Lakshmi Nivasa Actress Childhood photo: ಲಕ್ಷ್ಮೀ ನಿವಾಸ ಧಾರಾವಾಹಿ ನಟಿಯ ಅವರ ಬಾಲ್ಯದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ತಮ್ಮ ಕುಟುಂಬದೊಂದಿಗೆ ರೀಲ್ಸ್ ಮಾಡುತ್ತಿರುತ್ತಾರೆ.
ಬೆಂಗಳೂರು: ಖಾಸಗ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷ್ಮೀ ನಿವಾಸ ಧಾರಾವಾಹಿ ಜನಮನ್ನಣೆ ಗಳಿಸಿ ಉತ್ತಮ ಟಿಆರ್‌ಪಿ ಪಡೆದುಕೊಳ್ಳುತ್ತಿದೆ. ಸೀರಿಯಲ್‌ನಲ್ಲಿ ನಟಿಸುತ್ತಿರೋ ಕಲಾವಿದರನ್ನು ಜನರು ಅವರ ಪಾತ್ರಗಳಿಂದಲೇ ಗುರುತಿಸುತ್ತಿದ್ದಾರೆ. ಸದ್ಯ ಧಾರಾವಾಹಿ ರೋಚಕ ಹಂತಕ್ಕೆ ಬಂದಿದೆ. ಹರೀಶ್ ಮತ್ತು ಸಂತೋಷ್ ಕಿತ್ತಾಟದಿಂದ ಮನೆ ಎರಡು ಭಾಗವಾಗಿದ್ದು, ಇದರಿಂದ ನೊಂದಿರುವ ಶ್ರೀನಿವಾಸ್ ಮತ್ತು ಲಕ್ಷ್ಮೀ ಪತ್ರ ಬರೆದಿಟ್ಟು ಕುಂಭಮೇಳ ಯಾತ್ರೆಗೆ ತೆರಳಿದ್ದಾರೆ. ಈ ವಿಷಯ ತಿಳಿದು ಮನೆಗೆ ಆಗಮಿಸಿರುವ ವೆಂಕಿ ಇಬ್ಬರು ಸೋದರರ ಮೇಲೆ ಮುನಿಸಿಕೊಂಡಿದ್ದಾನೆ. ವೆಂಕಿ ಜೊತೆಯಲ್ಲಿ ಆತನ ಪತ್ನಿ ಚೆಲುವಿಯೂ ಲಕ್ಷ್ಮೀ ನಿವಾಸಕ್ಕೆ ಬಂದಿದ್ದಾಳೆ.
ಲಕ್ಷ್ಮೀ ನಿವಾಸದ ಸೊಸೆಯಂದಿರ ಪೈಕಿ ವೀಣಾ ಪಾತ್ರ ಕರುನಾಡಿನ ಜನತೆಗೆ ತುಂಬಾ ಇಷ್ಟವಾಗಿದೆ. ಮತ್ತೋರ್ವ ಸೊಸೆ, ಹರೀಶ್ ನ ಮಡದಿ ಸಿಂಚನಾ ಪದೇ ಪದೇ ಬೇರೆ ಮನೆ ಮಾಡುವ ಬಗ್ಗೆ ಮಾತನಾಡುತ್ತಿರುತ್ತಾಳೆ. ಹಾಗೆ ಸಣ್ಣ ವಿಷಯಗಳಿಗೆ ಮುನಿಸಿಕೊಂಡು ಎರಡೆರಡು ದಿನಕ್ಕೆ ತವರು ಮನೆಗೆ ಹೋಗುತ್ತಿರುತ್ತಾಳೆ. ಮತ್ತೊಬ್ಬ ಸೊಸೆ ಚೆಲುವಿ ಕುಟುಂಬದ ನೆಮ್ಮದಿಗಾಗಿ ಮನೆ ತೊರೆದು ಗಂಡ ವೆಂಕಿಯೊಂದಿಗೆ ತವರು ಮನೆಯಲ್ಲಿದ್ದುಕೊಂಡಿದ್ದಾಳೆ. ಇದೀಗ ಅತ್ತೆ-ಮಾವ ಯಾತ್ರೆಗೆ ಹೋಗಿರುವ ವಿಷಯ ತಿಳಿದು ಲಕ್ಷ್ಮೀ ನಿವಾಸಕ್ಕೆ ಬಂದಿದ್ದಾಳೆ. ಇದೀಗ ಲಕ್ಷ್ಮೀ ನಿವಾಸ ಧಾರಾವಾಹಿ ನಟಿಯ ಬಾಲ್ಯದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಧಾರಾವಾಹಿಯಲ್ಲಿ ಹೂ ಮಾರುವ ಹುಡುಗಿಯಾಗಿ ಕಾಣಿಸಿಕೊಂಡ ಚೆಲುವಿ ಅಸಲಿ ಹೆಸರು ಅಶ್ವಿನಿ ಮೂರ್ತಿ. ಧಾರಾವಾಹಿಯಲ್ಲಿ ಮೂಗ ಪತಿ ವೆಂಕಿಯ ಧ್ವನಿಯಾಗಿ ಅಶ್ವಿನಿ ಮೂರ್ತಿ ನಟಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲ ಸಖತ್ ಆಕ್ಟಿವ್ ಆಗಿರುವ ಅಶ್ವಿನಿ ಮೂರ್ತಿ ಅವರು ಖಾಸಗಿ ಮತ್ತು ವೃತ್ತಿಜೀವನದ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಕೆಲ ದಿನಗಳ ಹಿಂದೆ ಅಶ್ವಿನಿ ಮೂರ್ತಿ ಶೇರ್ ಮಾಡಿಕೊಂಡಿರುವ ಬಾಲ್ಯದ ಫೋಟೋ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಎಲ್ಲರಿಗೂ ಅಚ್ಚುಮೆಚ್ಚಿನ ಲಕ್ಷ್ಮೀ ನಿವಾಸದ ವೀಣಾ ಅತ್ತಿಗೆ ಮನೇಲಿ ಹೇಗಿರ್ತಾರೆ, ಇವರ ರಿಯಲ್ ಅತ್ತೆ ಇವರ ಬಗ್ಗೆ ಏನಂತಾರೆ?
ಚಿತ್ರೀಕರಣ ವೇಳೆ ಬಿಡುವಿನ ಸಂದರ್ಭದಲ್ಲಿ ವೆಂಕಿ, ಚೋಟು ಮತ್ತು ತಾಯಿಯೊಂದಿಗೆ ರೀಲ್ಸ್ ಮಾಡುತ್ತಿರುತ್ತಾರೆ. ಕುರುಡು ತಾಯಿಗೆ ಕಣ್ಣಿನ ಆಪರೇಷಮ್ ಮಾಡಿಸಬೇಕು ಅನ್ನೋದು ಚೆಲುವಿಯ ಗುರಿ. ಮದುವೆ ಬಳಿಕ ಗಂಡನೊಂದಿಗೆ ಹೆಚ್ಚು ಕೆಲಸ ಮಾಡಿ ಅತ್ತೆ-ಮಾವನ ಕಷ್ಟಕ್ಕೂ ನೆರವಾಗಬೇಕು ಎಂದು ಚೆಲುವಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾಳೆ. ಇದೀಗ ಅತ್ತೆ - ಮಾವ ಮುನಿಸಿಕೊಂಡು ಯಾತ್ರೆಗೆ ಹೋಗಿರುವ ವಿಷಯ ತಿಳಿದು ಚೆಲುವಿ ಆಘಾತಕ್ಕೊಳಗಾಗಿದ್ದಾಳೆ.
ಊಟದ ತಟ್ಟೆ ಕಸಿಕೊಂಡ ನೀಚ ಸಂತೋಷ್
ಲಕ್ಷ್ಮೀ ನಿವಾಸ ಎರಡು ಭಾಗ ಆಗಿದ್ದರಿಂದ ಎಲ್ಲಿ ಊಟ ಮಾಡಬೇಕು ಅನ್ನೋದು ಚೆಲುವಿಗೆ ಗೊತ್ತಾಗುತ್ತಿಲ್ಲ. ಗಂಡನಿಗೆ ಹಸಿವು ಆಗಿದೆ, ಊಟ ನೀಡು ಎಂದು ಸಿಂಚನಾ ಬಳಿ ಕೇಳಿಕೊಂಡಿದ್ದಾಳೆ. ಆದ್ರೆ ಸಿಂಚನಾ ಊಟ ಕೊಡಲು ಒಪ್ಪಿಲ್ಲ. ಹಾಗಾಗಿ ವೀಣಾ ಮಾಡಿರುವ ಅಡುಗೆಯನ್ನೇ ಚೆಲುವಿ ಹಾಕಿಕೊಂಡಿದ್ದಳು. ಈ ವೇಳೆ ಅಲ್ಲಿಗೆ ಬಂದ ಸಂತೋಷ್, ಇಲ್ಲಿ ಬಿಟ್ಟಿ ಹಾಕಲ್ಲ ಎಂದು ಚೆಲುವಿಯ ಕೈಯಲ್ಲಿದ್ದ ತಟ್ಟೆಯನ್ನು ಸಂತೋಷ್ ಕಸಿದುಕೊಂಡಿದ್ದಾನೆ.
ಇದನ್ನೂ ಓದಿ: ಪವರ್ ಸ್ಟಾರ್ ಅಪ್ಪು ಜೊತೆಯಲ್ಲಿಯೂ ನಟಿಸಿದ್ದಾರೆ ಲಕ್ಷ್ಮೀ ನಿವಾಸದ ವೀಣಾ ಅತ್ತಿಗೆ
