ಉಡುಪಿ(ಅ.26): ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಅವರು ಕಾಂಗ್ರೆಸ್‌ ನಾಯಕ ಡಿ.ಕೆ. ಶಿವಕುಮಾರ್‌ ಅವರನ್ನು ಇಲಿಗೆ ಹೋಲಿಸಿದ್ದಾರೆ. ಶುಕ್ರವಾರ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್‌ ಜೈಲಿನಿಂದ ಹೊರಗೆ ಬಂದ ಮೇಲೆ ಅವರನ್ನು ಕಾಂಗ್ರೆಸ್‌ ದೊಡ್ಡದಾಗಿ ಬಿಂಬಿಸುತ್ತಿದೆ. ಇಲಿ ಬಂತು ಎಂದರೆ ಹುಲಿ ಬಂತು ಎಂದು ಹೇಳುತ್ತಿದೆ ಎಂದಿದ್ದಾರೆ.

ಡಿ.ಕೆ. ಶಿವಕುಮಾರ್‌ಗೆ ಇರೋ ಸರ್ಕಾರವನ್ನೇ ಉಳಿಸಿಕೊಳ್ಳಲಿಕ್ಕಾಗಿಲ್ಲ, ಎಲ್ಲೂ ಸಲ್ಲದವರು ಅವರು, ಅವರ ಬಗೆಗಿನ ಕಾಂಗ್ರೆಸ್‌ ಪ್ರಚಾರಕ್ಕೆ ಯಾವುದೇ ಮಹತ್ವ ನೀಡಬೇಕಾಗಿಲ್ಲ ಎಂದು ಅಶ್ವತ್ಥ್ ನಾರಾಯಣ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಉಡುಪಿ ಸೇರಿ 6 ಜಿಲ್ಲೆಗಳಿಗೆ ಸರ್ಕಾರಿ ಮೆಡಿಕಲ್‌ ಕಾಲೇಜು

ಡಿ.ಕೆ. ಶಿವಕುಮಾರ್‌ ಬಿಡುಗಡೆಯಿಂದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲ್ಲುವುದಕ್ಕಾಗುವುದಿಲ್ಲ. ಹಿಂದಿನ ಕಾಂಗ್ರೆಸ್‌ ಸರ್ಕಾರ ಮತ್ತು ಸಮ್ಮಿಶ್ರ ಸರ್ಕಾರಗಳ ಕಾಲದಲ್ಲಿ ನಡೆದ ಭ್ರಷ್ಟಾಚಾರದಲ್ಲಿ ರಾಜ್ಯದ ಜನತೆ ಸಾಕಷ್ಟುನರಳಿದ್ದಾರೆ. ಸಾಕಪ್ಪಾ ಈ ಸರ್ಕಾರ ಅಂತಿದ್ದಾರೆ, ಅಂತಹವರು ಪುನಃ ಗೆದ್ದು ಸರ್ಕಾರ ಕಟ್ಟಲಿಕ್ಕೆ ಸಾಧ್ಯ ಇಲ್ಲ ಎಂದವರು ವಿಶ್ಲೇಷಿಸಿದ್ದಾರೆ.

ತನ್ನನ್ನು ಒಕ್ಕಲಿಗ ಎನ್ನುವ ಕಾರಣಕ್ಕೆ ಬಿಜೆಪಿ ಟಾರ್ಗೆಟ್‌ ಮಾಡುತ್ತಿದೆ ಎಂಬ ಡಿ.ಕೆ. ಶಿವಕುಮಾರ್‌ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಅಶ್ವತ್‌್ಥ ನಾರಾಯಣ್‌, ಅವರನ್ನು ವೈಯುಕ್ತಿಕವಾಗಿ ಟಾರ್ಗೆಟ್‌ ಮಾಡಲಾಗಿಲ್ಲ, ಭ್ರಷ್ಟಾಚಾರರಹಿತ ಸಮಾಜ ಕಟ್ಟಬೇಕು ಎನ್ನುವುದು ಬಿಜೆಪಿ ಆಶಯ, ಅದ್ದರಿಂದ ಅವರ ಬಂಧನವಾಗಿದೆ. ಈಗ ಅವರು ಜಾತಿಯ ರಕ್ಷಣೆ ಪಡೆಯಲು ಪ್ರಯತ್ನಿಸುವುದು ತಪ್ಪು ಎಂದಿದ್ದಾರೆ.

ಸರ್ಕಾರ ವರ್ಗಾವಣೆ ದಂಧೆ ಬಿಟ್ಟು ಬೇರೇನೂ ಮಾಡ್ತಿಲ್ಲ: ಕೈ ಶಾಸಕ ಕಿಡಿ