ಭಾರತದ ಮುಸ್ಲಿಮರ ಪೂರ್ವಜರು ಹಿಂದೂಗಳು: ಡಾ.ಸುಬ್ರಮಣಿಯನ್‌ ಸ್ವಾಮಿ

  • ಮೂಲ್ಕಿಯಲ್ಲಿ ಡಾ.ಸುಬ್ರಮಣಿಯನ್‌ ಸ್ವಾಮಿ ಹೇಳಿಕೆ
  • ಭಾರತದಲ್ಲಿರುವ ಮುಸ್ಲಿಮರ ಪೂರ್ವಜರು ಹಿಂದುಗಳು
  • ಡಿಎನ್‌ಎ ಪರೀಕ್ಷೆ ಮಾಡಿದಲ್ಲಿ ದಾಖಲೆ ಸಿಗಲು ಸಾಧ್ಯ
Dr. Subramanian Swamy told that Ancestors of Indian Muslims are Hindus akb

ಮೂಲ್ಕಿ: ಭಾರತದಲ್ಲಿರುವ ಮುಸ್ಲಿಮರ (Muslims) ಪೂರ್ವಜರು ಹಿಂದುಗಳಾಗಿದ್ದು, ಅವರ ಡಿಎನ್‌ಎ ಪರೀಕ್ಷೆ ಮಾಡಿದಲ್ಲಿ ದಾಖಲೆ ಸಿಗಲು ಸಾಧ್ಯವಿದೆ ಎಂದು ರಾಜ್ಯಸಭಾ ಸದಸ್ಯ(Rajya Sabha Member), ಕೇಂದ್ರ ಮಾಜಿ ಸಚಿವ, ಹಿಂದೂ ವಿರಾಟ್‌ ಹಿಂದೂಸ್ಥಾನ್‌ ಸಂಗಮದ ಅಧ್ಯಕ್ಷ ಡಾ. ಸುಬ್ರಮಣಿಯನ್‌ ಸ್ವಾಮಿ (Dr.Subramanian Swamy) ಹೇಳಿದ್ದಾರೆ. ಮಯೂರಿ ಫೌಂಡೇಶನ್‌ ಮೂಲ್ಕಿ ಸಂಸ್ಥೆಯ ಆಶ್ರಯದಲ್ಲಿ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಎದುರು ಭಾಗದಲ್ಲಿ ಶನಿವಾರ ಜರುಗಿದ ಸಾಮ್ರಾಟ್‌ ಅಶೋಕ ಚಕ್ರವರ್ತಿಯ (ಜನ್ಮ ದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಪ್ರಧಾನ ಭಾಷಣ ಮಾಡಿದರು.

ಮುಸ್ಲಿಮರ ಡಿಎನ್‌ಎ ಪರೀಕ್ಷೆ (DNA test) ಬಗ್ಗೆ ನಾನು ಸಂಸದ ಒವೈಸಿಗೆ ಸವಾಲು ಹಾಕಿದ್ದೆ, ಆದರೆ ಹೆದರಿಕೆಯಿಂದ ಒವೈಸಿ ಅದನ್ನು ಸ್ವೀಕರಿಸಲಿಲ್ಲ. ಬ್ರಿಟಿಷರು ನಮ್ಮ ಇತಿಹಾಸವನ್ನು ತಿರುಚುವ ಕಾರ್ಯ ಮಾಡಿದ್ದು, ಇವರೆಗೂ ಅದನ್ನು ಬದಲಿಸಿ ನೈಜ ಇತಿಹಾಸವನ್ನು ತಿಳಿಸುವ ಕಾರ್ಯ ನಮ್ಮ ದೇಶದಲ್ಲಿ ಆಗಿಲ್ಲ ಎಂದರು. 1650ರ ದಶಕದಲ್ಲಿ ವಿದೇಶಿಗರು ಖಾಲಿ ಹಡಗಿನಲ್ಲಿ ಬಂದು ಇಲ್ಲಿಂದ ವಸ್ತುಗಳನ್ನು ಕೊಂಡೊಯ್ಯುತ್ತಿದ್ದರು. ಇಂದು ನಾವು ವಿದೇಶದ ವಸ್ತುಗಳನ್ನು ಅವಲಂಬಿಸುವ ಸ್ಥಿತಿಗೆ ಬಂದಿದ್ದೇವೆ. ನಮ್ಮ ದೇಶದಲ್ಲಿ 12 ತಿಂಗಳು ಕೃಷಿಗೆ ಪೂರಕವಾದ ಅವಕಾಶವಿದ್ದು ಇತರ ದೇಶಗಳಲ್ಲಿ ಕೇವಲ 5 ತಿಂಗಳು ಮಾತ್ರ ಕೃಷಿ ಕಾರ್ಯ ನಡೆಸಬಹುದು ಎಂದರು.

ಸುಬ್ರಹ್ಮಣಿಯನ್ ಸ್ವಾಮಿ ಓಪನ್ ಸ್ಟೇಟ್‌ಮೆಂಟ್, ಬಿಜೆಪಿಗೆ ತಲೆನೋವು..!

ಕರ್ನಾಟಕ (Karnataka) ಮತ್ತು ತಮಿಳುನಾಡಿನ (Tamil Nadu) ನಡುವೆ ಕಾವೇರಿ ನದಿ ನೀರಿಗೆ ಸಂಬಂಧಿಸಿದಂತೆ ಹಲವಾರು ದಶಕಗಳಿಂದ ಹೋರಾಟ ನಡೆಯುತ್ತಿದ್ದು ಕಾವೇರಿ ನದಿ ನೀರಿನ ಬದಲಿಗೆ ಯಥೇಚ್ಚವಾಗಿರುವ ಸಮುದ್ರದ ನೀರಿನ ಉಪ್ಪನ್ನು ವಿಂಗಡಿಸಿ ಉಪಯೋಗಿಸಿದಲ್ಲಿ ಎರಡು ರಾಜ್ಯಗಳ ನೀರಿನ ವಿವಾದ ಕ್ಷಣಾರ್ಧದಲ್ಲಿ ಬಗೆಹರಿಯಲು ಸಾಧ್ಯವಿದೆ ಎಂದು ಇದೇ ವೇಳೆ ಸುಬ್ರಮಣಿಯನ್‌ ಸ್ವಾಮಿ ಹೇಳಿದರು.

ಮಯೂರಿ ಫೌಂಡೇಶನ್‌ ವತಿಯಿಂದ ಡಾ. ಸುಬ್ರಮಣಿಯನ್‌ ಸ್ವಾಮಿ (Dr.Subramanian Swamy) ಅವರನ್ನು ಗೌರವಿಸಲಾಯಿತು. ಶಾಸಕ ಉಮಾನಾಥ ಕೋಟ್ಯಾನ್‌ (Umanatha Kotyan), ಉದ್ಯಮಿಗಳಾದ ಮುಂಬೈನ ಸುಧೀರ್‌ ವಿ. ಶೆಟ್ಟಿ (Sudhir V Shetty), ಜಯರಾಮ್‌ ಎನ್‌. ಶೆಟ್ಟಿ(Jayaram N. Shetty), ಕೆ. ಸದಾಶಿವ ಶೆಟ್ಟಿ (K. Sadashiva Shetty), ಸಿಎ ಸದಾಶಿವ ಶೆಟ್ಟಿ, ಪರಿಸರ ಪ್ರೇಮಿ ಸಮಿತಿ ಸ್ಥಾಪಕ ಟಿ. ಜಯಕೃಷ್ಣ ಶೆಟ್ಟಿ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್‌ ದೇವಾಡಿಗ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಎನ್‌.ಎಸ್‌. ಮನೋಹರ್‌ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಮಯೂರಿ ಫೌಂಡೇಶನ್‌ನ ಟ್ರಸ್ಟಿಗಳಾದ ನವೀನ್‌ ಶೆಟ್ಟಿ, ರಾಜೇಶ್‌ ಶೆಟ್ಟಿ, ಜೀವನ್‌ ಶೆಟ್ಟಿ, ಬಬಿತಾ ಶೆಟ್ಟಿ, ದೇವಪ್ರಸಾದ್‌ ಪುನರೂರು, ಪ್ರಭೋದ್‌ ಕುಡ್ವ ಮತ್ತಿತರರು ಇದ್ದರು.

Swamy meets Didi: ಮಮತಾ ಭೇಟಿಯಾಗಿ ಮೋದಿ ಸರಕಾರವನ್ನು ತೆಗಳಿದ ಬಿಜೆಪಿ ನಾಯಕ
ಸಭಾ ಕಾರ್ಯಕ್ರಮಕ್ಕೂ ಮುನ್ನ ವಿಠಲ ನಾಯಕ್‌ ಕಲ್ಲಡ್ಕ (Vithala Nayak Kalladka)ತಂಡದಿಂದ ವಿನೂತನ ಶೈಲಿಯ ಗೀತ ಸಾಹಿತ್ಯ ಸಂಭ್ರಮ, ಸಭಾ ಕಾರ್ಯಕ್ರಮದ ಬಳಿಕ ಸಮನ್ವಯ ಡ್ಯಾನ್ಸ್‌ ಕಂಪನಿ ಮತ್ತು ಮಹಾಮಾಯಾ ಆಟ್ಸ್‌ರ್‍ ಫೌಂಡೇಶನ್‌ ಬೆಂಗಳೂರು ತಂಡದಿಂದ ವದುದೈವ ಕುಟುಂಬಕಂ ನೃತ್ಯರೂಪಕ ಪ್ರದರ್ಶನ ಜರುಗಿತು. ಮಯೂರಿ ಫೌಂಡೇಶನ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಜಯ ಕೆ. ಶೆಟ್ಟಿಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮನೋಹರ್‌ ಪ್ರಸಾದ್‌ ನಿರೂಪಿಸಿದರು.
 

Latest Videos
Follow Us:
Download App:
  • android
  • ios