ಬೆಂಗಳೂರು(ನ.01): ಐಎಂಎ ಮಾದರಿಯಲ್ಲೇ ಹೂಡಿಕೆದಾರರಿಗೆ ವಂಚನೆ ಮಾಡಿವೆ ಎನ್ನಲಾದ ಆ್ಯಂಬಿಡೆಂಟ್, ಅಜಮೇರಾ ಗ್ರೂಪ್ಸ್ ಮತ್ತು ಇಂಜಾಸ್ ಇಂಟರ್‌ನ್ಯಾಷನಲ್ ಸೇರಿ ವಿವಿಧ ವಂಚಕ ಕಂಪನಿಗಳ ವಿರುದ್ಧದ ಪ್ರಕರಣಗಳ ತನಿಖೆ ನಿಧಾನ ಗತಿಯಲ್ಲಿ ನಡೆಯುತ್ತಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಹೂಡಿಕೆದಾರರಿಗೆ ವಂಚನೆ ಎಸಗಿರುವ ಹಲವು ಕಂಪನಿಗಳ ವಿರುದ್ಧ ಕ್ರಮ ಜರುಗಿಸಲು ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಹಾಗೂ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಪೀಠ, ಸರ್ಕಾರದ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿತು.

ಬೆಂಗಳೂರು: ಸ್ನೇಹಿತನನ್ನೇ ಬಡಿದು ಕೊಲೆ ಮಾಡಿ ಕಥೆ ಕಟ್ಟಿದ್ರು..

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಮುಚ್ಚಿದ ಲಕೋಟೆಯಲ್ಲಿ ತನಿಖಾ ಪ್ರಗತಿ ವರದಿ ಸಲ್ಲಿಸಿದರು. ಆ ವರದಿಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಪೀಠ, ಅರ್ಜಿದಾರರು ಆರೋಪಿಸಿರುವ ಕಂಪನಿಗಳ ಪೈಕಿ ಬಹುತೇಕ ಕಂಪನಿಗಳ ಆಸ್ತಿ ಜಪ್ತಿ, ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿಕೊಂಡಿಲ್ಲ. ವಿಳಂಬ ಮಾಡಿದರೆ ಕಂಪನಿಗಳು ತಮಗೆ ಸೇರಿದ ಆಸ್ತಿಯನ್ನು ಪರಭಾರೆ ಮಾಡುವ ಅಪಾಯವಿರುತ್ತದೆ ಎಂದು ಅಭಿಪ್ರಾಯಪಟ್ಟಿತು.

ವೇತನ ಗೊಂದಲ, ಪೊಲೀಸರಿಗೆ ಶೀಘ್ರ ಸಿಹಿ ಸುದ್ದಿ