Asianet Suvarna News Asianet Suvarna News

BBK10: ಅದೆಷ್ಟೇ ಟಾರ್ಗೆಟ್ ಮಾಡಿದ್ರೂ ಈ ಮೂವರನ್ನ 'ದೊಡ್ಮನೆ'ಯಿಂದ ಮನೆಗೆ ಕಳಿಸಲು ಆಗದು!

ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರದಲ್ಲಿ ತುಂಬಾ ಅವಮಾನ ಅನುಭವಿಸಿ, ಬಳಿಕ ಕಿಚ್ಚ ಸುದೀಪ್ ಮಾತಿನ ಮೂಲಕ ಇದೀಗ ಭಾರೀ ಅನುಕಂಪಕ್ಕೆ ಪಾತ್ರರಾಗಿದ್ದಾರೆ. ದಿನದಿನಕ್ಕೂ ಸೋಷಿಯಲ್ ಮೀಡಿಯಾಗಳಲ್ಲಿ ಅವರ ಪರ ಪ್ರಚಾರ ಬಿರುಸಿನಿಂದ ನಡೆಯುತ್ತಿದೆ. ಇತ್ತ ಕಾರ್ತಿಕ್ ಹಾಗೂ ಸಂಗೀತಾ ಬೆಸ್ಟ್ ಫ್ರಂಡ್ಸ್‌ ಆಗಿದ್ದು ಮಾತ್ರವಲ್ಲ, ಪ್ರೇಮಿಗಳೂ ಆಗಿ ಗುರುತಿಸಿಕೊಂಡಿದ್ದಾರೆ. 

Bigg Boss Contestants targeted Karthik Sangeetha and Drone prathap srb
Author
First Published Oct 20, 2023, 5:10 PM IST


ಕಲರ್ಸ್ ಕನ್ನಡದ ಬಿಗ್ ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋ ಎರಡನೇ ವಾರಕ್ಕೆ ಕಾಲಿಟ್ಟಿರುವುದು ಗೊತ್ತೇ ಇದೆ. ಸ್ಪರ್ಧಿಗಳಲ್ಲಿ ಒಬ್ಬರಾದ ಸ್ನೇಕ್ ಶ್ಯಾಮ್ ಮೊದಲ ವಾರದಲ್ಲಿಯೇ ಎಲಿಮಿನೇಟ್ ಆಗಿದ್ದು ಗೊತ್ತೇ ಇದೆ. ಮಿಕ್ಕ ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿ ತಮ್ಮ ಎಲಿಮಿನೇಶನ್ ಯಾವಾಗ ಬರುತ್ತೋ ಏನೋ ಎಂದು ಕಾಯುತ್ತಾ ಕಾಲ ಕಳೆಯುವಂತಾಗಿದೆ. ಇದೀಗ ಬಿಗ್ ಬಾಸ್ ಮನೆಯೊಳಗೆ ಈ ಮೂರು ಮಂದಿಯನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಹುಯಿಲೆದ್ದಿದೆ. 

ಹೌದು, ಪಕ್ಕಾ ಮೂರು ಮಂದಿಯನ್ನು ಮಾತ್ರ ಟಾರ್ಗೆಟ್ ಮಾಡಿ ಆದಷ್ಟು ಬೇಗ ಮನೆಗೆ ಕಳಿಸಲು ಪ್ಲಾನ್ ಮಾಡಲಾಗುತ್ತದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಕಾಮೆಂಟ್‌ಗಳು ಹರಿದು ಬರುತ್ತಿವೆ. ಹಾಗಿದ್ದರೆ ಈ ಮೂರು ಮಂದಿ ಯಾರು ಗೊತ್ತೇ? ಸಂಗೀತಾ ಶೃಂಗೇರಿ, ಕಾರ್ತಿಕ್ ಮಹೇಶ್ ಮತ್ತು ಡ್ರೋನ್ ಪ್ರತಾಪ್. ಈ ಮೂರು ಜನರ ಮೇಲೆ ಬಿಗ್ ಬಾಸ್ ಮನೆಯೊಳಗೆ ಇರುವ ಎಲ್ಲರ ಕಣ್ಣು ಬಿದ್ದಿದ್ದು, ಅವರನ್ನು ಇನ್ನೂ ತುಂಬಾ ದಿನ ಉಳಿಸಿಕೊಂಡರೆ ಅವರಲ್ಲೇ ಯಾರಾದರೊಬ್ಬರು ವಿನ್ ಆಗಿಬಿಡಬಹುದು ಎಂಬ ಭಯ ದೊಡ್ಮನೆ ಮೆಂಬರ್ಸ್‌ಗಳಲ್ಲಿ ಮನೆಮಾಡಿದೆ ಎನ್ನಲಾಗುತ್ತಿದೆ. 

BBK10 ಪ್ರೇಮಿಗಳು ಶಾಕ್: 'ದೊಡ್ಮನೆ'ಯಲ್ಲಿ ನಡೆಯಿತಾ ಘೋರ ದುರಂತ, ಕಾರ್ತಿಕ್-ಸಂಗೀತಾ ಮಧ್ಯೆ ಬಿಗ್ ಫೈಟ್?!

ಅದಕ್ಕೆ ಕಾರಣಗಳು ಹಲವು ಇರಬಹುದು. ಮೊದಲನೆಯದಾಗಿ ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರದಲ್ಲಿ ತುಂಬಾ ಅವಮಾನ ಅನುಭವಿಸಿ, ಬಳಿಕ ಕಿಚ್ಚ ಸುದೀಪ್ ಮಾತಿನ ಮೂಲಕ ಇದೀಗ ಭಾರೀ ಅನುಕಂಪಕ್ಕೆ ಪಾತ್ರರಾಗಿದ್ದಾರೆ. ದಿನದಿನಕ್ಕೂ ಸೋಷಿಯಲ್ ಮೀಡಿಯಾಗಳಲ್ಲಿ ಅವರ ಪರ ಪ್ರಚಾರ ಬಿರುಸಿನಿಂದ ನಡೆಯುತ್ತಿದೆ. ಇತ್ತ ಕಾರ್ತಿಕ್ ಹಾಗೂ ಸಂಗೀತಾ ಬೆಸ್ಟ್ ಫ್ರಂಡ್ಸ್‌ ಆಗಿದ್ದು ಮಾತ್ರವಲ್ಲ, ಪ್ರೇಮಿಗಳೂ ಆಗಿ ಗುರುತಿಸಿಕೊಂಡಿದ್ದಾರೆ. ಜತೆಗೆ, ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್‌ನಲ್ಲಿ ಕೂಡ ಈ ಜೋಡಿ ಸಖತ್ ಪರ್‌ಫಾರ್ಮೆನ್ಸ್ ತೋರಿಸುತ್ತಿದ್ದಾರೆ. ಹೀಗಾಗಿ ಅವರಿಬ್ಬರೂ ವಿನ್ ಆಗುವ ಕಾಂಡಿಡೇಟ್ಸ್ ಎಂದು ಗುರುತಿಸಿಕೊಂಡಿದ್ದಾರೆ. 

BBK10: ಫೀಮೇಲ್ ಬಿಗ್ ಬಾಸ್ ಏಕಿಲ್ಲ, ಎಲ್ಲಾ ಸೀಸನ್‌ 'ಮೇಲ್' ಮಾತ್ರ, 'ಬಿಗ್ ಬಾಸ್' ಮಹಿಳೆ ಧ್ವನಿ ಯಾಕೆ ಆಗ್ಬಾರ್ದು?

ಈಗ ಬಿಗ್ ಬಾಸ್ ಮನೆಯಲ್ಲಿ ಈ ಮೂರು ಜನರನ್ನು ಟಾರ್ಗೆಟ್ ಮಾಡಿ ಓಡಿಸಿಬಿಟ್ಟರೆ ಟ್ರೋಪಿ, ಹಣ ತಮ್ಮದಾಗಲಿದೆ ಎಂಬುದು ಅಲ್ಲಿರುವ ಎಲ್ಲರ ಆಸೆ. ಈ ಅಭಿಲಾಷೆ ಈಡೇರಿಸಿಕೊಳ್ಳಲು ಬಿಗ್ ಬಾಸ್ ಮನೆಯ ಎಲ್ಲರೂ ಶತಾಯಗತಾಯ ಪ್ರಯತ್ನ ಪಡುತ್ತಲೇ ಇದ್ದಾರೆ. ಫಲಿತಾಂಶ ಏನಾಗಲಿದೆ ಎಂಬುದು ತಿಳಿಯಲು ಇನ್ನೂ ಕೇವಲ ಮೂರು ತಿಂಗಳು ಕಾದು ನೋಡಿದರೆ ಸಾಕು ಬಿಡಿ!, ಕಾಯೋಣ., ಕಾದು ತಿಳಿದುಕೊಳ್ಳೋಣ.. 

ಅಂದಹಾಗೆ, ಬಿಗ್ ಬಾಸ್ ಮನೆಯಲ್ಲಿ ನಡೆಯುವ ಎಲ್ಲ ಟಾಸ್ಕ್ ಹಾಗೂ 'ರಸನಿಮಿಷ'ಗಳನ್ನು, ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು 'Colors Kannada'ದಲ್ಲಿ ಪ್ರತಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00ಕ್ಕೆ ವೀಕ್ಷಿಸಬಹುದು.

Follow Us:
Download App:
  • android
  • ios