13 ವರ್ಷ ಆದ್ಮೇಲೆ ತಂದೆ ಜೊತೆ ಮಾತನಾಡಿದ ಜೇಂಡೆ; 6 ವರ್ಷ ಪ್ರೀತಿ ಹಿಂದಿರುವ ಅಸಲಿ ಕಥೆ!
ಪತ್ನಿ ಜೊತೆ ಬಿಸ್ಕೆಟ್ ಜಾಮೂನ್ ಮಾಡಿದ ಜೇಂಡೆ. ಡಿಫರೆಂಟ್ ರೆಸಿಪಿ ಮೆಚ್ಚಿಸ ವೀಕ್ಷಕರು...
ಕನ್ನಡ ಕಿರುತೆರೆ ಜನಪ್ರಿಯ ನಟ ವೆಂಕಟೇಶ್ ಮೊದಲ ಬಾರಿಗೆ ಆಫ್‌ಸ್ಕ್ರೀನ್ ಪತ್ನಿ ಲಕ್ಷ್ಮಿ ಜೊತೆ ಕಾಣಿಸಿಕೊಂಡಿದ್ದಾರೆ. ಮಾಸ್ಟರ್ ಆನಂದ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ಕಾರ್ಯಕ್ರಮದಲ್ಲಿ ಪ್ರತಿ ವಾರವೂ ಸೆಲೆಬ್ರಿಟಿಗಳು ತಮ್ಮ ರಿಯಲ್ ಲೈಫ್ ಪಾರ್ಟನರ್ ಜೊತೆ ಎಂಟ್ರಿ ಕೊಟ್ಟು ವಿಭಿನ್ನ ಅಡುಗೆ ಮಾಡಿ ಕೊಂಚ ಟೈಮ್ ಪಾಸ್ ಮಾಡುತ್ತಾರೆ. ಈ ಸಲ ವೆಂಕಟೇಶ್ ಮತ್ತು ಲಕ್ಷ್ಮಿ ಅಡುಗೆ ನೋಡಿ ನೆಟ್ಟಿಗರು ಕಾಯುತ್ತಿದ್ದಾರೆ.
ಜೇಂಡೆ ಪತ್ನಿ ಸ್ವೀಟ್ ಪೂರಿ ಮತ್ತು ಖಾರ ಪೂರಿ ಮಾಡಿದ್ದಾರೆ ಆನಂತರ ವೆಂಕಟೇಶ್ ಬಿಸ್ಕೆಟ್ ಜಾಮೂನ್ ಮಾಡಿದ್ದಾರೆ. ಹೌದು! ಪಡ್ಡು ಮಾಡುವ ಪಾತ್ರೆಯಲ್ಲಿ ಬಿಸ್ಕೆಟ್ ಜಾಮೂನ್ ಮಾಡಿದ್ದಾರೆ. ಇದು ನೋಡಲು ಡಿಫರೆಂಟ್ ಆಗಿರುವ ಕಾರಣ ಕೊಂಚ ಕ್ಯೂರಿಯಾಸಿಟಿ ಹೆಚ್ಚಿಸಿದೆ.
ಒಂದೇ ಬ್ಲೌಸ್‌ಗೆ ಮೂರ್ನಾಲ್ಕು ಸೀರೆಯುಟ್ಟುಕೊಂಡಿದ್ದೆ, ಮೆಹೆಂದಿ ಇಲ್ಲವೇ ಇಲ್ಲ: ಪತಿ ಮಾಡಿದ ಅರ್ಜೆಂಟ್‌ಗೆ ಮಾಲತಿ
ವೆಂಕಟೇಶ್ ಮತ್ತು ಲಕ್ಷ್ಮಿ ಸುಮಾರು 6 ವರ್ಷಗಳ ಕಾಲ ಪ್ರೀತಿಸಿ ಮದುವೆ ಮಾಡಿಕೊಂಡರು. ವೆಂಕಟೇಶ್ ತಂದೆ ಸಬ್ ಇನ್ಸಪೆಕ್ಟರ್ ಆಗಿದ್ದು ಪ್ರೀತಿಯನ್ನು ಒಪ್ಪಿಕೊಂಡಿರಲಿಲ್ಲವಂತೆ. ಸುಮಾರು 13 ವರ್ಷಗಳ ಕಾಲ ವೆಂಕಟೇಶ್ ತಂದೆ ಜೊತೆ ಮಾತನಾಡಿರಲಿಲ್ಲ ಈ ಘಟನೆ ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ. ಕೊನೆ ಕ್ಷಣದಲ್ಲಿ ತಂದೆ ಪ್ಯಾರಲೈಸ್ ಆಗಿದ್ದು ಅವರೊಟ್ಟಿಗೆ ಇರಬೇಕು ಆದರೆ ಆಗಲಿಲ್ಲ ಎಂದು ಭಾವುಕರಾಗಿದ್ದಾರೆ.
ವೆಂಕಟೇಶ್ ಸುಮಾರು ಕನ್ನಡ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಆರೂರು ಜಗದೀಶ್ ನಿರ್ದೇಶನದಲ್ಲಿ ಮೂಡಿ ಬಂದ ಜೊತೆ ಜೊತೆಯಲಿ ಧಾರಾವಾಹಿ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿತ್ತು. ಜೇಂಡೆ ಎಂದೇ ಖ್ಯಾತಿ ಪಡೆದರು. ವೆಂಕಟೇಶ್ ಎಲ್ಲೇ ಇದ್ದರೂ ಜೇಂಡೆ ಜೇಂಡೆ ಎಂದು ಜನರು ಮಾತನಾಡಿಸುತ್ತಾರೆ.
ಮದುವೆ ನಂತರ ನಡೆಯಿತು ದೊಡ್ಡ ದುರಂತ; ಕಣ್ಣೀರಿಟ್ಟ ಕಿರುತೆರೆ ನಟಿ ಸುನೇತ್ರಾ
ಇನ್ನು ವೆಂಕಟೇಶ್ ಮನೆಯಲ್ಲಿ ಚಪಾತಿ ಪೂರಿ ಮಾಡಿದರೆ ಅದನ್ನು ಲಟ್ಟಿಸಿಕೊಡುವುದು ವೆಂಕಟೇಶ್ ಅಂತೆ. ಕಾರ್ಯಕ್ರಮದ ಪ್ರೋಮೋ ಮಾತ್ರ ರಿಲೀಸ್ ಆಗಿದ್ದು ಕೇಲವ ಒಂದು ದಿನದಲ್ಲಿ 39 ಸಾವಿರ ವೀಕ್ಷಣೆ ಪಡೆದಿದೆ.