ಅಮೃತಧಾರೆ ಕಲಾವಿದೆ ಅಮೃತಾ ನಾಯ್ಕ ಹುಟ್ಟುಹಬ್ಬಕ್ಕೆ ನೆಟ್ಟಿಗರ ಶುಭ ಹಾರೈಕೆ
ಅಮ್ರತಧಾರೆ ಸೀರಿಯಲ್‌ನಲ್ಲಿ ಸದ್ಯ ಗೌತಮ್ ಹಾಗೂ ಭೂಮಿ ಮಧ್ಯೆ ಲವ್ ಶುರುವಾಗಿದೆ. ಈ ಮೆಚ್ಯೂರ್ಡ್ ಪ್ರೀತಿಯನ್ನು ಲವ್ ಎನ್ನುವುದಕ್ಕಿಂತ 'ಸಾಂಸಾರಿಕ ಹೊಂದಾಣಿಕೆ' ಎನ್ನಬಹುದೇನೋ. ಗೌತಮ್-ಭೂಮಿ ಹತ್ತಿರವಾದಷ್ಟೂ ಶಕುಂತಲಾಗೆ ತೊಂದರೆ ತಪ್ಪಿದ್ದಲ್ಲ.
ಅಮೃತಧಾರೆ ಸೀರಿಯಲ್‌ನಲ್ಲಿ ಅಪೇಕಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ಅಮೃತಾ ನಾಯ್ಕ ಇಂದು (01 ನವೆಂಬರ್ 2023) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಸಂಜೆ 7.00 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿಯಲ್ಲಿ ನಟಿ ಅಮ್ರತಾ ನಾಯ್ಕ ನಟಿಸುತ್ತಿದ್ದು, ಜೀ ಕನ್ನಡ ವಾಹಿನಿ ತನ್ನ ಆಫೀಸಿಯಲ್ ಇನಸ್ಟಾಗ್ರಾಂ ಪೇಜ್‌ನಲ್ಲಿ ಹುಟ್ಟುಹಬ್ಬಕ್ಕೆ ಶುಭ ಕೋರಿದೆ.
ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಸೀರಿಯಲ್‌ನಲ್ಲಿ ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈ ಸೀರಿಯಲ್‌ನಲ್ಲಿ ಹಿರಿಯ ನಟಿ ವನಿತಾವಾಸು ಮುಖ್ಯ ಪಾತ್ರದಲ್ಲಿ ಬಣ್ಣ ಹಚ್ಚಿದ್ದು, ಸೀರಿಯಲ್ ತೀವ್ರ ಕುತೂಹಲದ ಹಂತದಲ್ಲಿ ಸಾಗುತ್ತಿದೆ. ಸೀರಿಯಲ್ ಟಿಆರ್‌ಪಿ ಕೂಡ ಟಾಪ್ ಲೆವೆಲ್‌ನಲ್ಲಿದ್ದು, ಈ ಸೀರಿಯಲ್ ಹಲವು ಟಿವಿ ವೀಕ್ಷಕರ ಅಚ್ಚುಮೆಚ್ಚಿನ ಸೀರಿಯಲ್ ಎನಿಸಿದೆ. ಈ ಸೀರಿಯಲ್ ಕಲಾವಿದೆ ಅಮ್ರತಾ ನಾಯ್ಕ ಇಂದು ತಮ್ಮ ಬರ್ತ್‌ಡೇ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದಾರೆ.
ಅಮ್ರತಧಾರೆ ಸೀರಿಯಲ್‌ನಲ್ಲಿ ಸದ್ಯ ಗೌತಮ್ ಹಾಗೂ ಭೂಮಿ ಮಧ್ಯೆ ಲವ್ ಶುರುವಾಗಿದೆ. ಈ ಮೆಚ್ಯೂರ್ಡ್ ಪ್ರೀತಿಯನ್ನು ಲವ್ ಎನ್ನುವುದಕ್ಕಿಂತ 'ಸಾಂಸಾರಿಕ ಹೊಂದಾಣಿಕೆ' ಎನ್ನಬಹುದೇನೋ. ಗೌತಮ್-ಭೂಮಿ ಹತ್ತಿರವಾದಷ್ಟೂ ಶಕುಂತಲಾಗೆ ತೊಂದರೆ ತಪ್ಪಿದ್ದಲ್ಲ. ಈ ಕಾರಣಕ್ಕೆ ಭೂಮಿ-ಗೌತಮ್ ದೂರ ಮಾಡಲು ಶಕುಂತಲಾ ಸಾಧ್ಯವಾದಷ್ಟೂ ಪ್ರಯತ್ನಿಸುತ್ತಿದ್ದಾಳೆ. ಆದರೆ, ಆಕೆಯ ಪ್ರಯತ್ನಕ್ಕೂ ಮೀರಿ ಅವರಿಬ್ಬರ ಪ್ರೀತಿ ಬೆಳೆದು ಹೆಮ್ಮರವಾಗುತ್ತಿದೆ.