Hitler Kalyana: ಕಣ್ಣೀರಿಡುತ್ತಿರುವ ಏಜೆಗೆ ಆಸರೆ ಆಗ್ತಾಳಾ ಯಡವಟ್ಟು ಲೀಲಾ?
ಹಿಟ್ಲರ್ ಕಲ್ಯಾಣ ಸೀರಿಯಲ್‌ನಲ್ಲಿ ಏಜೆ ಮತ್ತು ಲೀಲಾ ಡಿವೋರ್ಸ್ ಸುದ್ದಿಯೇ ಎಲ್ಲ ಕಡೆ ಹರಿದಾಡ್ತಾ ಇದೆ. ಲೀಲಾಳ ಮುಗ್ಧತೆಯನ್ನು ಯಾರೂ ಅರ್ಥ ಮಾಡ್ಕೊಳ್ತಾ ಇಲ್ಲ. ಹಣದಾಸೆಗೆ ಅವಳಮ್ಮ ಮಾಡಿದ ತಂತ್ರಕ್ಕೆ ಲೀಲಾನೇ ಬಲಿಯಾಗ್ತಿದ್ದಾಳೆ. ಏಜೆ ಈ ಬೆಳವಣಿಗೆಗಳಿಂದ ನೊಂದಿದ್ದಾನೆ. ಆತನಿಗೆ ಲೀಲಾ ಆಸರೆ ಆಗ್ತಾಳಾ?
ಹಿಟ್ಲರ್ ಕಲ್ಯಾಣ ಸೀರಿಯಲ್(Hitler Kalyana Serial)ನಲ್ಲಿ ಎಮೋಶನಲ್ ಡ್ರಾಮಾ(Emotional Drama) ನಡೀತಿದೆ. ಒಂದು ಕಡೆ ಲೀಲಾಳ ಅಮ್ಮನೇ ದುರಾಸೆಯಿಂದ ಏಜೆ(AJ) ಮತ್ತು ಲೀಲಾ(Leela)ಳನ್ನು ಬೇರೆ ಮಾಡೋದಕ್ಕೆ ಪ್ಲ್ಯಾನ್(Plan) ಮಾಡುತ್ತಿದ್ದಾಳೆ. ಅವಳೇ ಡಿವೋರ್ಸ್ ನೋಟೀಸನ್ನು ಏಜೆ ಮನೆಗೆ ಕಳಿಸಿದ್ದಾಳೆ. ಇದು ಮನೆಯವರೆಲ್ಲರ ಗಮನಕ್ಕೂ ಬಂದಿದೆ. ಮನೆಯ ಮೂವರು ಸೊಸೆಯಂದಿರು ಈ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಈ ಡಿವೋರ್ಸ್(Divorce) ಪತ್ರದ ವಿಚಾರ ಲೀಲಾಳ ಕಿವಿಗೆ ಬೀಳುವ ಮೊದಲೇ ಊರವರಿಗೆಲ್ಲ ಗೊತ್ತಾಗಿದೆ. ಅವಳೇ ಈ ಡಿವೋರ್ಸ್ ಲೆಟರ್ ಕಳಿಸಿದ್ದಾಳೆ, ಅವಳಿಗೂ ಅವಳ ಫ್ರೆಂಡ್ (Friend) ಕೃಷ್ಣನಿಗೂ ಮಧ್ಯೆ ಪ್ರೀತಿ ಇದೆ, ತನಗೆ ಡಿವೋರ್ಸ್ ಕೊಟ್ಟು ಅವರಿಬ್ಬರು ಮದುವೆಯಾಗುತ್ತಾರೆ ಎಂದು ಏಜೆ ಮನಸ್ಸು ವಿಲಿ ವಿಲಿ ಒದ್ದಾಡುತ್ತಿತ್ತು. ವಿಧಿಯಾಟವೇ ಹೀಗೆಯೋ ಏನೋ, ಲೀಲಾಳೇ ಹೇಳಿದಂತೆ ನಮ್ಮ ಸಮಯ ಸರಿ ಇಲ್ಲದಿದ್ದರೆ ಗಡಿಯಾರದ ಮುಳ್ಳೇ ಚುಚ್ಚುವ ಸಾಧ್ಯತೆಯೂ ಇರುತ್ತದೆ. ಸದ್ಯಕ್ಕೀಗ ಲೀಲಾ ಮತ್ತು ಏಜೆಯ ಟೈಮ್ ಒಂಥರ ಸರಿ ಇಲ್ಲ. ಇಬ್ಬರೊಳಗೂ ಪರಸ್ಪರರ ಬಗ್ಗೆ ನವಿರಾದ ಭಾವ ಹುಟ್ಟಿಕೊಂಡಿದ್ದರೂ ಅದು ಬೆಳೆಯಲು ಸಾಧ್ಯವಾಗದ ವಾತಾವರಣ ಸೃಷ್ಟಿಯಾಗುತ್ತಿದೆ.
Kannadathi : ಹರ್ಷ ಭುವಿಯ ಮದುವೆ ಆಗುತ್ತಾ ಇಲ್ವಾ, ದಿ ನೇಶನ್ ವಾಂಟ್ಸ್ ಟು ನೋ!
ಆದರೆ ಇದೀಗ ಆ ಕಾರ್ಮೋಡಗಳೆಲ್ಲ ಕರಗಿ ಅವರಿಬ್ಬರ ಮನಸ್ಸು ತಿಳಿಯಾಗುತ್ತಿದೆ.
ಏಜೆ ಅಮ್ಮ ಮಗ ಸೊಸೆಯ ಸಂಸಾರ ಚೆನ್ನಾಗಾಗಲಿ ಅಂತ ಪೂಜೆ ಮಾಡಿಸಿದ್ದಾರೆ. ಪೂಜೆ ಎಲ್ಲ ಸಾಂಗವಾಗಿ ನೆರವೇರಿದೆಯಾದರೂ ಕೊನೆಯಲ್ಲಿ ಎಲ್ಲರ ಆಶೀರ್ವಾದ ಪಡೆಯುವಾಗ ಒಬ್ಬಾಕೆ ಲೀಲಾಳ ಬಳಿ ಏನು ಅಂತ ಆಶೀರ್ವಾದ ಮಾಡಲಿ ಅಂತ ಕೇಳ್ತಾಳೆ, ಆಕೆಯ ಈ ಪ್ರಶ್ನೆ ಲೀಲಾಳನ್ನು ತಬ್ಬಿಬ್ಬು ಮಾಡುತ್ತದೆ. 'ನೀನು, ಏಜೆ ದೂರ ಆಗ್ತಿದ್ದೀರಂತಲ್ವಾ, ಏನು ಅಂತ ಆಶೀರ್ವಾದ ಮಾಡಲಿ' ಅಂತ ಆ ಹೆಂಗಸು ಹೇಳಿದಾಗ ಲೀಲಾ ಅವಳನ್ನು ದಬಾಯಿಸುತ್ತಾಳೆ. ಆಗ ಆಕೆ, 'ನೀನು ಏಜೆಯಿಂದ ದೂರ ಆಗ್ತಿರುವ ವಿಚಾರ ಎಲ್ಲರಿಗೂ ಗೊತ್ತಾಗಿದೆ' ಅಂತಾಳೆ. ಇದನ್ನ ಕೇಳಿ ಲೀಲಾಗೆ ಶಾಕ್(Shock) ಆಗುತ್ತೆ. ಈ ಬಗ್ಗೆ ಏಜೆ ಅಮ್ಮ ಅಜ್ಜಿಗೆ ವಿವರಿಸಲು ಹೋದರೆ ಅವರು ಅವಳ ಮಾತನ್ನು ನಂಬುವ ಸ್ಥಿತಿಯಲ್ಲಿಲ್ಲ.
ಲೀಲಾ ಏಜೆಯನ್ನು ಕರೆದುಕೊಂಡು ಬಂದು ಎಲ್ಲರೆದುರಿಗೆ, 'ನಾನು ನೀವು ಬೇರೆ ಆಗ್ತೀವಂತೆ. ಇವರೆಲ್ಲ ಏನೇನೋ ಹೇಳ್ತಿದ್ದಾರೆ. ನೀವಾದರೂ ನಿಜ ಹೇಳಿ, ಇದೆಲ್ಲ ಸುಳ್ಳು ಅಂತ' ಎಂದಾಗ ಏಜೆ ಸಿಟ್ಟಾಗಿ ಡಿವೋರ್ಸ್ ಪೇಪರ್ ತೋರಿಸುತ್ತಾನೆ. ಇದನ್ನು ನೋಡಿದಾಗ ಲೀಲಾಗೆ ಫುಲ್ ಶಾಕ್.
ವಂಶಿಕಾ ನಟನೆ ಮಾನಸಿಕ ಬೆಳವಣಿಗೆಗೆ ಅಡ್ಡಿಯಾಗುತ್ತಾ? ಮಾ.ಆನಂದ್ ಹೇಳಿದ್ದೇನು?
ತನ್ನ ತಾಯಿಯೇ ಈ ಲೆಟರ್ ಕಳಿಸಿರೋದು ಅವಳಿಗೆ ಗೊತ್ತಿಲ್ಲ. ಸದ್ಯದ ಸ್ಥಿತಿಯಲ್ಲಿ ಅವಳಿಗೇನು ಮಾಡಲೂ ತೋಚುತ್ತಿಲ್ಲ. ಏಜೆಯ ಬಳಿಯೇ ತನಗೆ ತಿಳಿದಿರುವುದನ್ನು, ತನ್ನ ಗೊಂದಲವನ್ನು ಹಂಚಿಕೊಂಡಿದ್ದಾಳೆ. ಆಗ ಏಜೆ ತನ್ನ ಎದೆಯಲ್ಲಿ ಕುದಿಯುತ್ತಿರುವ ವಿಷಯ ಹೇಳಿದ್ದಾನೆ. ಕೃಷ್ಣ ನಿನಗೆ ಪ್ರೊಪೋಸ್(Propose) ಮಾಡಿದ್ದು ಸುಳ್ಳಾ? ಅಂತ. ಮೊದಲಿಗೆ ಆತ ಏನು ಹೇಳುತ್ತಿದ್ದಾನೆ ಅಂತ ಗೊತ್ತಾಗದಿದ್ದರೂ ಆಮೇಲೆ ಅವಳು ಆ ದಿನ ನಿಜಕ್ಕೂ ನಡೆದ ವಿಚಾರವನ್ನು ಏಜೆಗೆ ತಿಳಿಸುತ್ತಾಳೆ. ಆತ ತನ್ನ ಪ್ರೇಯಸಿಗೆ ಹೇಗೆ ಪ್ರೊಪೋಸ್ ಮಾಡಿದ ಅನ್ನೋದನ್ನು ಲೀಲಾ ಮುಂದೆ ಹೇಳಿದ್ದನೇ ಹೊರತು ಲೀಲಾಗೆ ಪ್ರೊಪೋಸ್ ಮಾಡಿರಲಿಲ್ಲ.
ಆ ಕ್ಷಣಕ್ಕೆ ಏಜೆಗೆ ಲೀಲಾ ಮಾತು ಕೇಳಿ ಕಣ್ಣಲ್ಲಿ ನೀರೇ ಬರುತ್ತದೆ. ಈಗ ಲೀಲಾ ಮತ್ತು ಏಜೆ ಇಬ್ಬರೂ ನೋವಲ್ಲಿದ್ದಾರೆ, ನೊಂದಿರುವ ಅವರಿಬ್ಬರೇ ಒಬ್ಬರನ್ನೊಬ್ಬರು ಸಮಾಧಾನ ಮಾಡಬೇಕಿದೆ. ಸದ್ಯಕ್ಕೆ ಲೀಲಾ ಆ ಡಿವೋರ್ಸ್ ಪತ್ರ ಯಾರು ಕಳಿಸಿದ್ದಾರೆ ಅಂತ ಪತ್ತೆ ಮಾಡಲು ಹೊರಟಿದ್ದಾಳೆ. ತನ್ನ ತಾಯಿಯೇ ಇಂಥಾ ಕೆಲಸ ಮಾಡಿದ್ದಾಳೆ ಅಂತ ಗೊತ್ತಾದರೆ ಅವಳ ರಿಯಾಕ್ಷನ್(Reaction) ಹೇಗಿರುತ್ತೆ, ಅವಳು ಈ ಸಮಸ್ಯೆಯನ್ನು ಹೇಗೆ ನಿವಾರಿಸುತ್ತಾಳೆ ಅನ್ನೋದನ್ನು ಕಾದು ನೋಡಬೇಕಿದೆ.
Kannadathi : Cool guys, ಇನ್ನೈದು ದಿನದಲ್ಲಿ ಹರ್ಷ ಭುವಿ ಮದ್ವೆಯಾಗೋದು ಹೌದಾ?