Asianet Suvarna News Asianet Suvarna News

Vastu For Career: ವೃತ್ತಿಯಲ್ಲಿ ಹಿಂದೆಂದೂ ಕಂಡಿರದ ಏಳ್ಗೆ ಬೇಕಂದ್ರೆ ಈ ಟಿಪ್ಸ್ ಫಾಲೋ ಮಾಡಿ..

ಯಶಸ್ಸಿನ ಹಾದಿಯಲ್ಲಿ ಒಂದಿಲ್ಲಾ ಮತ್ತೊಂದು ಸಮಸ್ಯೆ ಎದುರಾಗುತ್ತಲೇ ಇದ್ದರೆ ಅದಕ್ಕೆ ವಾಸ್ತು ದೋಷಗಳು ಕಾರಣವಾಗಿರಬಹುದು. ವೃತ್ತಿ ಬದುಕಿನ ಯಶಸ್ಸಿಗಾಗಿ ಏನ್ ಮಾಡ್ಬೇಕು ಅಂದ್ರೆ..

Attain unprecedented success from these vastu tips skr
Author
Bangalore, First Published Jan 9, 2022, 1:28 PM IST

ಸಾಕಷ್ಟು ಪರಿಶ್ರಮ(hard work) ಹಾಕಿಯೂ ಕೆಲಸವನ್ನು ಯಾರೂ ಗುರುತಿಸುತ್ತಿಲ್ಲ, ಪ್ರಮೋಶನ್ ಸಿಗುತ್ತಿಲ್ಲ, ಸಂಬಳ ಏರಿಕೆಯೂ ಇಲ್ಲ ಎನಿಸುತ್ತಿದೆಯೇ? ಅಥವಾ ನಿಮ್ಮ ಸೀನಿಯರ್ ನಿಮ್ಮ ಏಳ್ಗೆಯನ್ನು ಸಹಿಸುತ್ತಿಲ್ಲ, ಕಾಲೆಳೆಯುತ್ತಿದ್ದಾರೆ ಎಂದು ಕಿರಿಕಿರಿಯಾಗುತ್ತಿದೆಯೇ? ನಿಮ್ಮ ತಪ್ಪಿಲ್ಲದೆಯೂ ಇವೆಲ್ಲ ಆಗುತ್ತಿವೆ ಎಂದರೆ ಜಾತಕ ದೋಷ ಕಾರಣವಿರಬಹುದು. ಅದೂ ಅಲ್ಲದಿದ್ದರೆ ವಾಸ್ತು(Vaastu)ವಿನ ದೋಷಗಳಿಂದ ಹೀಗಾಗುತ್ತಿರಬಹುದು. 

ನಮ್ಮೆಲ್ಲರಿಗೂ ಹಲವು ಕನಸುಗಳಿರುತ್ತವೆ. ಅವನ್ನು ನನಸಾಗಿಸಲು, ಯಶಸ್ಸನ್ನು ಕಾಣಲು ಸಾಕಷ್ಟು ಪ್ರಯತ್ನಗಳನ್ನು ಹಾಕಲೇಬೇಕು. ಆದರೆ, ಈ ಯಶಸ್ಸಿನ ಹಾದಿಯಲ್ಲಿ ಒಂದಿಲ್ಲಾ ಮತ್ತೊಂದು ಸಮಸ್ಯೆ ಎದುರಾಗುತ್ತಲೇ ಇದ್ದರೆ ಗುರಿ ಸಾಧನೆ ಬಗ್ಗೆ ಭರವಸೆಯೇ ಅಳಿಯಬಹುದು. ಇಂಥ ಸಂದರ್ಭದಲ್ಲಿ ಆಸರೆಯಾಗುವುದೇ ವಾಸ್ತು ಶಾಸ್ತ್ರ. ಉದ್ಯೋಗ ಸಂಬಂಧಿ ಸಮಸ್ಯೆಗಳನ್ನು ತೊಡೆದು ಹಾಕುವಲ್ಲಿ ವಾಸ್ತು ಪರಿಣಾಮಕಾರಿಯಾಗಿದೆ. 

ಕಚೇರಿಯು ವಾಸ್ತು ಪ್ರಕಾರವಿದ್ದಾಗ ಉದ್ಯಮವು ಚೆನ್ನಾಗಿ ಬೆಳವಣಿಗೆ ಕಾಣುತ್ತದೆ. ಒಂದು ವೇಳೆ ಕಚೇರಿ ವಾಸ್ತು ಪ್ರಕಾರ ಇಲ್ಲದಿದ್ದು, ಅದನ್ನು ಬದಲಿಸುವ ಸ್ವಾತಂತ್ರ್ಯ ನಿಮಗಿಲ್ಲದಿದ್ದರೆ, ನಿಮ್ಮ ಮಟ್ಟದಲ್ಲಿ ನೀವೊಂದಿಷ್ಟು ಬದಲಾವಣೆಗಳನ್ನು ತಂದುಕೊಳ್ಳಬಹುದು. ಈಗಂತೂ ವರ್ಕ್ ಫ್ರಂ ಹೋಂ ಆಯ್ಕೆ ಇರುವುದರಿಂದ ಮನೆಯ ವರ್ಕಿಂಗ್ ಸ್ಥಳದಲ್ಲಿ ಸಾಧ್ಯವಾದಷ್ಟು ಈ ಬದಲಾವಣೆಗಳಿಗೆ ಪ್ರಯತ್ನಿಸಿ. 

ಗೋಡೆ(wall)
ನೀವು ಕಲಾವಿದರಾಗಿದ್ದರೆ, ಅಥವಾ ಸಂಶೋಧಕರಾಗಿದ್ದರೆ, ವೃತ್ತಿಪರ ಬರಹಗಾರ(writer)ರಾಗಿದ್ದರೆ ನಿಮ್ಮ ಬೆನ್ನ ಹಿಂದೆ ಗೋಡೆ ಬೆಂಬಲಕ್ಕಿರಬೇಕು. ಈ ಗೋಡೆಯು ಬೆಂಬಲದ ಸೂಚಕವಾಗಿದ್ದು, ನಿಮ್ಮ ವೃತ್ತಿಯನ್ನು ಹೆಚ್ಚು ಸ್ಟೇಬಲ್ ಆಗಿಸುತ್ತದೆ. 

ಸ್ಥಳಾವಕಾಶ(spacious areas)
ನಿಮ್ಮ ಡೆಸ್ಕ್ ಎದುರು ಸ್ಥಳಾವಕಾಶ ಹೆಚ್ಚಿರಬೇಕು. ಇದರಿಂದ ಧನಾತ್ಮಕ ಎನರ್ಜಿ ಹರಿದಾಡಲು ಸಾಧ್ಯವಾಗುತ್ತದೆ. ಇದರಿಂದ ನಿಮ್ಮ ಸೃಜನಶೀಲತೆ ಹೆಚ್ಚುತ್ತದೆ. ಹೊಸ ಯೋಚನೆಗಳು ಕೆಲಸದ ಗುಣಮಟ್ಟ ಹೆಚ್ಚಿಸುತ್ತವೆ. 

Hindu Festivals: ನಾವೇಕೆ ಮಕರ ಸಂಕ್ರಾಂತಿ ಆಚರಿಸಲೇಬೇಕು ಎಂಬುದಕ್ಕೆ 5 ಕಾರಣಗಳು..

ಡೆಸ್ಕ್ ಆಕಾರ(shape)
ನೀವು ಕಾರ್ಯ ನಿರ್ವಹಿಸುವ ಡೆಸ್ಕ್ ಯಾವಾಗಲೂ ಚೌಕಾಕಾರ ಇಲ್ಲವೇ ಆಯತಾಕಾರದಲ್ಲಿಯೇ ಇರಬೇಕು. ವೃತ್ತಾಕಾರ ಇಲ್ಲವೇ ಮೊಟ್ಟೆಯ ಆಕಾರದಲ್ಲಿರುವ ಟೇಬಲ್ ಬಳಸಬೇಡಿ. ಇಂಥ ಆಕಾರಗಳು ನಿಮ್ಮ ಏಕಾಗ್ರತೆ(concentration) ಕಸಿಯುತ್ತವೆ. 

ಕಾನ್ಫರೆನ್ಸ್ ಕೋಣೆ
ಇದು ಅತಿ ಪ್ರಮುಖ ಮೀಟಿಂಗ್‌ಗಳು, ಚರ್ಚೆಗಳಾಗುವ ಸ್ಥಳ. ಹಾಗಾಗಿ, ಶಾಂತವಾಗಿರುವ ಮೂಲೆ ಬದಿಯ ಸ್ಥಳದಲ್ಲಿ ಕಾನ್ಫರೆನ್ಸ್ ಕೋಣೆ ಇರಬೇಕು. ಕಚೇರಿಯ ನೈಋತ್ಯ(south- west) ದಿಕ್ಕು ಕಾನ್ಫರೆನ್ಸ್ ರೂಂಗೆ ಪ್ರಶಸ್ತವಾಗಿರುತ್ತದೆ. 

Personality Traits: ಈ 4 ರಾಶಿಯವರು ತುಂಬಾ ಎಮೋಷನಲ್ ..!

ಹಸಿರು
ಕಚೇರಿಯ ಆಗ್ನೇಯ ಭಾಗದಲ್ಲಿ ಹಸಿರು ಗಿಡಗಳಿರಬೇಕು. ಇವು ಹಣದ ಹರಿವನ್ನು ಹೆಚ್ಚಿಸುತ್ತವೆ. ಜೊತೆಗೆ, ಬದುಕಿಗೆ ಧನಾತ್ಮಕತೆ ತಂದು ಕೊಡುತ್ತವೆ. ಸಕಾರಾತ್ಮಕ ಯೋಚನೆಗಳಿಗೆ ಕಾರಣವಾಗುತ್ತವೆ. 

ಉತ್ತರ(north) ಅಥವಾ ಪೂರ್ವ(east)
ಕೆಲಸ ಮಾಡುವಾಗ ಯಾವಾಗಲೂ ಉತ್ತರ ಇಲ್ಲವೇ ಪೂರ್ವ ದಿಕ್ಕಿಗೆ ಮುಖ ಹಾಕಬೇಕು. ಈ ದಿಕ್ಕುಗಳು ಅದೃಷ್ಟದ ದಿಕ್ಕಾಗಿದ್ದು, ಹೆಸರು, ಯಶಸ್ಸನ್ನು ತಂದುಕೊಡಬಲ್ಲವು. 

ಬಲ್ಬ್ ಕೆಳಗೆ ಕೂರದಿರಿ
ನಿಮ್ಮ ಟೇಬಲ್‌ನ ನೇರಕ್ಕೆ ಮೇಲೆ ಬಲ್ಬ್ ಇರಬಾರದು. ಇದು ಬೇಡದ ಒತ್ತಡಗಳನ್ನು ತಲೆಯ ಮೇಲೆ ತಂದು ಹಾಕುತ್ತದೆ. ಅಲ್ಲದೆ ಯೋಚನೆಗಳಿಗೆ ಬೇಕಾದ ಎನರ್ಜಿ ಹರಿದಾಡಲು ಅಡ್ಡಿ ಪಡಿಸುತ್ತದೆ. ಇದರ ಕೆಳಗೆ ಕೂರುವುದರಿಂದ ಡೆಡ್‌ಲೈನ್ ಮಿಸ್ ಮಾಡಿಕೊಳ್ಳುವ ಜೊತೆಗೆ ಕೆಲಸ ಗುಣಮಟ್ಟ ಕಳೆದುಕೊಳ್ಳುತ್ತದೆ. 

ಅಲಂಕಾರ(decor)
ಕಚೇರಿಯಲ್ಲಿ ಪರ್ವತಗಳು, ಬೆಟ್ಟಗುಡ್ಡಗಳ ಚಿತ್ರಗಳನ್ನು ಗೋಡೆಗೆ ಹಾಕುವುದು ಒಳ್ಳೆಯದು. ಇವು ಬೆಂಬಲದ ಸೂಚಕವಾಗಿವೆ. ಎತ್ತರಕ್ಕೆ ಏರುವ ಪ್ರೇರಣೆಯಾಗಲಿವೆ. ಕಚೇರಿಯಲ್ಲಿ ನಕಾರಾತ್ಮಕತೆ ತೋರುವಂಥ ಯಾವುದೇ ಚಿತ್ರಗಳನ್ನು ಹಾಕಬಾರದು. ಇದರಿಂದ ಸಹೋದ್ಯೋಗಿಗಳ ಜೊತೆ ಜಗಳ ಹೆಚ್ಚುತ್ತದೆ. ಡೆಸ್ಕ್ ಮೇಲೆ ಕ್ರಿಸ್ಟಲ್ ಬಾಲ್ ಇಟ್ಟುಕೊಂಡರೆ ಶಾಂತಿ, ಸಮೃದ್ಧಿ ಹೆಚ್ಚುತ್ತದೆ. 

ಸ್ವಚ್ಛತೆ(cleanliness)
ಎಷ್ಟೇ ಸಮಯವಿಲ್ಲವೆಂದರೂ ನಿಮ್ಮ ಕಚೇರಿ ಸ್ಥಳ ಸಂಪೂರ್ಣ ಸ್ವಚ್ಛಗೊಳಿಸುವುದನ್ನು ಮರೆಯಕೂಡದು. ಮನೆಯಲ್ಲಾದರೂ ಅಷ್ಟೇ ಕಚೇರಿಗಾಗಿ ಪ್ರತ್ಯೇಕವಾಗಿಟ್ಟುಕೊಂಡ ಸ್ಥಳ ಸ್ವಚ್ಚವಾಗಿರಬೇಕು. ಜೊತೆಗೆ, ನೀಟಾಗಿ ಜೋಡಿಸಿರಬೇಕು. ಇಲ್ಲದಿದ್ದಲ್ಲಿ ನೆಗೆಟಿವ್ ಎನರ್ಜಿ ಹೆಚ್ಚಿ ನಿಮ್ಮ ಬೆಳವಣಿಗೆ ತಗ್ಗುವುದು. 

Follow Us:
Download App:
  • android
  • ios