ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಾಪ್‌ ರೇಟೆಡ್‌ ಧಾರಾವಾಹಿ 'ರಾಧಾ ಕಲ್ಯಾಣ' ಮುಖ್ಯ ಪಾತ್ರಧಾರಿ ರಾಧಿಕಾ ಮಾರ್ಚ್‌ 11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಗುರು-ಹಿರಿಯರ ಆಶೀರ್ವಾದದೊಂದಿಗೆ ಮೂಡಬಿದರೆಯಲ್ಲಿ ಅದ್ಧೂರಿಯಾಗಿ ಹಸೆಮಣೆ ಏರಿದ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಶೇರ್ ಮಾಡಿಕೊಂಡಿದೆ. ಮಾರ್ಚ್‌ 2019ರಲ್ಲಿ ಕಾಮನ್‌ ಫ್ರೆಂಡ್‌ ಮೂಲಕ ಪರಿಚಯವಾದ ಆಕರ್ಷ್‌ ಜುಲೈನಲ್ಲಿ ರಾಧಿಕಾಳಿಗೆ ಡಿಫರೆಂಟ್ ಆಗಿ ಪ್ರಪೋಸ್‌ ಮಾಡಿದ್ದರು. ಪ್ರಪೋಸಲ್ ಓಕೆ ಹೇಳಿದ್ದರು ರಾಧಿಕಾ. ಅಕ್ಟೋಬರ್‌ನಲ್ಲಿ ಈ ಜೋಡಿಯ ನಿಶ್ಚಿತಾರ್ಥವಾಗಿತ್ತು. ವೃತ್ತಿಯಲ್ಲಿ ಆಕರ್ಷ್‌ ನ್ಯಾಷನಲ್‌ ಮ್ಯಾಜಿಷಿಯನ್‌ ಹಾಗೂ ಮೈಂಡ್‌ ರೀಡರ್‌. 

'ರಾಧಾ ಕಲ್ಯಾಣ' ರಾಧೆಗೆ ಕಂಕಣ ಭಾಗ್ಯ; ಮನಸೋತ ಕೃಷ್ಣಯಾರು?

'Finally' ಎಂದು ಹೇಳುವ ಮೂಲಕ ಮದುವೆ ಫೋಟೋವನ್ನು ಅಪ್ಲೋಡ್‌ ಮಾಡಿದ್ದಾರೆ. ನಿಶ್ಚಿತಾರ್ಥದ ಬಳಿಕದ ಫೋಟೋಗಳನ್ನೂ ಇದೀಗ ಶೇರ್ ಮಾಡಿಕೊಂಡಿದ್ದಾರೆ. ಕಿರುತೆರೆ ಹಾಗೂ ಚಿತ್ರರಂಗದಿಂದ ಸಾಕಷ್ಟು ಗಣ್ಯರು ಮದುವೆಯಲ್ಲಿ ಪಾಲ್ಗೊಂಡಿದ್ದರು. 

 

 
 
 
 
 
 
 
 
 
 
 
 
 

❤️finally 🥰❤️😘

A post shared by Radhika Rao (@radhikarao_official) on Mar 11, 2020 at 9:03am PDT