ಆಟ ಆಡುವಾಗ ರಸ್ತೆ ಮಧ್ಯೆ ತಲೆ ಸುತ್ತಿ ಬಿದ್ದ ಅನು ಸಿರಿಮನೆ!

ಮದುವೆಯಾದ ಎರಡೇ ದಿನಕ್ಕೆ ಶುರುವಾಯ್ತು ಜಲಂದರ್ ತಕರಾರು. ಆರ್ಯವರ್ಧನ್ ಪ್ಲಾನ್ ಏನು?
 

Zee Kannada Jothe Jotheyali Anu Siri mane faints seeing Jalandhar vcs

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಒಂದೆರಡು ವಾರಗಳ ಕಾಲ ಅನು- ಅರ್ಯವರ್ಧನ್ ಅದ್ಧೂರಿ ಮದುವೆ (Wedding) ನಡೆಯಿತು. ಕಿರುತೆರೆ (Small Screen) ವೀಕ್ಷಕರು ಎಂದೂ ನೋಡಿದರ ಮದುವೆ ಕಾರ್ಯಕ್ರಮ ಅದಾಗಿತ್ತು.  ಹೊಸ ಮನೆ ಸೇರುತ್ತಿದ್ದಂತೆ ,ಅನು ಸಿರಿಮನೆಗೆ ಅನೇಕ ಸವಾಲುಗಳು ಎದುರಾಗಲು ಶುರುವಾಗಿವೆ. ಮತ್ತೊಂದೆಡೆ ಅಪ್ಪ ಮನೆ ಮಾರುತ್ತಿರುವ ವಿಚಾರವನ್ನೂ ಯಾರ ಹತ್ತಿರವೂ ಹೇಳಿ ಕೊಂಡಿಲ್ಲ. 

ಅಬ್ಬಬ್ಬಾ! ಒಂದಲ್ಲ, ಎರಡು ಐಷಾರಾಮಿ ಕಾರು ಖರೀದಿಸಿದ 'ಜೊತೆ ಜೊತೆಯಲಿ' ಮೇಘಾ ಶೆಟ್ಟಿ

ನವ ದಂಪತಿ ಆಚರಿಸುತ್ತಿರುವ ಮೊದಲ ಹಬ್ಬವೇ ಗಣೇಶ್ ಹಬ್ಬ (Ganesha Festival). ಮನೆಯಲ್ಲಿ ಅದ್ಧೂರಿ ಪೂಜೆ ನಡೆದ ನಂತರ ಇಡೀ ಕುಟುಂಬ ಗಾರ್ಡನ್ (Garden) ಏರಿಯಾದಲ್ಲಿ ಆಟವಾಡಲು ಆರಂಭಿಸುತ್ತಾರೆ. ಮ್ಯೂಸಿಕಲ್ ಚೇರ್‌ (Musical Chair) ಹಾಗೂ ಕಣ್ಣಾ ಮುಚ್ಚಾಲೆ ಆಟ ಆಡುತ್ತಾರೆ. ಆನುನೇ ಮೊದಲು ಔಟ್ ಆದ ಕಾರಣ ಕಣ್ಣಿಗೆ ಬಟ್ಟೆ ಕಟ್ಟಿ ಎಲ್ಲರನ್ನೂ ಹುಡುಕಲು ಬಿಡುತ್ತಾರೆ. ಅನು ಹುಡುಕುತ್ತಾ, ಹುಡುಕುತ್ತಾ ಮನೆಯಿಂದ ಹೊರಗಿರುವ ರಸ್ತೆಗೆ ಬರುತ್ತಾಳೆ. ಯಾಕೆ ಯಾರೂ ಕೂಗುತ್ತಿಲ್ಲ, ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಗಾಬರಿಗೊಂಡ ಅನು ಕಣ್ಣಿಗೆ ಕಟ್ಟಿದ ಬಟ್ಟೆಯನ್ನು ಬಿಚ್ಚುತ್ತಾಳೆ. ಬಟ್ಟೆ ಬಿಚ್ಚಿದ ನಂತರ ಮೊದಲು ಕಣ್ಣಿಗೆ ಕಾಣಿಸುವುದು ದಿ ಓನ್ ಆಂಡ್ ಓನ್ಲಿ ವಿಲನ್ ಜಲಂಧರ್(Jalandhar).

Zee Kannada Jothe Jotheyali Anu Siri mane faints seeing Jalandhar vcs

ಜಲಂಧರ್‌ನ ಕಂಡು ಹಿಡಿದ ಅನು ಸಿರಿಮನೆ (Anu Sirimane) ತಕ್ಷಣವೇ ಪ್ರಜ್ಞೆ ತಪ್ಪಿ ಕುಸಿದು ಬೀಳುತ್ತಾಳೆ. ಅನು ಎಲ್ಲಿಯೂ ಕಾಣಿಸುತ್ತಿಲ್ಲ ಎಂದು ಗಾಬರಿಗೊಂಡು ಇಡೀ ಮನೆ ಹುಡುಕಲು ಶುರು ಮಾಡುತ್ತಾರೆ. ರಸ್ತೆಯಲ್ಲಿ ಅನು ಬಿದ್ದಿರುವುದನ್ನು ಗಮನಿಸುತ್ತಾರೆ. ತಕ್ಷಣವೇ ಒಳಗೆ ಕರೆದುಕೊಂಡು ಬಂದು ವೈದ್ಯರಿಗೆ ಕರೆ ಮಾಡುತ್ತಾರೆ. ಅನು ಎಚ್ಚರವಾಗದ ಕಾರಣ ಎಲ್ಲರೂ ಗಾಬರಿ ಆಗುತ್ತಾರೆ. ವೈದ್ಯರು (Doctor) ಮೂರ್ನಾಲ್ಕು ಮಾತ್ರ ನೀಡಿ ವಿಶ್ರಾಂತಿ (Rest) ತೆಗೆದುಕೊಳ್ಳಲು ಸೂಚಿಸುತ್ತಾರೆ. ತಕ್ಷಣವೇ ಅರ್ಯ ಮೊಬೈಲ್‌ಗೆ ಯಾವುದೋ ಒಂದು ನಂಬರ್‌ನಿಂದ ಕರೆ ಬರುತ್ತದೆ. ಕರೆ ಸ್ವೀಕರಿಸಿದ ಅರ್ಯ (AryaVardhan) ಜಲಂಧರ್ ಧ್ವನಿ ಗುರುತಿಸುತ್ತಾನೆ. 

ಸೀರಿಯಲ್ ಮುಗಿಯೋ ತನಕ ನಾನೇ ಅನು ಸಿರಿಮನೆ ಎಂದ ಮೇಘ: ಗೊಂದಲಕ್ಕೆ ತೆರೆ

ಗಣೇಶನ ಹಬ್ಬವಿದ್ದ ಕಾರಣ ಅನು ತವರು ಮನೆಗೆ ಹೋಗಬೇಕಿತ್ತು, ಅಷ್ಟರಲ್ಲಿ ಇದೆಲ್ಲಾ ನಡೆದು ಹೋಯ್ತು. 'ಇನ್ನೇನು ಹಿಡಿದೇ ಬಿಟ್ಟೆ ಅಂದು ಕೊಂಡೆ ಆರ್ಯ. ವಾ...ಒಂದೊಳ್ಳೆ ಚೇಸ್ ಮಾಡಿದೆ ನೀನು. ಪ್ರತಿ ಸಲ ನಾನು ತಪ್ಪಿಸಿಕೊಂಡಾಗಲೂ, ಆ ನಿನ್ನ ಚಪ್ಪಾಳೆ (Clap) ನನ್ನ ಸಾಮರ್ಥ್ಯಕ್ಕೆ ಅಡ್ಡಿ ಆಗುತ್ತೆ ಆರ್ಯ. ಇನ್ ಮೇಲೆ ಹೀಗೆ ನಾನು ನಿನಗೆ ಕಾಟ ಕೊಡ್ತಾನೇ ಇರ್ತಿನಿ. ನಿನ್ನನ್ನು ಓಡಿಸುತ್ತಲೇ ಇರುತ್ತೀನಿ. ನೀನು ಓಡ್ತಾನೆ ಇರ್ಬೇಕು,' ಎಂದು ಜಲಂಧರ್ ಕರೆಯಲ್ಲಿ ಮಾತನಾಡುತ್ತಾನೆ. 'ಕೂಯ್‌ಗೂಡೋ ಸೊಳ್ಳೆಗೆ (Mosquito) ಆಯಸ್ಸು ಕಮ್ಮಿ ಜಲಂಧರ್. ಒಂದೇ ಒಂದು ಚಪ್ಪಾಳೆ ಅದರ ಕಥೆ ಮುಗಿಸುತ್ತದೆ,' ಎಂದು ಆರ್ಯ ಉತ್ತರಿಸುತ್ತಾನೆ. 

ಈ ಹಿಂದೆ ಅರ್ಯ ಹಾಗೂ ಅನುಳನ್ನು ಚಲಂಧರ್ ಅಟ್ಯಾಕ್ ಮಾಡಿದ್ದ, ಆಗ ಸ್ನೇಹಿತ ಜೇಂಡೆ (Jande) ಮತ್ತು ರಾಮಣ (Ramanna) ಸಹಾಯ ಮಾಡಿ ಕಾಪಾಡಿದ್ದರು.

Latest Videos
Follow Us:
Download App:
  • android
  • ios