ಉಡುಪಿ: ಹಠಾತ್‌ ಮಳೆಗೆ 40 ಎಕ್ರೆ ಭತ್ತದ ಬೆಳೆ ನಾಶ

ಮಂಗಳವಾರ ಉಡುಪಿ ಭಾಗದಲ್ಲಿ ಸುರಿದ ಹಠಾತ್ ಮಳೆಯಿಂದಾಗಿ 40 ಎಕ್ರೆಯಷ್ಟು ಭತ್ತದ ಗದ್ದೆ ನಾಶವಾಗಿದೆ. ಯಾವುದೇ ಸೂಚನೆ ಇಲ್ಲದದೇ ಹಠಾತ್ ಆಗಿ ಮಳೆ ಬಂದ ಕಾರಣ ಈ ಸ್ಥತಿ ಉಂಚಾಗಿದೆ.

paddy field submerged in water as heavy rain lashes

ಉಡುಪಿ(ಅ.16): ಮಂಗಳವಾರ ಸಂಜೆ ಹಠಾತ್ತನೆ ಸುರಿದ ಮಳೆಗೆ ಉಡುಪಿ ತಾಲೂಕಿನ ಬೈರಂಪಳ್ಳಿ ಗ್ರಾಮದಲ್ಲಿ ಸುಮಾರು 40 ಎಕ್ರೆ ಪ್ರದೇಶದಲ್ಲಿ ಕಟಾವು ಮಾಡಿದ ಬತ್ತದ ಬೆಳೆ ಕೊಚ್ಚಿ ಹೋಗಿ ಲಕ್ಷಾಂತರ ರು. ನಷ್ಟವಾಗಿದೆ.

ಬೇಗ ನಾಟಿ ಮಾಡಿದ್ದ ಈ ಪ್ರದೇಶದಲ್ಲಿ ಬತ್ತ ಮಾಗಿದ್ದು, ರೈತರು ಮೂರ್ನಾಲ್ಕು ದಿನದಿಂದ ಕಟಾವು ಮಾಡಿ ಗದ್ದೆಯಲ್ಲಿ ಒಣಗಲು ಬಿಟ್ಟಿದ್ದರು. ತಗ್ಗು ಪ್ರದೇಶದ ಈ ಗದ್ದೆಗಳಲ್ಲಿ ಮಂಗಳವಾರ ಸಂಜೆ ಹಠಾತ್‌ ನೀರು ನುಗ್ಗಿ ಬತ್ತದ ಪೈರೆಲ್ಲ ಕೊಚ್ಚಿ ಹೋಗಿದೆ.

ಡಾಂಬರು ರಸ್ತೆ ಕಡಿತ:

ಹರಿಖಂಡಿಗೆ ಮತ್ತು ಪೆರ್ಡೂರು ಸಂಪರ್ಕ ರಸ್ತೆಯಲ್ಲಿ ಮೋರಿ ಕುಸಿದು, ಎರಡೂ ಗ್ರಾಮಗಳ ನಡುವೆ ವಾಹನ ಸಂಚಾರ ಸಂಪರ್ಕ ಕಡಿದು ಹೋಗಿದೆ. ಈ ರಸ್ತೆಯನ್ನು ಕಳೆದ ವರ್ಷವಷ್ಟೇ ಲೋಕೋಪಯೋಗಿ ಇಲಾಖೆಯವರು ನಿರ್ಮಿಸಿದ್ದರು. ಮೋರಿಯೊಳಗೆ ನೀರು ನುಗ್ಗಿದ್ದರಿಂದ ಮೋರಿಯ ದಂಡೆಗಳು ಕುಸಿದಿದೆ.

ಮಡಿಕೇರಿ: 17,18ರಂದು ಏಕಮುಖ ಸಂಚಾರ

ಸಿಡಿಲಿಗೆ ದನ ಬಲಿ:

ಬ್ರಹ್ಮಾವರ ಸಮೀಪದ ಕರ್ಜೆ ಗ್ರಾಮದ ಹೊಸೂರು ಎಂಬಲ್ಲಿ ದನವೊಂದು ಸಿಡಿಲಿಗೆ ಬಲಿಯಾಗಿದೆ. ಹೇಮಾವತಿ ಶೆಟ್ಟಿಎಂಬವರ ಕೊಟ್ಟಿಗೆಗೆ ಹೊಡೆದ ಸಿಡಿಲಿನ ತೀವ್ರತೆಗೆ ಒಳಗಿದ್ದ ದನ ಸ್ಥಳದಲ್ಲಿಯೇ ಮೃತಪಟ್ಟಿದೆ.

ಹೊಸೂರು ಮತ್ತು ಕುಕ್ಕೆಹಳ್ಳಿಯಲ್ಲಿ ಸುಮಾರು 5 ಮನೆಗಳಿಗೆ ಸಿಡಿಲಿನಿಂದ ಹಾನಿಯಾಗಿದ್ದು, ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

20 ಸಾವಿರ ಜನರಿಂದ ಕೈ ತೊಳೆಯುವ ದಿನ ಆಚರಣೆ..!

Latest Videos
Follow Us:
Download App:
  • android
  • ios