ಉಡುಪಿ(ನ.01): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಕೈಗೆಟಕುವ ದರದಲ್ಲಿ ಸಾರಿಗೆ ಸೌಲಭ್ಯವನ್ನು ನೀಡುವುದಕ್ಕಾಗಿ ದೈನಂದಿನ ಪಾಸುಗಳನ್ನು ಪರಿಚಯಿಸಿದೆ. ಕುಂದಾಪುರ-ಉಡುಪಿ ಹಾಗೂ ಉಡುಪಿ- ಮಂಗಳೂರು ಮಾರ್ಗದಲ್ಲಿ ದುಂಡು ಸುತ್ತುವಳಿ ಪ್ರಯಾಣಕ್ಕೆ ಸಾರ್ವಜನಿಕರು ಈ ಸೌಲಭ್ಯದ ಲಾಭ ಪಡೆದುಕೊಳ್ಳಬಹುದಾಗಿದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.

ಈ ಪಾಸುಗಳನ್ನು ಕುಂದಾಪುರ-ಉಡುಪಿ ಹಾಗೂ ಉಡುಪಿ-ಮಂಗಳೂರು ಮಾರ್ಗಕ್ಕೆ ಪರಿಚಯಿಸಿದ್ದು, ಒಂದು ದುಂಡು ಸುತ್ತುವಳಿ (ರೌಂಡ್‌ ಟ್ರಿಪ್‌) ಪ್ರಯಾಣಕ್ಕೆ ಪಾಸಿಗೆ ಕುಂದಾಪುರ-ಉಡುಪಿ ಮಾರ್ಗಕ್ಕೆ 70 ರು. ಹಾಗೂ ಉಡುಪಿ-ಮಂಗಳೂರು ಮಾರ್ಗಕ್ಕೆ 100 ರು. ಗಳು. ಇದರಲ್ಲಿ ಮಾಸಿಕ ಪಾಸುಗಳು ಲಭ್ಯ ಇವೆ.

ವಾಯು​ಭಾರ ಕುಸಿ​ತ: ದಕ್ಷಿಣ ಕನ್ನಡದಲ್ಲಿ ಇಂದು ಗಾಳಿ, ಮಳೆ ಎಚ್ಚ​ರಿ​ಕೆ

ಈ ಪಾಸುಗಳನ್ನು ಕುಂದಾಪುರ, ಉಡುಪಿ ಹಾಗೂ ಮಂಗಳೂರು ಬಸ್‌ ನಿಲ್ದಾಣಗಳಲ್ಲಿ ಹಾಗೂ ಕುಂದಾಪುರ ಘಟಕ, ಉಡುಪಿ ಘಟಕ ಹಾಗೂ ಮಂಗಳೂರು ಘಟಕದ ಬಸ್‌ಗಳಲ್ಲಿ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕುಂದಾಪುರ ಬಸ್‌ ನಿಲ್ದಾಣ ದೂ.ಸಂಖ್ಯೆ: 08254-230915, ಮೊಬೈಲ್‌ ಸಂಖ್ಯೆ: 9663266009, ಉಡುಪಿ ಬಸ್‌ ನಿಲ್ದಾಣ ದೂ.ಸಂಖ್ಯೆ: 0820-2526243, ಮೊಬೈಲ್‌ ಸಂಖ್ಯೆ : 9663266400, ಮಂಗಳೂರು ಬಸ್‌ ನಿಲ್ದಾಣ ದೂ.ಸಂಖ್ಯೆ: 0824-2211243, ಮೊಬೈಲ್‌ ಸಂಖ್ಯೆ :7760990720 ಅನ್ನು ಸಂಪರ್ಕಿಸುವಂತೆ ಕೆಎಸ್‌ಆ​ರ್‌​ಟಿಸಿ ಕುಂದಾಪುರ ಘಟಕ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.

ಪಟೇಲರ ಕಾರ್ಯ ಮೋದಿ ಮುಂದುವರಿಸ್ತಿದ್ದಾರೆ: ನಳಿನ್‌