ಉಡುಪಿ(ನ.03): ಪಠ್ಯದಿಂದ ಟಿಪ್ಪು ಸುಲ್ತಾನ್‌ ಪಾಠವನ್ನು ರದ್ದು ಮಾಡುವ ಘೋಷಣೆಯ ಮೂಲಕ ರಾಜ್ಯ ಬಿಜೆಪಿ ಸರ್ಕಾರ ರಾಷ್ಟ್ರಪತಿ ಅವರನ್ನು ಅವಮಾನ ಮಾಡಿದೆ ಎಂದು ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಆರೋಪಿಸಿದ್ದಾರೆ.

ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ರಾಜ್ಯ ವಿಧಾನಸಭೆಯಲ್ಲಿ ಭಾಷಣ ಮಾಡಿ, ಟಿಪ್ಪು ಸುಲ್ತಾನ್‌ ದೇಶಭಕ್ತ ಎಂದೆಲ್ಲ ಹೊಗಳಿದ್ದರು. ಇಂದು ರಾಜ್ಯ ಸರ್ಕಾರ ಅದೇ ಟಿಪ್ಪು ಸುಲ್ತಾನ್‌ ಕುರಿತಾದ ಪಾಠವನ್ನು ರದ್ದುಗೊಳಿಸಲು ಹೊರಟಿದ್ದಾರೆ. ಇದು ರಾಷ್ಟ್ರಪತಿಗಳಿಗೆ ಸರ್ಕಾರ ಮಾಡುತ್ತಿರುವ ಅವಮಾನ ಅಲ್ಲವೇ ಎಂದು ಸೊರಕೆ ಪ್ರಶ್ನಿಸಿದ್ದಾರೆ. ಟಿಪ್ಪು ಪಠ್ಯವನ್ನು ಕೈಬಿಡುವುದಕ್ಕೆ ಕಾಂಗ್ರೆಸ್‌ ಪಕ್ಷದ ನಿಲುವು ಏನು ಎಂಬುದರ ಬಗ್ಗೆ ಸ್ಪಷ್ಟಉತ್ತರ ನೀಡದ ಸೊರಕೆ ಕಾಂಗ್ರೆಸ್‌ ನಿಲುವಿನಲ್ಲಿ ದ್ವಂದ್ವ ಇಲ್ಲ ಎಂದಿದ್ದಾರೆ.

ರಾಜ್ಯಧ್ವಜದ ಬಗ್ಗೆ ಬಿಜೆಪಿಯ ಗೊಂದಲ:

ಹಿಂದೆ ರಾಜ್ಯದಲ್ಲಿ ಕರ್ನಾಟಕ ರಾಜ್ಯೋತ್ಸವದಂದು ಕನ್ನಡ ಧ್ವಜವನ್ನು ಹಾರಿಸುವ ಪದ್ಧತಿ ಇರಲಿಲ್ಲ. ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಾಷ್ಟ್ರೀಯ ಧ್ವಜದ ಕೆಳಗೆ ಕನ್ನಡ ಧ್ವಜವನ್ನೂ ಹಾರಿಸಬೇಕು ಎಂದು ನಿರ್ಧರಿಸಿ ಜಾರಿಗೆ ತರಲಾಗಿತ್ತು. ಆದರೆ ಈಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶುಕ್ರವಾರ ಕೆಲವು ಜಿಲ್ಲೆಗಳಲ್ಲಿ ರಾಷ್ಟ್ರಧ್ವಜದ ಜೊತೆಗೆ ರಾಜ್ಯ ಧ್ವಜವನ್ನೂ ಹಾರಿಸಲಾಗಿದೆ. ಆದರೆ ಉಡುಪಿಯಲ್ಲಿ ಗೃಹಸಚಿವರೇ ರಾಜ್ಯ ಧ್ವಜನ್ನು ಹಾರಿಸಿಲ್ಲ. ಇದು ಬಿಜೆಪಿ ಕನ್ಫೂಶನ್‌ನಲ್ಲಿದೆ ಎಂಬುದನ್ನು ತೋರಿಸುತ್ತಿದೆ ಎಂದಿದ್ದಾರೆ.

ರಾಜ್ಯದಲ್ಲಿ ಜನಸಂಖ್ಯೆ ಇಳಿಸುವ ಬದಲು ಹೆಚ್ಚಿಸಿ!.