ಚಿಕ್ಕಮಗಳೂರು (ಆ.23): ಮಹೀಂದ್ರ ಗೂಡ್ಸ್‌ ವಾಹನದಲ್ಲಿ ಆಕ್ರಮವಾಗಿ ಐದು ದನಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಕೊಪ್ಪ ಪೊಲೀಸರು ವಶಕ್ಕೆ ಪಡೆದು, ದನಗಳನ್ನು ರಕ್ಷಿಸಿದ್ದಾರೆ.

ಮಂಗಳವಾರ ರಾತ್ರಿ ತುಳುವಿನಕೊಪ್ಪ ಗ್ರಾಪಂ ವ್ಯಾಪ್ತಿಯ ತೆಂಗಿನಮನೆಯ ನಿವಾಸಿ ಸತೀಶ್‌ ಎಂಬುವವರಿಂದ ಎರಡು ಎತ್ತು, ಎರಡು ಹಸು, ಒಂದು ಕರುವನ್ನು ಖರೀದಿ ಮಾಡಿದ ರಾಜು, ಜಯರಾಂ ಎಂಬುವವರು ಎನ್‌.ಆರ್‌. ಪುರಕ್ಕೆ ಮಹೇಂದ್ರ ವಾಹನದಲ್ಲಿ ಐದು ದನಗಳನ್ನು ಸಾಗಿಸುತ್ತಿದ್ದರು.

ಚಿಕ್ಕಮಗಳೂರು: ಅತಿವೃಷ್ಟಿ, ಕಾಫಿಗೆ ಕವಡೆ ಕಾಸಿನ ಪರಿಹಾರ

ಪೊಲೀಸರು ಕಾಚ್‌ಗಲ್‌ನ ಗಬ್ಬಾನೆ ಬಳಿ ಅಡ್ಡಗಟ್ಟಿವಾಹನ ಹಾಗೂ ಕೃತ್ಯದಲ್ಲಿ ಭಾಗಿಯಾದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ 11/1ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.