ತುಮಕೂರು(ನ.06): ಕೆರೆಗಳು, ಜಲಾಶಯಗಳು ತುಂಬಿದಾಗ ಆಯಾ ಕ್ಷೇತ್ರದ ಶಾಸಕರು, ಪ್ರಮುಖರು ಹೋಗಿ ಬಾಗಿನ ಅರ್ಪಿಸುವುದು ವಾಡಿಕೆ. ತುಮಕೂರಿನ ಕುಣಿಗಲ್‌ನಲ್ಲಿ ಮಾರ್ಕೋನಹಳ್ಳಿ ಜಲಾಶಯದ ತುಂಬಿದ ಹಿನ್ನೆಲೆಯಲ್ಲಿ ಶಾಸಕ ರಂಗನಾಥ್ ಬೆಂಬಲಿಗರೊಂದಿಗೆ ಈಜಾಡಿ ಸಂಭ್ರಮಿಸಿದ್ದಾರೆ. 

ಜಿಲ್ಲೆಯಲ್ಲಿ ಕಳೆದ ಕೆಲವು ವಾರಗಳಲ್ಲಿ ಭಾರೀ ಮಳೆಯಾದ ಪರಿಣಾಮ 4 ವರ್ಷಗಳ ನಂತರ ಮಾರ್ಕೋನಹಳ್ಳಿ ಜಲಾಶಯ ತುಂಬಿದೆ. ಈ ನಿಟ್ಟಿನಲ್ಲಿ ಕುಣೀಗಲ್ ಶಾಸಕ ಡಾ. ರಂಗನಾಥ್ ತಮ್ಮ ಬೆಂಬಲಿಗರು ಹಾಗೂ ಗ್ರಾಮಸ್ಥರೊಂದಿಗೆ ಬಂದು ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ್ದಾರೆ.

ವೇದಿಕೆಯಲ್ಲೇ ಜೆಡಿಎಸ್ ಶಾಸಕಗೆ ಬೆವರಿಳಿಸಿದ ಜನ

ನಾಲ್ಕು ವರ್ಷಗಳ ನಂತರ ಜಲಾಶಯದಲ್ಲಿ ನೀರಿನ ಮಟ್ಟ ಗರಿಷ್ಟ 88 ಅಡಿ ತಲುಪಿದ್ದು, ಸುಮಾರು 300 ಕ್ಯೂಸೆಕ್ ನೀರು ಕೋಡಿಯಾಗಿ ಹೊರಕ್ಕೆ ಬಿಡಲಾಗಿದೆ. ಜಲಾಶಯದ ಕೋಡಿ ನೀರಿನಲ್ಲಿ ಶಾಸಕ ತಮ್ಮ ಬೆಂಬಲಿಗರೊಂದಿಗೆ ಈಜಾಡಿದ್ದಾರೆ. ಸಣ್ಣ ಮಾನವ ಸಂಕೋಲೆ ರಚಿಸಿ, ನೀರಿನಲ್ಲಿ ಮುಳುಗು ಹಾಕಿ ಸಂಗಡಿಗರೊಂದಿಗೆ ಸಂಭ್ರಮಿಸಿದ್ದಾರೆ.

‘ಡಿಕೆಶಿ ವಿರುದ್ಧ ಇಡಿಗೆ ಅರ್ಜಿ ಬರೆದಿದ್ದೆ ದೇವೇಗೌಡರು’

ನವೆಂಬರ್ 06ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;