ಭಯೋತ್ಪಾದನೆಯಲ್ಲಿ ಭಾಗಿಯಾಗದಂತೆ ಮೌಲ್ವಿಗಳು ಬುದ್ಧಿ ಹೇಳಬೇಕು: ಕಾಣಿಯೂರುಶ್ರೀ

ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟಕ್ಕೆ ಕಾರಣವಾದ ಶಾರಿಕ್ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಉಡುಪಿ ಕೃಷ್ಣಮಠದ ಪರಿಸರದಲ್ಲಿ ಓಡಾಡಿದ್ದ ಅನ್ನುವ ವಿಚಾರ ಇದೀಗ ಅಷ್ಟ ಮಠಾಧೀಶರನ್ನು ತಲ್ಲಣ ಗೊಳಿಸಿದೆ. ರಾಜ್ಯದಲ್ಲಿ ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗದಂತೆ ಮುಸ್ಲಿಂ ಯುವಕರಿಗೆ ಮೌಲ್ವಿಗಳು ಮತ್ತು ಜಮಾತ್‌ ನಾವರು ಬುದ್ಧಿ ಹೇಳಬೇಕು ಎಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಆಗ್ರಹಿಸಿದ್ದಾರೆ.

Clerics should advise not to get involved in terrorism Kaniyooru Shri

ಉಡುಪಿ (ನ.28) : ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟಕ್ಕೆ ಕಾರಣವಾದ ಶಾರಿಕ್ ಉಡುಪಿಗೂ ಬಂದಿದ್ದ. ಅದರಲ್ಲೂ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೃಷ್ಣಮಠದ ಪರಿಸರದಲ್ಲಿ ಓಡಾಡಿದ್ದ ಅನ್ನುವ ವಿಚಾರ ಇದೀಗ ಅಷ್ಟ ಮಠಾಧೀಶರನ್ನು ತಲ್ಲಣ ಗೊಳಿಸಿದೆ. ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗದಂತೆ ಮುಸ್ಲಿಂ ಯುವಕರಿಗೆ ಮೌಲ್ವಿಗಳು ಮತ್ತು ಜಮಾತ್‌ ನಾವರು ಬುದ್ಧಿ ಹೇಳಬೇಕು ಎಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಕಾಣಿಯೂರು ಮಠದ ಶ್ರೀಪಾದರು, ಮಂಗಳೂರು ಸ್ಫೋಟದ ರೂವಾರಿ ಉಡುಪಿಗೆ ಬಂದಿದ್ದ ಎಂಬುದು ಆತಂಕಕಾರಿ ವಿಚಾರವಾಗಿದೆ. ರಥ ಬೀದಿಗೆ ಬಂದು ಓಡಾಡಿದ್ದ ಎಂಬ ವಿಚಾರ ತಿಳಿದು ಬಹಳ ಆತಂಕವಾಯಿತು. ಈ ವಿಚಾರ ತಿಳಿದು ಬಹಳ ಗೊಂದಲಕ್ಕೀಡಾಗಿದ್ದೇವೆ. ಧಾರ್ಮಿಕ ಕ್ಷೇತ್ರಗಳು ಅಷ್ಟಮಠ ಕೃಷ್ಣ ಮಠ ಎಲ್ಲವೂ ರಥಬೀದಿಯಲ್ಲಿದೆ. ಹಿಂದೂಗಳು ಸರ್ವೇ ಜನ ಸುಖಿನೋ ಭವಂತು ಅಂತ ಹೇಳುವ  ಸಮಾಜ. ಯಾರಿಗೂ ಉಪದ್ರವ ಕೊಡಲು ನಾವು ಇಚ್ಛೆ ಪಡುವುದಿಲ್ಲ. ರಾಜ್ಯದಲ್ಲಿ ಹಿಂದೂ ಸಮಾಜವನ್ನು ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿರುವುದು ದುರದೃಷ್ಟಕರ ಎಂದಿದ್ದಾರೆ.

ಮಂಗಳೂರು ಬಾಂಬ್‌ ಸ್ಫೋಟ: ಲಷ್ಕರ್‌ ಸಂಪರ್ಕಿಸಿ ಎಕೆ47 ತರಿಸಲು ಶಾರೀಕ್‌ ಯತ್ನ..!

ಭಯೋತ್ಪಾದನೆ ತಡೆಗೆ ಎಲ್ಲ ಸಮಾಜ ಒಗ್ಗೂಡಿ: ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆ ಹೆಮ್ಮೆಟಿಸಲು ಎಲ್ಲ ಸಮಾಜಗಳು ಒಗ್ಗೂಡಬೇಕು. ಕೃಷ್ಣಮಠದ ಎರಡು ದ್ವಾರಗಳಲ್ಲಿ ಸ್ಕ್ಯಾನಿಂಗ್ ಮಷೀನ್ ಅಳವಡಿಸಲಾಗಿದೆ. ಆಧುನಿಕ ತಂತ್ರಜ್ಞಾನಗಳು ಇದ್ದರೆ ಆ ಬಗ್ಗೆ ನಮಗೆ ಹೆಚ್ಚಿನ ಮಾಹಿತಿಗಳು ಇಲ್ಲ. ಭಕ್ತರ ಸೋಗಿನಲ್ಲಿ ಬೇರೆ ಬೇರೆ ವೇಷದಲ್ಲಿ ಬರುವವರಿದ್ದಾರೆ. ಮಂಗಳೂರು ಸ್ಫೋಟದ ರೂವಾರಿ ಕೇಸರಿ ವಸ್ತ್ರವನ್ನು ಹಾಕಿಕೊಂಡಿದ್ದನು.  ಇನ್ನು ಅವರ ಆಧಾರ್ ಕಾರ್ಡ್ ನಲ್ಲಿ ಹಿಂದೂ ಹೆಸರಿತ್ತು. ದುಷ್ಕರ್ಮಿಗಳು ಧಾರ್ಮಿಕ ಸ್ಥಳಕ್ಕೆ ಬರುವ ಮೊದಲೇ ಅವರನ್ನು ತಡೆಯುವ ವ್ಯವಸ್ಥೆ ಪೊಲೀಸ್ ಇಲಾಖೆ ಮಾಡಬೇಕು ಎಂದರು. 

ಸಾತ್ವಿಕ ಮುಸ್ಲಿಂರು ಖಂಡಿಸಬೇಕು: ದೇಶದ ರಾಜ್ಯದ ಇಂಟೆಲಿಜೆನ್ಸ್ ಪೊಲೀಸರು ದುಷ್ಕೃತ್ಯವನ್ನು ಮೊದಲೇ ತಡೆಹಿಡಿಯಬೇಕು. ವಿದ್ವಂಸಕ ಕೃತ್ಯ ಮಾಡುವವರ ಮಾಹಿತಿ ಪೊಲೀಸರ ಬಳಿ ಇರುತ್ತದೆ. ನಮ್ಮ ದೇಶ , ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯಬಾರದು. ಗುಪ್ತಚರ ಪೊಲೀಸರಿಗೆ ಸರ್ಕಾರ ಹೆಚ್ಚಿನ ಶಕ್ತಿ ಕೊಡಬೇಕು ಎಂದಿದ್ದಾರೆ. ಧರ್ಮದ ಮತಾಂದತೆಯೇ ಈ ದುಷ್ಕೃತ್ಯಕ್ಕೆ ಕಾರಣ. ನಿಜವಾದ ದೇಶಪ್ರೇಮ ಇದ್ದವರು ಇಂಥದ್ದನ್ನೆಲ್ಲ ಮಾಡೋದಿಲ್ಲ. ನಮ್ಮವರು ನಮ್ಮ ದೇಶ ಎಂಬ ಭಾವನೆ ಇದ್ದರೆ ಇಂತಹ ದುಷ್ಕೃತ್ಯ ಮಾಡೋದಿಲ್ಲ. ನಮ್ಮ ಮತವೇ ಶ್ರೇಷ್ಠ ಎಂಬ ಭಾವನೆ ಬಂದಾಗ ಇಂತಹ ಚಟುವಟಿಕೆಗಳು ನಡೆಯುತ್ತದೆ. ಸಾತ್ವಿಕ ಮುಸ್ಲಿಮರು ಇಂತಹ ಕೃತ್ಯಗಳನ್ನು ಖಂಡಿಸಬೇಕು. ಮತಾಂಧ ಗುಂಪಿನ ಬಗ್ಗೆ ಎಚ್ಚರಕೆಯಿಂದಿರಬೇಕು. ದುಷ್ಟೃತ್ಯ ಮಾಡುವವರ ಧರ್ಮದಿಂದ ಹೊರಗೆ ಹಾಕಬೇಕು ಎಂದರು.

ಮುಂಬೈ ದಾಳಿ ಕರಾಳ ದಿನದಂದು ಸ್ಫೋಟಕ್ಕೆ ಸಂಚು?

ಮೌಲ್ವಿಗಳು ಶಿಕ್ಷೆ ಜಾರಿಗೊಳಿಸಬೇಕು: ಮುಸ್ಲಿಂ ಸಮುದಾಯದ ಯುವಕರು ರಾಜ್ಯದಲ್ಲಿ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗುವುದನ್ನು ನಿಯಂತ್ರಣ ಆಗುವಂತೆ ಮೌಲ್ವಿ ಮತ್ತು ಜಮಾತ್‌ನವರು ಪರಿಸ್ಥಿತಿಯನ್ನು ಸುಧಾರಿಸಿಕೊಂಡು ಹೋಗಬೇಕು. ತಪ್ಪು ಮಾಡಿದವರಿಗೆ ಬುದ್ಧಿ ಹೇಳುವುದು ಹಾಗೂ ಶಿಕ್ಷೆ ನೀಡಬೇಕು. ಒಬ್ಬ ವ್ಯಕ್ತಿ ಮಾಡುವ ಕೆಟ್ಟ ಕೆಲಸದಿಂದ ಇಡೀ ಮುಸಲ್ಮಾನ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತದೆ. ಉಗ್ರಗಾಮಿ ಚಟುವಟಿಕೆ ಮಾಡುವವರನ್ನು ಮೌಲ್ಯಗಳು ಜಮಾತ್ ನವರು ಶಿಕ್ಷಿಸಬೇಕು ಎಂದರು.

ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಜನರ ರಕ್ತದಲ್ಲೇ ಹಿಂದುತ್ವ ಇದೆ. ಹಿಂದೂ ಧರ್ಮದ ಶ್ರದ್ದೆ ಆಸಕ್ತಿ ಜನರಲ್ಲಿ ಮೈಗೂಡಿಕೊಂಡು ಬಿಟ್ಟಿದೆ. ಕರಾವಳಿಯ ಜನ ಅನ್ಯಮತೀಯರರನ್ನು ಕೇವಲವಾಗಿ ಪರಿಗಣಿಸುವುದಿಲ್ಲ. ಹಿಂದೂ ಧರ್ಮಕ್ಕೆ ಅಪಮಾನ ಆದರೆ ಮೊದಲು ನಾವು ಅದನ್ನು ವಿರೋಧಿಸುತ್ತೇವೆ. ಹಿಂದೂ ಧರ್ಮದ ಬಗ್ಗೆ ಇರುವ ಶ್ರದ್ದೆಯನ್ನ ಅವರಿಗೆ ಸಹಿಸಲು ಆಗುತ್ತಿಲ್ಲ. ಹಿಂದೂ ಧರ್ಮದ ಚಟುವಟಿಕೆಗಳು ಹೆಚ್ಚೆಚ್ಚು ಇರುವಲ್ಲಿ ಆ ಪ್ರದೇಶವನ್ನು ದುಷ್ಕೃತ್ಯ ಎಸಗಲು ಟಾರ್ಗೆಟ್ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಉಗ್ರರ ಮೂಲ ಟಾರ್ಗೆಟ್ ಎಂದು ನಾನು ಭಾವಿಸಿದ್ದೇನೆ ಎಂದರು.

Latest Videos
Follow Us:
Download App:
  • android
  • ios