Asianet Suvarna News Asianet Suvarna News

ಬೆಡ್‌ ರೂಮ್‌ ವಿನ್ಯಾಸ ಈ ವಾಸ್ತುವಿನಲ್ಲಿದ್ರೆ ಸಖತ್‌ ರೊಮ್ಯಾಂಟಿಕ್‌ ಆಗಿರ್ತೀರಿ!

ನಮ್ ಬೆಡ್‌ ರೂಮ್ ಹೇಗಿದ್ರೆ ಚೆಂದ, ಅದರ ಡಿಸೈನ್‌ ಯಾವ ರೀತಿ ಇರಬೇಕು ಅನ್ನೋದು ಹಲವರಿಗೆ ಗೊತ್ತಿಲ್ಲ. ಇಲ್ಲಿರೋ ವಾಸ್ತು ವಿವರಗಳನ್ನಿಟ್ಟು ನಿಮ್ ಬೆಡ್‌ರೂಮ್‌ ವಿನ್ಯಾಸ ಮಾಡಿದ್ರೆ ಸಖತ್‌ ರೊಮ್ಯಾಂಟಿಕ್‌ ಲೈಫು ನಿಮಮ್ದಾಗುತ್ತೆ.

 

Bedroom Vaastu should be like this for romantic mood
Author
Bengaluru, First Published Jul 12, 2021, 4:56 PM IST

ಮನೆ ಕಟ್ಟಿಸುವಾಗ ಹೆಚ್ಚಾಗಿ ವಾಸ್ತು ಶಾಸ್ತ್ರ ನೋಡಿ ಕಟ್ಟಿಸುವುದು ರೂಢಿ. ಹೀಗೆ ವಾಸ್ತು ಪ್ರಕಾರ ಮನೆ ಕಟ್ಟೋದ್ರಿಂದ ಯಾವುದೇ ಸಮಸ್ಯೆಗಳು, ಕೌಟಂಬಿಕ ಕಲಹಗಳು ಕಂಡು ಬರುವುದಿಲ್ಲಅನ್ನುವ ಬಲವಾದ ನಂಬಿಕೆ ನಮ್ಮಲ್ಲಿದೆ. ಮನೆಯ ಬೆಡ್ ರೂಂ ವಾಸ್ತು ಪ್ರಕಾರ ಇದ್ದರೆ ದಂಪತಿಗಳ ನಡುವೆ ಮಧುರ ಬಾಂಧವ್ಯ ಇರುತ್ತದೆ, ಕಲಹ, ಭಿನ್ನಾಪ್ರಾಯಗಳು ಕಡಿಮೆ ಆಗುತ್ತವೆ ಅನ್ನುವುದರ ಜೊತೆಗೆ ಅವರು ಹೆಚ್ಚೆಚ್ಚು ರೊಮ್ಯಾಂಟಿಕ್‌ ಆಗಿರ್ತಾರೆ.

ಈ ರೊಮ್ಯಾಂಟಿಸಂ ಅವರ ಬದುಕಿಗೆ ಉತ್ಸಾಹ ತುಂಬುತ್ತದೆ. ಮಾಡುವ ಕೆಲಸಗಳಲ್ಲಿ ಹೆಚ್ಚು ಆಸಕ್ತಿ ಬರುತ್ತದೆ, ಇವೆಲ್ಲವೂ ಅವರು ಜೀವನದಲ್ಲಿ ಮುಂದೆ ಬರಲು ಸಹಕಾರಿ ಆಗುತ್ತವೆ. ಈಗ ವಾಸ್ತು ಪ್ರಕಾರ ಬೆಡ್‌ರೂಮ್‌ ಯಾವ ರೀತಿ ಇದ್ರೆ ಬೆಸ್ಟು ಅನ್ನೋದನ್ನ ನೋಡೋಣ.

1. ಬೆಡ್‌ ರೂಮ್ ಚೌಕಾಕಾರವಾಗಿ ಅಥವಾ ಆಯತಾಕಾರವಾಗಿ ಇದ್ದರೆ ಪರಿಣಾಮಕಾರಿ.

ಬೆಡ್‌ರೂಮ್‌ ಈ ಚೌಕ ಅಥವಾ ಆಯತ ಆಕಾರದಲ್ಲಿ ಇದ್ದರೆ ಗಂಡ ಹೆಂಡತಿ ನಡುವೆ ಹೊಂದಾಣಿಕೆ ಚೆನ್ನಾಗಿರುತ್ತದೆ. ಅವರಲ್ಲಿ ಕಲಹ, ಭಿನ್ನಾಭಿಪ್ರಾಯಗಳು ಕಡಿಮೆಯಾಗಿ ಸಾಮರಸ್ಯ ಮೂಡುತ್ತದೆ. ಪರಸ್ಪರರಲ್ಲಿ ವಿಶ್ವಾಸ ಹೆಚ್ಚುತ್ತದೆ ಎಂದು ವಾಸ್ತುವಿನಲ್ಲಿ ಉಲ್ಲೇಖಿಸಲಾಗಿದೆ. 

2. ಬೆಡ್‌ರೂಮ್‌ ಒಳಗೆ ಬರುವಾಗ ಆಕರ್ಷಕ ಫೋಟೋ ಕಣ್ಣಿಗೆ ಬೀಳುವಂತಿರಲಿ.

ಬೆಡ್‌ರೂಮ್‌ನ ಗೋಡೆಯ ಮೇಲೆ ಚಿತ್ತಾಕರ್ಷಕವಾದ ಫೋಟೋ ಇರಬೇಕು. ಎಲ್ಲೆಂದರಲ್ಲಿ ಫೋಟೋ ಅಂಟಿಸುವುದರಲ್ಲಿ ಅರ್ಥವಿಲ್ಲ. ಆಕರ್ಷಕವಾದ ಫೋಟೋ ಬೆಡ್ ರೂಂ ಗೆ ಬರುವಾಗ ಕಣ್ಣಿಗೆ ಬೀಳುವ ಹಾಗಿರಬೇಕು. ಅದೊಂದು ಸೊಗಸಾದ ಪೇಂಟಿಂಗ್‌ ಇರಬಹುದು, ಹೂಗೊಂಚಲಿನ ಕಲಾಕೃತಿ ಆಗಿರಬಹುದು, ಇವೆಲ್ಲ ಇಷ್ಟ ಇಲ್ಲ ಅಂತಾದರೆ ಗಂಡ-ಹೆಂಡತಿಯ ಫೋಟೊ ಕೂಡ ಇಡಬಹುದು. 

3. ಬೆಡ್‌ರೂಮ್‌ನ ಬಾಗಿಲು 90 ಡಿಗ್ರಿ ಕೋನದಲ್ಲಿ ಇರಬೇಕು

ವಸ್ತು ಪ್ರಕಾರ ಬೆಡ್ ರೂಂ ನ ಬಾಗಿಲು 90ಡಿಗ್ರಿ ಕೋನದಲ್ಲಿದಲ್ಲಿರಬೇಕು. ಇಲ್ಲದಿದ್ದರೆ ಅದೃಷ್ಟ ಕಡಿಮೆಯಾಗುವದು ಎಂಬ ನಂಬಿಕೆ ಇದೆ. ದಂಪತಿಗಳು ಮಾಡಿದ ಕೆಲಸ ಯಶಸ್ವಿ ಆಗಬೇಕು ಅಂದರೆ ಅದೃಷ್ಟ ಇರಲೇಬೇಕು. ಕೆಲವೊಂದು ಕಾರಣಗಳು ಆ ಅದೃಷ್ಟಕ್ಕೆ ಧಕ್ಕೆ ಉಂಟು ಮಾಡುತ್ತವೆ. ಈ ರೀತಿ ವಾಸ್ತು ಪ್ರಕಾರ ವಿನ್ಯಾಸ ಮಾಡಿದರೆ ಅದೃಷ್ಟವೂ ನಿಮ್ಮದಾಗುತ್ತೆ.

4. ಬೆಡ್ ರೂಂ ಗೋಡೆಯ ಬಣ್ಣ ಯಾವುದಿದ್ದರೆ ಚೆಂದ

ಹಸಿರು, ನೀಲಿ ಅಥವಾ ಸ್ವಲ್ಪ ಬಿಳಿ ಬಣ್ಣ ಇರುತ್ತದೆ. ಪಿಂಕ್, ರೋಸ್, ಹಸಿರು, ಹಳದಿ ಈ ರೀತಿಯ ಬಣ್ಣ ನೋಡಲು ಆಕರ್ಷಕವಾಗಿ ಕಾಣುವುದರ ಜೊತೆಗೆ ಶಾಂತಿಯನ್ನು ತರುತ್ತದೆ. 

5. ಬೆಡ್ ರೂಂನಲ್ಲಿ ಅಕ್ವೇರಿಯಂ ಬೇಡ.

ಅವೆಷ್ಟೇ ಚೆಂದದ ಮೀನುಗಳಾಗಿರಲಿ, ಅದು ಎಷ್ಟೇ ಚೆಂದದ ಅಕ್ವೇರಿಯಂ ಆಗಿರಲಿ, ಅದನ್ನುಬೆಡ್‌ರೂಮ್ ಗೆ ತರಬೇಡಿ. ಮೀನಿನ ಅಕ್ವೇರಿಯಂ ಬೆಡ್‌ರೂಮ್‌ನೊಳಗೆ ಇಟ್ಟರೆ ವಸ್ತುಗಳ ನಷ್ಟ ಉಂಟಾಗುವುದು. ಜೊತೆಗೆ ಗಂಡ ಹೆಂಡತಿ ನಡುವಿನ ಸಾಮೀಪ್ಯಕ್ಕೆ ಧಕ್ಕೆ ಉಂಟಾಗುವುದು.

6. ಬೆಡ್ ರೂಂನಲ್ಲಿ ಕನ್ನಡಿ ಹೀಗಿರಲಿ

ಬೆಡ್‌ರೂಮ್‌ನಲ್ಲಿ ಕನ್ನಡಿ ಇಡುವುದಾದರೆ ಬೆಡ್ ಕಾಣದ ಜಾಗದಲ್ಲಿ ಇಡಬೇಕು. ರಾತ್ರಿ ಮಲಗುವ ಆ ಕನ್ನಡಿಯನ್ನು ಬಟ್ಟೆಯಿಂದ ಮುಚ್ಚಬೇಕು. ಕನ್ನಡಿಯನ್ನು ಕಾಲಿನ ದಿಕ್ಕಿನತ್ತ ಇಡಬಾರದು. ತೀರಾ ರೊಮ್ಯಾಂಟಿಕ್‌ ಫೀಲ್‌ ಇರುವವರು ಕೆಲಹೊತ್ತು ಮಂದ ಬೆಳಕಲ್ಲಿ ಕನ್ನಡಿ ತೆರೆದಿಟ್ಟು, ನಿದ್ದೆ ಮಾಡುವಾಗ ಅದಕ್ಕೆ ಬಟ್ಟೆ ಮುಚ್ಚಬಹುದು. 

7. ಟಿವಿ ಇಡುವುದು ಬೇಡ

ಗಂಡ ಹೆಂಡತಿಯ ನಡುವೆ ಸಾಮೀಪ್ಯ ಹೆಚ್ಚಬೇಕು ಅಂದರೆ ಅಲ್ಲಿ ಟಿವಿ ಇಡುವುದು ಬೇಡ.  ಒಂದುವೇಳೆ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಇಡುವುದಾದರೆ ದಕ್ಷಿಣ-ಪೂರ್ವದ ಕಡೆಗೆ ಇಡಬೇಕು.

8. ಮಂಚದ ಕೆಳಗೆ ವಸ್ತುಗಳನ್ನು ಇಡಬೇಡಿ

ಮಂಚದ ಕೆಳಗೆ ವಸ್ತುಗಳನ್ನಿಟ್ಟರೆ ಬೆಡ್‌ರೂಮ್‌ನ ಅಂದ ಕೆಡುತ್ತದೆ. ಬೆಡ್‌ನ ಅಡಿ ಭಾಗ ಸ್ವಚ್ಛವಾಗಿರಲಿ. ಬೆಡ್ ರೂಂ ಅನ್ನು ಮರದ ವಸ್ತಗಳಿಂದ ಅಲಂಕಾರ ಮಾಡುವುದು ಒಳ್ಳೆಯದು.

Follow Us:
Download App:
  • android
  • ios