Asianet Suvarna News Asianet Suvarna News

ಪಟೇಲರ ಕಾರ್ಯ ಮೋದಿ ಮುಂದುವರಿಸ್ತಿದ್ದಾರೆ: ನಳಿನ್‌

ಪಟೇಲರು ಸ್ವಾತಂತ್ರ್ಯ ನಂತರ ಹರಿದು ಹಂಚಿಹೋಗಿದ್ದ ದೇಶವನ್ನು ಒಂದುಗೂಡಿಸಿದರೂ, ಕಾಶ್ಮೀರ ಇನ್ನೂ ಪೂರ್ಣವಾಗಿ ನಮ್ಮ ದೇಶದ ಭಾಗವಾಗಿಲ್ಲ. ಆದ್ದರಿಂದ ಪಟೇಲ್‌ ಅವರ ಹಾದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರವನ್ನು ದೇಶಕ್ಕೆ ಸೇರಿಸಿ ಮತ್ತೇ ದೇಶವನ್ನು ಒಂದುಗೂಡಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

 

modi continues Vallabhbhai Patels work says nalin kumar kateel
Author
Bangalore, First Published Nov 1, 2019, 11:15 AM IST

ಉಡುಪಿ(ನ.01): ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ರಾಷ್ಟ್ರ ಏಕೀಕರಣದ ಕೆಲಸವನ್ನು ಮುಂದುವರಿಸುತ್ತಿದ್ದಾರೆ. ಪಟೇಲರು ಸ್ವಾತಂತ್ರ್ಯ ನಂತರ ಹರಿದು ಹಂಚಿಹೋಗಿದ್ದ ದೇಶವನ್ನು ಒಂದುಗೂಡಿಸಿದರೂ, ಕಾಶ್ಮೀರ ಇನ್ನೂ ಪೂರ್ಣವಾಗಿ ನಮ್ಮ ದೇಶದ ಭಾಗವಾಗಿಲ್ಲ. ಆದ್ದರಿಂದ ಪಟೇಲ್‌ ಅವರ ಹಾದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರವನ್ನು ದೇಶಕ್ಕೆ ಸೇರಿಸಿ ಮತ್ತೇ ದೇಶವನ್ನು ಒಂದುಗೂಡಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಗುರುವಾರ ಇಲ್ಲಿನ ಹೆಜಮಾಡಿಯಲ್ಲಿ ಉಡುಪಿ ಜಿಲ್ಲಾ ಬಿಜೆಪಿಯಿಂದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಜನ್ಮ ದಿನಾಚರಣೆಯಂಗವಾಗಿ ನಡೆದ ಏಕತೆಗಾಗಿ ಓಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಓಟದಲ್ಲಿ ಭಾಗವಹಿಸಿ ಹೆಜಮಾಡಿ ಪೇಟೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಪಟೇಲ್‌ ಅವರ ಜನ್ಮದಿನವನ್ನು ಏಕತಾದಿನ ಎಂದು ಆಚರಿಸುವುದು ಬಹಳ ಅರ್ಥಪೂರ್ಣವಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ, ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಿಗೆ ಭಾರತರತ್ನ ನೀಡುವುದು ನಮ್ಮ ಕರ್ತವ್ಯ. ಸಾವರ್ಕರ್‌ ಅವರಿಗೆ ಭಾರತರತ್ನ ನೀಡುವುದನ್ನು ವಿರೋಧಿಸುವವರು ದೇಶದ ವಿರೋಧಿಗಳು. ಅವರ ವಿರೋಧವನ್ನು ಲೆಕ್ಕಿಸದೇ, ಸರ್ದಾರ್‌, ಸಾವರ್ಕರ್‌ ಅಂತಹ ದೇಶ ಪ್ರೇಮಿಗಳ ತ್ಯಾಗ, ಬಲಿದಾನವನ್ನು ಸ್ಮರಿಸುತ್ತಾ ಮುನ್ನಡೆಯಬೇಕು. ಇದೇ ಅವರಿಗೆ ನಾವು ಸಲ್ಲಿಸಬಹುದಾದ ಮಹಾನ್‌ ಕೃತಜ್ಞತೆ ಎಂದು ನಳಿನ್‌ ಹೇಳಿದ್ದಾರೆ.

ವಂಚಕ ಕಂಪನಿಗಳ ವಿರುದ್ಧ ತನಿಖೆ ವಿಳಂಬ, ಸರ್ಕಾರದ ಬಗ್ಗೆ ಕೋರ್ಟ್ ಗರಂ

ನಂತರ ನಳಿನ್‌ ಅವರು ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್‌ ಶೆಟ್ಟಿಪಾದೆಬೆಟ್ಟು ಅವರಿಗೆ ತ್ರಿವರ್ಣ ಧ್ವಜವನ್ನು ಹಸ್ತಾಂತರಿಸಿ ಏಕತಾ ಓಟಕ್ಕೆ ಚಾಲನೆ ನೀಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್‌ ರತ್ನಾಕರ ಹೆಗ್ಡೆ, ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್‌ ಶೆಟ್ಟಿಮಾತನಾಡಿದ್ದಾರೆ.

ಓಟದಲ್ಲಿ ಉಡುಪಿ ಶಾಸಕ ರಘುಪತಿ ಭಟ್‌, ಕಾರ್ಕಳ ಶಾಸಕ ಸುನಿಲ್‌ಕುಮಾರ್‌, ಕಾಪು ಶಾಸಕ ಲಾಲಾಜಿ ಮೆಂಡನ್‌, ಉಡುಪಿ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಉಡುಪಿ ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ್‌, ದ.ಕ. ಬಿಜೆಪಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುರೇಶ್‌ ಶೆಟ್ಟಿಗುರ್ಮೆ, ಜಿಲ್ಲಾ ಪ್ರ.ಕಾರ್ಯದರ್ಶಿಗಳಾದ ನವೀನ್‌ ಶೆಟ್ಟಿಕುತ್ಯಾರ್‌, ಕುಯಿಲಾಡಿ ಸುರೇಶ್‌ ನಾಯಕ್‌, ಜಿ.ಪಂ. ಸದಸ್ಯರಾದ ಶಿಲ್ಪಾ ಸುವರ್ಣ, ಗೀತಾಂಜಲಿ ಸುವರ್ಣ, ರೇಶ್ಮಾ ಉದಯ ಶೆಟ್ಟಿ, ಶಶಿಕಾತ್‌ ಪಡುಬಿದ್ರಿ, ಮೂಲ್ಕಿ ಮೂಡುಬಿದಿರೆ ಕ್ಷೇತ್ರಾಧ್ಯಕ್ಷ ಈಶ್ವರ್‌ ಕಟೀಲ್, ಹೆಜಮಾಡಿ ಗ್ರಾ.ಪಂ. ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್‌ ಮತ್ತಿತರರಿದ್ದರು. 

ವಾಯು​ಭಾರ ಕುಸಿ​ತ: ದಕ್ಷಿಣ ಕನ್ನಡದಲ್ಲಿ ಇಂದು ಗಾಳಿ, ಮಳೆ ಎಚ್ಚ​ರಿ​ಕೆ

Follow Us:
Download App:
  • android
  • ios