ಜೀ ಕನ್ನಡ ವಾಹಿನಿಯಲ್ಲಿ ಪ್ರತಿಯೊಂದೂ ಧಾರಾವಾಹಿ ಹಾಗೂ ರಿಯಾಲಿ ಶೋ ವಿಭಿನ್ನವಾಗಿರುತ್ತದೆ. ಟಿಆರ್‌ಪಿಗೆ ಈ ವಾಹಿನಿಯಯ ಅನೇಕ ಧಾರಾವಾಹಿಗಳು ಪೈಪೋಟಿ ನೀಡುತ್ತವೆ. ಆ ಲಿಸ್ಟ್‌ಗೆ ಇದೀಗ ಮತ್ತೊಂದು ಧಾರಾವಾಹಿ ಸೇರಿಕೊಳ್ಳುವ ನಿರೀಕ್ಷೆ ಇದೆ. 

ಹೌದು! ಮೇ.17ರಂದು  ಸಂಜೆ 7 ಗಂಟೆಗೆ ವಾರದಲ್ಲಿ ಏಳು ದಿನಗಳೂ 'ಕೃಷ್ಣ ಸುಂದರಿ' ಎಂಬ ಧಾರಾವಾಹಿ ಪ್ರಸಾರಗವಾಗಲಿದೆ. ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ಅಂಟಿಕೊಂಡಿರುವ ಕಳಂಕವನ್ನು ನಿವಾರಿಸುವ ನಿಟ್ಟಿನಲ್ಲಿ ಈ ಧಾರಾವಾಹಿಯನ್ನು ರೂಪಿಸಲಾಗಿದೆ. 

ಆನ್‌ಲೈನ್‌ನಲ್ಲಿ ನಡೆಯುತ್ತಿದೆ Daddy No.1 ಆಡಿಷನ್? 

ಈ ಧಾರಾವಾಹಿಯಲ್ಲಿ ಸಾಧಾರಣ ಕೃಷ್ಣ ವರ್ಣದ ಯುವತಿ ಅಬಾರಿ ಸಿರಿವಂತ ಹುಡುಗನನ್ನು ಮದುವೆಯಾಗುತ್ತಾಳೆ. ಪತಿಯ ಸಹಕಾರದಿಂದ ಖ್ಯಾತ ಗಾಯಕಿಯಾಗುತ್ತಾಳೆ. ಶ್ರೀ ಕೃಷ್ಣನೇ ಆಕೆಗೆ ಮಾರ್ಗದರ್ಶನ ನೀಡಿದ್ದೆಂದು ಕೊಳ್ಳುತ್ತಾಳೆ. ಸಿರಿವಂತ ಹುಡುಗನಾಗಿದ್ದರೂ, ಆಕೆಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವನ್ನು ಮೆಚ್ಚಿಕೊಳ್ಳುತ್ತಾನೆ. ಸಾಮಾನ್ಯವಾಗಿ ಇಂಥ ಹುಡುಗಿಯರನ್ನು ಹುಡುಗರು ನಿರಾಕರಿಸುತ್ತಾರೆ. ಆದರೆ ಈತ ಆಕೆಯನ್ನು ಒಪ್ಪಿಕೊಂಡು ಯಶಸ್ವಿ ಮಹಿಳೆಯನ್ನಾಗಿಸುತ್ತಾನೆ. ಕಥೆ ಕೇಳಲು ಸಖತ್ ಡಿಫರೆಂಟ್ ಆಗಿದೆ... ವೀಕ್ಷಿಸಲು ನೀವು ರೆಡಿ ನಾ?

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)