Asianet Suvarna News Asianet Suvarna News

ಸುಬ್ರಹ್ಮಣಿಯನ್ ಸ್ವಾಮಿ ಓಪನ್ ಸ್ಟೇಟ್‌ಮೆಂಟ್, ಬಿಜೆಪಿಗೆ ತಲೆನೋವು..!

ದೇಶದಲ್ಲಿ ಏನೇ ಚಟುವಟಿಕೆ ನಡೆಯಲಿ ಬಿಜೆಪಿಯ ಸುಬ್ರಮಣಿಯನ್‌ ಸ್ವಾಮಿ ತಮ್ಮದೂ ಒಂದು ಅಭಿಪ್ರಾಯ ಮುಕ್ತವಾಗಿ ಹೇಳುವುದು ರೂಢಿ. 10 ಹೇಳಿಕೆ ಕೊಟ್ಟರೆ 5 ಬಿಜೆಪಿ ವಿರುದ್ಧವೇ ಇರುತ್ತವೆ. ಆದರೆ ಅವರನ್ನು ನಿಯಂತ್ರಿಸುವುದು ಹೇಗೆ ಎಂಬುದು ಬಿಜೆಪಿ ನಾಯಕರಿಗೆ ಅರ್ಥ ಆಗುತ್ತಿಲ್ಲ.

BJP MP Subrahmaniyan Swamy statement and BJP hls
Author
Bengaluru, First Published Jan 8, 2021, 11:34 AM IST

ಬೆಂಗಳೂರು (ಜ. 08): ದೇಶದಲ್ಲಿ ಏನೇ ಚಟುವಟಿಕೆ ನಡೆಯಲಿ ಬಿಜೆಪಿಯ ಸುಬ್ರಮಣಿಯನ್‌ ಸ್ವಾಮಿ ತಮ್ಮದೂ ಒಂದು ಅಭಿಪ್ರಾಯ ಮುಕ್ತವಾಗಿ ಹೇಳುವುದು ರೂಢಿ. 10 ಹೇಳಿಕೆ ಕೊಟ್ಟರೆ 5 ಬಿಜೆಪಿ ವಿರುದ್ಧವೇ ಇರುತ್ತವೆ. ಆದರೆ ಅವರನ್ನು ನಿಯಂತ್ರಿಸುವುದು ಹೇಗೆ ಎಂಬುದು ಬಿಜೆಪಿ ನಾಯಕರಿಗೆ ಅರ್ಥ ಆಗುತ್ತಿಲ್ಲ.

ಸ್ವಾಮಿ ಯಾರ ಮಾತೂ ಕೇಳುವವರಲ್ಲ. ಸದ್ಯಕ್ಕೆ ಸುಬ್ರಮಣಿಯನ್‌ ಸ್ವಾಮಿಗೆ ಕರೆದು ಬುದ್ಧಿ ಹೇಳುವವರು ಸರಸಂಘಚಾಲಕ ಮೋಹನ್‌ ಭಾಗವತ್‌ ಒಬ್ಬರೇ. ಅವರೂ ಸಹ ಪದೇ ಪದೇ ಹೇಳಲು ಆಗುವುದಿಲ್ಲ. ಸುಬ್ರಮಣಿಯನ್‌ ಸ್ವಾಮಿ ಅಪ್ರತಿಮ ಬುದ್ಧಿವಂತ ಖರೇ. ಆದರೆ ಶಿಸ್ತಿಗೆ ಒಳಪಟ್ಟು ಕೆಲಸ ಮಾಡುವುದಿಲ್ಲ. 80ರಲ್ಲೇ ಬಿಜೆಪಿ ಸ್ಥಾಪನೆ ಮಾಡುವಾಗ ಅಟಲ್ ಬಿಹಾರಿ ವಾಜಪೇಯಿ ಆಗಿನ ಸರಸಂಘ ಚಾಲಕ ಬಾಳಾ ಸಾಹೇಬ್‌ ದೇವರಸ್‌ ಬಳಿಗೆ ಹೋಗಿ, ‘ಹೊಸ ಪಕ್ಷದಲ್ಲಿ ಒಂದೋ ನಾನು ಇರಬೇಕು. ಇಲ್ಲ ಸ್ವಾಮಿ ಇರಬೇಕು’ ಎಂದು ಹೇಳಿದ್ದರಂತೆ. ಅಟಲ್ ಸಕ್ರಿಯರಾಗಿದ್ದ 2008ರವರೆಗೆ ಸುಬ್ರಮಣಿಯನ್‌ ಸ್ವಾಮಿಯನ್ನು ಬಿಜೆಪಿ ಒಳಕ್ಕೆ ಬಿಟ್ಟುಕೊಂಡಿರಲಿಲ್ಲ.

ರಸ್ತೆಯಲ್ಲಿ ರೈತ, ಇಟಲಿಯಲ್ಲಿ ರಾಹುಲ್; ಕೊಟ್ಟ ಕುದುರೆ ಏರದವ ವೀರನೂ ಅಲ್ಲ, ಶೂರನೂ ಅಲ್ಲ!

ಬಿಜೆಪಿಯಲ್ಲೇ ಅಪಸ್ವರಗಳು

ದಿಲ್ಲಿ ಗಡಿಯಲ್ಲಿ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಕೇರಳ ವಿಧಾನಸಭೆ ಅಂಗೀಕರಿಸಿದ ನಿರ್ಣಯಕ್ಕೆ ಅಲ್ಲಿನ ಅತ್ಯಂತ ಹಿರಿಯ ಬಿಜೆಪಿ ಶಾಸಕ ಓ.ರಾಜಗೋಪಾಲ ಬೆಂಬಲಿಸಿ ಆಶ್ಚರ್ಯ ಮೂಡಿಸಿದ್ದಾರೆ. ಇನ್ನೊಂದು ಕಡೆ ಹರ್ಯಾಣ ಗಡಿಯಲ್ಲಿ ಮಾಜಿ ಕೇಂದ್ರ ಸಚಿವ ಚೌಧರಿ ಬೀರೇಂದ್ರ ಸಿಂಗ್‌ ರೈತರ ಜೊತೆ ಕುಳಿತು ಪ್ರತಿಭಟನೆ ಮಾಡಿದ್ದಾರೆ. ಸರ್ಕಾರದ ಮಂತ್ರಿಗಳೇ ಕೃಷಿ ಸುಧಾರಣೆ ಆಗಲೇಬೇಕು ಎಂದು ದೊಡ್ಡ ದನಿಯಲ್ಲಿ ಕೂಗಿದರೂ ಸ್ವತಃ ಕೃಷಿ ಮಾಡುವ ಬಹಳಷ್ಟುಬಿಜೆಪಿ ನಾಯಕರಿಗೆ ಇನ್ನೂ ಇದನ್ನು ಮನವರಿಕೆ ಮಾಡಿಕೊಡಲು ಸಾಧ್ಯ ಆಗಿಲ್ಲ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ 

Follow Us:
Download App:
  • android
  • ios