ಅಪ್ಪ-ಮಗಳು, ಅಪ್ಪ- ಮಗ ರೆಡಿನಾ? ನಿಮ್ಮ ಟ್ಯಾಲೆಂಟ್‌ಗೆ ಹೊಸ ವೇದಿಕೆ ಸಿದ್ಧವಾಗಿದೆ, ಮನೆಯಿಂದಲೇ ಆಡಿಷನ್‌ ಶುರು ಮಾಡಿಕೊಳ್ಳಿ...

ಜೀ ಕನ್ನಡ ವಾಹಿನಿಯಲ್ಲಿ ಹೊಸದೊಂದು ರಿಯಾಲಿಟಿ ಶೋಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ಕೊರೋನಾ ಲಾಕ್‌ಡೌನ್‌ ಇಲ್ಲವಾಗಿದ್ದಿದ್ದರೆ, ಈಗಾಗಲೆ ಆಡಿಷನ್ ನಡೆದು ಕಾರ್ಯಕ್ರಮ ಆರಂಭವಾಗುತ್ತಿತ್ತು. ಆದರೆ ಈಗಿನ ಪರಿಸ್ಥಿತಿಯಿಂದ ವಾಹಿನಿಯವರು ಕೈಗೊಂಡಿರುವ ನಿರ್ಧಾರವನ್ನು ಒಪ್ಪಿಕೊಂಡು ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಆದರೆ, ಈಗಾಗಲೇ ಚಿತ್ರೀಕರಣವಾಗಿರುವ ಧಾರಾವಾಹಿ ಹಾಗೂ ರಿಯಾಲಿಟಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ.

ಕೆಲವು ತಿಂಗಳುಗಳಿಂದ ಜೀ ಕನ್ನಡ 'Daddy No.1'ಶೋ ಮತ್ತೆ ಆರಂಭಿಸುತ್ತಿರುವುದರ ಬಗ್ಗೆ ಸಣ್ಣ ಪ್ರೋಮೋ ಬಿಡುಗಡೆ ಮಾಡಿದ್ದರು. ಅಲ್ಲದೆ ಆಡಿಷನ್‌ಗೆ ಕರೆ ನೀಡುವುದರ ಬಗ್ಗೆಯೂ ತಿಳಿಸಿದ್ದರು. ಪರಿಸ್ಥಿತಿ ಬದಲಾದ ಕಾರಣ ಈಗ ಆನ್‌ಲೈನ್‌ ಆಡಿಷನ್ ಆರಂಭಿಸುತ್ತಿದ್ದಾರೆ. ಅಪ್ಪ-ಮಕ್ಕಳು (ಮಗಳು/ಮಗ) ವಿಡಿಯೋ ಮೂಲಕ ತಮ್ಮ ಟ್ಯಾಲೆಂಟನ್ನು ಪ್ರದರ್ಶಿಸಿ, ವಾಹಿನಿ ನೀಡುವ ಮೇಲ್‌/ ನಂಬರ್‌ಗೆ ಕಳುಹಿಸಬೇಕು. ಆನ್‌ಲೈನ್‌ ಆಡಿಷನ್‌ ದಿನಾಂಕವನ್ನು ಶೀಘ್ರದಲ್ಲಿಯೇ ಪ್ರಕಟ ಮಾಡಲಾಗುತ್ತದೆ ಎನ್ನಲಾಗಿದೆ. 

'ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೂಪರ್ ಫಾದರ್-ಕಿಡ್ ಕಾಂಬಿನೇಷನ್ ಹುಡುಕುತ್ತೇವೆ. ತಮ್ಮ ಪ್ರತಿಭೆ ಪ್ರದರ್ಶನ ಮಾಡುವ ಜೊತೆಗೆ ವೀಕ್ಷಕರನ್ನು ಮನೋರಂಜಿಸಬೇಕು. ನೀವು ನಿಜಕ್ಕೂ ಬೆಸ್ಟ್ ಫಾದರ್-ಕಿಡ್ ಎಂದೆನಿಸಿದರೆ ದಯವಿಟ್ಟು ಈ ಅವಕಾಶ್ ಮಿಸ್ ಮಾಡಿಕೊಳ್ಳಬೇಡಿ,' ಎಂದು ತಂಡದಿಂದೊಬ್ಬರು ಮಾತನಾಡಿದ್ದಾರೆ. 

Daddy No.1 ಕಾರ್ಯಕ್ರಮ 2008ರಲ್ಲಿ ನಡೆಸಲಾಗಿತ್ತು. ಅತಿ ಹೆಚ್ಚಿನ ಜನಪ್ರಿಯತೆ ಪಡೆದ ಕಾರ್ಯಕ್ರಮ ಇದಾಗಿದ್ದ ಕಾರಣ ಮತ್ತೆ ಆರಂಭಿಸುತ್ತಿದ್ದಾರೆ. ಆನ್‌ಲೈನ್ ಆಡಿಷನ್ ನಡೆದ ನಂತರ ಪ್ರಿಲಿಮ್ಸ್ ರೌಂಡ್ ಇಡಲಾಗುತ್ತದೆ ಅದರಲ್ಲಿ ಆಯ್ಕೆ ಆದವರು ನಾಲ್ಕರಿಂದ ಐದು ಎಪಿಸೋಡ್‌ನಲ್ಲಿ ಇರುತ್ತಾರೆ. ಅಲ್ಲಿಂದ ಆಯ್ಕೆ ಆದವರು ಕ್ವಾರ್ಟರ್ ಹಾಗೂ ಫಿನಾಲೆ ತಲುಪುತ್ತಾರೆ.