ಉಡುಪಿ(ನ.06): ಎಚ್‌. ಡಿ. ದೇವೇಗೌಡ ಹಾಗೂ ಸಿಎಂ ಬಿ. ಎಸ್. ಯಡಿಯೂರಪ್ಪ ನಡುವೆ ಒಳಒಪ್ಪಂದ ಆಗಿದೆಯೋ ಗೊತ್ತಿಲ್ಲ. ಆದರೆ ಮಾತುಕತೆಯಂತೂ ಆಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಉಡುಪಿ ಪುರಭವನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಎಚ್. ಡಿ. ದೇವೇಗೌಡ ಹಾಗೂ ಬಿ. ಎಸ್. ಯಡಿಯೂರಪ್ಪ ಅವರು ಮಾತನಾಡಿರುವುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.

ನೀರಿನ ದರ ಏರಿಕೆ ತಡೆದಿದ್ದೆ, ಶಾಸಕರೇಕೆ ಸುಮ್ಮನಿದ್ದಾರೆ: ಖಾದರ್‌.

ದೇವೇಗೌಡರ ಮತ್ತು ಬಿಎಸ್‌ವೈ ನಡುವೆ ಏನು ಒಳ ಒಪ್ಪಂದ ಆಗಿದ್ಯೋ ಗೊತ್ತಿಲ್ಲ. ಒಳ ಒಪ್ಪಂದದ ಟರ್ಮ್ಸ್ ಆಂಡ್ ಕಂಡೀಷನ್ಸ್ ಏನಿವೆಯೋ ಗೊತ್ತಿಲ್ಲ. ಅವರಿಬ್ಬರ ನಡುವೆ ಮಾತುಕತೆ ಆಗಿ ರೋದಂತೂ ಸ್ಪಷ್ಟವಾಗಿದೆ. ಮಾತುಕತೆ ವಿಚಾರವನ್ನು ದೇವೇಗೌಡ, ಕುಮಾರಸ್ಬಾಮಿ ಇಬ್ರೂ ಒಪ್ಕೊಂಡಿದಾರೆ ಎಂದು ಹೇಳಿದ್ದಾರೆ.

'ಸಿದ್ದರಾಮಯ್ಯ ಸರ್ಕಾರ ಬೀಳಿಸ್ತಾರೆ ' ಎಂದ ಕುಮಾರಸ್ವಾಮಿ ಟ್ವೀಟ್ ವಿಚಾರವಾಗಿ ಪಪ್ರತಿಕ್ರಿಯಿಸಿ, ಟ್ವೀಟ್ ಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ನಾನೇನೂ ಸರ್ಕಾರ ಬೀಳಿಸ್ತೀನಿ ಅಂದಿಲ್ಲ. ಕುಮಾರಸ್ವಾಮಿ ತಪ್ಪಾಗಿ ಪರಿಭಾವಿಸಿದ್ದಾರೆ. ಬಿಜೆಪಿ ಸರ್ಕಾರ ಉಳಿಯಲು ಎಂಟು ಸ್ಥಾನ ಗೆಲ್ಲಬೇಕು. ಯಡಿಯೂರಪ್ಪ 8 ಸ್ಥಾನ ಗೆಲ್ಲುವಲ್ಲಿ ವಿಫಲರಾದ್ರೆ ರಾಜಿನಾಮೆ ಕೊಡ್ಬೇಕಾಗುತ್ತೆ ಎಂದಿದ್ದಾರೆ.

ಮಂಗಳೂರು: 'ಬಿಎಸ್‌ವೈ ಶಾಸಕರ ಕುದುರೆ ವ್ಯಾಪಾರದ ಸಿಇಒ'..!

ಯಡಿಯೂರಪ್ಪ ರಾಜೀನಾಮೆ ಕೊಡೋ ಸಂದರ್ಭ ಬಂದರೆ ಮಧ್ಯಾವಧಿ ಚುನಾವಣೆ ಬರಬಹುದು ಅಂದಿದ್ದೆ. ನಾನು ಮುಖ್ಯಮಂತ್ರಿ ಆಗ್ಬೇಕು ಅಂತ ಈ ಮಾತು ಹೇಳಿಲ್ಲ. ಜೆಡಿಎಸ್ ಬಿಜೆಪಿಗೆ ಬೆಂಬಲ ಕೊಡೋದಾದ್ರೆ ಕೊಡಲಿ. ಜೆಡಿಎಸ್ ಜನರ ಮುಂದೆ ಎಕ್ಸ್ ಪೋಸ್ ಆಗುತ್ತದೆ. ಅವರ ಎಷ್ಡು ಜಾತ್ಯಾತೀತ ಅಂತ ಜನರಿಗೆ ಗೊತ್ತಾಗುತ್ತೆ. ನಿಜಕ್ಕೂ ಜಾತ್ಯತೀತರಾದ್ರೆ ಬಿಜೆಪಿಯನ್ನು ಬೆಂಬಲಿಸೋದಿಲ್ಲ ಎಂದು ಸಿದ್ದರಾಮಯ್ಯ ಜೆಡಿಎಸ್‌ಗೆ ಬಿಸಿ ಮುಟ್ಟಿಸಿದ್ದಾರೆ.

4 ವರ್ಷದ ನಂತರ ತುಂಬಿದ ಜಲಾಶಯ, ನೀರಿನಲ್ಲಿ ಈಜಾಡಿದ ಕುಣಿಗಲ್ ಶಾಸಕ..