೇಳೆ ಮೂರು ಮಹಡಿಗಳೇ ಇದ್ದರೆ, ಮನೆಯೊಳಗೆ ವಾಸ್ತುಪುರುಷನ ಒಂದು ಮಂಡಲವನ್ನು ರಚಿಸಿಕೊಂಡು, ಅದನ್ನೂ ದೇವರ ಮನೆಯಲ್ಲಿಟ್ಟು ಇತರ ದೇವರೊಂದಿಗೆ ಪೂಜಿಸಿ. ಬಲಮುರಿ ಶಂಖ ಮನೆಯಲ್ಲಿದ್ದರೆ ತುಂಬಾ ಒಳ್ಳೆಯದು.

ನಿಮಗೆ ಗೊತ್ತೇ, ಶ್ರೀಕೃಷ್ಣನ ಮೈಬಣ್ಣವೇಕೆ ನೀಲಿ?

ಮಕರ
ಮನೆಯ ಪೂರ್ವದಿಕ್ಕಿನ ಗೋಡೆಯಲ್ಲಿ ಒಂದು ಪ್ರಕೃತಿಯ ಚಿತ್ರವನ್ನು ಹಾಕಬಹುದು; ಅಥವಾ ಲಕ್ಷ್ಮಿಯ ಚಿತ್ರವನ್ನು ಹಾಕಬಹುದು. ಮನೆಯ ಹೊರಗೆ ಎತ್ತರದಲ್ಲಿ ಭೂತಪ್ಪನ ಪುತ್ಥಳಿಯನ್ನು ತೂಗುಹಾಕಿದರೆ ಕೆಟ್ಟ ದೃಷ್ಟಿ ಬೀಳುವುದು ತಪ್ಪುತ್ತದೆ. ಮನೆಯ ಮುಂದೆ ಇಳಿಯಲು ಮೂರು ಮೆಟ್ಟಿಲು ಇರಬಾರದು.

ಕುಂಭ
ಒಂದು ಫ್ಲೋರ್‌ನಿಂದ ಇನ್ನೊಂದು ಫ್ಲೋರ್‌ಗೆ ಹೋಗುವ ಮೆಟ್ಟಿಲುಗಳ ಸಂಖ್ಯೆಯಲ್ಲಿ ಬೆಸ ಸಂಖ್ಯೆ ಇರಬಾರದು. ಯಾವುದೇ ಓಪನ್ ಎಂಡೆಡ್ ಬಾಗಿಲಗಳು ಬೇಡ. ಅಂದರೆ ಬಾಗಿಲಿನ ಮುಂದೆ ಆಳವಾದ ಗುಂಡಿ, ಪ್ರಪಾತ ಇರಬಾರದು. ಮನೆಯ ಮುಂಬಾಗಿಲಿಗೆ ರಸ್ತೆ ನುಗ್ಗುವಂತೆ ಇರಬಾರದು.

ಮೀನ
ಮನೆಯ ಮುಂದೆ ತೆಂಗಿನ ಮರ ಹಾಗೂ ಅಶ್ವತ್ಥ ಮರಗಳು ಇರಬಾರದು. ಮುಂಬಾಗಿಲಿಗಿಂತ ಕನಿಷ್ಠ ಪಕ್ಷ ನೂರು ಮೀಟರ್ ದೂರದಲ್ಲಿದ್ದರೆ ಪರವಾಗಿಲ್ಲ. ಅತ್ತಿ ಮರ, ಹೊಂಗೆ, ನೇರಳೆ ಮರ ಬೆಳೆಸಬಹುದು. ಮನೆಯೊಳಗೆ ಸಮ ಸಂಖ್ಯೆಯ ದೇವರ ಫೋಟೋ ಅಥವಾ ಮೂರ್ತಿಗಳನ್ನು ಪೂಜಿಸಬೇಕು.

ವರ್ಕ್ ಫ್ರಮ್ ಹೋಂ ಇದ್ರೂ ಕೆಲಸ ಮಾಡೋ ಮನಸಿಲ್ಲ..! ವಾಸ್ತು ಸರಿ ಇದ್ಯಾ?

Follow Us:
Download App:
  • android
  • ios