Feng Shui Tips: ಅದೃಷ್ಟ ಕೈ ಕೊಡುತ್ತಿದೆಯೇ? ಈ ಐದು ಮೀನುಗಳನ್ನು ಅಕ್ವೇರಿಯಂನಲ್ಲಿರಿಸಿ..
ಮೀನುಗಳನ್ನು ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಆದರೆ ಯಾವ ಮೀನು ನಿಮಗೆ ಅದೃಷ್ಟವನ್ನು ತರುತ್ತದೆ ಎಂದು ಗೊತ್ತಾ? ಮನೆಯಲ್ಲಿ ಅದೃಷ್ಟ ಹೆಚ್ಚಿಸಲು ಅಕ್ವೇರಿಯಂ ಇಡುವಾಗ ಈ ಐದು ಅದೃಷ್ಟದ ಮೀನುಗಳಿದ್ದರೆ ಒಳ್ಳೆಯದು ಎನ್ನುತ್ತದೆ ಫೆಂಗ್ ಶುಯ್.
ಚೈನೀಸ್ ವಾಸ್ತುಶಾಸ್ತ್ರ ಫೆಂಗ್ ಶುಯ್ ಪ್ರಕಾರ, 5 ರೀತಿಯ ಫಿಶ್‌ಗಳು ಮನೆಗೆ ಧನಾತ್ಮಕತೆ, ಅದೃಷ್ಟ, ಯಶಸ್ಸು, ಪ್ರೀತಿ, ಅವಕಾಶಗಳನ್ನು ಎಳೆದು ತರುತ್ತವೆ. ಅವು ಯಾವುವು ನೋಡೋಣ.
1. ಫೆಂಗ್‌ಶುಯಿ ಮೀನು(Fengshui Fish)
ಇವು ಅದೃಷ್ಟ ಮತ್ತು ಸಂಪತ್ತಿನ ಸಂಕೇತಗಳಾಗಿವೆ. ಅವು ಮನೆಯಲ್ಲಿದ್ದರೆ ಸಮೃದ್ಧಿ ಮತ್ತು ಯಶಸ್ಸನ್ನು ತರುತ್ತವೆ. ಸಾಕುಜೀವಿಯಾಗಿ ಈ ಮೀನು ನಿಮ್ಮನ್ನು ಅಪಾಯಗಳಿಂದ ಮತ್ತು ದುರದೃಷ್ಟದಿಂದ ನಿಮ್ಮನ್ನು ರಕ್ಷಿಸುತ್ತದೆ. ಫೆಂಗ್‌ಶುಯ್ ಮೀನುಗಳು ಅಕ್ವೇರಿಯಂಗಳನ್ನು ಅಲಂಕರಿಸುವುದಷ್ಟೇ ಅಲ್ಲದೆ ಅವು ನಿಮ್ಮ ಅದೃಷ್ಟ ಬದಲಾಯಿಸುತ್ತವೆ. ಅವು ತಮ್ಮ ಸಕಾರಾತ್ಮಕ ಶಕ್ತಿಗೆ ಹೆಸರುವಾಸಿಯಾಗಿವೆ.
2. ಅರೋವಾನಾ ಮೀನು(Arowana Fish)
ಈ ಮೀನು ಫೆಂಗ್‌ಶುಯಿಯಲ್ಲಿ ಅದರ ಶಕ್ತಿಗೆ ಹೆಸರುವಾಸಿಯಾಗಿದೆ. ಈ ಮೀನು ಉತ್ತಮ ಆರೋಗ್ಯ, ಸಮೃದ್ಧಿ, ಸಂತೋಷ, ಸಂಪತ್ತು ಮತ್ತು ಶಕ್ತಿಯನ್ನು ಸಂಕೇತಿಸುತ್ತದೆ. ಅರೋವಾನಾ ಮೀನುಗಳನ್ನು ಸಾಕುವುದರಿಂದ ಮನೆಯಿಂದ ದುಷ್ಟಶಕ್ತಿಗಳು ಮತ್ತು ಕೆಟ್ಟ ಶಕುನಗಳು ಹೊರಗೋಡುತ್ತವೆ. ಈ ಮೀನಿನ ಅದೃಷ್ಟದ ಮೋಡಿ ಸಂಪತ್ತಿನ ರೂಪದಲ್ಲಿ ಬರುತ್ತದೆ ಮತ್ತು ಉತ್ತಮ ಸಾಧನೆ ಮಾಡಲು ಸಾಕಷ್ಟು ಅವಕಾಶಗಳು ಲಭಿಸುತ್ತವೆ. ನಿಮ್ಮ ಅಕ್ವೇರಿಯಂನಲ್ಲಿ ಸಾಕುಪ್ರಾಣಿಯಾಗುವ ಈ ಮೀನು ನಿಮಗೆ ಅಪಾರ ಅದೃಷ್ಟ ಮತ್ತು ಆದಾಯದ ಮೂಲಗಳನ್ನು ತರುತ್ತದೆ. ಈ ಮೀನಿರುವ ಅಕ್ವೇರಿಯಂ ಇಡಲು ಉತ್ತಮ ದಿಕ್ಕೆಂದರೆ ಉತ್ತರ, ಪೂರ್ವ ಅಥವಾ ಆಗ್ನೇಯ .
ಈ ವಾರ ನಿಮ್ಮ ಭವಿಷ್ಯದಲ್ಲೇನಿದೆ? ಟ್ಯಾರೋ ಕಾರ್ಡ್ ಸೂಚಿಸೋದೇನು?
3. ಫ್ಲವರ್ ಹಾರ್ನ್ ಫಿಶ್(Flower Horn Fish)
ಇದು ಫೆಂಗ್‌ಶುಯಿಯಲ್ಲಿ ಜನಪ್ರಿಯ ಅದೃಷ್ಟದ ಮೋಡಿ ಮೀನು. ಫ್ಲವರ್ ಹಾರ್ನ್ ಫಿಶ್ ಪರಿಸರದಿಂದ ಉತ್ತಮ ಶಕ್ತಿಯನ್ನು ಮನೆಯೊಳಗೆ ಸೆಳೆಯುತ್ತದೆ ಮತ್ತು ನಿಮ್ಮ ಮನೆಯೊಳಗಿನ ನಕಾರಾತ್ಮಕತೆಯನ್ನು ಕಡಿಮೆ ಮಾಡುತ್ತದೆ. ಇದು ತನ್ನ ಮಾಲೀಕರಿಗೆ ವಿಪರೀತ ಪ್ರೀತಿ ಮತ್ತು ಅದೃಷ್ಟವನ್ನು ತರುವುದು. ಇದು ಕಪ್ಪು ಕಲೆಗಳನ್ನು ಹೊಂದಿರುವ ಅತ್ಯಂತ ವರ್ಣರಂಜಿತ ಮೀನು. ಈ ಮೀನು ಸಂಪತ್ತನ್ನು ತರಲು ಇದನ್ನು ನಿಮ್ಮ ಕೋಣೆಯ ಆಗ್ನೇಯ ಮೂಲೆಯಲ್ಲಿ ಇರಿಸಬಹುದು. ಪೂರ್ವದಲ್ಲಿ ವರ್ ಹಾರ್ನ್ ಫಿಶ್ ಇರಿಸುವುದರಿಂದ ಕುಟುಂಬದ ಯೋಗಕ್ಷೇಮ ಮತ್ತು ಸಂತೋಷದ ವಾತಾವರಣವನ್ನು ಹೆಚ್ಚಿಸುತ್ತದೆ.
4. ಡ್ರ್ಯಾಗನ್ ಕಾರ್ಪ್(Dragon Carp)
ಈ ಅದೃಷ್ಟದ ಮೀನು ಯಶಸ್ಸು, ಸಂಪತ್ತು ಮತ್ತು ಹೆಚ್ಚಿನ ಮಹತ್ವಾಕಾಂಕ್ಷೆಗಳನ್ನು ತರುತ್ತದೆ. ಗೋಲ್ಡನ್ ಕಾರ್ಪ್ ಅನ್ನು ಪೌರಾಣಿಕ ಈಜುಗಾರ ಎಂದು ಕರೆಯಲಾಗುತ್ತದೆ ಮತ್ತು ಇದು ಹೆಚ್ಚಿನ ಪ್ರವಾಹಗಳ ವಿರುದ್ಧ ಈಜುವ ಶಕ್ತಿ ಹೊಂದಿದೆ. ಅದೇ ಶಕ್ತಿಯನ್ನು ಇದು ಮಾಲೀಕನಿಗೆ ಕೊಡುತ್ತದೆ. ಈ ಮೀನು ಪರಿಶ್ರಮ, ವೃತ್ತಿ ಯಶಸ್ಸು ಮತ್ತು ಸಾಧನೆಗಳನ್ನು ಸಂಕೇತಿಸುತ್ತದೆ. ಈ ಮೀನು ವಿದ್ಯಾರ್ಥಿಗಳಿಗೆ ಅದೃಷ್ಟ ಮತ್ತು ಅವರಿಗೆ ವೃತ್ತಿ ಅವಕಾಶಗಳನ್ನು ತರುತ್ತದೆ. ವೃತ್ತಿ ಮತ್ತು ಯಶಸ್ಸಿನ ರೂಪದಲ್ಲಿ ಎಲ್ಲ ಅದೃಷ್ಟವನ್ನು ತರಲು ನಿಮ್ಮ ಅಕ್ವೇರಿಯಂನಲ್ಲಿ 9 ಕಾರ್ಪ್ ಫಿಶ್ ಇರಿಸಿ. ಇವು ಮನೆಗೆ ಧನಾತ್ಮಕ ಶಕ್ತಿ ತರುತ್ತವೆ. ಯಶಸ್ಸಿನ ಏಣಿಯನ್ನು ಏರಲು ಇವನ್ನು ಉತ್ತರದಲ್ಲಿ ಇರಿಸಿ.
Weekly Horoscope: ಮಕರಕ್ಕೆ ದುಃಖದ ಸುದ್ದಿ, ಕುಂಭಕ್ಕೆ ಶುಭ ವಾರ
5. ಗೋಲ್ಡ್ ಫಿಶ್(Gold Fish)
ಈ ಅದೃಷ್ಟದ ಮೀನನ್ನು ಧನಾತ್ಮಕತೆ ತರಲು ಅಕ್ವೇರಿಯಂನಲ್ಲಿ ಇರಿಸಲಾಗುತ್ತದೆ. ಸಾಮಾನ್ಯವಾಗಿ ಅಕ್ವೇರಿಯಂನಲ್ಲಿ 8 ಚಿನ್ನದ ಮೀನುಗಳನ್ನು ಒಂದು ಕಪ್ಪು ಮೀನಿನೊಂದಿಗೆ ಸಾಕಿದರೆ ದುರಾದೃಷ್ಟ ಹೋಗಲಾಡಿಸಲಾಗುತ್ತದೆ. ಎರಡು ಗೋಲ್ಡ್ ಫಿಶ್ ಸಾಕಿದರೆ ನಿಮ್ಮ ಸಂಬಂಧದಲ್ಲಿ ಸಾಮರಸ್ಯವನ್ನು ತರಬಹುದು. ಅಚಿನ್ನದ ಮೀನುಗಳು ಅತ್ಯಂತ ಸುಂದರವಾದ ಮತ್ತು ಆಕರ್ಷಕವಾದ ಮೀನುಗಳಲ್ಲಿ ಒಂದಾಗಿದೆ.