ಉಡುಪಿ(ನ.06): ಸಿದ್ದರಾಮಯ್ಯ ಅಂದ್ರೆ ಬಿಜೆಪಿಗೆ ಭಯ. ನಾನು ಸಿಎಂ ಆಗ್ತೀನಿ ಎಂದು ಬಿಜೆಪಿ ಭಯ ಪಡ್ತಿಲ್ಲ. ನಾನೇ ಬಿಜೆಪಿಯನ್ನು ಸೋಲಿಸುತ್ತೇನೆ ಎಂದು ಭಯಪಟ್ಟಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು ತಮ್ಮನ್ನು ಬಿಜೆಪಿ ಟಾರ್ಗೆಟ್ ಮಾಡ್ತಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಉಡುಪಿಯ ಪುರಭವನದಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ ಅವರು ಈ ಬಗ್ಗೆ ಮಾತನಾಡಿದ್ದಾರೆ. ನಾನು ಎಂದರೆ ಬಿಜೆಪಿಗೆ ಭಯ. ಸಿದ್ದರಾಮಯ್ಯನೇ ಬಿಜೆಪಿಯನ್ನು ಸೋಲಿಸೋದು ಅಂತ ಭಯಪಟ್ಟಿದ್ದಾರೆ. ನಾನು ಸಿಎಂ ಆಗ್ತೀನಿ ಅಂತ ಭಯ ಅಲ್ಲ. ಬಿಜೆಪಿಯನ್ನು ಸೋಲಿಸುತ್ತೇನೆ ಎಂಬುದೇ ಭಯ. ಅದಕ್ಕೆ ಪದೇ ಪದೇ ನನ್ನನ್ನು ಟಾರ್ಗೆಟ್ ಮಾಡ್ತಾರೆ ಎಂದಿದ್ದಾರೆ.

ಎಚ್‌ಡಿಡಿ - ಬಿಎಸ್‌ವೈ ಒಪ್ಪಂದ ಆಗಿದ್ಯೋ ಗೊತ್ತಿಲ್ಲ, ಮಾತುಕತೆಯಾಗಿದೆ ಎಂದ್ರು ಸಿದ್ದು

ಯಡಿಯೂರಪ್ಪ ಆಡಿಯೋ ಸುಪ್ರೀಂ ಅಂಗಳದಲ್ಲಿ ಇರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಆಡಿಯೋವನ್ನು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಪ್ರತ್ಯೇಕ ವಿಚಾರಣೆ ಬೇಡ, ತೀರ್ಪಿನ ವೇಳೆ ಪರಿಗಣಿಸುವುದಾಗಿ ಸ್ಪಷ್ಟಪಡಿಸಿದೆ. ಸುಪ್ರೀಂ ಕೋರ್ಟ್ ನಲ್ಲಿ ಕಾಂಗ್ರೇಸ್ ವಾದಕ್ಕೆ ಹಿನ್ನಡೆಯಾಗಿಲ್ಲ. ಪ್ರತ್ಯೇಕ ವಿಚಾರಣೆಗೆ ಕೋರಿದ್ದೆವು, ಕೋರ್ಟ್ ಒಪ್ಪಿದೆ. ಹಾಗಾಗಿ ಹಿನ್ನಡೆ ಹೇಗಾಗುತ್ತೆ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಸುಧಾಕರ ಹೇಳಿದ್ದು ಸತ್ಯ, ಇಟ್ಸ್ ಎ ಫ್ಯಾಕ್ಟ್
ನಮ್ಮನ್ನು ಅನರ್ಹಗೊಳಿಸಿದ್ದೇ ಸಿದ್ದರಾಮಯ್ಯ ಎಂದು ಅನರ್ಹ ಶಾಸಕ ಡಾ.ಸುಧಾಕರ್ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಸ್ಪೀಕರ್ ಗೆ ನಾನು ಮತ್ತು ದಿನೇಶ್ ಗುಂಡೂರಾವ್ ಅವರೇ ದೂರು ನೀಡಿದ್ದೆವು. ಪಕ್ಷಾಂತರ ಮಾಡಿದ್ದಕ್ಕೆ ಅನರ್ಹ ಮಾಡಲು ಸೂಚಿಸಿದ್ದೆವು ಎಂದಿದ್ದಾರೆ.

ಚಿಕ್ಕಮಗಳೂರು : ಭಾರೀ ಗಾತ್ರದ ಹೆಬ್ಬಾವು ಪತ್ತೆ