ಕಾರವಾರ [ಡಿ.01]: ಮಹಾರಾಷ್ಟ್ರದಲ್ಲಿ ಫಡ್ನಾವಿಸ್ ಅವರಿಗೆ ಆದ ಕಥೆಯೇ ರಾಜ್ಯದಲ್ಲಿ ಯಡಿಯೂರಪ್ಪ ಅವರಿಗೂ ಆಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ಯಲ್ಲಾಪುರದಲ್ಲಿ ಮಾತನಾಡಿದ ಬಿ.ಕೆ.ಹರಿಪ್ರಸಾದ್ ರಾಜ್ಯದಲ್ಲಿ 5ನೇ ತಾರೀಕಿನವರೆಗೆ ಮಾತ್ರವೇ ಬಿಜೆಪಿ ಸರ್ಕಾರ ಇರಲಿದೆ. ಅಲ್ಲಿಯವರೆಗೆ ಏನೇನು ಕನಸಿದೆಯೋ ಅದನ್ನು ನನಸು ಮಾಡಿಕೊಳ್ಳಲಿ ಎಂದರು.

ಇನ್ನು ಸಿದ್ದರಾಮಯ್ಯ ಅವರನ್ನು ಕಾಂಗ್ರೆಸಿನಲ್ಲಿ ಸೈಡ್ ಲೈನ್ ಮಾಡಲಾಗಿದೆ ಎನ್ನುವ ವಿಚಾರದ ಬಗ್ಗೆಯೂ ಪ್ರಸ್ತಾಪಿಸಿದ ಹರಿಪ್ರಸಾದ್, ಯಾರನ್ನೂ ಸೈಡ್ ಲೈನ್ ಮಾಡುವ, ತಲೆ ಮೇಲೆ ಕೂರಿಸಿಕೊಳ್ಳುವ ಕೆಲಸ ಕಾಂಗ್ರೆಸಿನಲ್ಲಿ ಮಾಡುವುದಿಲ್ಲ. ಪಕ್ಷ ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ ಎಂದು ಹೇಳಿದರು.

ಇನ್ನು ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಖರೀದಿ ಮಾಡಿದ್ದರು ಬಿಜೆಪಿಗೆ ಹೋದ ಶಾಸಕರು  ವಾಪಾಸ್ ಬರುವ ಸಾಧ್ಯತೆ ಇದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಅಲ್ಲದೇ ಬಿಜೆಪಿ ಶಾಸಕರನ್ನು ಪ್ರಾಣಿಗಳಂತೆ ಖರೀದಿ ಮಾಡಿ ಕರೆದುಕೊಂಡಿದ್ದಾರೆ. ಇದು ಯಾರಾದ್ರೂ ಮಾನ ಮರ್ಯಾದೆ ಇರುವವರು ಮಾಡುವ ಕೆಲಸವೇ ? ಮಾನ ಮರ್ಯಾದೆ ಇರುವವರು ಮನುಷ್ಯರನ್ನು ಖರೀದಿ ಮಾಡುವುದಿಲ್ಲ  ಎಂದು ಬಿ.ಕೆ. ಹರಿಪ್ರಸಾದ್  ಹೇಳಿದರು.

ರಾಜ್ಯದಲ್ಲಿ ಡಿಸೆಂಬರ್ 5 ರಂದು ಉಪ ಚುನಾವಣೆ ನಡೆಯಲಿದ್ದು, ಡಿಸೆಂಬರ್ 9 ರಂದು ಫಲಿತಾಂಶ ಪ್ರಕಟವಾಗಲಿದೆ.