Asianet Suvarna News Asianet Suvarna News

ಇಂಜೆಕ್ಷನ್ ತಗೊಳ್ತಿರೋದು ಸಿಹಿ; ನೋವು ಅನುಭವಿಸ್ತಿರೋದು ರಾಮ!

ಸೀತಾ ರಾಮ ಮಹಾ ಸಂಚಿಕೆಯು ನಾಳೆ ರಾತ್ರಿ  9.30 ರಿಂದ 10.30ರ ವರೆಗೆ ಪ್ರಸಾರವಾಗಲಿದೆ. ಈ ಸಂಚಿಕೆಯ ಹೈಲೈಟ್ಸ್ ಈಗಾಗಲೇ ಪ್ರೊಮೋ ಮೂಲಕ ಭಾರೀ ಕುತೂಹಲ ಕೆರಳಿಸುತ್ತಿದೆ. 'ಇಂಜೆಕ್ಷನ್‌ ತಗೊಳ್ತಾ ಇರೋದು ಮಗಳು ಸಿಹಿ, ಆದರೆ ನೋವು ಅನುಭವಿಸ್ತಾ ಇರೋದು ಮಾತ್ರ ಅಪ್ಪ ರಾಮ' ಎಂಬ ಲೈನ್ ಪ್ರೋಮೋದಲ್ಲಿದೆ.

Zee Kannada serial Seetha Raama maha sanchike telecast on 02 Oct 2023
Author
First Published Oct 1, 2023, 12:24 PM IST

ಜೀ ಕನ್ನಡದಲ್ಲಿ ರಾತ್ರಿ 9-30ಕ್ಕೆ ಪ್ರಸಾರ ಕಾಣುತ್ತಿರುವ 'ಸೀತಾ ರಾಮ' ಸೀರಿಯಲ್, ಪ್ರೇಕ್ಷಕರಿಂದ ಭಾರೀ ಪ್ರತಿಕ್ರಿಯೆ ಪಡೆಯುತ್ತಿದೆ. ಟಿಆರ್‌ಪಿ ರೇಸ್‌ನಲ್ಲಿ ಕೂಡ ಈ ಸೀರಿಯಲ್ ಟಾಪ್ 5 ಸ್ಥಾನದೊಳಗೆ ಎಂಟ್ರಿ ಪಡೆಯುತ್ತಿದ್ದು, ಸೀತಾ ರಾಮ ಧಾರಾವಾಹಿ ದಿನದಿಂದ ದಿನಕ್ಕೆ ಪ್ರಸಿದ್ಧಿ ಹೆಚ್ಚಿಸಿಕೊಳ್ಳುತ್ತಿದೆ. ಗಗನ್ ಚಿನ್ನಪ್ಪ ಮತ್ತು ವೈಷ್ಣವಿ ಗೌಡ  ಕ್ರಮವಾಗಿ ಸೀತಾ ಮತ್ತು ರಾಮರ ಪಾತ್ರ ಮಾಡುತ್ತಿದ್ದು, ಪ್ರೇಕ್ಷಕರು ಇವರಿಬ್ಬರನ್ನೂ ಸ್ವೀಕರಿಸಿದ್ದಾರೆ. ಸಿಹಿ ಪಾತ್ರಧಾರಿಯಾಗಿ ಬೇಬಿ ರೀತೂ ಸಿಂಗ್ ನಟಿಸಿದ್ದಾರೆ. 

ಸೀತಾಗೆ ಸ್ಯಾಲರಿ ಸಿಗದೇ ಪೇಚಾಟ ಆರಂಭವಾಗಿದೆ. ಸೀತಾ ಸಮಸ್ಯೆಗೆ ರಾಮ ಯಾವ ರೀತಿ ಪರಿಹಾರ ಹುಡುಕುತ್ತಾನೆ ಎಂಬುದು ಸದ್ಯದ ಸ್ಟೋರಿ ಲೈನ್. ಆದರೆ, ಮುಂದೆ ಸ್ಟೋರಿಯಲ್ಲಿ ಸಾಕಷ್ಟು ಟ್ವಿಸ್ಟ್‌ಗಳು ಇರಲಿವೆ ಎಂಬುದು ಬಿಡುಗಡೆಯಾಗಿರುವ ಪ್ರೊಮೋ ಮೂಲಕ ಊಹಿಸಬಹುದು. ಸೋಮವಾರ, ಅಂದರೆ 02 ಅಕ್ಟೋಬರ್ 2023 ರಂದು ಸೋಮವಾರ ರಾತ್ರಿ 'ಸೀತಾ ರಾಮ ಮಹಾಸಂಚಿಕೆ' ಪ್ರಸಾರವಾಗಲಿದೆ. ಇದು ರೆಗ್ಯುಲರ್ ಪ್ರಸಾರ 30 ನಿಮಿಷದ ಬದಲು ಒಂದು ಗಂಟೆಯ ಅವಧಿಯದ್ದಾಗಿದೆ. 

ರಾಮಾಚಾರಿ ತಂಗಿ ಶ್ರುತಿ, ಈಗ ಹೊಸ ಸಿನಿಮಾ ಹಿರೋಯಿನ್!

ಸೀತಾ ರಾಮ ಮಹಾ ಸಂಚಿಕೆಯು ನಾಳೆ ರಾತ್ರಿ  9.30 ರಿಂದ 10.30ರ ವರೆಗೆ ಪ್ರಸಾರವಾಗಲಿದೆ. ಈ ಸಂಚಿಕೆಯ ಹೈಲೈಟ್ಸ್ ಈಗಾಗಲೇ ಪ್ರೊಮೋ ಮೂಲಕ ಭಾರೀ ಕುತೂಹಲ ಕೆರಳಿಸುತ್ತಿದೆ. 'ಇಂಜೆಕ್ಷನ್‌ ತಗೊಳ್ತಾ ಇರೋದು ಮಗಳು ಸಿಹಿ, ಆದರೆ ನೋವು ಅನುಭವಿಸ್ತಾ ಇರೋದು ಮಾತ್ರ ಅಪ್ಪ ರಾಮ' ಎಂಬ ಲೈನ್ ಪ್ರೋಮೋದಲ್ಲಿದ್ದು, ಈ ಸಂಚಿಕೆಯ ಕುತೂಹಲಕ್ಕೆ ಕಾರಣವಾಗಿದೆ. ಮಗಳು ಸಿಹಿಯನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಅಪ್ಪ ರಾಮನ ಪಾತ್ರ ಇನ್ನೂ ಏನೇನು ಭಾವ ಅನುಭವಿಸಿದ್ದಾನೆ ಎಂಬುದನ್ನು ಸೀರಿಯಲ್ ನೋಡಿಯೇ ತಿಳಿಯಬೇಕು!

Lakshmi Bramma Serial: ಲಕ್ಷ್ಮೀ ಜೀವನ ಸರಿ ಮಾಡಿದ್ರೆ ಸುಪ್ರಿತಾ ಮಣ್ಣಿನ ಮೂರ್ತಿ ಇಟ್ಟು ಪೂಜಿಸ್ತಾರಂತೆ ಜನ!

ಒಟ್ಟಿನಲ್ಲಿ, ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ಮತ್ತು ಸೆನ್ಸೇಷನಲ್ ನಟ ಗಗನ್ ಚಿನ್ನಪ್ಪ ನಟಿಸುತ್ತಿರುವ ಸೀತಾ ರಾಮ ಧಾರಾವಾಹಿ ಟಿಆರ್‌ಪಿ ರೇಸ್‌ನಲ್ಲಿ ಟಾಪ್ 2 ಆಗಿದ್ದೂ ಆಗಿದೆ. ಕೆಲವೊಮ್ಮೆ ಟಿಆರ್‌ಪಿಯಲ್ಲಿ ಕೆಳಕ್ಕೆ ಮತ್ತು ಮೇಲಕ್ಕೆ ತೂಗಾಡುವ ಸೀತಾ ರಾಮ, ಮುಂದೊಮ್ಮೆ ಟಾಪ್ 1 ಸ್ಥಾನ ಪಡೆದುಕೊಂಡರೂ ಅಚ್ಚರಿಯಲ್ಲ. ಸಿಹಿ ಪಾತ್ರ ಸಹ ಚಿಕ್ಕಮಕ್ಕಳಿಂದ ಹಿಡಿದು  ಹಿರಿಯ ವೀಕ್ಷಕರನ್ನು ಸೆಳೆಯುತ್ತಿರುವುದು ಸುಳ್ಳಲ್ಲ!

Follow Us:
Download App:
  • android
  • ios