20 ಸಾವಿರ ಜನರಿಂದ ಕೈ ತೊಳೆಯುವ ದಿನ ಆಚರಣೆ..!

ಕಸ್ತೂರ್ಬಾ ಆಸ್ಪತ್ರೆಯು ತನ್ನ ರೋಗಿಗಳು, ಸಂದರ್ಶಕರು ಮತ್ತು ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಕೈ ತೊಳೆಯುವ ದಿನವನ್ನು ಆಚರಿಸಿತು. ಸುಮಾರು 20 ಸಾವಿರಕ್ಕೂ ಅಧಿಕ ಜನ ಕೈತೊಳೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

20 thousand people participates in Global Handwashing Day celebration

ಮಣಿಪಾಲ(ಅ.16): ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯು ತನ್ನ ರೋಗಿಗಳು, ಸಂದರ್ಶಕರು ಮತ್ತು ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಶುಲ್ಕೆ ಎಂಬ ಕಂಪನಿಯ ಸಹಯೋಗದೊಂದಿಗೆ ಮಂಗಳವಾರ ಜಾಗತಿಕ ಕೈ ತೊಳೆಯುವ ದಿನವನ್ನು ಆಚರಿಸಿತು.

ಉಡುಪಿಯ ಡಾ.ಟಿ.ಎಂ. ಪೈ ಆಸ್ಪತ್ರೆ ಮತ್ತು ಕಾರ್ಕಳದ ಡಾ.ಟಿ.ಎಂ. ಪೈ ರೋಟರಿ ಆಸ್ಪತ್ರೆಗಳು ಸಹ ಈ ಕಾರ್ಯಕ್ರಮದಲ್ಲಿ ಕೈ ಜೋಡಿಸಿದ್ದವು.

ಉಡುಪಿ ಭಾಗದಲ್ಲಿ ಗುಡುಗು, ಮಿಂಚು ಸಹಿತ ಮಳೆ

ಈ ಜನಜಾಗೃತಿ ಕಾರ್ಯಕ್ರಮವು ಬೆಳಗ್ಗೆ 5ರಿಂದ ಹೊರರೋಗಿ ವಿಭಾಗದ ಎಲ್ಲ ಪ್ರವೇಶದ್ವಾರಗಳಲ್ಲಿ ಪ್ರಾರಂಭವಾಗಿ ಸಂಜೆ 5 ಗಂಟೆಗೆ ಮುಕ್ತಾಯವಾಯಿತು. ಮಣಿಪಾಲ, ಉಡುಪಿ ಮತ್ತು ಕಾರ್ಕಳ ಮೂರೂ ಆಸ್ಪತ್ರೆಗಳಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 20,000 ಸದಸ್ಯರು ಭಾಗವಹಿಸಿದ್ದರು.

ಈ ಬೃಹತ್‌ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆ.ಎಂ.ಸಿ. ಡೀನ್‌ ಡಾ. ಶರತ್‌ ಕೆ. ರಾವ್‌ ಅವರು, 2008ರಿಂದ ಕೈ ತೊಳೆಯುವ ದಿನವನ್ನು ಜಾಗತಿಕವಾಗಿ ಆಚರಿಸಲಾಗುತ್ತಿದೆ. ಶೇ.50ರಷ್ಟುಉಸಿರಾಟದ ಕಾಯಿಲೆ ಮತ್ತು ಹೊಟ್ಟೆಯ ಸೋಂಕುಗಳು ನೈರ್ಮಲ್ಯದ ಕೊರತೆಯಿಂದ ಉಂಟಾಗುತ್ತವೆ. ಆದ್ದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಜನರಲ್ಲಿ ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುವುದು ಬಹಳ ಮುಖ್ಯ ಎಂದು ಅಭಿಪ್ರಾಯಪಟ್ಟರು.

ಗುಡುಗು, ಮಿಂಚು ಸಹಿತ ಭಾರೀ ಮಳೆ, 11 ಮೀಟರ್ ಎತ್ತರದಲ್ಲಿ ಹರಿಯುತ್ತಿದೆ ನೇತ್ರಾವತಿ

ಕೆ.ಎಂ.ಸಿ. ಸಹ ಡೀನ್‌ ಡಾ. ಅನಿಲ್‌ ಭಟ್‌, ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ, ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ. ಮುತ್ತಣ್ಣ ಮತ್ತು ಶುಲ್ಕೆ ಕಂಪನಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಆಸ್ಪತ್ರೆ ಸೋಂಕು ನಿಯಂತ್ರಣ ಸಮಿತಿಯ ಅಧ್ಯಕ್ಷರಾದ ಡಾ. ವಂದನಾ ಕೆ.ಇ. ಅವರು ಸಭೆಯನ್ನು ಸ್ವಾಗತಿಸಿ, ಕಾರ್ಯಕ್ರಮದ ಅವಲೋಕನ ನೀಡಿದರು. ಕೆ.ಎಂ.ಸಿ. ಮಣಿಪಾಲವು ಕೈ ತೊಳೆಯುವ ಬಗ್ಗೆ ಜಾಗೃತಿಗಾಗಿ 2016ರಲ್ಲಿ ಗಿನ್ನಿಸ್‌ ದಾಖಲೆ ನಿರ್ಮಿಸಿದ್ದು, ಇಂದಿನವರೆಗೂ ಅದು ದಾಖಲೆಯಾಗಿಯೇ ಇದೆ. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಕರ್ನಾಟಕದಿಂದ ಮತ್ತು ಐಎಸ್‌ಡಬ್ಲ್ಯು. ಕೌನ್ಸಿಲ್‌, ಸಿ.ಎಸ್‌.ಆರ್‌. ಹೆಲ್ತ್‌ ಇಂಪ್ಯಾಕ್ಟ್ ಪ್ರಶಸ್ತಿಗೆ ಭಾಜನವಾಗಿತ್ತು.

ಮಂಗಳೂರು: ಸಾಗರ ಕಣ್ಗಾವಲಿಗೆ ಬಂತು ‘ವರಾಹ’ ಬಲ

Latest Videos
Follow Us:
Download App:
  • android
  • ios