Asianet Suvarna News Asianet Suvarna News

ಅವಳಿ ಮಕ್ಕಳಿಗೆ ಜನ್ಮ ನೀಡಿದ ಕಿರುತೆರೆ ನಟಿ ಶಾಂಭವಿ ವೆಂಕಟೇಶ್!

ಕುಟುಂಬಕ್ಕೆ ಮುದ್ದಾದ ಅವಳಿ ಮಕ್ಕಳನ್ನು ಬರ ಮಾಡಿಕೊಂಡ ನಟಿ ಶಾಂಭವಿ ವೆಂಕಟೇಶ್.

Zee kannada Paru fame Shaambhawi Venkatesh welcomes twin babies home vcs
Author
Bangalore, First Published Jun 21, 2021, 1:39 PM IST

'ಗೀತಾಂಜಲಿ', 'ಪಾರು', ಮತ್ತು 'ನಿಗೂಢ ರಾತ್ರಿ' ಧಾರಾವಾಹಿಗಳ ಮೂಲಕ ಕಿರುತೆರೆ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿರುವ ಶಾಂಭವಿ ವೆಂಕಟೇಶ್ ತಮ್ಮ ಕುಟುಂಬಕ್ಕೆ ಅವಳಿ ಮಕ್ಕಳನ್ನು ಬರ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. 

ಶಾಂಭವಿ ಪೋಸ್ಟ್:
' ಗಂಡಾ? ಹೆಣ್ಣಾ? ಯಾವ ಮಗು? ಏನ್ ಆಯ್ತು? ಅಬ್ಬಾ ಎಷ್ಟೊಂದು ಮೆಸೇಜ್‌ಗಳು.  ಹೌದು ಆಯ್ತು. ತಡವಾಗಿ ತಿಳಿಸುತ್ತಾ ಇದೀನಿ  ಕ್ಷಮೆ ಇರಲಿ. ನಿಮ್ಮೆಲ್ಲರ ಹಾರೈಕೆಯಂತೆ ನಮ್ಮ ಕನಸು ಸಾಕಾರವಾಯ್ತು. ಜೂನ್ 4ಕ್ಕೆ ಅವಳಿ-ಜವಳಿ 'ಗಂಡು ಮತ್ತು ಹೆಣ್ಣು' ಮಗುವಿಗೆ ಜನ್ಮ ನೀಡುವುದರೊಂದಿಗೆ ಅಪ್ಪ- ಅಮ್ಮನಾಗಿ ಬಡ್ತಿ ಪಡೆದಿದ್ದೇವೆ. ನಿಮ್ಮೆಲ್ಲರ ಪ್ರೀತಿ-ಆಶೀರ್ವಾದ ಸದಾ ಇರಲಿ,' ಎಂದು ಶಾಂಭವಿ ಬರೆದುಕೊಂಡಿದ್ದಾರೆ.

'ಪಾರು' ಖ್ಯಾತಿಯ ಶಾಂಭವಿ ವೆಂಕಟೇಶ್ ಪ್ರೆಗ್ನೆಂಸಿ ಫೋಟೋಶೂಟ್‌; Twins ಬರ್ತಿದ್ದಾರೆ! 

Zee kannada Paru fame Shaambhawi Venkatesh welcomes twin babies home vcs

ಇಬ್ಬರೂ ಮಕ್ಕಳು ಕೈ ಹಿಡಿದಿರುವ ಫೋಟೋ ಹಂಚಿಕೊಂಡ ಶಾಂಭವಿ,  ಪ್ರೆಗ್ನೆಂಸಿ ರಿವೀಲ್ ಮಾಡುವ ಸಮಯದಲ್ಲಿಯೇ ಅವಳಿ ಮಕ್ಕಳಿವೆ ಎಂಬುದನ್ನು -ರಿವೀಲ್ ಮಾಡಿದ್ದರು. ಎರಡು ರೀತಿಯ ಸೀಮಂತ ಹಾಗೂ ಪ್ರೆಗ್ನೆಂಸಿ ಫೋಟೋಶೂಟ್ ಕೂಡ ಮಾಡಿಸಿದ್ದರು.  ಫೋಟೋ ಶೋಟ್‌ಗೆ ಇದೇ ರೀತಿ ಬಟ್ಟೆ ಧಿರಿಸಬೇಕು ಎಂದೆಲ್ಲಾ ಪ್ಲಾನ್ ಮಾಡಿಕೊಂಡಿದ್ದರಂತೆ. ಶಾಂಭವಿಗೆ ಎರಡು ಹೆಣ್ಣು ಮಗು ಅಥವಾ ಒಂದು ಹೆಣ್ಣು ಒಂದು ಗಂಡು ಆದರೂ ಸಂತೋಷವೇ ಎಂದಿದ್ದರು. ಅದರಲ್ಲೂ ಮಗಳು ತಮ್ಮಂತೆ ಬಣ್ಣದ ಲೋಕ ವೃತ್ತಿಯಾಗಿ ಆಯ್ಕೆ ಮಾಡಿ ಕೊಳ್ಳಬೇಕು ಎಂಬ ಆಸೆ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

 

Follow Us:
Download App:
  • android
  • ios