ಕಾರವಾರ [ಅ.07]:  ಇಲ್ಲಿನ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್‌ಗೆ ಬೃಹತ್‌ ಮೀನು ಬಲೆಗೆ ಬಿದ್ದಿದೆ. 

ಅಬನಾಷಾ ಎಂದು ಕರೆಯುವ ಈ ಮೀನು ಆಳಸಮುದ್ರದಲ್ಲಿ ಹೆಚ್ಚು ಕಾಣಸಿಗುತ್ತದೆ. 

ಈ ಮೀನು 24 ಕೆಜಿಯಿದ್ದು, 1 ಮೀಟರ್‌ ಉದ್ದವಿತ್ತು. ಇಲ್ಲಿನ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ  100ರಿಂದ 120 ರು. ದರವಿದೆ. ಮಂಗಳೂರಿನ ಮಾರುಕಟ್ಟೆಯಲ್ಲಿ  200ರಿಂದ  220 ರು. ದರವಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇತ್ತೀಚೆಗಷ್ಟೇ ಕಾರವಾರದ ಕಡಲ ತೀರದಲ್ಲಿ ಉಪಯೋಗಕ್ಕೆ ಬಾರದ ಕಾರ್ಗಿಲ್ ಮೀನು ಟನ್ ಗಟ್ಟಲೇ ಪತ್ತೆಯಾಗಿತ್ತು. ಕಾರ್ಗಿಲ್ ಮೀನು ಪತ್ತೆಯು ಮೀನುಗಾರರಲ್ಲಿ ಸಾಕಷ್ಟು ಆತಂಕ ಸೃಷ್ಟಿಸಿತ್ತು.